Infrastructure
ಭಾರತದ ಮೂಲಸೌಕರ್ಯದ ಮಹತ್ತರ ಬದಲಾವಣೆ: ಸಂಪರ್ಕದಿಂದ ಸಾಮರ್ಥ್ಯದವರೆಗೆ
प्रविष्टि तिथि:
12 AUG 2026 19:12 PM
ಬೆಳವಣಿಗೆಯ ಅಡಿಪಾಯ ನಿರ್ಮಾಣ
ಭಾರತದ ಮೂಲಸೌಕರ್ಯವು ಕಳೆದ 12 ವರ್ಷಗಳಲ್ಲಿ ಪ್ರಮುಖ ಬದಲಾವಣೆಗೆ ಒಳಪಟ್ಟಿದೆ. ಸಾರಿಗೆ ಮತ್ತು ಸರಕು ಸಾಗಣೆಯಿಂದ ಹಿಡಿದು ವಸತಿ ಮತ್ತು ನೀರಿನವರೆಗೆ, ಮೂಲಸೌಕರ್ಯ ಅಭಿವೃದ್ಧಿಯು ಸಮಗ್ರ ಯೋಜನೆ ಮತ್ತು ಬೃಹತ್ ಪ್ರಮಾಣದ ವಿಸ್ತರಣೆಯತ್ತ ಸಾಗಿದೆ. ಇದು ಸಂಪರ್ಕವನ್ನು ಬಲಪಡಿಸಿದೆ, ಅತ್ಯಗತ್ಯ ಸೇವೆಗಳ ಲಭ್ಯತೆಯನ್ನು ಸುಧಾರಿಸಿದೆ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಅಡಿಪಾಯವನ್ನು ಹಾಕಿದೆ. ಸಾರ್ವಜನಿಕ ಬಂಡವಾಳ ವೆಚ್ಚವು 2014-15ರ ಹಣಕಾಸು ವರ್ಷದಲ್ಲಿದ್ದ ಸುಮಾರು ₹2 ಲಕ್ಷ ಕೋಟಿಯಿಂದ 2026-27ರ ಹಣಕಾಸು ವರ್ಷದಲ್ಲಿ ₹12.2 ಲಕ್ಷ ಕೋಟಿಗೆ ಏರಿಕೆಯಾಗಿದ್ದು, ಈ ಪ್ರಗತಿಗೆ ಬೆಂಬಲ ನೀಡಿದೆ.
ರೈಲ್ವೆ ಸಂಚಾರದಲ್ಲಿ ಹೊಸ ಶಕೆ
ಭಾರತೀಯ ರೈಲ್ವೆಯು ವೇಗವಾದ, ಸುರಕ್ಷಿತ ಮತ್ತು ಹೆಚ್ಚು ಆಧುನಿಕ ಸಂಚಾರದತ್ತ ಸಾಗುತ್ತಿದೆ. ವಿದ್ಯುದ್ದೀಕರಣ, ಸುಧಾರಿತ ಸುರಕ್ಷತಾ ವ್ಯವಸ್ಥೆಗಳು, ಹೈ-ಸ್ಪೀಡ್ ರೈಲು ಮತ್ತು ನವ ಪೀಳಿಗೆಯ ರೈಲುಗಳು ರೈಲ್ವೆ ಜಾಲದ ಸ್ವರೂಪವನ್ನು ಬದಲಾಯಿಸುತ್ತಿವೆ.
- ರೈಲ್ವೆ ಬಜೆಟ್ 2014-15ರಲ್ಲಿ ₹32,000 ಕೋಟಿಯಿಂದ 2026-27ರ ಹಣಕಾಸು ವರ್ಷದಲ್ಲಿ ₹2.78 ಲಕ್ಷ ಕೋಟಿಗೆ ಹೆಚ್ಚಾಗಿದೆ.
