• Sitemap
  • Advance Search
Rural Prosperity

ದಿಗಂತದೆಡೆಗೆ ಅಭಿವೃದ್ಧಿಯ ವಿಸ್ತರಣೆ

प्रविष्टि तिथि: 13 AUG 2026 12:21 AM

ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯಗಳಿಗೆ ಕಲ್ಯಾಣ, ಸೇರ್ಪಡೆ ಮತ್ತು ಸಬಲೀಕರಣದ ಖಚಿತತೆ

ಭಾರತದ ಅಭಿವೃದ್ಧಿಯ ಪಯಣವು ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯಗಳಿಗೆ ತಲುಪುತ್ತಿದ್ದು, ಅವರ ಲಭ್ಯತೆ, ಅವಕಾಶ ಮತ್ತು ಜೀವನದ ಗುಣಮಟ್ಟವನ್ನು ಬದಲಾಯಿಸುತ್ತಿದೆ. ಮೂಲಭೂತ ಸೇವೆಗಳು, ಮೂಲಸೌಕರ್ಯ, ಜೀವನೋಪಾಯ, ಕೌಶಲ್ಯ, ಶಿಕ್ಷಣ ಮತ್ತು ಆರ್ಥಿಕ ಭದ್ರತೆಯ ಯೋಜನೆಗಳು ಸಮಗ್ರ ಬೆಳವಣಿಗೆಗೆ ಬಲ ನೀಡುತ್ತಿವೆ. ಮಹಿಳೆಯರು, ಬುಡಕಟ್ಟು ಸಮುದಾಯಗಳು ಮತ್ತು ದುರ್ಬಲ ವರ್ಗಗಳ ಮೇಲಿನ ವಿಶೇಷ ಗಮನವು ಸಬಲೀಕರಣದ ಹಾದಿಯನ್ನು ಸುಗಮಗೊಳಿಸುತ್ತಿದೆ.

ಕಲ್ಯಾಣ ವಿತರಣೆಯಿಂದ ವಿಕೇಂದ್ರೀಕೃತ ಪಾಲುದಾರಿಕೆಯವರೆಗೆ

  • ಗ್ರಾಮ ಪಂಚಾಯಿತಿಗಳಿಗೆ ನೇರ ಅನುದಾನ: 15ನೇ ಹಣಕಾಸು ಆಯೋಗದ (2021-26) ಅಡಿಯಲ್ಲಿ ₹2.36 ಲಕ್ಷ ಕೋಟಿಯಿಂದ 16 ನೇ ಹಣಕಾಸು ಆಯೋಗದ (2026-31) ಅಡಿಯಲ್ಲಿ ₹4.35 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ.
  • ಗ್ರಾಮೀಣ ಅಭಿವೃದ್ಧಿ ಬಜೆಟ್: 2016-17 ರಲ್ಲಿ ₹87,765 ಕೋಟಿಯಿಂದ 2026-27 ರಲ್ಲಿ ₹2.73 ಲಕ್ಷ ಕೋಟಿಗೆ ಏರಿಕೆಯಾಗಿದೆ.
  • ಬುಡಕಟ್ಟು ವ್ಯವಹಾರಗಳ ಬಜೆಟ್: 2016-17 ರಲ್ಲಿ ₹4,826 ಕೋಟಿಯಿಂದ 2026-27 ರಲ್ಲಿ ₹15,421.97 ಕೋಟಿಗೆ ಏರಿಕೆಯಾಗಿದೆ.

ಮೂಲಭೂತ ಅಗತ್ಯಗಳ ಸಾರ್ವತ್ರಿಕ ಲಭ್ಯತೆ

ಜಲ್ ಜೀವನ್ ಮಿಷನ್

  • ನಳದ ನೀರಿನ ಸಂಪರ್ಕ ಪಡೆದ ಮನೆಗಳ ಸಂಖ್ಯೆ 3.23 ಕೋಟಿಯಿಂದ (ಆಗಸ್ಟ್ 2019) 15.91 ಕೋಟಿಗಿಂತಲೂ ಹೆಚ್ಚಾಗಿದೆ (ಆಗಸ್ಟ್ 12, 2026).
  • 'ಹರ್ ಘರ್ ಜಲ್' ಅಭಿಯಾನದಡಿ 2.89 ಲಕ್ಷ ಗ್ರಾಮಗಳು 100% ನಳ ನೀರು ಸರಬರಾಜು ಸಾಧಿಸಿವೆ.

ಸ್ವಚ್ಛ ಭಾರತ್ ಅಭಿಯಾನ - ಗ್ರಾಮೀಣ

  • ಆಗಸ್ಟ್ 12, 2026 ರ ವೇಳೆಗೆ 12.19 ಕೋಟಿಗೂ ಹೆಚ್ಚು ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
  • ಭಾರತವು 2019 ರಲ್ಲಿ ಬಹಿರ್ದೆಸೆ ಮುಕ್ತ ಎಂದು ಘೋಷಿಸಲ್ಪಟ್ಟಿದೆ.
  • 1,288 ಕ್ಕೂ ಹೆಚ್ಚು 'ಗೋಬರ್ಧನ್'  ಜೈವಿಕ ಅನಿಲ ಘಟಕಗಳು ಕಾರ್ಯಾಚರಿಸುತ್ತಿವೆ.

