Social Welfare
ಭಾರತದ ನ್ಯಾಯಮಂಡಳಿ ವ್ಯವಸ್ಥೆಯ ಸುಧಾರಣೆ
प्रविष्टि तिथि:
12 AUG 2026 14:34 PM
ನ್ಯಾಯಮಂಡಳಿಗಳ ಸುಧಾರಣಾ ವಿಧೇಯಕ, 2026
|
2026ರ ನ್ಯಾಯಮಂಡಳಿಗಳ ಸುಧಾರಣಾ ವಿಧೇಯಕವು ಹೆಚ್ಚು ಸ್ವತಂತ್ರ, ಪಾರದರ್ಶಕ ಮತ್ತು ವೃತ್ತಿಪರವಾಗಿ ನಿರ್ವಹಿಸಲ್ಪಡುವ ನ್ಯಾಯಮಂಡಳಿ ವ್ಯವಸ್ಥೆಯನ್ನು ರಚಿಸಲು ಯತ್ನಿಸುತ್ತದೆ. ಈ ವಿಧೇಯಕವು ನ್ಯಾಯಾಂಗದ ನೇತೃತ್ವದ ರಾಷ್ಟ್ರೀಯ ನ್ಯಾಯಮಂಡಳಿಗಳ ಆಯೋಗವನ್ನು ಸ್ಥಾಪಿಸಲು ಅವಕಾಶ ಮಾಡಿಕೊಡುತ್ತದೆ. ಇದು ನ್ಯಾಯಮಂಡಳಿಗಳಿಗೆ ಆಯ್ಕೆಗಳನ್ನು ಮಾಡುತ್ತದೆ ಮತ್ತು ಅವುಗಳ ಕಾರ್ಯಚರಣೆಯ ಮೇಲೆ ಮೇಲ್ವಿಚಾರಣೆಯನ್ನು ನಡೆಸುತ್ತದೆ. ಹೊಣೆಗಾರಿಕೆಯನ್ನು ಬಲಪಡಿಸುವುದರ ಜೊತೆಗೆ ಕಾರ್ಯಾಂಗದ ಸ್ವೇಚ್ಛಾಧಿಕಾರವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ನ್ಯಾಯಮಂಡಳಿ ನಿರ್ವಹಣೆಗೆ ಒಂದು ಸಾಮಾನ್ಯ ಸಾಂಸ್ಥಿಕ ಚೌಕಟ್ಟನ್ನು ರಚಿಸುವ ಮೂಲಕ, ಈ ವಿಧೇಯಕವು ನೇಮಕಾತಿ, ಅವಧಿ ಮತ್ತು ಕಾರ್ಯಚರಣೆಯ ಕುರಿತು ದೀರ್ಘಕಾಲದಿಂದ ಇರುವ ಕಳವಳಗಳನ್ನು ಪರಿಹರಿಸಲು ಯತ್ನಿಸುತ್ತದೆ, ಹಾಗೂ ಸುಪ್ರೀಂ ಕೋರ್ಟ್ ತನ್ನ 'ಮದ್ರಾಸ್ ಬಾರ್ ಅಸೋಸಿಯೇಷನ್' ತೀರ್ಪುಗಳಲ್ಲಿ ಪ್ರತಿಪಾದಿಸಿದ ತತ್ವಗಳನ್ನು ಅನುಷ್ಠಾನಕ್ಕೆ ತರುತ್ತದೆ.
|
ಭಾರತದ ನ್ಯಾಯಮಂಡಳಿ ವ್ಯವಸ್ಥೆಯ ಬಲವರ್ಧನೆ ಸಂಸತ್ತು ಆಗಸ್ಟ್ 2026 ರಲ್ಲಿ ಸಮ್ಮತಿಸಿದ ನ್ಯಾಯಮಂಡಳಿಗಳ ಸುಧಾರಣಾ ವಿಧೇಯಕ, 2026, ನ್ಯಾಯಮಂಡಳಿ ವ್ಯವಸ್ಥೆಯನ್ನು ಹೆಚ್ಚು ದಕ್ಷ, ಕಾರ್ಯಾಂಗದಿಂದ ಸ್ವತಂತ್ರ, ಪಾರದರ್ಶಕ ಮತ್ತು ಏಕರೂಪಗೊಳಿಸುವ ಉದ್ದೇಶವನ್ನು ಹೊಂದಿದೆ. ಈ ವಿಧೇಯಕವು ನ್ಯಾಯಮಂಡಳಿಗಳ ಸ್ವಾತಂತ್ರ್ಯದ ಮೇಲೆ ಸುಪ್ರೀಂ ಕೋರ್ಟ್ ನೀಡಿದ ವಿವಿಧ ತೀರ್ಪುಗಳನ್ನು ಅನುಸರಿಸುತ್ತದೆ. 'ಮದ್ರಾಸ್ ಬಾರ್ ಅಸೋಸಿಯೇಷನ್ ವಿರುದ್ಧ ಯೂನಿಯನ್ ಆಫ್ ಇಂಡಿಯಾ [(2026) 2 SCC 1]' ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ನ್ಯಾಯಮಂಡಳಿಗಳ ಸುಧಾರಣಾ ಕಾಯಿದೆ, 2021ರ ಉಪಬಂಧಗಳನ್ನು ರದ್ದುಗೊಳಿಸಿತ್ತು. ನ್ಯಾಯಾಲಯವು ಸ್ವತಂತ್ರ 'ರಾಷ್ಟ್ರೀಯ ನ್ಯಾಯಮಂಡಳಿಗಳ ಆಯೋಗ'ವನ್ನು ಸ್ಥಾಪಿಸುವಂತೆ ನಿರ್ದೇಶಿಸಿತ್ತು. 2026 ರ ವಿಧೇಯಕವು ನ್ಯಾಯಮಂಡಳಿಗಳ ಸುಧಾರಣಾ ಕಾಯಿದೆ, 2021 ಅನ್ನು ರದ್ದುಮಾಡಲು ಪ್ರಸ್ತಾಪಿಸುತ್ತದೆ. ಇದು ಈ ವ್ಯವಸ್ಥೆಯು ಸ್ವತಂತ್ರವಾಗಿರುವುದರ ಜೊತೆಗೆ ತಾನು ಸೇವೆ ಸಲ್ಲಿಸುವ ಜನರಿಗೆ ಹೊಣೆಗಾರಿಕೆಯಿಂದಿರುವುದನ್ನು ಖಚಿತಪಡಿಸಲು ಹೊಸ ಸಂರಚನೆಯನ್ನು ಪರಿಚಯಿಸುತ್ತದೆ.

