• Sitemap
  • Advance Search
Rural Prosperity

ಲೋಕ್ ಓಎಸ್: ಗ್ರಾಮೀಣ ಜೀವನೋಪಾಯಕ್ಕೆ ಒಂದು ಡಿಜಿಟಲ್ ಬೆನ್ನೆಲುಬು

प्रविष्टि तिथि: 04 JUL 2026 09:16 AM

26ನೇ ಬಲವರ್ಧಿತ ಪಾರದರ್ಶಕತೆ ಮತ್ತು ಆರ್ಥಿಕ ಸೇರ್ಪಡೆ

ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಡಿಯಲ್ಲಿ ಡಿಜಿಟಲ್ ಆಡಳಿತವನ್ನು ಬಲಪಡಿಸುವುದು

ಲೋಕ್ ಓಎಸ್ (ಲೋಕೋಸ್‌ - ಲೋಕ ಎಂದರೆ ಜನರು, ಒಎಸ್‌ ಎಂದರೆ ಆಪರೇಟಿಂಗ್ ಸಿಸ್ಟಮ್) ಎಂಬುದು ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಡಿಯಲ್ಲಿ ಸ್ವಸಹಾಯ ಸಂಘಗಳು ಮತ್ತು ಅವುಗಳ ಒಕ್ಕೂಟಗಳ ಸಂಪೂರ್ಣ ಡಿಜಿಟಲೀಕರಣಕ್ಕಾಗಿ ರೂಪಿಸಲಾದ ಒಂದು ವೆಬ್ ಮತ್ತು ಮೊಬೈಲ್ ವೇದಿಕೆಯಾಗಿದೆ. ಡಿಎವೈ- ಎನ್‌ಆರ್‌ಎಲ್‌ಎಂ ಎನ್ನುವುದು ಬಡ ಗ್ರಾಮೀಣ ಕುಟುಂಬಗಳಿಗೆ ಸ್ವಯಂ ಉದ್ಯೋಗ, ಕೌಶಲ್ಯಯುತ ಉದ್ಯೋಗಗಳು ಮತ್ತು ಸುಸ್ಥಿರ ಜೀವನೋಪಾಯಗಳನ್ನು ಉತ್ತೇಜಿಸುವ ಪ್ರಮುಖ ಬಡತನ ನಿರ್ಮೂಲನಾ ಕಾರ್ಯಕ್ರಮವಾಗಿದೆ.

ಲೋಕ್ ಓಎಸ್, ಸ್ವಸಹಾಯ ಸಂಘಗಳು ಮತ್ತು ಸಮುದಾಯ ಆಧಾರಿತ ಸಂಸ್ಥೆಗಳನ್ನು ನಿರ್ವಹಿಸಲು ಸದಸ್ಯರ ದಾಖಲೆಗಳು, ಪ್ರೊಫೈಲ್‌ಗಳು, ಉಳಿತಾಯ, ಸಾಲ ನೀಡಿಕೆ, ಮರುಪಾವತಿ, ಆರ್ಥಿಕ ವಹಿವಾಟುಗಳು, ಜೀವನೋಪಾಯಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಸಮಗ್ರ ಡಿಜಿಟಲ್ ಪರಿಹಾರವನ್ನು ನೀಡುತ್ತದೆ. ಈ ವೇದಿಕೆಯು ಆಡಳಿತ ಮತ್ತು ಆರ್ಥಿಕ ನಿರ್ವಹಣೆಯನ್ನು ಈ ಕೆಳಗಿನಂತೆ ಮತ್ತಷ್ಟು ಬಲಪಡಿಸುತ್ತದೆ:

  • ಡಿಜಿಟಲ್ ದಾಖಲೆಗಳ ಮೂಲಕ ಕೈಯಾರೆ ದಾಖಲೆಗಳನ್ನು ನಿರ್ವಹಿಸುವ ಅವಶ್ಯಕತೆಯನ್ನು ಕಡಿಮೆ ಮಾಡುವುದು,
  • ಸ್ವಸಹಾಯ ಸಂಘಗಳಿಗೆ ನೈಜ-ಸಮಯದ ವಹಿವಾಟು ಟ್ರ್ಯಾಕಿಂಗ್‌ಗೆ ಅವಕಾಶ ಕಲ್ಪಿಸುವುದು,
  • ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುವುದು, ಮತ್ತು
  • ಸ್ವಸಹಾಯ ಸಂಘಗಳ ಜಾಲದೊಳಗೆ ವರ್ಷಕ್ಕೆ ₹2 ಲಕ್ಷ ಕೋಟಿ ಮೊತ್ತದ ಆರ್ಥಿಕ ವಹಿವಾಟುಗಳನ್ನು ದಾಖಲಿಸುವುದು.