ಪ್ರಧಾನಮಂತ್ರಿ ಉಜ್ವಲ ಯೋಜನೆ

  • ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳೆಯರಿಗೆ 10.57 ಕೋಟಿಗೂ ಹೆಚ್ಚು ಉಚಿತ ಎಲ್‌ಪಿಜಿ ಸಂಪರ್ಕಗಳನ್ನು ನೀಡಲಾಗಿದೆ.
  • ದೇಶದಲ್ಲಿ ಎಲ್‌ಪಿಜಿ ಸಂಪರ್ಕಗಳ ಸಂಖ್ಯೆ 2014 ರಲ್ಲಿ 14.52 ಕೋಟಿಯಿಂದ 2026 ರಲ್ಲಿ 33.39 ಕೋಟಿಗೆ ಏರಿಕೆಯಾಗಿದೆ.

ಸಾರ್ವತ್ರಿಕ ಗ್ರಾಮೀಣ ವಿದ್ಯುದ್ದೀಕರಣ

  • 'ಪಿಎಂ ಸೌಭಾಗ್ಯ' ಯೋಜನೆಯಡಿ ಮಾರ್ಚ್ 2019 ರ ವೇಳೆಗೆ 100% ಇಚ್ಛೆಯುಳ್ಳ ಮನೆಗಳಿಗೆ ವಿದ್ಯುಚ್ಛಕ್ತಿ ಒದಗಿಸಲಾಗಿದೆ.
  • 'ದೀನ್ ದಯಾಳ್ ಉಪಾಧ್ಯಾಯ ಗ್ರಾಮ್ ಜ್ಯೋತಿ ಯೋಜನೆ' ಅಡಿಯಲ್ಲಿ 2025 ರ ವೇಳೆಗೆ 100% ಗ್ರಾಮ ವಿದ್ಯುದ್ದೀಕರಣ ಸಾಧಿಸಲಾಗಿದೆ.

ಆಯುಷ್ಮಾನ್ ಭಾರತ್

  • 45.51 ಕೋಟಿಗೂ ಹೆಚ್ಚು ಆಯುಷ್ಮಾನ್ ಕಾರ್ಡ್‌ಗಳನ್ನು ನೀಡಲಾಗಿದೆ.
  • 96.43 ಕೋಟಿ ಆಭಾ (ABHA) ಖಾತೆಗಳನ್ನು ರಚಿಸಲಾಗಿದೆ.
  • 1.86 ಲಕ್ಷಕ್ಕೂ ಹೆಚ್ಚು 'ಆಯುಷ್ಮಾನ್ ಆರೋಗ್ಯ ಮಂದಿರ'ಗಳು ಕಾರ್ಯನಿರ್ವಹಿಸುತ್ತಿವೆ.

ಎಲ್ಲರಿಗೂ ಆಹಾರ ಭದ್ರತೆ

  • ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ: 81.35 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯ ವಿತರಿಸಲಾಗುತ್ತಿದೆ.
  • 99.8% ಪಡಿತರ ಅಂಗಡಿಗಳನ್ನು ಆಧಾರ್ ಆಧಾರಿತ ವಿತರಣೆಗೆ ಸ್ವಯಂಚಾಲಿತಗೊಳಿಸಲಾಗಿದೆ (Automated).
  • ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ರೇಷನ್ ಕಾರ್ಡ್‌ಗಳನ್ನು 100% ಡಿಜಿಟಲೀಕರಣಗೊಳಿಸಲಾಗಿದೆ.
  • 'ಒಂದು ದೇಶ ಒಂದು ರೇಷನ್ ಕಾರ್ಡ್' ಅಡಿಯಲ್ಲಿ 221 ಕೋಟಿಗೂ ಹೆಚ್ಚು ಪೋರ್ಟಬಿಲಿಟಿ ವಹಿವಾಟುಗಳು ದಾಖಲಾಗಿವೆ.

ಸಮಗ್ರ ಶಿಕ್ಷಣ ಅಭಿಯಾನ (ಸರ್ವ ಶಿಕ್ಷಣ ಅಭಿಯಾನ)

  • 2018-19 ರಿಂದ 2025-26 ರ ನಡುವೆ 4,073 ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ ಮತ್ತು 1.49 ಲಕ್ಷ ಐಸಿಟಿ/ಡಿಜಿಟಲ್ ಉದ್ಯಮಗಳನ್ನು ಜಾರಿಗೆ ತರಲಾಗಿದೆ.
  • 97.3% ಶಾಲೆಗಳು ಮಹಿಳಾ ನೈರ್ಮಲ್ಯ/ಶೌಚಾಲಯ ಸೌಲಭ್ಯಗಳನ್ನು ಹೊಂದಿವೆ.
  • ಪ್ರಾಥಮಿಕ ಶಾಲಾ ಮಟ್ಟದಲ್ಲಿ ಹೆಣ್ಣುಮಕ್ಕಳ ಶಾಲೆ ತೊರೆಯುವ ಪ್ರಮಾಣ (Drop-out rate) 4.6% ನಿಂದ 0.1% ಗೆ ಮತ್ತು ಪ್ರೌಢಶಾಲಾ ಮಟ್ಟದಲ್ಲಿ 14.5% ನಿಂದ 8% ಗೆ ಕಡಿಮೆಯಾಗಿದೆ.