ಒಳಪಡುವ ನ್ಯಾಯಮಂಡಳಿಗಳು ಮತ್ತು ಆಡಳಿತಾತ್ಮಕ ಕಾಯಿದೆಗಳು
ಈ ವಿಧೇಯಕವು ಈ ಶಾಸನದ ವ್ಯಾಪ್ತಿಗೆ ಒಳಪಡುವ ಎಲ್ಲಾ ನ್ಯಾಯಮಂಡಳಿಗಳು, ಮೇಲ್ಮನವಿ ನ್ಯಾಯಮಂಡಳಿಗಳು ಮತ್ತು ಪ್ರಾಧಿಕಾರಗಳನ್ನು, ಅವುಗಳಿಗೆ ಸಂಬಂಧಿಸಿದ ಶಾಸನಗಳೊಂದಿಗೆ ಪಟ್ಟಿ ಮಾಡುತ್ತದೆ. ಈ ವಿಧೇಯಕವು ಪ್ರಸ್ತಾಪಿಸಿರುವ ಬದಲಾವಣೆಗಳು ಈ ನ್ಯಾಯಮಂಡಳಿಗಳಿಗೆ ಅನ್ವಯಿಸುತ್ತವೆ.
|
ಕ್ರ. ಸಂ.
|
ನ್ಯಾಯಮಂಡಳಿ / ಮೇಲ್ಮನವಿ ನ್ಯಾಯಮಂಡಳಿ / ಪ್ರಾಧಿಕಾರ
|
ಶಾಸನಗಳು
|
|
1.
|
ಸುಂಕ, ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ
|
ಸುಂಕ ಕಾಯಿದೆ, 1962 (1962 ರ 52)
|
|
2.
|
ಮೇಲ್ಮನವಿ ನ್ಯಾಯಮಂಡಳಿ
|
ಕಳ್ಳಸಾಗಣೆದಾರರು ಮತ್ತು ವಿದೇಶಿ ವಿನಿಮಯ ದುರ್ಬಳಕೆದಾರರ (ಆಸ್ತಿ ಮುಟ್ಟುಗೋಲು) ಕಾಯಿದೆ, 1976 (1976 ರ 13)
|
|
3.
|
ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ
|
ಆಡಳಿತಾತ್ಮಕ ನ್ಯಾಯಮಂಡಳಿಗಳ ಕಾಯಿದೆ, 1985 (1985 ರ 13)
|
|
4.
|
ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿಗಳು
|
ಆಡಳಿತಾತ್ಮಕ ನ್ಯಾಯಮಂಡಳಿಗಳ ಕಾಯಿದೆ, 1985 (1985 ರ 13)
|
|
5.
|
ರೈಲ್ವೆ ನಷ್ಟ ಪರಿಹಾರ ಹಕ್ಕುಗಳ ನ್ಯಾಯಮಂಡಳಿ
|
ರೈಲ್ವೆ ನಷ್ಟ ಪರಿಹಾರ ಹಕ್ಕುಗಳ ನ್ಯಾಯಮಂಡಳಿ ಕಾಯಿದೆ, 1987 (1987 ರ 54)
|
|
6.
|
ಸೆಕ್ಯೂರಿಟೀಸ್ ಮೇಲ್ಮನವಿ ನ್ಯಾಯಮಂಡಳಿ
|
ಭಾರತೀಯ ಸೆಕ್ಯೂರಿಟೀಸ್ ಮತ್ತು ಎಕ್ಸ್ಚೇಂಜ್ ಮಂಡಳಿ ಕಾಯಿದೆ, 1992 (1992 ರ 15)
|
|
7.
|
ಸಾಲ ವಸೂಲಾತಿ ನ್ಯಾಯಮಂಡಳಿ
|
ಸಾಲಗಳ ವಸೂಲಾತಿ ಮತ್ತು ದಿವಾಳಿತನ ಕಾಯಿದೆ, 1993 (1993 ರ 51)
|
|
8.
|
ಸಾಲ ವಸೂಲಾತಿ ಮೇಲ್ಮನವಿ ನ್ಯಾಯಮಂಡಳಿ
|
ಸಾಲಗಳ ವಸೂಲಾತಿ ಮತ್ತು ದಿವಾಳಿತನ ಕಾಯಿದೆ, 1993 (1993 ರ 51)
|
|
9.
|
ದೂರಸಂಪರ್ಕ ವಿವಾದಗಳ ಇತ್ಯರ್ಥ ಮತ್ತು ಮೇಲ್ಮನವಿ ನ್ಯಾಯಮಂಡಳಿ
|
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಕಾಯಿದೆ, 1997 (1997 ರ 24)
|
|
10.
|
ವಿದ್ಯುತ್‌ಗಾಗಿ ಮೇಲ್ಮನವಿ ನ್ಯಾಯಮಂಡಳಿ
|
ವಿದ್ಯುಚ್ಛಕ್ತಿ ಕಾಯಿದೆ, 2003 (2003 ರ 36)
|
|
11.