ಲೋಕ್ ಓಎಸ್ ವೆಬ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳೆರಡನ್ನೂ ಒಳಗೊಂಡಿದೆ, ಪ್ರತಿಯೊಂದೂ ವಿಭಿನ್ನ ಬಳಕೆದಾರ ಗುಂಪುಗಳಿಗೆ ಮತ್ತು ಕಾರ್ಯಚಟುವಟಿಕೆಗಳಿಗೆ ಸೇವೆ ಸಲ್ಲಿಸಲು ವಿನ್ಯಾಸಗೊಳಿಸಲಾಗಿದೆ. ವೆಬ್ ಅಪ್ಲಿಕೇಶನ್ ನಿರ್ವಾಹಕರು, ಇ-ಬುಕ್ ಕೀಪರ್‌ಗಳು ಮತ್ತು ವಹಿವಾಟು ಅನುಮೋದಕರಿಗೆ ಸ್ವಸಹಾಯ ಸಂಘಗಳು, ಗ್ರಾಮ ಸಂಘಟನೆಗಳು, ಸಮೂಹ ಮಟ್ಟದ ಒಕ್ಕೂಟಗಳು ಮತ್ತು ಅವುಗಳ ಸದಸ್ಯರನ್ನು ರಚಿಸಲು ಮತ್ತು ಅನುಮೋದಿಸಲು ಬೆಂಬಲ ನೀಡುತ್ತದೆ.

ಮೊಬೈಲ್ ಅಪ್ಲಿಕೇಶನ್ ಕ್ಷೇತ್ರ ಮಟ್ಟದಲ್ಲಿ ಸಮುದಾಯ ಆಧಾರಿತ ಸಂಸ್ಥೆಗಳ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ದಾಖಲಿಸಲು ಮತ್ತು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ಶೀ ಲೀಪ್ಸ್‌: ಗ್ರಾಮೀಣ ಉದ್ಯಮಶೀಲತೆಗಾಗಿ ಒಂದು ಡಿಜಿಟಲ್ ವೇದಿಕೆ

ಸೆಲ್ಫ್-ಹೆಲ್ಪ್ ಎಂಟರ್‌ಪ್ರೆನ್ಯೂರ್-ಲೈವ್ಲಿಹುಡ್ಸ್ ಅಂಡ್ ಎಂಟರ್‌ಪ್ರೈಸ್ ಅಪ್ಲಿಕೇಶನ್ ಫಾರ್ ಪ್ರೊಸ್ಪೆರಿಟಿ ಅಂಡ್ ಸಸ್ಟೈನಬಿಲಿಟಿ ಅನ್ನು ಇತ್ತೀಚೆಗೆ 29 ಜೂನ್ 2026 ರಂದು ಪ್ರಾರಂಭಿಸಲಾಯಿತು ಮತ್ತು ಇದನ್ನು ಲೋಕ್ ಓಎಸ್ ವೇದಿಕೆಯ ಅಡಿಯಲ್ಲಿ ಜಾರಿಗೆ ತರಲಾಗಿದೆ. ಇದು ಗ್ರಾಮೀಣ ಭಾರತದಾದ್ಯಂತ ಸ್ವಸಹಾಯ ಸಂಘಗಳೊಂದಿಗೆ ಸಂಬಂಧ ಹೊಂದಿರುವ ಮಹಿಳೆಯರನ್ನು ಸಬಲೀಕರಣಗೊಳಿಸುವ ಡಿಜಿಟಲ್ ವೇದಿಕೆಯಾಗಿದೆ. ಇದು ಉದ್ಯಮಗಳ ಸೃಷ್ಟಿ, ಕಾರ್ಯಕ್ಷಮತೆಯ ಟ್ರ್ಯಾಕಿಂಗ್ ಮತ್ತು ವ್ಯವಹಾರ ನಿರ್ವಹಣೆಗಾಗಿ ಒಂದು ಏಕೀಕೃತ ವೇದಿಕೆಯನ್ನು ಒದಗಿಸುತ್ತದೆ. ಇದು ಕೃಷಿ ಮತ್ತು ಕೃಷಿಯೇತರ ಉದ್ಯಮಗಳನ್ನು ಬೆಂಬಲಿಸುತ್ತದೆ, ಸುಸ್ಥಿರ ಮತ್ತು ಸ್ಥಿತಿಸ್ಥಾಪಕ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುತ್ತದೆ.