- ರೈಲು ವಿದ್ಯುದ್ದೀಕರಣವು 2014 ಕ್ಕಿಂತ ಮೊದಲು ಇದ್ದ ಸುಮಾರು 20% ರಿಂದ ಜುಲೈ 2026 ರ ವೇಳೆಗೆ 99.6% ಗೆ ಹೆಚ್ಚಾಗಿದೆ.
- 162 ವಂದೇ ಭಾರತ್, 2 ವಂದೇ ಭಾರತ್ ಸ್ಲೀಪರ್ ಸೇವೆಗಳು ಮತ್ತು 72 ಅಮೃತ್ ಭಾರತ್ ಸೇವೆಗಳು ಸಂಪರ್ಕ ಹಾಗೂ ಪ್ರಯಾಣದ ಅನುಭವವನ್ನು ಸುಧಾರಿಸಿವೆ.
- ಕವಚ್ ಆವೃತ್ತಿ 4.0 ಅನ್ನು ಜುಲೈ 2026 ರ ವೇಳೆಗೆ 2,633 ರೂಟ್ ಕಿ.ಮೀ.ನಲ್ಲಿ ಕಾರ್ಯಗತಗೊಳಿಸಲಾಗಿದೆ.
- ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲ್ವೆ ಕಾರಿಡಾರ್ ಅನ್ನು 350 ಕಿ.ಮೀ/ಗಂಟೆ ವಿನ್ಯಾಸಗೊಳಿಸಿದ ವೇಗದೊಂದಿಗೆ 508 ಕಿ.ಮೀ ಮಾರ್ಗದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
- ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿಯಲ್ಲಿ ಗುರುತಿಸಲಾದ 1,340 ನಿಲ್ದಾಣಗಳಲ್ಲಿ, 18 ಜುಲೈ 2026 ರ ವೇಳೆಗೆ 261 ನಿಲ್ದಾಣಗಳ ಮರು ಅಭಿವೃದ್ಧಿ ಪೂರ್ಣಗೊಂಡಿದೆ.
- ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಮೊದಲ ಹೈಡ್ರೋಜನ್ ಫ್ಯುಯೆಲ್ ಸೆಲ್ ಟ್ರೈನ್ ಸೆಟ್ ಅನ್ನು ಜುಲೈ 2026 ರಲ್ಲಿ ಪ್ರಾರಂಭಿಸಲಾಗಿದೆ. ಇದು ಜಿಂದ್-ಸೋನಿಪತ್ ವಿಭಾಗದಲ್ಲಿ ಚಲಿಸುವ ಸುಮಾರು 2,600 ಪ್ರಯಾಣಿಕರ ಸಾಮರ್ಥ್ಯ ಹೊಂದಿರುವ 10 ಬೋಗಿಗಳ ರೈಲು ಆಗಿದೆ. ಇದು ನೀರಾವಿ ಮತ್ತು ಶಾಖವನ್ನು ಮಾತ್ರ ಉಪ-ಉತ್ಪನ್ನವಾಗಿ ಹೊರಸೂಸಿ, ಸ್ವತಃ ವಿದ್ಯುತ್ ಅನ್ನು ಅಲ್ಲೇ ಉತ್ಪಾದಿಸುತ್ತದೆ.

ಭಾರತವನ್ನು ಜೋಡಿಸುವ ರಸ್ತೆಗಳು ಮತ್ತು ಹೆದ್ದಾರಿಗಳು
ವಿಶಾಲವಾದ ಮತ್ತು ಹೆಚ್ಚು ಸಾಮರ್ಥ್ಯವಿರುವ ರಸ್ತೆ ಜಾಲವು ಪ್ರದೇಶಗಳನ್ನು ಹತ್ತಿರಕ್ಕೆ ತರುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳು, ಗ್ರಾಮೀಣ ರಸ್ತೆಗಳು ಮತ್ತು ಪ್ರಮುಖ ಕಾರಿಡಾರ್‌ಗಳ ವಿಸ್ತರಣೆಯು ಜನರು ಮತ್ತು ಸರಕುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದೆ.