|
ಸಶಸ್ತ್ರ ಪಡೆಗಳ ನ್ಯಾಯಮಂಡಳಿ
|
ಸಶಸ್ತ್ರ ಪಡೆಗಳ ನ್ಯಾಯಮಂಡಳಿ ಕಾಯಿದೆ, 2007 (2007 ರ 55)
|
|
12.
|
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ
|
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಾಯಿದೆ, 2010 (2010 ರ 19)
|
|
13.
|
ರಾಷ್ಟ್ರೀಯ ಕಂಪನಿ ಕಾಯಿದೆ ಮೇಲ್ಮನವಿ ನ್ಯಾಯಮಂಡಳಿ
|
ಕಂಪನಿಗಳ ಕಾಯಿದೆ, 2013 (2013 ರ 18)
|
|
14.
|
ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗ
|
ಗ್ರಾಹಕ ಸಂರಕ್ಷಣಾ ಕಾಯಿದೆ, 2019 (2019 ರ 35)
|
|
15.
|
ಕೇಂದ್ರ ಸರ್ಕಾರದಿಂದ ರಚಿಸಲ್ಪಟ್ಟ ಕೈಗಾರಿಕಾ ನ್ಯಾಯಮಂಡಳಿ
|
ಕೈಗಾರಿಕಾ ಸಂಬಂಧಗಳ ಸಂಹಿತೆ, 2020 (2020 ರ 35)
|
|
16.
|
ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ
|
ಆದಾಯ ತೆರಿಗೆ ಕಾಯಿದೆ, 2025 (2025 ರ 30)
|
ಹೊಸ ರಾಷ್ಟ್ರೀಯ ನ್ಯಾಯಮಂಡಳಿಗಳ ಆಯೋಗ
2026ರ ವಿಧೇಯಕವು ಹೊಸ 'ರಾಷ್ಟ್ರೀಯ ನ್ಯಾಯಮಂಡಳಿಗಳ ಆಯೋಗ'ದ ಸ್ಥಾಪನೆಯ ಮೂಲಕ ನ್ಯಾಯಮಂಡಳಿ ವ್ಯವಸ್ಥೆಯ ಸ್ವಾತಂತ್ರ್ಯವನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ. ನ್ಯಾಯಾಂಗದ ಉನ್ನತ ಮಟ್ಟದ ಸದಸ್ಯರಿಂದ ಕೂಡಿದ ಈ ಆಯೋಗವು, 2021ರ ನ್ಯಾಯಮಂಡಳಿಗಳ ಸುಧಾರಣಾ ಕಾಯಿದೆಯ ಪ್ರಕಾರ ಪ್ರಮುಖ ನೇಮಕಾತಿಗಳು ಮತ್ತು ಸೇವಾ ನಿಯಮಗಳ ನಿರ್ವಹಣೆಯ ಹೊಣೆಯನ್ನು ಹೊಂದಿದ್ದ ಕೇಂದ್ರ ಸರ್ಕಾರದ ಸ್ಥಾನವನ್ನು ಭರ್ತಿ ಮಾಡುತ್ತದೆ.
ಆಯೋಗದ ಸಂರಚನೆ
ಆಯೋಗವು ಈ ಕೆಳಗಿನ ಸದಸ್ಯರನ್ನು ಹೊಂದಿರುತ್ತದೆ:
- ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಅಥವಾ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ಒಬ್ಬ ಅಧ್ಯಕ್ಷರು, ಮತ್ತು
- ನಾಲ್ವರು ಸದಸ್ಯರು:
- ಇಬ್ಬರು ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ಅಥವಾ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ನ್ಯಾಯಾಂಗ ಸದಸ್ಯರಾಗಿರುತ್ತಾರೆ
- ಸಾರ್ವಜನಿಕ ಆಡಳಿತ, ಹಣಕಾಸು, ಕಾನೂನು, ಲೆಕ್ಕಪರಿಶೋಧನೆ, ಬ್ಯಾಂಕಿಂಗ್, ನಿರ್ವಹಣೆ ಅಥವಾ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕನಿಷ್ಠ 25 ವರ್ಷಗಳ ಅನುಭವ ಹೊಂದಿದ ಇಬ್ಬರು ತಾಂತ್ರಿಕ ಸದಸ್ಯರಾಗಿರುತ್ತಾರೆ.

ಕೇಂದ್ರ ಸರ್ಕಾರವು ಆಯೋಗದ ಅಧ್ಯಕ್ಷರು ಮತ್ತು ನ್ಯಾಯಾಂಗ ಸದಸ್ಯರನ್ನು ಔಪಚಾರಿಕವಾಗಿ ನೇಮಿಸುತ್ತದೆ. ಆದರೆ, ಅಧ್ಯಕ್ಷರು ಮತ್ತು ನ್ಯಾಯಾಂಗ ಸದಸ್ಯರನ್ನು ನೇಮಿಸುವುದಕ್ಕಿಂತ ಮುಂಚೆ ಅದು ಭಾರತದ ಮುಖ್ಯ ನ್ಯಾಯಾಧೀಶರ ಸಲಹೆಯನ್ನು ಪಡೆಯಬೇಕಾಗುತ್ತದೆ.