ಲೋಕ್ ಓಎಸ್ ಡಿಜಿಟಲ್ ವೈಶಿಷ್ಟ್ಯಗಳು

ಲೋಕ್ ಓಎಸ್ ಮೊಬೈಲ್ ಅಪ್ಲಿಕೇಶನ್ ಡಿಜಿಟಲೀಕರಣವನ್ನು ಸುಗಮಗೊಳಿಸುವ ಮೂಲಕ ಮತ್ತು ದತ್ತಾಂಶ-ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಕ್ರಿಯಗೊಳಿಸುವ ಮೂಲಕ ಸಮುದಾಯಗಳು ಮತ್ತು ಸಮುದಾಯ ಆಧಾರಿತ ಸಂಸ್ಥೆಗಳನ್ನು ಸಬಲೀಕರಣಗೊಳಿಸುತ್ತದೆ. ಇದರ ಪ್ರಮುಖ ವೈಶಿಷ್ಟ್ಯಗಳು ಈ ಕೆಳಗಿನಂತಿವೆ:

  • ಅಂತ್ಯದಿಂದ ಅಂತ್ಯಕ್ಕೆ ಡಿಜಿಟಲ್ ನಿರ್ವಹಣೆ: ಸ್ವಸಹಾಯ ಸಂಘಗಳು, ಗ್ರಾಮ ಸಂಘಟನೆಗಳು, ಸಮೂಹ ಮಟ್ಟದ ಒಕ್ಕೂಟಗಳು ಮತ್ತು ಅವುಗಳ ಸದಸ್ಯರನ್ನು ನೋಂದಾಯಿಸುತ್ತದೆ ಮತ್ತು ನಿರ್ವಹಿಸುತ್ತದೆ.
  • ವಿಶಿಷ್ಟ ಡಿಜಿಟಲ್ ಗುರುತಿನ ಚೀಟಿಗಳು : ಸಮುದಾಯ ಆಧಾರಿತ ಸಂಸ್ಥೆಗಳು ಮತ್ತು ಸದಸ್ಯರಿಗೆ [ವಿವರವನ್ನು ಅಳಿಸಲಾಗಿದೆ]-ಲಿಂಕ್ಡ್ ಮತ್ತು ಬ್ಯಾಂಕ್-ಲಿಂಕ್ಡ್ ಡಿಜಿಟಲ್ ಗುರುತಿನ ಚೀಟಿಗಳನ್ನು ರಚಿಸುತ್ತದೆ.
  • ಡಿಜಿಟಲ್ ಆರ್ಥಿಕ ದಾಖಲೆಗಳು: ಉಳಿತಾಯ, ಸಾಲಗಳು, ಮರುಪಾವತಿಗಳು ಮತ್ತು ಇತರ ಆರ್ಥಿಕ ವಹಿವಾಟುಗಳನ್ನು ದಾಖಲಿಸುತ್ತದೆ.
  • ಜೀವನೋಪಾಯದ ಪ್ರೊಫೈಲಿಂಗ್: ಸರ್ಕಾರಿ ಯೋಜನೆಗಳೊಂದಿಗೆ ಯೋಜನೆ ಮತ್ತು ಸಮನ್ವಯವನ್ನು ಬೆಂಬಲಿಸಲು ಜೀವನೋಪಾಯದ ದತ್ತಾಂಶವನ್ನು ಸೆರೆಹಿಡಿಯುತ್ತದೆ.
  • ಪಾತ್ರ-ಆಧಾರಿತ ಆಡಳಿತ: ಗ್ರಾಮ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ಬಳಕೆದಾರರ ನಿರ್ವಹಣೆ, ಅನುಮೋದನೆಗಳು, ಮೇಲ್ವಿಚಾರಣೆ ಮತ್ತು ವರದಿ ಮಾಡುವಿಕೆಯನ್ನು ಸಕ್ರಿಯಗೊಳಿಸುತ್ತದೆ.
  • ನೈಜ-ಸಮಯದ ವಿಶ್ಲೇಷಣೆ: ದತ್ತಾಂಶ-ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಡ್ಯಾಶ್‌ಬೋರ್ಡ್‌ಗಳು ಮತ್ತು ಒಂದೇ ಕ್ಲಿಕ್‌ನಲ್ಲಿ ವರದಿಗಳನ್ನು ಒದಗಿಸುತ್ತದೆ.