ಇಡಬ್ಲ್ಯೂಎಸ್  ಮೀಸಲಾತಿ ಮತ್ತು ದಾಖಲಾತಿ ಹೆಚ್ಚಳ

  • ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ (EWS) 10% ಮೀಸಲಾತಿಯನ್ನು ಒದಗಿಸಲಾಗಿದೆ.
  • 2025-26 ರಲ್ಲಿ, ಒಟ್ಟು ದಾಖಲಾತಿ ಪ್ರಮಾಣವು (GER) ಪ್ರಾಥಮಿಕ ಮಟ್ಟದಲ್ಲಿ 89.4 ಮತ್ತು ಪ್ರೌಢಶಾಲಾ ಮಟ್ಟದಲ್ಲಿ 81.5 ದಾಖಲಾಗಿದೆ.

ಬೇಟಿ ಬಚಾವೋ ಬೇಟಿ ಪಢಾವೋ

  • ಪ್ರೌಢಶಾಲಾ ಹಂತದಲ್ಲಿ ಹೆಣ್ಣುಮಕ್ಕಳ ದಾಖಲಾತಿ ಪ್ರಮಾಣ 75.5% ನಿಂದ 83.4% ಗೆ ಏರಿಕೆಯಾಗಿದೆ.

ಕಸ್ತೂರ್ ಬಾ ಬಾಲಿಕಾ ವಿದ್ಯಾಲಯ ಮತ್ತು ಪಿಎಂ -ವಿದ್ಯಾ

  • ಕಸ್ತೂರ್ ಬಾ ಗಾಂಧಿ ಬಾಲಿಕಾ ವಿದ್ಯಾಲಯಗಳ ಸಂಖ್ಯೆ 5,133 ಕ್ಕೆ ಏರಿದ್ದು, ದಾಖಲಾತಿ 7.11 ಲಕ್ಷ ತಲುಪಿದೆ.
  • 'ಸ್ವಯಂ' ಪೋರ್ಟಲ್‌ನಲ್ಲಿ 6.5 ಕೋಟಿಗೂ ಹೆಚ್ಚು ಮತ್ತು 'ದೀಕ್ಷಾ' ಪೋರ್ಟಲ್‌ನಲ್ಲಿ 2.35 ಕೋಟಿ ನೋಂದಾಯಿತ ಬಳಕೆದಾರರಿದ್ದಾರೆ.

ಅಡಿಪಾಯದ ನಿರ್ಮಾಣ: ಮೂಲಸೌಕರ್ಯ ಮತ್ತು ಸಂಪರ್ಕ

ಪ್ರಧಾನ ಮಂತ್ರಿ ಆವಾಸ್ ಯೋಜನೆಗ್ರಾಮೀಣ

3.91 ಕೋಟಿ ಮನೆಗಳನ್ನು ಮಂಜೂರು ಮಾಡಲಾಗಿದ್ದು, 3.13 ಕೋಟಿಗೂ ಹೆಚ್ಚು ಮನೆಗಳ ನಿರ್ಮಾಣ ಪೂರ್ಣಗೊಂಡಿದೆ.

ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆ

2014 ರಿಂದ 2026 ರ ನಡುವೆ 4.13 ಲಕ್ಷ ಕಿ.ಮೀ ರಸ್ತೆಗಳು ಮತ್ತು 10,404 ಸೇತುವೆಗಳು ಪೂರ್ಣಗೊಂಡಿವೆ. ಅರ್ಹತೆ ಹೊಂದಿರುವ 99.6% ಜನವಸತಿ ಪ್ರದೇಶಗಳಿಗೆ ಆಲ್-ವೆದರ್ (ಎಲ್ಲಾ ಋತುಮಾನಕ್ಕೆ ಸೂಕ್ತವಾದ) ರಸ್ತೆ ಸಂಪರ್ಕ ಕಲ್ಪಿಸಲಾಗಿದೆ.

ಗ್ರಾಮ ಪಂಚಾಯಿತಿಗಳ ಡಿಜಿಟಲೀಕರಣ

ಭಾರತನೆಟ್ ಅಡಿಯಲ್ಲಿ 2.19 ಲಕ್ಷ ಗ್ರಾಮ ಪಂಚಾಯಿತಿಗಳು ಇಂಟರ್ನೆಟ್ ಸಂಪರ್ಕ ಪಡೆದಿವೆ. ಇ-ಗ್ರಾಮಸ್ವರಾಜ್ ಮೂಲಕ ₹3 ಲಕ್ಷ ಕೋಟಿಗೂ ಹೆಚ್ಚು ಪಾವತಿಗಳನ್ನು ಪ್ರಕ್ರಿಯೆಗೊಳಿಸಲಾಗಿದೆ.