ಆಯೋಗದ ಕಾರ್ಯಗಳು
2026ರ ನ್ಯಾಯಮಂಡಳಿಗಳ ಸುಧಾರಣಾ ವಿಧೇಯಕದ ಪ್ರಕಾರ, ರಾಷ್ಟ್ರೀಯ ನ್ಯಾಯಮಂಡಳಿಗಳ ಆಯೋಗವು ಕೆಲವು ಮುಖ್ಯವಾದ ಪಾತ್ರಗಳನ್ನು ಹೊಂದಿದೆ:
- ನೇಮಕಾತಿಗಳನ್ನು ನಡೆಸು: 'ಹುಡುಕಾಟ-ಮತ್ತು-ನೇಮಕಾತಿ ಸಮಿತಿ'ಗಳ ಮೂಲಕ ನ್ಯಾಯಮಂಡಳಿಗಳ ಅಧ್ಯಕ್ಷರು ಮತ್ತು ಸದಸ್ಯರ ಖಾಲಿ ಸ್ಥಾನಗಳನ್ನು ತುಂಬಲು ನೇಮಕಾತಿ ಪ್ರಕ್ರಿಯೆಯನ್ನು ನಡೆಸುತ್ತದೆ.
- ಕಾರ್ಯಚರಣೆಯ ಪರಿಶೀಲನೆ: ನ್ಯಾಯಮಂಡಳಿಯ ಕಾರ್ಯಚರಣೆಯನ್ನು ಗಮನಿಸುತ್ತದೆ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ವಾರ್ಷಿಕ ವರದಿಗಳನ್ನು ತಯಾರಿಸುತ್ತದೆ.
- ವಿಚಾರಣೆಗಳ ಮೇಲ್ವಿಚಾರಣೆ: ನ್ಯಾಯಮಂಡಳಿ ಸದಸ್ಯರ ವಿರುದ್ಧ ಬರುವ ದೂರುಗಳ ವಿಚಾರಣೆಯನ್ನು ಮೇಲ್ವಿಚಾರಣೆ ನಡೆಸುತ್ತದೆ.
- ದತ್ತಾಂಶ ನಿರ್ವಹಣೆ: 16 ನ್ಯಾಯಮಂಡಳಿಗಳಿಗೆ ಸಂಬಂಧಿಸಿದ ಎಲ್ಲಾ ಪ್ರಕರಣ-ಸಂಬಂಧಿ ಮಾಹಿತಿಗಳ ಭಂಡಾರವನ್ನು ಹೊಂದಿರುವ ಪೋರ್ಟಲ್ ಆದ 'ರಾಷ್ಟ್ರೀಯ ನ್ಯಾಯಮಂಡಳಿ ದತ್ತಾಂಶ ಜಾಲ'ವನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ನಿರ್ವಹಿಸುತ್ತದೆ.
ಸೇವಾ ನಿಯಮಗಳು
- ಆಯೋಗದ ಅಧ್ಯಕ್ಷರು ಅಥವಾ ಆಯೋಗದ ಸದಸ್ಯರು ಐದು ವರ್ಷಗಳ ಅವಧಿಗೆ ಅಥವಾ ಅವರಿಗೆ ಎಪ್ಪತ್ತು ವರ್ಷ ವಯಸ್ಸು ತುಂಬುವವರೆಗೆ, ಇವರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಹುದ್ದೆಯಲ್ಲಿರುತ್ತಾರೆ.
- ನ್ಯಾಯಮಂಡಳಿಯ ಸದಸ್ಯರು ಐದು ವರ್ಷಗಳ ಅವಧಿಗೆ ಅಥವಾ ಅವರಿಗೆ ಅರವತ್ತೇಳು ವರ್ಷ ವಯಸ್ಸು ತುಂಬುವವರೆಗೆ, ಇವರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಹುದ್ದೆಯಲ್ಲಿರುತ್ತಾರೆ.
ಈ ಚೌಕಟ್ಟಿನಲ್ಲಿ ಮರುನೇಮಕಾತಿಗೂ ಅವಕಾಶವಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಹಿಂದಿನ ಸೇವೆ ಮತ್ತು ಕಾರ್ಯಕ್ಷಮತೆಯನ್ನು ಪರಿಗಣಿಸಲಾಗುತ್ತದೆ.
ಹೊಸ ಸಚಿವಾಲಯ (ಕಾರ್ಯದರ್ಶಿಗಳ ಕಚೇರಿ)
ಸಚಿವಾಲಯವು ರಾಷ್ಟ್ರೀಯ ನ್ಯಾಯಮಂಡಳಿಗಳ ಆಯೋಗಕ್ಕೆ ಆಡಳಿತಾತ್ಮಕ ಬೆಂಬಲ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಸಚಿವಾಲಯದ ಮುಖ್ಯಸ್ಥರು ಭಾರತ ಸರ್ಕಾರದ ಕಾರ್ಯದರ್ಶಿಯಾಗಿರುತ್ತಾರೆ. ಇದರ ಇlಖಾ ಅಧಿಕಾರಿಗಳು ಮತ್ತು ನೌಕರರ ಸಂಖ್ಯೆ ಹಾಗೂ ಸೇವಾ ಶರತ್ತುಗಳನ್ನು ನಿಯಮಗಳ ಮೂಲಕ ನಿರ್ಧರಿಸಲಾಗುತ್ತದೆ. ಇದು ಆಯೋಗದ ಅಧ್ಯಕ್ಷರ ಸಾಮಾನ್ಯ ಮತ್ತು ಆಡಳಿತಾತ್ಮಕ ಮೇಲ್ವಿಚಾರಣೆಯಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು:
- ತಜ್ಞರ ನೇಮಕಾತಿ ಪಟ್ಟಿ ತಯಾರಿಸುವುದು: ಅಭ್ಯರ್ಥಿಗಳನ್ನು ಮೌಲ್ಯಮಾಪನ ಮಾಡಲು ಸಂಬಂಧಿತ ಕ್ಷೇತ್ರಗಳಿಂದ ತಜ್ಞರನ್ನು ಗುರುತಿಸಿ ಪಟ್ಟಿಗೆ ಸೇರಿಸುತ್ತದೆ.