ಲೋಕ್ ಓಎಸ್: ಸಮುದಾಯ ಸಂಸ್ಥೆಗಳ ಡಿಜಿಟಲ್ ರೂಪಾಂತರದ ಚಾಲನೆ

ಲೋಕ್ ಓಎಸ್ ಭಾರತದಾದ್ಯಂತ ತನ್ನ ವ್ಯಾಪ್ತಿಯನ್ನು ಗಮನಾರ್ಹವಾಗಿ ವಿಸ್ತರಿಸಿದ್ದು, ಸಮುದಾಯ ಸಂಸ್ಥೆಗಳ ಬೃಹತ್ ಪ್ರಮಾಣದ ಡಿಜಿಟಲ್ ರೂಪಾಂತರವನ್ನು ಸಾಧ್ಯವಾಗಿಸಿದೆ. ಈ ವೇದಿಕೆಯು ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುವುದರೊಂದಿಗೆ, ಎಲ್ಲಾ ಹಂತಗಳಲ್ಲಿ ಸಮಗ್ರ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸುತ್ತದೆ. ಇದು ಪ್ರಸ್ತುತ 34 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು, 762 ಜಿಲ್ಲೆಗಳು, 7,241 ಬ್ಲಾಕ್‌ಗಳು, 2.57 ಲಕ್ಷ ಗ್ರಾಮ ಪಂಚಾಯಿತಿಗಳು ಮತ್ತು 5.92 ಲಕ್ಷ ಹಳ್ಳಿಗಳನ್ನು ಒಳಗೊಂಡಿದೆ.

ಒಳಗೊಂಡಿರುವ ಸಮುದಾಯ ಸಂಸ್ಥೆಗಳು

ಈ ವೇದಿಕೆಯು ದೇಶಾದ್ಯಂತ ಸಮುದಾಯ ಸಂಸ್ಥೆಗಳ ಬೃಹತ್ ಪ್ರಮಾಣದ ಡಿಜಿಟಲ್ ಏಕೀಕರಣವನ್ನು ಸಾಧ್ಯವಾಗಿಸಿದೆ. ಇದರೊಂದಿಗೆ ಸಂಪರ್ಕ ಹೊಂದಿರುವ ಸಮುದಾಯ ಮತ್ತು ಸಮುದಾಯ ಆಧಾರಿತ ಸಂಸ್ಥೆಗಳು ಯಾವುವೆಂದರೆ:

  • ಸಮೂಹ ಮಟ್ಟದ ಒಕ್ಕೂಟಗಳು: 34,314
  • ಗ್ರಾಮ ಸಂಘಟನೆಗಳು: 5.62 ಲಕ್ಷ
  • ಸ್ವಸಹಾಯ ಸಂಘಗಳು: 94.16 ಲಕ್ಷ
  • ಸ್ವಸಹಾಯ ಸಂಘದ ಸದಸ್ಯರು: 10.03 ಕೋಟಿ

ಸಜ್ಜುಗೊಳಿಸಲಾದ ಆರ್ಥಿಕ ಬೆಂಬಲ ಲೋಕ್ ಓಎಸ್ ಸಮುದಾಯ ಸಂಸ್ಥೆಗಳಾದ್ಯಂತ ಆರ್ಥಿಕ ಬೆಂಬಲವನ್ನು ಪರಿಣಾಮಕಾರಿಯಾಗಿ ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ರಿವಾಲ್ವಿಂಗ್ ಫಂಡ್ ಅಡಿಯಲ್ಲಿ ₹9,718.41 ಕೋಟಿ, ಸಮುದಾಯ ಹೂಡಿಕೆ ನಿಧಿ ಅಡಿಯಲ್ಲಿ ₹64,607.66 ಕೋಟಿ ಮತ್ತು ಸಮುದಾಯ ಉದ್ಯಮ ನಿಧಿ ಅಡಿಯಲ್ಲಿ ₹38.34 ಕೋಟಿ ಸೇರಿವೆ.