ಸಮೃದ್ಧಿಯ ಹಾದಿ: ಜೀವನೋಪಾಯ, ಕೌಶಲ್ಯ ಮತ್ತು ಆರ್ಥಿಕ ಭದ್ರತೆ

ದೀನ್ದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್

  • ಆಗಸ್ಟ್ 12, 2026 ರ ವೇಳೆಗೆ, 10.19 ಕೋಟಿ ಕುಟುಂಬಗಳನ್ನು 94.46 ಲಕ್ಷ ಸ್ವಸಹಾಯ ಗುಂಪುಗಳಾಗಿ (SHG) ಸಂಘಟಿಸಲಾಗಿದೆ.
  • ಜುಲೈ 29, 2026 ರ ವೇಳೆಗೆ, 3.46 ಕೋಟಿ ಲಕ್ಷಪತಿ ದೀದಿಯರನ್ನು ಸೃಷ್ಟಿಸಲಾಗಿದೆ.

ಯೋಜನೆಗಳ ಕೊನೆಯ ಹಂತದ ವಿತರಣೆಯನ್ನು ಖಚಿತಪಡಿಸುವಲ್ಲಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಪಾತ್ರ

  • ಪ್ರಸ್ತುತ 9 ಲಕ್ಷಕ್ಕೂ ಹೆಚ್ಚು ಸಿಆರ್‌ಪಿ ಗಳು ಸಕ್ರಿಯವಾಗಿದ್ದು, ಕೃಷಿ, ಬ್ಯಾಂಕಿಂಗ್, ವಿಮೆ ಮತ್ತು ಪೋಷಣೆಯಂತಹ ವಿಷಯಾಧಾರಿತ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
  • ಇ ಇದರಲ್ಲಿ 50,548 ಕ್ಕೂ ಹೆಚ್ಚು ಬ್ಯಾಂಕ್ ಸಖಿಯರು, 1.91 ಲಕ್ಷ ಕೃಷಿ ಸಖಿಯರು, 2,012 ಮತ್ಸ್ಯ ಸಖಿಯರು ಮತ್ತು 1.70 ಲಕ್ಷ ಪಶು ಸಖಿಯರು ಸೇರಿದ್ದಾರೆ.

ಸ್ವಸಹಾಯ ಉದ್ಯಮಿ ಮಾರ್ಟ್ (SHE-Mart) ಪರಿಚಯ

  • ಕೇಂದ್ರ ಬಜೆಟ್ 2026-27 ರಲ್ಲಿ ಘೋಷಿಸಲಾಗಿದ್ದು, 1 ಕೋಟಿ ಮಹಿಳೆಯರಿಗೆ ಪ್ರಯೋಜನ ತಲುಪಿಸುವ ಗುರಿಯನ್ನು ಹೊಂದಿದೆ.
  • ಸ್ವಸಹಾಯ ಗುಂಪುಗಳ ಅನುಕೂಲ ವ್ಯವಸ್ಥೆಯ ಅಡಿಯಲ್ಲಿ ಮಹಿಳೆಯರಿಗಾಗಿ ಸಮುದಾಯ ಸ್ವಾಮ್ಯದ ಚಿಲ್ಲರೆ ಮಾರಾಟ ಮಳಿಗೆಗಳನ್ನು ರಚಿಸುವ ಗುರಿಯನ್ನು ಹೊಂದಿದೆ.

ದೀನ್ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ

  • ತರಬೇತಿ ಪಡೆದ ಅಭ್ಯರ್ಥಿಗಳ ಸಂಖ್ಯೆ 2014–15 ರಲ್ಲಿ 43,038 ರಿಂದ ಆಗಸ್ಟ್ 11, 2026 ರವರೆಗೆ 18.45 ಲಕ್ಷಕ್ಕೆ ಹೆಚ್ಚಾಗಿದೆ.
  • ಉದ್ಯೋಗ ಪಡೆದ ಅಭ್ಯರ್ಥಿಗಳ ಸಂಖ್ಯೆ 2014–15 ರಲ್ಲಿ 21,446 ರಿಂದ ಆಗಸ್ಟ್ 11, 2026 ರವರೆಗೆ 12.35 ಲಕ್ಷಕ್ಕೆ ಏರಿಕೆಯಾಗಿದೆ.

ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ

ಆರಂಭದಿಂದ ಜೂನ್ 2026 ರವರೆಗೆ 1.64 ಕೋಟಿಗೂ ಹೆಚ್ಚು ಯುವಕರು ಕೌಶಲ್ಯ ತರಬೇತಿಯನ್ನು ಪಡೆದಿದ್ದಾರೆ.

ವಿಕಸಿತ ಭಾರತ - ರೋಜಗಾರ್ ಮತ್ತು ಅಜೀವಿಕಾ ಮಿಷನ್ ಗ್ಯಾರಂಟಿ (ಗ್ರಾಮೀಣ)

  • ಆರ್ಥಿಕ ವರ್ಷ 2006-07 ರಿಂದ 2013-14 ರ ನಡುವೆ ಸೃಷ್ಟಿಯಾದ ಒಟ್ಟು ವ್ಯಕ್ತಿ ದಿನಗಳು 1,660 ಕೋಟಿಯಾಗಿದ್ದರೆ, ಆರ್ಥಿಕ ವರ್ಷ 2014-15 ರಿಂದ 2024-25 ರ ನಡುವೆ ಇದು 3,029 ಕೋಟಿಗೆ ಏರಿದೆ.
  • ಮಹಿಳೆಯರ ಭಾಗವಹಿಸುವಿಕೆ ಶೇಕಡಾ 48 ರಿಂದ (ಆರ್ಥಿಕ ವರ್ಷ 2013–14) ಶೇಕಡಾ 58.19 ಕ್ಕೆ (ಆರ್ಥಿಕ ವರ್ಷ 2024–25) ಹೆಚ್ಚಾಗಿದೆ.

