• Sitemap
  • Advance Search
Rural Prosperity

ಶೀ-ಲೀಪ್ಸ್‌: ಲಕ್ಷಾದಿಪತಿ ದೀದಿಗಳಿಗಾಗಿ ಡಿಜಿಟಲ್ ಸಬಲೀಕರಣ

प्रविष्टि तिथि: 01 JUL 2026 11:03 AM

ಮಹಿಳಾ ನೇತೃತ್ವದ ಎಸ್‌ಎಚ್‌ಜಿ ಉದ್ಯಮಗಳಿಗೆ ದತ್ತಾಂಶ-ಆಧಾರಿತ ಬೆಳವಣಿಗೆಯನ್ನು ಸಕ್ರಿಯಗೊಳಿಸುವುದು

ಡಿಜಿಟಲ್ ಸಬಲೀಕರಣದ ಮೂಲಕ ಗ್ರಾಮೀಣ ಜೀವನೋಪಾಯದ ರೂಪಾಂತರ

ಶೀ-ಲೀಪ್ಸ್‌ ಎಂದರೆ (ಸ್ವಸಹಾಯ ಉದ್ಯಮ-ಜೀವನೋಪಾಯ ಮತ್ತು ಸಮೃದ್ಧಿ ಹಾಗೂ ಸುಸ್ಥಿರತೆಗಾಗಿನ ಉದ್ಯಮ ಅಪ್ಲಿಕೇಶನ್). ಇದು ಭಾರತದಾದ್ಯಂತ ಗ್ರಾಮೀಣ ಭಾಗದ ಸ್ವಸಹಾಯ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಮಹಿಳೆಯರನ್ನು ಸಬಲೀಕರಣಗೊಳಿಸುವ ಒಂದು ಡಿಜಿಟಲ್ ವೇದಿಕೆಯಾಗಿದೆ. ಉದ್ಯಮಗಳ ಸೃಷ್ಟಿ ಮತ್ತು ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡಲು ಈ ಏಕೀಕೃತ ವೇದಿಕೆಯನ್ನು ಬಳಸಲಾಗುತ್ತಿದೆ. ಶೀ-ಲೀಪ್ಸ್‌ಗ್ರಾಮೀಣ ಮಹಿಳೆಯರಿಗೆ ಜೀವನೋಪಾಯ ಕಲ್ಪಿಸಲು, ಉದ್ಯಮದ ಬೆಳವಣಿಗೆಗೆ ಮತ್ತು ಆರ್ಥಿಕ ಒಳಗೊಳ್ಳುವಿಕೆಗೆ ಬೆಂಬಲ ನೀಡುತ್ತದೆ. ಇದು ಕೃಷಿ ಮತ್ತು ಕೃಷಿಯೇತರ ಗ್ರಾಮೀಣ ಉದ್ಯಮಗಳನ್ನು ಬೆಂಬಲಿಸುವ ಮೂಲಕ, ಬಲಿಷ್ಠ ಮತ್ತು ಹೆಚ್ಚು ಸುಸ್ಥಿರ ಗ್ರಾಮೀಣ ಆರ್ಥಿಕತೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

ಚಿತ್ರ 1: ಶೀ-ಲೀಪ್ಸ್‌ಲೋಗೋ

ಶೀ-ಲೀಪ್ಸ್‌ಮೊಬೈಲ್ ಅಪ್ಲಿಕೇಶನ್ ಅನ್ನು ಡಿಜಿಟಲ್ ಇಂಡಿಯಾ ಕಾರ್ಪೊರೇಶನ್ ಅಭಿವೃದ್ಧಿಪಡಿಸಿದೆ ಮತ್ತು ಇದನ್ನು ಲೋಕೋಸ್‌ಪ್ಲಾಟ್‌ಫಾರ್ಮ್ ಅಡಿಯಲ್ಲಿ ಜಾರಿಗೆ ತರಲಾಗಿದೆ. ಲೋಕೋಸ್‌ ಎಂಬುದು ಭಾರತದಾದ್ಯಂತ ಸಮುದಾಯ ಆಧಾರಿತ ಸಂಸ್ಥೆಗಳ ಚಟುವಟಿಕೆಗಳನ್ನು ದಾಖಲಿಸಲು ವಿನ್ಯಾಸಗೊಳಿಸಲಾದ ಒಂದು ಡಿಜಿಟಲ್ ವ್ಯವಸ್ಥೆಯಾಗಿದೆ. ಇವುಗಳಲ್ಲಿ ಸ್ವಸಹಾಯ ಗುಂಪುಗಳು, ಗ್ರಾಮ ಸಂಘಟನೆಗಳು ಮತ್ತು ಕ್ಲಸ್ಟರ್ ಮಟ್ಟದ ಒಕ್ಕೂಟಗಳು ಸೇರಿವೆ. ಸದಸ್ಯರ ದಾಖಲೆಗಳನ್ನು ನಿರ್ವಹಿಸುವುದು, ಹಣಕಾಸಿನ ವಹಿವಾಟುಗಳು, ಜೀವನೋಪಾಯದ ದಾಖಲೆಗಳು ಮತ್ತು ಸಂಯೋಜಿತ ಉಪಕ್ರಮಗಳನ್ನು ಟ್ರ್ಯಾಕ್ ಮಾಡುವಂತಹ ಸಿಬಿಒ ಚಟುವಟಿಕೆಗಳನ್ನು ಡಿಜಿಟಲೀಕರಣಗೊಳಿಸಲು ಲೋಕೋಸ್‌ ಸಹಾಯ ಮಾಡುತ್ತದೆ.