ಲಕ್ಷಾಧಿಪತಿ  ದಿದಿಗಳಿಗೆ ಬೆಂಬಲ ನೀಡುತ್ತಿರುವ ಲೋಕ್ ಓಎಸ್ ಲೋಕ್ ಓಎಸ್ ಲಕ್ಷಾಧಿಪತಿ  ದಿದಿ ಉಪಕ್ರಮವನ್ನು ಬೃಹತ್ ಪ್ರಮಾಣದ ಪ್ರಭಾವ, ಫಲಾನುಭವಿಗಳ ಟ್ರ್ಯಾಕಿಂಗ್ ಮತ್ತು ಡಿಜಿಟಲ್ ಮೇಲ್ವಿಚಾರಣೆಯ ಮೂಲಕ ಬೆಂಬಲಿಸುತ್ತದೆ. ಇದು 6,611 ಮಾಸ್ಟರ್ ಟ್ರೈನರ್‌ಗಳು, 4.09 ಲಕ್ಷ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮತ್ತು 3.87 ಕೋಟಿ ಸಂಭಾವ್ಯ ಲಕ್ಷಾಧಿಪತಿ  ದಿದಿಗಳ  ಬಲವಾದ ಜಾಲದ ಮೂಲಕ ಅನುಷ್ಠಾನವನ್ನು ಸಕ್ರಿಯಗೊಳಿಸುತ್ತದೆ.

ಈ ವೇದಿಕೆಯು 18.50 ಕೋಟಿ ಡಿಜಿಟಲ್ ಆಜೀವಿಕಾ ರಿಜಿಸ್ಟರ್‌ಗಳನ್ನು ನಿರ್ವಹಿಸುತ್ತದೆ, ಇದು ಜೀವನೋಪಾಯದ ಯೋಜನೆ, ಮೇಲ್ವಿಚಾರಣೆ ಮತ್ತು ಅನುಷ್ಠಾನಕ್ಕೆ ಬಲವಾದ ಡಿಜಿಟಲ್ ಅಡಿಪಾಯವನ್ನು ಒದಗಿಸುತ್ತದೆ.

ಡಿಜಿಟಲ್ ಸಬಲೀಕರಣಗೊಂಡ ಗ್ರಾಮೀಣ ಭಾರತವನ್ನು ನಿರ್ಮಿಸುವುದು ಲೋಕ್ ಓಎಸ್ ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಡಿಯಲ್ಲಿ ಒಂದು ಪರಿವರ್ತನಾಶೀಲ ಡಿಜಿಟಲ್ ವೇದಿಕೆಯಾಗಿದ್ದು, ಇದು ಸಮುದಾಯ ಆಧಾರಿತ ಸಂಸ್ಥೆಗಳ ಸಂಪೂರ್ಣ ಡಿಜಿಟಲೀಕರಣವನ್ನು ಸಕ್ರಿಯಗೊಳಿಸುತ್ತದೆ. ಇದು ನೈಜ-ಸಮಯದ ಮೇಲ್ವಿಚಾರಣೆ ಮತ್ತು ಡಿಜಿಟಲ್ ಆರ್ಥಿಕ ನಿರ್ವಹಣೆಯ ಮೂಲಕ ಪಾರದರ್ಶಕತೆ, ಆಡಳಿತ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುತ್ತಿದೆ.

ರಾಷ್ಟ್ರವ್ಯಾಪಿ ವ್ಯಾಪ್ತಿಯೊಂದಿಗೆ, ಈ ವೇದಿಕೆಯು ಲಕ್ಷಾಧಿಪತಿ ದಿದಿ ಉಪಕ್ರಮವನ್ನು ಬೆಂಬಲಿಸುತ್ತಿದೆ, ಆ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಆರ್ಥಿಕ ಸೇರ್ಪಡೆ ಉತ್ತೇಜಿಸುತ್ತಿದೆ. ಹೀಗಾಗಿ, ಈ ವೇದಿಕೆಯು ಸ್ವಾವಲಂಬಿ ಗ್ರಾಮೀಣ ಸಮುದಾಯಗಳ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದೆ.

References

Ministry of Rural Development

https://lokos.dord.gov.in/lakhpatiDidiImpact

https://lokos.dord.gov.in/aboutLokos
https://lakhpatididi.gov.in
https://lokos.dord.gov.in/communityFundshttps://dic.gov.in/lokos/
https://x.com/MoRD_GoI/status/2071507758046916762
Click Here To See PDF

 

*****

(तथ्य सामग्री आईडी: 150741) आगंतुक पटल : 13


Provide suggestions / comments
इस विश्लेषक को इन भाषाओं में पढ़ें : English , हिन्दी , Urdu , Malayalam , Bengali , Assamese , Marathi