-ಶ್ರಮ್ ಪೋರ್ಟಲ್

ನೋಂದಣಿಗಳು 14.40 ಕೋಟಿಯಿಂದ (ಡಿಸೆಂಬರ್ 2021) 31.87 ಕೋಟಿಗೆ (ಆಗಸ್ಟ್ 12, 2026) ಹೆಚ್ಚಾಗಿವೆ.

ಪಿಎಂ ವಿಶ್ವಕರ್ಮ ಯೋಜನೆ

  • ಆಗಸ್ಟ್ 12, 2026 ರ ವೇಳೆಗೆ, 30 ಲಕ್ಷಕ್ಕೂ ಹೆಚ್ಚು ಸಾಂಪ್ರದಾಯಿಕ ಕುಶಲಕರ್ಮಿಗಳು ನೋಂದಾಯಿಸಿಕೊಂಡಿದ್ದಾರೆ.
  • ಆಗಸ್ಟ್ 12, 2026 ರ ವೇಳೆಗೆ, 24.32 ಲಕ್ಷ ಕುಶಲಕರ್ಮಿಗಳು ಕೌಶಲ್ಯ ತರಬೇತಿಯನ್ನು ಪಡೆದಿದ್ದಾರೆ ಮತ್ತು 17.70 ಲಕ್ಷ ಜನರು ಪರಿಕರಗಳ ಕಿಟ್‌ಗಳನ್ನು ಪಡೆದಿದ್ದಾರೆ.

ಪಿಎಂ ಸ್ವನಿಧಿ (PM SVANidhi)

  • ಫಲಾನುಭವಿಗಳ ಸಂಖ್ಯೆ 26.37 ಲಕ್ಷದಿಂದ (ನವೆಂಬರ್ 2021) 78.17 ಲಕ್ಷಕ್ಕೆ (ಆಗಸ್ಟ್ 12, 2026) ಹೆಚ್ಚಾಗಿದೆ.
  • ಆಗಸ್ಟ್ 12, 2026 ರ ವೇಳೆಗೆ, ₹18,971.18 ಕೋಟಿ ಮೊತ್ತದ ಸಾಲಗಳನ್ನು ವಿತರಿಸಲಾಗಿದೆ. ಫಲಾನುಭವಿಗಳಲ್ಲಿ ಶೇಕಡಾ 46 ರಷ್ಟು ಜನರು ಮಹಿಳೆಯರಾಗಿದ್ದಾರೆ.

ಪಿಎಂ ಮುದ್ರಾ ಯೋಜನೆ

ಮಂಜೂರಾದ ಒಟ್ಟು ಸಾಲಗಳ ಸಂಖ್ಯೆ 3.49 ಕೋಟಿಯಿಂದ (2016) 59.14 ಕೋಟಿಗೂ ಹೆಚ್ಚು (ಜುಲೈ 2026) ಹೆಚ್ಚಾಗಿದೆ.

ಪಿಎಂ ಜನ್ ಧನ್ ಯೋಜನೆ

ಫಲಾನುಭವಿಗಳ ಸಂಖ್ಯೆ 17.9 ಕೋಟಿಯಿಂದ (ಆಗಸ್ಟ್ 2015) 58.90 ಕೋಟಿಗೆ (ಆಗಸ್ಟ್ 12, 2026) ಹೆಚ್ಚಾಗಿದೆ.

ಸಾಮಾಜಿಕ ಭದ್ರತಾ ವ್ಯಾಪ್ತಿಯ ವಿಸ್ತರಣೆ

  • ರಾಷ್ಟ್ರೀಯ ಪಿಂಚಣಿ ಯೋಜನೆಯಡಿಯಲ್ಲಿ (National Pension System), ಫಲಾನುಭವಿಗಳು 1.05 ಕೋಟಿಯಿಂದ (2016–17) 2.17 ಕೋಟಿಗೆ (2025–26) ಹೆಚ್ಚಾಗಿದ್ದಾರೆ.
  • ಅಟಲ್ ಪಿಂಚಣಿ ಯೋಜನೆಯಡಿಯಲ್ಲಿ, ಫಲಾನುಭವಿಗಳು 48.80 ಲಕ್ಷದಿಂದ (2016–17) 9.29 ಕೋಟಿಗೆ (ಜೂನ್ 2026) ಹೆಚ್ಚಾಗಿದ್ದಾರೆ.
  • ಜುಲೈ 2026 ರವರೆಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ 27.90 ಕೋಟಿ ಜನರು ಒಳಗೊಂಡಿದ್ದಾರೆ.
  • ಜುಲೈ 1, 2026 ರವರೆಗೆ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ 58.78 ಕೋಟಿ ಜನರು ಒಳಗೊಂಡಿದ್ದಾರೆ.
  • ಜುಲೈ 2026 ರ ವೇಳೆಗೆ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ ಯೋಜನೆಯಡಿ 54 ಲಕ್ಷಕ್ಕೂ ಹೆಚ್ಚು ಅಸಂಘಟಿತ ವಲಯದ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ.