- ಭಾರತವು 63.73 ಲಕ್ಷ ಕಿ.ಮೀ ನೊಂದಿಗೆ ವಿಶ್ವದ ಎರಡನೇ ಅತಿದೊಡ್ಡ ರಸ್ತೆ ಜಾಲವನ್ನು ಹೊಂದಿದೆ.
- ರಾಷ್ಟ್ರೀಯ ಹೆದ್ದಾರಿಗಳ ಉದ್ದವು 2014ರ ಹಣಕಾಸು ವರ್ಷದಲ್ಲಿದ್ದ 91,287 ಕಿ.ಮೀ ನಿಂದ ಮಾರ್ಚ್ 2026 ರಲ್ಲಿ 1,46,572 ಕಿ.ಮೀ ಗೆ ಅಂದರೆ ಸುಮಾರು 61% ರಷ್ಟು ಹೆಚ್ಚಾಗಿದೆ.
- ನಾಲ್ಕು ಪಥದ ಮತ್ತು ಅದಕ್ಕಿಂತ ಹೆಚ್ಚಿನ ರಾಷ್ಟ್ರೀಯ ಹೆದ್ದಾರಿಗಳ ಉದ್ದವು 2014 ರಲ್ಲಿ 18,371 ಕಿ.ಮೀ ನಿಂದ 45,516 ಕಿ.ಮೀ ಗೆ ಹೆಚ್ಚಾಗಿದೆ.
- ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಯಡಿಯಲ್ಲಿ ರಸ್ತೆಗಳ ಉದ್ದವು 2000-2014 ರ ಅವಧಿಯಲ್ಲಿ 3.86 ಲಕ್ಷ ಕಿ.ಮೀ ನಿಂದ 2014-2026 ರ ಅವಧಿಯಲ್ಲಿ 4.11 ಲಕ್ಷ ಕಿ.ಮೀ ಗೆ ಹೆಚ್ಚಾಗಿದೆ. ಸೆಪ್ಟೆಂಬರ್ 2024 ರಿಂದ, 2029 ರ ವೇಳೆಗೆ ಸಂಪರ್ಕವಿಲ್ಲದ 25,000 ಜನವಸತಿಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಪಿ.ಎಂ.ಜಿ.ಎಸ್.ವೈ-IV ಅನ್ನು ಪ್ರಾರಂಭಿಸಲಾಗಿದೆ.
- ಭಾರತ್‌ಮಾಲಾ ಯೋಜನೆಯಡಿಯಲ್ಲಿ, 31 ಮಾರ್ಚ್ 2026 ರವರೆಗೆ 22,590 ಕಿ.ಮೀ ನಷ್ಟು ರಸ್ತೆಗಳನ್ನು ಪೂರ್ಣಗೊಳಿಸಲಾಗಿದೆ.
ಸೇತುವೆಗಳು ಮತ್ತು ಸುರಂಗಗಳು: ಎಂಜಿನಿಯರಿಂಗ್ ಹೊಸ ಗಡಿಗಳು
ಎಂಜಿನಿಯರಿಂಗ್ ಕ್ಷೇತ್ರದಲ್ಲಿನ ಪ್ರಗತಿಯು ಭಾರತದ ಅತ್ಯಂತ ಕಠಿಣ ಭೌಗೋಳಿಕ ಸವಾಲುಗಳನ್ನು ಜಯಿಸುತ್ತಿದೆ. ಈ ಯೋಜನೆಗಳು ಕಷ್ಟಕರವಾದ ಭೂಪ್ರದೇಶಗಳ ಮೂಲಕ ಹೊಸ ಮಾರ್ಗಗಳನ್ನು ತೆರೆಯುತ್ತಿವೆ.