- ಶಿಫಾರಸುಗಳನ್ನು ಸಂವಹನ ಮಾಡುವುದು: ಹುಡುಕಾಟ-ಮತ್ತು-ಆಯ್ಕೆ ಸಮಿತಿಯ ಶಿಫಾರಸುಗಳನ್ನು ಮೂರು ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತದೆ.
- ಆಡಳಿತಾತ್ಮಕ ಬೆಂಬಲವನ್ನು ಒದಗಿಸುವುದು: ಆಯೋಗಕ್ಕೆ ಬೆಂಬಲ ನೀಡುತ್ತದೆ ಮತ್ತು ನಿಗದಿಪಡಿಸಿದ ಕಾರ್ಯಗಳನ್ನು ನಿರ್ವಹಿಸುತ್ತದೆ.
- ವಾರ್ಷಿಕ ವರದಿಗಳನ್ನು ಸಿದ್ಧಪಡಿಸುವುದು: ಆಯೋಗದ ಚಟುವಟಿಕೆಗಳ ಸಂಪೂರ್ಣ ಮತ್ತು ನೈಜ ವಿವರಣೆಯನ್ನು ನೀಡುವ ವಾರ್ಷಿಕ ವರದಿಯನ್ನು ಸಿದ್ಧಪಡಿಸಿ, ಆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತದೆ.
ಹುಡುಕಾಟ-ಮತ್ತು-ಆಯ್ಕೆ ಸಮಿತಿಗಳು
ವಿವಿಧ ನ್ಯಾಯಮಂಡಳಿಗಳ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆಯನ್ನು ಹುಡುಕಾಟ-ಮತ್ತು-ಆಯ್ಕೆ ಸಮಿತಿಗಳ ಮೂಲಕ ಮಾಡಲಾಗುತ್ತದೆ. ಈ ಸಮಿತಿಗಳು ಅಭ್ಯರ್ಥಿಗಳನ್ನು ಮೌಲ್ಯಮಾಪನ ಮಾಡಲು ಮತ್ತು ನ್ಯಾಯಮಂಡಳಿಯ ಹುದ್ದೆಗಳಿಗೆ ನೇಮಕಾತಿಗಳನ್ನು ಶಿಫಾರಸು ಮಾಡಲು ಜವಾಬ್ದಾರರಾಗಿರುತ್ತವೆ.
2026ರ ನ್ಯಾಯಮಂಡಳಿಗಳ ಸುಧಾರಣಾ ಮಸೂದೆಯ ಸೆಕ್ಷನ್ 13ರ ಅಡಿಯಲ್ಲಿ, ಹುಡುಕಾಟ-ಮತ್ತು-ಆಯ್ಕೆ ಸಮಿತಿಯು ಈ ಕೆಳಗಿನವುಗಳನ್ನು ಒಳಗೊಂಡಿದೆ: ನ್ಯಾಯಮಂಡಳಿಯ ಅಧ್ಯಕ್ಷರನ್ನು ಆಯ್ಕೆ ಮಾಡಲು
ಹುಡುಕಾಟ-ಮತ್ತು-ಆಯ್ಕೆ ಸಮಿತಿಗಳು
ವಿವಿಧ ನ್ಯಾಯಮಂಡಳಿಗಳ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆಯನ್ನು ಹುಡುಕಾಟ-ಮತ್ತು-ಆಯ್ಕೆ ಸಮಿತಿಗಳ ಮೂಲಕ ಮಾಡಲಾಗುತ್ತದೆ. ಈ ಸಮಿತಿಗಳು ಅಭ್ಯರ್ಥಿಗಳನ್ನು ಮೌಲ್ಯಮಾಪನ ಮಾಡಲು ಮತ್ತು ನ್ಯಾಯಮಂಡಳಿಯ ಹುದ್ದೆಗಳಿಗೆ ನೇಮಕಾತಿಗಳನ್ನು ಶಿಫಾರಸು ಮಾಡಲು ಜವಾಬ್ದಾರರಾಗಿರುತ್ತವೆ.