ಸಮಗ್ರ ಮಧ್ಯಸ್ಥಿಕೆಗಳ ಮೂಲಕ ಬುಡಕಟ್ಟು ಅಭಿವೃದ್ಧಿಯನ್ನು ವೇಗಗೊಳಿಸುವುದು

ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ

ಆಗಸ್ಟ್ 5, 2026 ರ ವೇಳೆಗೆ, 540 ವನ್ ಧನ್ ವಿಕಾಸ ಕೇಂದ್ರಗಳು (VDVK) ಮಂಜೂರಾಗಿದ್ದು, ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ (PVTG) 46,042 ವ್ಯಕ್ತಿಗಳಿಗೆ ಪ್ರಯೋಜನ ತಲುಪಿದೆ.

ಪ್ರಧಾನ ಮಂತ್ರಿ ಜನಜಾತೀಯ ವಿಕಾಸ ಮಿಷನ್

ಆಗಸ್ಟ್ 2026 ರ ವೇಳೆಗೆ ಈ ಯೋಜನೆಯಡಿಯಲ್ಲಿ 4,172 ವನ್ ಧನ್ ವಿಕಾಸ ಕೇಂದ್ರಗಳು ಮಂಜೂರಾಗಿದ್ದು, 12.48 ಲಕ್ಷ ಬುಡಕಟ್ಟು ಜನರಿಗೆ ಪ್ರಯೋಜನ ತಲುಪಿದೆ.

ಪ್ರಧಾನ ಮಂತ್ರಿ ಜನಜಾತೀಯ ಉನ್ನತ್ ಗ್ರಾಮ್ ಅಭಿಯಾನ

ಇದು 17 ಸಚಿವಾಲಯಗಳ ಪ್ರಯತ್ನಗಳನ್ನು ಸಂಯೋಜಿಸುತ್ತದೆ ಮತ್ತು ಬುಡಕಟ್ಟು ಪ್ರಾಬಲ್ಯ ಹೊಂದಿರುವ ಗ್ರಾಮಗಳು ಹಾಗೂ ಪಿವಿಟಿಜಿ ಜನವಸತಿ ಪ್ರದೇಶಗಳಲ್ಲಿ ದೀರ್ಘಕಾಲದಿಂದ ಇರುವ ಕೊರತೆಗಳನ್ನು ಭರ್ತಿ ಮಾಡುವುದರ ಮೇಲೆ ಗಮನ ಹರಿಸುತ್ತದೆ.

ಪಿಎಂ ಜೆಯುಜಿಎ ಅಡಿಯಲ್ಲಿ, ಪ್ರತ್ಯೇಕ ಮಧ್ಯಸ್ಥಿಕೆಗಳಿಂದ ವಿವಿಧ ವಲಯಗಳು ಮತ್ತು ಸಚಿವಾಲಯಗಳಾದ್ಯಂತ ಸಂಘಟಿತ, ಮಿಷನ್-ಮೋಡ್ ವಿತರಣೆಯತ್ತ ಗಮನವು ಹೆಚ್ಚಾಗಿ ಸ್ಥಳಾಂತರಗೊಂಡಿದೆ. ಕಳೆದ 12 ವರ್ಷಗಳಲ್ಲಿ:

  • 7.60 ಲಕ್ಷ ಬುಡಕಟ್ಟು ಮನೆಗಳನ್ನು ಪೂರ್ಣಗೊಳಿಸಲಾಗಿದೆ ಮತ್ತು 28,303 ಬುಡಕಟ್ಟು ಗ್ರಾಮಗಳು ಕುಡಿಯುವ ನೀರಿನ ಸೌಲಭ್ಯವನ್ನು ಹೊಂದಿವೆ.
  • 59,812 ಬುಡಕಟ್ಟು ಕುಟುಂಬಗಳು ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ವಿದ್ಯುದ್ದೀಕರಣ ಮಾಡಲಾಗಿದೆ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ 657 ಅಂಗನವಾಡಿ ಕೇಂದ್ರಗಳನ್ನು ಕಾರ್ಯಾಚರಣೆಗೆ ತರಲಾಗಿದೆ.
  • ಬುಡಕಟ್ಟು ವಿದ್ಯಾರ್ಥಿಗಳಿಗಾಗಿ 692 ವಸತಿ ನಿಲಯಗಳನ್ನು ಸಹ ಮಂಜೂರು ಮಾಡಲಾಗಿದೆ.