- ಚೆನಾಬ್ ಸೇತುವೆ (2025): ವಿಶ್ವದ ಅತ್ಯಂತ ಎತ್ತರದ ರೈಲ್ವೆ ಕಮಾನು ಸೇತುವೆ, ಚೆನಾಬ್ ನದಿಯಿಂದ 359 ಮೀಟರ್ ಎತ್ತರದಲ್ಲಿದೆ; ಜಮ್ಮು-ಶ್ರೀನಗರ ಸಂಪರ್ಕವನ್ನು ಬಲಪಡಿಸುವ 1,315 ಮೀಟರ್ ಅನ್ನು ಉಕ್ಕಿನಿಂದ ರಚಿಸಲಾಗಿದೆ.
- ಅಂಜಿ ಖಾಡ್ ಸೇತುವೆ (2025): ಜಮ್ಮು ಮತ್ತು ಕಾಶ್ಮೀರದಲ್ಲಿರುವ ಭಾರತದ ಮೊದಲ ಕೇಬಲ್-ಆಧಾರಿತ ರೈಲ್ವೆ ಸೇತುವೆ.
- ಪಂಬನ್ ಸೇತುವೆ (2025): ರಾಮೇಶ್ವರಂ ಅನ್ನು ಮುಖ್ಯಭೂಮಿಗೆ ಜೋಡಿಸುವ ಭಾರತದ ಮೊದಲ ವರ್ಟಿಕಲ್-ಲಿಫ್ಟ್ ರೈಲ್ವೆ ಸಮುದ್ರ ಸೇತುವೆ; 72.5 ಮೀಟರ್ ವರ್ಟಿಕಲ್-ಲಿಫ್ಟ್ ಸ್ಪ್ಯಾನ್‌ನೊಂದಿಗೆ 2.07 ಕಿ.ಮೀ ಉದ್ದ.
- ಝಡ್-ಮೋರ್/ಸೋನಮಾರ್ಗ್ ಸುರಂಗ (2025): ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪಾತಕ್ಕೆ ಈಡಾಗುವ ಭೂಪ್ರದೇಶದ ಮೂಲಕ ಎಲ್ಲಾ ಹವಾಮಾನಗಳಲ್ಲೂ ಲಡಾಖ್ ಕಡೆಗೆ ಸಂಚಾರವನ್ನು ಸುಧಾರಿಸುವ 12 ಕಿ.ಮೀ ಸುರಂಗ.
- ಸುದರ್ಶನ ಸೇತು (2024): ಗುಜರಾತ್‌ನ ಓಖಾವನ್ನು ದ್ವಾರಕಾದೊಂದಿಗೆ ಜೋಡಿಸುವ 2.32 ಕಿ.ಮೀ ಸೇತುವೆ.
- ಅಟಲ್ ಸುರಂಗ (2020): 9.02 ಕಿ.ಮೀ - ಮನಾಲಿ ಮತ್ತು ಲಾಹಾಲ್-ಸ್ಪಿತಿಯನ್ನು ಜೋಡಿಸುವ 10,000 ಅಡಿಗಿಂತ ಎತ್ತರದಲ್ಲಿರುವ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ.
- ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಸುರಂಗ (2017): ಜಮ್ಮು ಮತ್ತು ಶ್ರೀನಗರ ನಡುವಿನ 9 ಕಿ.ಮೀ ಉದ್ದದ ಎಲ್ಲಾ ಹವಾಮಾನಕ್ಕೂ ಹೊಂದುವ ಸುರಂಗ, ಇದು ಪ್ರಯಾಣದ ಸಮಯವನ್ನು ~2 ಗಂಟೆಗಳಷ್ಟು ಕಡಿಮೆ ಮಾಡುತ್ತದೆ.