2026ರ ನ್ಯಾಯಮಂಡಳಿಗಳ ಸುಧಾರಣಾ ಮಸೂದೆಯ ಸೆಕ್ಷನ್ 13ರ ಅಡಿಯಲ್ಲಿ, ಹುಡುಕಾಟ-ಮತ್ತು-ಆಯ್ಕೆ ಸಮಿತಿಯು ಈ ಕೆಳಗಿನವುಗಳನ್ನು ಒಳಗೊಂಡಿದೆ:
ನ್ಯಾಯಮಂಡಳಿಯ ಅಧ್ಯಕ್ಷರ ಆಯ್ಕೆಗಾಗಿ
- ರಾಷ್ಟ್ರೀಯ ನ್ಯಾಯಮಂಡಳಿಗಳ ಆಯೋಗದ ಅಧ್ಯಕ್ಷರು
- ಆಯೋಗದ ತಾಂತ್ರಿಕ ಸದಸ್ಯರು
- ಆಯೋಗದ ಅಧ್ಯಕ್ಷರಿಂದ ನಾಮನಿರ್ದೇಶನಗೊಂಡ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ
- ಕೇಂದ್ರ ಸರ್ಕಾರದಿಂದ ನಾಮನಿರ್ದೇಶನಗೊಂಡ ಭಾರತ ಸರ್ಕಾರದ ಕಾರ್ಯದರ್ಶಿ. ರಾಜ್ಯ ಆಡಳಿತ ನ್ಯಾಯಮಂಡಳಿಗಳ ಅಧ್ಯಕ್ಷರ ಹುದ್ದೆಗೆ ನೇಮಕಾತಿ ಮಾಡುವ ಸಂದರ್ಭದಲ್ಲಿ, ಸಂಬಂಧಪಟ್ಟ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯು ಸದಸ್ಯರಾಗಿರುತ್ತಾರೆ
- ಅಭ್ಯರ್ಥಿಗಳನ್ನು ಮೌಲ್ಯಮಾಪನ ಮಾಡಿದ ಇಬ್ಬರು ಪಟ್ಟಿಗೊಂಡ ತಜ್ಞರು
- ಆಯೋಗದ ಕಾರ್ಯದರ್ಶಿ - ಸದಸ್ಯ ಕಾರ್ಯದರ್ಶಿ
ನ್ಯಾಯಮಂಡಳಿಯ ಸದಸ್ಯರನ್ನು ಆಯ್ಕೆ ಮಾಡಲು:
- ರಾಷ್ಟ್ರೀಯ ನ್ಯಾಯಮಂಡಳಿಗಳ ಆಯೋಗದ ನ್ಯಾಯಾಂಗ ಸದಸ್ಯರು — ಸಮಿತಿಯ ಅಧ್ಯಕ್ಷರು
- ಆಯೋಗದ ತಾಂತ್ರಿಕ ಸದಸ್ಯರು
- ಆಯೋಗದ ಅಧ್ಯಕ್ಷರಿಂದ ನಾಮನಿರ್ದೇಶನಗೊಂಡ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು
- ಕೇಂದ್ರ ಸರ್ಕಾರದಿಂದ ನಾಮನಿರ್ದೇಶನಗೊಂಡ ಭಾರತ ಸರ್ಕಾರದ ಕಾರ್ಯದರ್ಶಿ. ರಾಜ್ಯ ಆಡಳಿತ ನ್ಯಾಯಮಂಡಳಿಗಳ ಸದಸ್ಯರ ಹುದ್ದೆಗೆ ನೇಮಕಾತಿ ಮಾಡುವ ಸಂದರ್ಭದಲ್ಲಿ, ಸಂಬಂಧಪಟ್ಟ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯು ಸದಸ್ಯರಾಗಿರುತ್ತಾರೆ
- ಅಭ್ಯರ್ಥಿಗಳನ್ನು ಮೌಲ್ಯಮಾಪನ ಮಾಡಿದ ಇಬ್ಬರು ಪಟ್ಟಿಗೊಂಡ ತಜ್ಞರು
- ಆಯೋಗದ ಕಾರ್ಯದರ್ಶಿ - ಸದಸ್ಯ ಕಾರ್ಯದರ್ಶಿ
ಸಮಿತಿಯ ಅಧ್ಯಕ್ಷರು ನಿರ್ಣಾಯಕ ಮತವನ್ನು ಹೊಂದಿರುತ್ತಾರೆ, ಆದರೆ ಸದಸ್ಯ ಕಾರ್ಯದರ್ಶಿ ಮತ್ತು ತಜ್ಞ ಸದಸ್ಯರು ಮತದಾರರ ಹಕ್ಕುಗಳನ್ನು ಹೊಂದಿರುವುದಿಲ್ಲ. ಸಮಿತಿಯು:
- ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ: ಅಧ್ಯಕ್ಷರು ಮತ್ತು ಸದಸ್ಯರಿಗಾಗಿ ಆಯ್ಕೆ ಪ್ರಕ್ರಿಯೆಯನ್ನು ನಡೆಸುತ್ತದೆ.
- ಅಭ್ಯರ್ಥಿಗಳನ್ನು ಶಿಫಾರಸು ಮಾಡುತ್ತದೆ: ಪ್ರತಿ ಖಾಲಿ ಹುದ್ದೆಗೆ ಒಬ್ಬ ಸೂಕ್ತ ಅಭ್ಯರ್ಥಿಯನ್ನು ಮತ್ತು ಕಾಯ್ದಿರಿಸಿದ ಪಟ್ಟಿಗಾಗಿ ಒಬ್ಬ ಹೆಚ್ಚುವರಿ ಅಭ್ಯರ್ಥಿಯನ್ನು ಸಮಿತಿಯು ಶಿಫಾರಸು ಮಾಡುತ್ತದೆ.
- ಹಿಂದಿನ ಕಾರ್ಯಕ್ಷಮತೆಯನ್ನು ಪರಿಗಣಿಸುತ್ತದೆ: ಮರುನೇಮಕಾತಿ ಬಯಸುವ ಅಭ್ಯರ್ಥಿಗಳಿಗೆ, ಸಮಿತಿಯು ಅವರ ಹಿಂದಿನ ಸೇವೆ ಮತ್ತು ಕಾರ್ಯಕ್ಷಮತೆಯನ್ನು ಪರಿಗಣಿಸುತ್ತದೆ.
- ಸಮಯೋಚಿತ ನೇಮಕಾತಿಗಳನ್ನು ಸುಲಭಗೊಳಿಸುತ್ತದೆ: ಸಚಿವಾಲಯದ ಮೂಲಕ ಕೇಂದ್ರ ಸರ್ಕಾರಕ್ಕೆ ಶಿಫಾರಸುಗಳನ್ನು ಕಳುಹಿಸಲಾಗುತ್ತದೆ ಮತ್ತು ಸಚಿವಾಲಯವು ಅವುಗಳನ್ನು ಮೂರು ದಿನಗಳಲ್ಲಿ ತಿಳಿಸಬೇಕು. ಸರ್ಕಾರವು ಶಿಫಾರಸನ್ನು ಪರಿಶೀಲಿಸಿ ಮೂರು ತಿಂಗಳೊಳಗೆ ನೇಮಕಾತಿ ಮಾಡಬೇಕು.