ಶೀ-ಲೀಪ್ಸ್‌ಅನ್ನು ಜೂನ್ 29, 2026 ರಂದು ನವದೆಹಲಿಯಲ್ಲಿ ನಡೆದ 'ರಾಷ್ಟ್ರೀಯ ಗ್ರಾಮೀಣ ವಿಕಾಸ ಸಮ್ಮೇಳನ'ದಲ್ಲಿ ಪ್ರಾರಂಭಿಸಲಾಯಿತು. 'ಗ್ರಾಮೋದಯದಿಂದ ರಾಷ್ಟ್ರೋದಯ' ಎಂಬ ವಿಷಯದ ಆಧಾರದ ಮೇಲೆ ನಡೆದ ಈ ಎರಡು ದಿನಗಳ ಸಮ್ಮೇಳನವು ಪ್ರಮುಖ ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿಯನ್ನು ಪರಿಶೀಲಿಸಿತು. 'ವಿಕಸಿತ ಗ್ರಾಮ - ವಿಕಸಿತ ಭಾರತ' ಎಂಬ ಸರ್ಕಾರದ ದೃಷ್ಟಿಕೋನವನ್ನು ನನಸಾಗಿಸಲು ಕಾರ್ಯತಂತ್ರಗಳನ್ನು ರೂಪಿಸುವುದರ ಮೇಲೆ ಈ ಸಮ್ಮೇಳನವು ಗಮನಹರಿಸಿತು.

ಶೀ-ಲೀಪ್ಸ್‌ನ ರಾಷ್ಟ್ರವ್ಯಾಪಿ ಅನುಷ್ಠಾನ

ಶೀ-ಲೀಪ್ಸ್‌ಈ ಕೆಳಗಿನ ಉದ್ದೇಶಗಳನ್ನು ಪೂರೈಸುವತ್ತ ಗಮನಹರಿಸಿದೆ:

  • ದೇಶಾದ್ಯಂತ ಗ್ರಾಮೀಣ ಸ್ವಸಹಾಯ ಗುಂಪಿನ ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸುವುದು.
  • ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ನೇತೃತ್ವದ ಉದ್ಯಮಗಳನ್ನು ಸೃಷ್ಟಿಸುವುದು ಮತ್ತು ಬಲಪಡಿಸುವುದು.
  • ಗ್ರಾಮೀಣ ಉತ್ಪಾದಕರನ್ನು ಔಪಚಾರಿಕ ಮೌಲ್ಯ ಸರಪಳಿಗಳೊಂದಿಗೆ ಸಂಯೋಜಿಸುವುದು.
  • ಸ್ವಸಹಾಯ ಗುಂಪಿನ ಕುಟುಂಬಗಳ ಆರ್ಥಿಕ ಒಳಗೊಳ್ಳುವಿಕೆಯನ್ನು ಹೆಚ್ಚಿಸುವುದು.
  • ದತ್ತಾಂಶ-ಆಧಾರಿತ ಗ್ರಾಮೀಣ ಉದ್ಯಮಶೀಲತೆಯನ್ನು ಸಕ್ರಿಯಗೊಳಿಸುವುದು.