ಚೆನಾಬ್ ಸೇತುವೆ | ಪಂಬನ್ ಸೇತುವೆ
ನಾಗರಿಕ ವಿಮಾನಯಾನ ಮತ್ತು ಪ್ರಾದೇಶಿಕ ವಾಯು ಸಂಪರ್ಕ
ವಾಯು ಸಂಪರ್ಕವು ಹೆಚ್ಚಿನ ನಗರಗಳು, ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳನ್ನು ತಲುಪುತ್ತಿದೆ. ವಿಮಾನ ನಿಲ್ದಾಣಗಳ ವಿಸ್ತರಣೆ, ಉಡಾನ್ ಮಾರ್ಗಗಳು ಮತ್ತು ಡಿಜಿಟಲ್ ಪ್ರಯಾಣಿಕರ ಸೇವೆಗಳು ದೇಶಾದ್ಯಂತ ವಿಮಾನ ಪ್ರಯಾಣವನ್ನು ಹೆಚ್ಚು ಸುಲಭಗೊಳಿಸುತ್ತಿವೆ.
- ಉಡಾನ್ ಯೋಜನೆಯು 15 ಜುಲೈ 2026 ರ ವೇಳೆಗೆ 679 ಮಾರ್ಗಗಳ ಮೂಲಕ 95 ವಿಮಾನ ನಿಲ್ದಾಣಗಳು, ಹೆಲಿಪೋರ್ಟ್‌ಗಳು ಮತ್ತು ವಾಟರ್ ಏರೋಡ್ರೋಮ್‌ಗಳನ್ನು ಸಂಪರ್ಕಿಸಿದೆ, ಇದರಿಂದ 1.68 ಕೋಟಿಗೂ ಹೆಚ್ಚು ಪ್ರಯಾಣಿಕರಿಗೆ ಅನುಕೂಲವಾಗಿದೆ.
- ಕಾರ್ಯಾಚರಣೆಯಲ್ಲಿರುವ ವಿಮಾನ ನಿಲ್ದಾಣಗಳ ಸಂಖ್ಯೆ 2014 ರಲ್ಲಿ 74 ರಿಂದ ಜುಲೈ 2026 ರಲ್ಲಿ 165 ಕ್ಕೆ ಹೆಚ್ಚಿದೆ.
- 2014 ರ ನಂತರ 25 ಗ್ರ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳಿಗೆ ಅನುಮೋದನೆ ನೀಡಲಾಗಿದೆ.
- 38 ವಿಮಾನ ನಿಲ್ದಾಣಗಳಲ್ಲಿ ಡಿಜಿ ಯಾತ್ರಾ ಸಕ್ರಿಯವಾಗಿದೆ. ಈ ಅಪ್ಲಿಕೇಶನ್ 2.4 ಕೋಟಿಗೂ ಹೆಚ್ಚು ಡೌನ್‌ಲೋಡ್‌ಗಳೊಂದಿಗೆ 10 ಕೋಟಿಗೂ ಹೆಚ್ಚು ಸುಗಮ ಪ್ರಯಾಣಕ್ಕೆ ನೆರವಾಗಿದೆ.
- ಕೊನೆಯ ಮೈಲಿಯವರೆಗಿನ ಪ್ರಾದೇಶಿಕ ವಾಯು ಸಂಪರ್ಕವನ್ನು ಬಲಪಡಿಸಲು 100 ಹೊಸ ವಿಮಾನ ನಿಲ್ದಾಣಗಳು ಮತ್ತು 200 ಆಧುನಿಕ ಹೆಲಿಪ್ಯಾಡ್‌ಗಳನ್ನು ಕಲ್ಪಿಸುವ ₹28,840 ಕೋಟಿ ವೆಚ್ಚದ ‘ಮೊಡಿಫೈಡ್ ಉಡಾನ್’ಗೆ 2026-27ರ ಹಣಕಾಸು ವರ್ಷದಿಂದ 2035-36 ರ ಹಣಕಾಸು ವರ್ಷದವರೆಗೆ ಮಾರ್ಚ್ 2026 ರಲ್ಲಿ ಅನುಮೋದನೆ ನೀಡಲಾಗಿದೆ.