ಪ್ರಸ್ತಾವಿತ ರಾಷ್ಟ್ರೀಯ ನ್ಯಾಯಮಂಡಳಿಗಳ ಆಯೋಗವು ನ್ಯಾಯಾಂಗದ ಬಹುಮತವನ್ನು ಹೊಂದಿದೆ. ಇದರ ಹುಡುಕಾಟ-ಮತ್ತು-ಆಯ್ಕೆ ಸಮಿತಿಗಳೂ ಸಹ ನ್ಯಾಯಾಂಗದ ಅಧ್ಯಕ್ಷತೆಯನ್ನು ಹೊಂದಿವೆ. ನ್ಯಾಯಾಂಗದ ಅಧ್ಯಕ್ಷರು ನಿರ್ಣಾಯಕ ಮತವನ್ನು ಹೊಂದಿರುತ್ತಾರೆ. ಸಮಿತಿಯು ಹೆಸರುಗಳ ಪಟ್ಟಿಯ ಬದಲಿಗೆ ಒಂಟಿ ಅಭ್ಯರ್ಥಿಯನ್ನು ಶಿಫಾರಸು ಮಾಡುತ್ತದೆ. ಇದು ಕಾರ್ಯನಿರ್ವಾಹಕ ವಿವೇಚನೆಯನ್ನು ಸೀಮಿತಗೊಳಿಸುವ ಮೂಲಕ ಆಯ್ಕೆ ಪ್ರಕ್ರಿಯೆಯ ಮೇಲೆ ನ್ಯಾಯಾಂಗದ ಪ್ರಭಾವವನ್ನು ಬಲಪಡಿಸುತ್ತದೆ.
ಹಣಕಾಸು ಮತ್ತು ಆಡಳಿತಾತ್ಮಕ ಸ್ವಾತಂತ್ರ್ಯ
ಮಸೂದೆಯು ನ್ಯಾಯಮಂಡಳಿಗಳಿಗೆ ಹೆಚ್ಚಿನ ಹಣಕಾಸು ಮತ್ತು ಆಡಳಿತಾತ್ಮಕ ಸ್ವಾಯತ್ತತೆಯನ್ನು ನೀಡಲು ಪ್ರಯತ್ನಿಸುತ್ತದೆ. ಈ ಚೌಕಟ್ಟಿನ ಅಡಿಯಲ್ಲಿ, ಪ್ರತ್ಯೇಕ ನ್ಯಾಯಮಂಡಳಿಗಳು ನಿಧಿಗಳು, ಸಿಬ್ಬಂದಿ ಮತ್ತು ಆವರಣಕ್ಕಾಗಿ ತಮ್ಮ ಅವಶ್ಯಕತೆಗಳನ್ನು ಗುರುತಿಸುತ್ತವೆ. ಆಯೋಗದ ಸಚಿವಾಲಯವು ಈ ಅಂದಾಜುಗಳನ್ನು ಕ್ರೋಢೀಕರಿಸುತ್ತದೆ ಮತ್ತು ಒಟ್ಟಾರೆ ಹಂಚಿಕೆಯ ಅಗತ್ಯಗಳನ್ನು ನಿರ್ಧರಿಸಲು ಆಯೋಗವು ಅವುಗಳನ್ನು ವಸ್ತುನಿಷ್ಠ ಚೌಕಟ್ಟನ್ನು ಬಳಸಿ ಮೌಲ್ಯಮಾಪನ ಮಾಡುತ್ತದೆ.
ಸಂಸತ್ತಿನ ಅನುಮೋದನೆಯ ನಂತರ ಕೇಂದ್ರ ಸರ್ಕಾರವು ಅಗತ್ಯ ಅನುದಾನವನ್ನು ನೀಡುವುದನ್ನು ಮುಂದುವರಿಸುತ್ತದೆ. ಹಣಕಾಸಿನ ಜವಾಬ್ದಾರಿ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು, ಭಾರತದ ನಿಯಂತ್ರಕ ಮತ್ತು ಮಹಾಲೇಖಾಪಾಲರು ಆಯೋಗದ ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡುತ್ತಾರೆ ಮತ್ತು ಲೆಕ್ಕಪರಿಶೋಧನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತಾರೆ, ನಂತರ ಸರ್ಕಾರವು ಅದನ್ನು ಸಂಸತ್ತಿನ ಎರಡೂ ಸದನಗಳ ಮುಂದೆ ಮಂಡಿಸುತ್ತದೆ.
ಹಣಕಾಸು ಮತ್ತು ಆಡಳಿತಾತ್ಮಕ ಸ್ವಾತಂತ್ರ್ಯ
ಮಸೂದೆಯು ನ್ಯಾಯಮಂಡಳಿಗಳಿಗೆ ಹೆಚ್ಚಿನ ಹಣಕಾಸು ಮತ್ತು ಆಡಳಿತಾತ್ಮಕ ಸ್ವಾಯತ್ತತೆಯನ್ನು ನೀಡಲು ಪ್ರಯತ್ನಿಸುತ್ತದೆ. ಈ ಚೌಕಟ್ಟಿನ ಅಡಿಯಲ್ಲಿ, ಪ್ರತ್ಯೇಕ ನ್ಯಾಯಮಂಡಳಿಗಳು ನಿಧಿಗಳು, ಸಿಬ್ಬಂದಿ ಮತ್ತು ಆವರಣಕ್ಕಾಗಿ ತಮ್ಮ ಅವಶ್ಯಕತೆಗಳನ್ನು ಗುರುತಿಸುತ್ತವೆ. ಆಯೋಗದ ಸಚಿವಾಲಯವು ಈ ಅಂದಾಜುಗಳನ್ನು ಕ್ರೋಢೀಕರಿಸುತ್ತದೆ ಮತ್ತು ಒಟ್ಟಾರೆ ಹಂಚಿಕೆಯ ಅಗತ್ಯಗಳನ್ನು ನಿರ್ಧರಿಸಲು ಆಯೋಗವು ಅವುಗಳನ್ನು ವಸ್ತುನಿಷ್ಠ ಚೌಕಟ್ಟನ್ನು ಬಳಸಿ ಮೌಲ್ಯಮಾಪನ ಮಾಡುತ್ತದೆ.