ಪ್ರಧಾನ ಮಂತ್ರಿ ಅನುಸೂಚಿತ ಜಾತಿ ಅಭ್ಯುದಯ ಯೋಜನೆ

  • ಆಗಸ್ಟ್ 12, 2026 ರ ವೇಳೆಗೆ, 4.16 ಲಕ್ಷಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಮನೆಗಳನ್ನು ನಿರ್ಮಿಸಲಾಗಿದೆ, 4.17 ಲಕ್ಷಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಕುಟುಂಬಗಳನ್ನು ಆರೋಗ್ಯ ರಕ್ಷಣೆ ಯೋಜನೆಗಳ ಅಡಿಯಲ್ಲಿ ತರಲಾಗಿದೆ ಮತ್ತು 3.57 ಲಕ್ಷಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಕುಟುಂಬಗಳು ವೈಯಕ್ತಿಕ ಶೌಚಾಲಯಗಳನ್ನು ಹೊಂದಿವೆ.
  • ಆಗಸ್ಟ್ 12, 2026 ರ ವೇಳೆಗೆ, 17,578 ಗ್ರಾಮಗಳನ್ನು ಆದರ್ಶ ಗ್ರಾಮಗಳೆಂದು ಘೋಷಿಸಲಾಗಿದೆ.

ಏಕಲವ್ಯ ಮಾದರಿ ವಸತಿ ಶಾಲೆಗಳು (EMRSs)

  • ಕಾರ್ಯನಿರ್ವಹಿಸುತ್ತಿರುವ ಶಾಲೆಗಳು 129 ರಿಂದ (2014–15) 511 ಕ್ಕೆ (ಆಗಸ್ಟ್ 12, 2026) ಹೆಚ್ಚಾಗಿವೆ.
  • ಆಗಸ್ಟ್ 12, 2026 ರ ವೇಳೆಗೆ, EMRS ಗಳು 1.68 ಲಕ್ಷ ವಿದ್ಯಾರ್ಥಿಗಳ ದಾಖಲಾತಿಯನ್ನು ಹೊಂದಿವೆ.

ಪಿಎಂ-ಯಶಸ್ವಿ (PM-YASASVI)

ಆರ್ಥಿಕ ವರ್ಷ 2024-25 ಕ್ಕೆ 20.61 ಲಕ್ಷ ವಿದ್ಯಾರ್ಥಿಗಳು ಮೆಟ್ರಿಕ್-ಪೂರ್ವ ವಿದ್ಯಾರ್ಥಿವೇತನವನ್ನು ಪಡೆದಿದ್ದಾರೆ ಮತ್ತು 24.53 ಲಕ್ಷ ವಿದ್ಯಾರ್ಥಿಗಳು ಮೆಟ್ರಿಕ್-ನಂತರದ ವಿದ್ಯಾರ್ಥಿವೇತನವನ್ನು ಪಡೆದಿದ್ದಾರೆ.

ಪರಿಶಿಷ್ಟ ಪಂಗಡ (ST) ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಗಳು

  • ಏಪ್ರಿಲ್ 2024 ಮತ್ತು ಆಗಸ್ಟ್ 12, 2026 ರ ನಡುವೆ, ಮೆಟ್ರಿಕ್-ಪೂರ್ವ ವಿದ್ಯಾರ್ಥಿವೇತನ ಯೋಜನೆಯು 28.99 ಲಕ್ಷಕ್ಕೂ ಹೆಚ್ಚು ಬುಡಕಟ್ಟು ವಿದ್ಯಾರ್ಥಿಗಳಿಗೆ ಪ್ರಯೋಜನ ನೀಡಿದೆ.
  • ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಫೆಲೋಶಿಪ್ 2025–26 ರಲ್ಲಿ 2,961 ಸಂಶೋಧನಾ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದೆ.
  • ಫಲಾನುಭವಿಗಳಲ್ಲಿ ಶೇಕಡಾ 56 ರಷ್ಟು ಜನರು ಮಹಿಳೆಯರಾಗಿದ್ದರು.

ಯುವ ಸಾಧಕರ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ಯೋಜನೆ (SHREYAS)

ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗಾಗಿ ಉನ್ನತ ಮಟ್ಟದ ಶಿಕ್ಷಣ ಯೋಜನೆಯು 2025-26 ರಲ್ಲಿ 8,571 ವಿದ್ಯಾರ್ಥಿಗಳಿಗೆ ಐಐಟಿಗಳು, ಐಐಎಂಗಳು, ಎನ್‍.ಐ.ಟಿಗಳು ಮತ್ತು ಏಮ್ಸ್‍ನಂತಹ ಪ್ರಮುಖ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಲು ಅನುವು ಮಾಡಿಕೊಟ್ಟಿದೆ.

ಯಾಂತ್ರೀಕೃತ ನೈರ್ಮಲ್ಯ ಪರಿಸರ ವ್ಯವಸ್ಥೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ

ಜುಲೈ 2026 ರ ವೇಳೆಗೆ 89,915 ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರು ಮತ್ತು 2.81 ಲಕ್ಷಕ್ಕೂ ಹೆಚ್ಚು ತ್ಯಾಜ್ಯ ಆಯುವವರನ್ನು ಪರಿಶೀಲಿಸಿ ದೃಢೀಕರಿಸಲಾಗಿದೆ.