ಶೀ-ಲೀಪ್ಸ್‌ಅನ್ನು 34 ರಾಜ್ಯಗಳು ಮತ್ತು ಕೇಂದ್ರಾತ್ಮಕ ಪ್ರದೇಶಗಳಲ್ಲಿ ಜಾರಿಗೆ ತರಲಾಗುವುದು. ಇದು ಆಯ್ಕೆಮಾಡಿದ ರಾಜ್ಯಗಳು/ಯುಟಿಗಳಲ್ಲಿನ 'ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್‌'ಗಳಿಗೆ ಸಹಾಯ ಮಾಡುತ್ತದೆ. ಈ ಪ್ಲಾಟ್‌ಫಾರ್ಮ್ ನೈಜ-ಸಮಯದ ಉದ್ಯಮ ದತ್ತಾಂಶವನ್ನು ಸೆರೆಹಿಡಿಯುವ ಮೂಲಕ ಗ್ರಾಮೀಣ ಆರ್ಥಿಕ ಚಟುವಟಿಕೆಗಳ ಮೇಲಿನ ಗೋಚರತೆಯನ್ನು ಸುಧಾರಿಸುತ್ತದೆ. ಹೀಗಾಗಿ, ಈ ವ್ಯವಸ್ಥೆಯು ಬಹು ಹಂತಗಳಲ್ಲಿ ಮೇಲ್ವಿಚಾರಣೆಯನ್ನು ಬಲಪಡಿಸುತ್ತದೆ. ಪರಿಣಾಮವಾಗಿ, ಇದು ಸ್ಥಳೀಯ ಮತ್ತು ರಾಷ್ಟ್ರೀಯ ಮಟ್ಟದ ನಿರ್ಧಾರಗಳನ್ನು ತೆಗೆದುಕೊಳ್ಳಲು ಬೆಂಬಲ ನೀಡುತ್ತದೆ.

ಉದ್ಯಮ ಅಭಿವೃದ್ಧಿಗಾಗಿ ಡಿಜಿಟಲ್ ಸೇವೆಗಳು

ಶೀ-ಲೀಪ್ಸ್‌ವಿವಿಧ ವಲಯಗಳ ನೈಜ-ಸಮಯದ ಕಾರ್ಯಾಚರಣೆಯ ದತ್ತಾಂಶವನ್ನು ಸೆರೆಹಿಡಿಯುತ್ತದೆ ಮತ್ತು ಜೀವನೋಪಾಯದ ಸಂಪೂರ್ಣ ಪಯಣವನ್ನು ಟ್ರ್ಯಾಕ್ ಮಾಡುತ್ತದೆ. ಈ ಪ್ಲಾಟ್‌ಫಾರ್ಮ್ ಪ್ರೊಫೈಲ್ ಸೃಷ್ಟಿಯಿಂದ ಹಿಡಿದು ಉದ್ಯಮದ ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡುವವರೆಗಿನ ಪ್ರತಿಯೊಂದು ಹಂತದಲ್ಲೂ ಬೆಂಬಲ ನೀಡುತ್ತದೆ. ಇದು ಡಿಜಿಟಲ್ ಮೇಲ್ವಿಚಾರಣೆಯನ್ನು ಮತ್ತಷ್ಟು ಬಲಪಡಿಸುತ್ತದೆ, ಆಡಳಿತವನ್ನು ಸುಧಾರಿಸುತ್ತದೆ ಮತ್ತು ಉತ್ತಮ ಯೋಜನೆ, ಮಧ್ಯಸ್ಥಿಕೆ ಹಾಗೂ ತಿಳುವಳಿಕೆಯುಳ್ಳ ನೀತಿ ನಿರ್ಧಾರಗಳಿಗೆ ಅನುವು ಮಾಡಿಕೊಡುತ್ತದೆ. ಶೀ-ಲೀಪ್ಸ್‌ಮೊಬೈಲ್ ಅಪ್ಲಿಕೇಶನ್ ಮೂಲಕ ನೀಡಲಾಗುವ ಸೇವೆಗಳು ಹೀಗಿವೆ:

ಕ್ಷಾದಿಪತಿ ದೀದಿ ಉಪಕ್ರಮವನ್ನು ಮುನ್ನಡೆಸುವುದು

ಶೀ-ಲೀಪ್ಸ್‌, ಆದಾಯದ ಬೆಳವಣಿಗೆ ಮತ್ತು ಉದ್ಯಮದ ಕಾರ್ಯಕ್ಷಮತೆಯನ್ನು ಸಂಪೂರ್ಣವಾಗಿ ಟ್ರ್ಯಾಕ್ ಮಾಡುವ ಮೂಲಕ 'ಕ್ಷಾದಿಪತಿ ದೀದಿ' ಮಿಷನ್ ಅನ್ನು ಬಲಪಡಿಸುತ್ತದೆ. ಇತ್ತೀಚೆಗೆ, ಸರ್ಕಾರವು ಲಕ್ಷಾದಿಪತಿ  ದೀದಿ ಯೋಜನೆಯ ಗುರಿಯನ್ನು 3 ಕೋಟಿಯಿಂದ 6 ಕೋಟಿ ಮಹಿಳೆಯರಿಗೆ ಹೆಚ್ಚಿಸಿದೆ.