ಸಂಸತ್ತಿನ ಅನುಮೋದನೆಯ ನಂತರ ಕೇಂದ್ರ ಸರ್ಕಾರವು ಅಗತ್ಯ ಅನುದಾನವನ್ನು ನೀಡುವುದನ್ನು ಮುಂದುವರಿಸುತ್ತದೆ. ಹಣಕಾಸಿನ ಜವಾಬ್ದಾರಿ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು, ಭಾರತದ ನಿಯಂತ್ರಕ ಮತ್ತು ಮಹಾಲೇಖಾಪಾಲರು ಆಯೋಗದ ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡುತ್ತಾರೆ ಮತ್ತು ಲೆಕ್ಕಪರಿಶೋಧನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತಾರೆ, ನಂತರ ಸರ್ಕಾರವು ಅದನ್ನು ಸಂಸತ್ತಿನ ಎರಡೂ ಸದನಗಳ ಮುಂದೆ ಮಂಡಿಸುತ್ತದೆ.

ಹೆಚ್ಚು ಸ್ವತಂತ್ರ ನ್ಯಾಯಮಂಡಳಿ ವ್ಯವಸ್ಥೆಯಡೆಗೆ
2026ರ ನ್ಯಾಯಮಂಡಳಿಗಳ ಸುಧಾರಣಾ ಮಸೂದೆಯು ನ್ಯಾಯಮಂಡಳಿ ವ್ಯವಸ್ಥೆಯಲ್ಲಿ ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಪಾರದರ್ಶಕತೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತದೆ. ಈ ಮಸೂದೆಯು ನ್ಯಾಯಾಂಗದ ಸ್ವಾತಂತ್ರ್ಯವನ್ನು ಬಲಪಡಿಸುವುದರ ಜೊತೆಗೆ, ಸಂಸ್ಠೀಯ ಮೇಲ್ವಿಚಾರಣೆಯ ಮೂಲಕ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ಜವಾಬ್ದಾರರನ್ನಾಗಿ ಮಾಡುವ ಮೂಲಕ ಇದರ ನಡುವೆ ಸಮತೋಲನ ಕಾಯ್ದುಕೊಳ್ಳುತ್ತದೆ.
ಪ್ರಸ್ತುತ ರಾಷ್ಟ್ರೀಯ ನ್ಯಾಯಮಂಡಳಿಗಳ ಆಯೋಗವು ನೇಮಕಾತಿಗಳು, ಕಾರ್ಯಕ್ಷಮತೆ ವಿಮರ್ಶೆ ಮತ್ತು ಶಿಸ್ತುಬದ್ಧ ಮೇಲ್ವಿಚಾರಣೆಗಾಗಿ ಶಾಶ್ವತ ಸಾಸ್ಥಿಕ ಯಂತ್ರಣವನ್ನು ಸೃಷ್ಟಿಸುತ್ತದೆ. ನ್ಯಾಯಾಂಗದ ನೇತೃತ್ವದ ಆಯ್ಕೆ ಸಮಿತಿಗಳು ನೇಮಕಾತಿಗಳಲ್ಲಿ ನ್ಯಾಯಾಂಗದ ಅಂಶವನ್ನು ಬಲಪಡಿಸುತ್ತವೆ. ತಜ್ಞರ ಮೌಲ್ಯಮಾಪನವು ವೃತ್ತಿಪರ ಸಾಮರ್ಥ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ಐದು ವರ್ಷಗಳ ಅಧಿಕಾರಾವಧಿಯು ಹೆಚ್ಚಿನ ಸ್ಥಿರತೆಯನ್ನು ಒದಗಿಸುತ್ತದೆ.
ಈ ಮಸೂದೆಯು ವಿಘಟಿತ, ಕಾರ್ಯನಿರ್ವಾಹಕ-ಚಾಲಿತ ನ್ಯಾಯಮಂಡಳಿ ನಿಯಮಗಳಿಂದ ರಚನಾತ್ಮಕ ಸಾಸ್ಥಿಕ ಚೌಕಟ್ಟಿನ ಕಡೆಗೆ ಬದಲಾವಣೆಯನ್ನು ಸೂಚಿಸುತ್ತದೆ. ಸುಪ್ರೀಂ ಕೋರ್ಟ್‌ನ ಮದ್ರಾಸ್ ಬಾರ್ ಅಸೋಸಿಯೇಷನ್ ತೀರ್ಪುಗಳಿಗೆ ಅನುಗುಣವಾಗಿ ಹೆಚ್ಚು ಸ್ವತಂತ್ರ, ಪಾರದರ್ಶಕ ಮತ್ತು ವೃತ್ತಿಪರವಾಗಿ ನಿರ್ವಹಿಸಲ್ಪಡುವ ವ್ಯವಸ್ಥೆಯನ್ನು ಸ್ಥಾಪಿಸುವುದು ಇದರ ಪ್ರಮುಖ ಗುರಿಯಾಗಿದೆ.
References:
https://sansad.in/ls
https://prsindia.org/billtrack/prs-products/the-tribunal-system-in-india
https://www.indiacode.nic.in/handle/123456789/16901?view_type=browse
Reforming India’s Tribunal System
*****
(तथ्य सामग्री आईडी: 150831)
आगंतुक पटल : 12
Provide suggestions / comments