ವಿಮೋಚಿತ ಅಲೆಮಾರಿ ಮತ್ತು ಅರೆ-ಅಲೆಮಾರಿ ಪಂಗಡಗಳ ಆರ್ಥಿಕ ಸಬಲೀಕರಣ ಯೋಜನೆ

  • 2025-26 ರ ಅವಧಿಯಲ್ಲಿ, 4,485 ವಿಮೋಚಿತ ಪಂಗಡಗಳ (ಡಿ.ಎನ್.ಟಿ) ವಿದ್ಯಾರ್ಥಿಗಳ ಶೈಕ್ಷಣಿಕ ಸಬಲೀಕರಣಕ್ಕಾಗಿ ₹26.75 ಕೋಟಿ ವಿತರಿಸಲಾಗಿದೆ.
  • 2025-26 ರ ಅವಧಿಯಲ್ಲಿ, ಆರೋಗ್ಯ ಘಟಕದ ಅಡಿಯಲ್ಲಿ DNT ಕುಟುಂಬಗಳಿಗೆ 73,569 ಆಯುಷ್ಮಾನ್ ಭಾರತ್ ಕಾರ್ಡ್‌ಗಳನ್ನು ನೀಡಲಾಗಿದೆ.

References

Ministry of Jal Shakti

https://gobardhan.sbm.gov.in/

https://ejalshakti.gov.in/jjmreport/jjmindia.aspx

https://sbm.gov.in/sbmgdashboard/statesdashboard.aspx

Ministry of Housing & Urban Affairs

https://pmsvanidhi.mohua.gov.in/Home/PMSDashboard

Ministry of Health & Family Welfare

https://dashboard.nha.gov.in/public/

https://dashboard.abdm.gov.in/abdm/

https://aam.mohfw.gov.in/

https://www.pib.gov.in/PressReleasePage.aspx?PRID=2294278&reg=48&lang=1

Ministry of Consumer Affairs, Food & Public Distribution

https://sansad.in/getFile/lsapps/loksabhaquestions/annex/188/AU1711_fUMnpm.pdf?source=lsapps

https://dfpd.gov.in/pradhan-mantri-garib-kalyan-anna-yojana/en

Ministry of Finance

https://sansad.in/getFile/annex/271/AS91_36800U.pdf?source=pqars

https://pmjdy.gov.in/

https://www.pib.gov.in/PressReleasePage.aspx?PRID=2287200&reg=1&lang=1

https://www.pib.gov.in/PressReleasePage.aspx?PRID=2287200&reg=48&lang=2

Ministry of Education

https://diksha.gov.in/data/

https://swayam.gov.in/

https://dashboard.udiseplus.gov.in/#

https://sansad.in/getFile/loksabhaquestions/annex/1711/AS444.pdf?source=pqals

PIB Backgrounders

https://www.pib.gov.in/PressNoteDetails.aspx?NoteId=158809&ModuleId=3&reg=3&lang=1

https://www.pib.gov.in/PressNoteDetails.aspx?NoteId=157341&ModuleId=3&reg=3&lang=1

Ministry of Rural Development

https://lokos.dord.gov.in/home#/

https://pmgsy.dord.gov.in/dbweb

https://x.com/MoRD_GoI/status/2063930187511922850

https://dashboard.dord.gov.in/dashboardnew/mgnrega.aspx

https://pmayg.gov.in/netiay/PBIDashboard/PMAYGDashboard.aspx

https://www.pib.gov.in/PressReleasePage.aspx?PRID=2297790&reg=48&lang=1

https://www.pib.gov.in/PressReleasePage.aspx?PRID=2288999&reg=48&lang=2

https://www.pib.gov.in/PressReleasePage.aspx?PRID=2290658&reg=48&lang=2

https://www.pib.gov.in/PressReleaseIframePage.aspx?PRID=2112680&reg=48&lang=2

Ministry of Panchayati Raj

https://x.com/mopr_goi/status/2067496574595575823

Ministry of Labour & Employment

https://eshram.gov.in//dashboard

https://www.pib.gov.in/PressReleasePage.aspx?PRID=2293891&reg=48&lang=1

Ministry of MSMEs

https://pmvishwakarma.gov.in/

Ministry of Tribal Affairs

https://pmagy.gov.in/

https://nests.tribal.gov.in/

https://dashboard.tribal.gov.in/

https://dbttribal.gov.in/PrePostRPT.aspx?Ret=VGB==

https://www.pib.gov.in/PressReleasePage.aspx?PRID=2286362&reg=48&lang=2

https://www.pib.gov.in/PressReleasePage.aspx?PRID=2209488&reg=48&lang=2

https://www.pib.gov.in/PressReleasePage.aspx?PRID=2253348&reg=3&lang=2

https://www.pib.gov.in/PressReleasePage.aspx?PRID=2294712&reg=6&lang=1

Ministry of Petroleum & Natural Gas

https://www.pmuy.gov.in/index.aspx

Niti Aayog

https://niti.gov.in/sites/default/files/2026-05/School-Education-System-in-India.pdf

Click here to see PDF

 

*****

 

 

(तथ्य सामग्री आईडी: 150873) आगंतुक पटल : 8


Provide suggestions / comments
इस विश्लेषक को इन भाषाओं में पढ़ें : English , हिन्दी , Bengali