ಮುಂದಿನ ಐದು ವರ್ಷಗಳಲ್ಲಿ ಲಕ್ಷಾದಿಪತಿ  ದೀದಿಗಳಿಗೆ ಅನುಕೂಲವಾಗುವಂತೆ ಸರ್ಕಾರವು 10 ಲಕ್ಷ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಯೋಜಿಸಿದೆ. ಇದು ಮಹಿಳಾ ಸಬಲೀಕರಣದ ಕಡೆಗೆ ಸರ್ಕಾರದ ಬದ್ಧತೆಯನ್ನು ಉಲ್ಲೇಖಿಸುತ್ತದೆ. ಆದ್ದರಿಂದ, ಉದ್ಯಮದ ವಿಸ್ತರಣೆಯನ್ನು ದೊಡ್ಡ ಮಟ್ಟದಲ್ಲಿ ಬೆಂಬಲಿಸುವ ಈ ಯೋಜನೆಯಲ್ಲಿ ಶೀ-ಲೀಪ್ಸ್‌ಮೊಬೈಲ್ ಅಪ್ಲಿಕೇಶನ್ ಅತ್ಯಗತ್ಯ ಭಾಗವಾಗಿದೆ.

ಬಲಿಷ್ಠ ಮಹಿಳಾ ನೇತೃತ್ವದ ಗ್ರಾಮೀಣ ಆರ್ಥಿಕತೆಯನ್ನು ನಿರ್ಮಿಸುವುದು

ಶೀ-ಲೀಪ್ಸ್‌ ಡಿಜಿಟಲ್ ಮೂಲಸೌಕರ್ಯ, ಉದ್ಯಮಶೀಲತೆ ಮತ್ತು ಮಹಿಳಾ ಸಬಲೀಕರಣವನ್ನು ಒಟ್ಟುಗೂಡಿಸುವ ಮೂಲಕ ಡಿಜಿಟಲ್ ಗ್ರಾಮೀಣ ರೂಪಾಂತರದಲ್ಲಿ ಒಂದು ದೊಡ್ಡ ಹೆಜ್ಜೆಯನ್ನು ಇರಿಸಿದೆ. ಉದ್ಯಮದ ಬೆಳವಣಿಗೆಗೆ ಬೆಂಬಲ ನೀಡುವ ಮೂಲಕ ಮತ್ತು ಆರ್ಥಿಕ ಒಳಗೊಳ್ಳುವಿಕೆಯನ್ನು ಬಲಪಡಿಸುವ ಮೂಲಕ, ಈ ಪ್ಲಾಟ್‌ಫಾರ್ಮ್ ಲಕ್ಷಾದಿಪತಿ  ದೀದಿ ಮಿಷನ್ ಅನ್ನು ದೇಶಾದ್ಯಂತ ವಿಸ್ತರಿಸಲು ಸಹಾಯ ಮಾಡುತ್ತದೆ. ಇದು ಸಮಗ್ರ ಮತ್ತು ಸುಸ್ಥಿರ ಗ್ರಾಮೀಣ ಪರಿವರ್ತನೆಯ ಪ್ರಮುಖ ಚಾಲಕ ಶಕ್ತಿಯಾಗಲು ಸಜ್ಜಾಗಿದೆ.

References

Ministry of Rural Development

https://lokos.dord.gov.in/home

https://x.com/MoRD_GoI/status/2071507758046916762

https://www.pib.gov.in/PressReleasePage.aspx?PRID=2279029&reg=6&lang=1

Ministry of Electronics and Information Technology

https://play.google.com/store/apps/details?id=com.nrlm.gramudyamita&hl=en_IN

Click here for Pdf file

 

 

 

(तथ्य सामग्री आईडी: 150663) आगंतुक पटल : 13


Provide suggestions / comments
इस विश्लेषक को इन भाषाओं में पढ़ें : English , हिन्दी , Urdu , Bengali , Assamese