ಮೆಟ್ರೋ: ನಗರ ಸಾಮೂಹಿಕ ಸಾರಿಗೆಯ ಹೆಚ್ಚಳ
ಭಾರತದ ನಗರ ಸಂಚಾರ ಜಾಲವು ಪ್ರಮಾಣ ಮತ್ತು ವ್ಯಾಪ್ತಿಯಲ್ಲಿ ವಿಸ್ತರಿಸುತ್ತಿದೆ. ಮೆಟ್ರೋ ಸಂಪರ್ಕವು ಈಗ ಹೆಚ್ಚಿನ ನಗರಗಳಿಗೆ ಹರಡಿದೆ ಮತ್ತು ವಿನೂತನ ವ್ಯವಸ್ಥೆಗಳು ನಗರ ಸಾರಿಗೆಗೆ ಹೊಸ ಸಾಧ್ಯತೆಗಳನ್ನು ತೆರೆಯುತ್ತಿವೆ.
- ಮೆಟ್ರೋ ಜಾಲವು 2014 ರಲ್ಲಿ 248 ಕಿ.ಮೀ ನಿಂದ 2026 ರಲ್ಲಿ 1,155 ಕಿ.ಮೀ ಗೂ ಹೆಚ್ಚು ವಿಸ್ತರಿಸಿದೆ.
- ಮೆಟ್ರೋ ಸಂಪರ್ಕ ಹೊಂದಿರುವ ನಗರಗಳು 5 ರಿಂದ 26 ಕ್ಕೆ ಹೆಚ್ಚಾಗಿದ್ದು, ದಿನನಿತ್ಯದ ಪ್ರಯಾಣಿಕರ ಸಂಖ್ಯೆ 1.15 ಕೋಟಿ ದಾಟಿದೆ.
- ಕೋಲ್ಕತ್ತಾ 2024 ರಲ್ಲಿ ಭಾರತದ ಮೊದಲ ನೀರಿನೊಳಗಿನ ಮೆಟ್ರೋ ಸುರಂಗವನ್ನು ಕಾರ್ಯಾಚರಣೆಗೆ ತಂದಿತು.
- ಕೊಚ್ಚಿ ಡಿಸೆಂಬರ್ 2021 ರಲ್ಲಿ ಮೊದಲ ದೋಣಿಯನ್ನು ಪ್ರಾರಂಭಿಸುವುದರೊಂದಿಗೆ ಭಾರತದ ಮೊದಲ ವಾಟರ್ ಮೆಟ್ರೋ ವ್ಯವಸ್ಥೆಯನ್ನು ಕಾರ್ಯಾಚರಣೆಗೆ ತಂದಿತು.
ಭಾರತದ ಕಡಲ ಕ್ಷೇತ್ರದ ಪ್ರಗತಿ
ಬೆಳೆಯುತ್ತಿರುವ ಆರ್ಥಿಕತೆ ಮತ್ತು ವಿಸ್ತರಿಸುತ್ತಿರುವ ವ್ಯಾಪಾರಕ್ಕೆ ಬೆಂಬಲ ನೀಡಲು ಭಾರತವು ತನ್ನ ಕಡಲ ಮೂಲಸೌಕರ್ಯವನ್ನು ಬಲಪಡಿಸುತ್ತಿದೆ. ಬಂದರುಗಳು, ಜಲಮಾರ್ಗಗಳು ಮತ್ತು ಕಡಲ ಮೂಲಸೌಕರ್ಯಗಳಲ್ಲಿನ ಹೂಡಿಕೆಗಳು ಹೆಚ್ಚು ಸಾಮರ್ಥ್ಯವಿರುವ ಮತ್ತು ಸಂಪರ್ಕಿತ ಪರಿಸರ ವ್ಯವಸ್ಥೆಯನ್ನು ಸೃಷ್ಠಿ ಮಾಡುತ್ತಿವೆ.
- ಪ್ರಮುಖ ಬಂದರುಗಳ ಸರಕು ನಿರ್ವಹಣೆ ಸಾಮರ್ಥ್ಯವು 2014 ರಲ್ಲಿ 873 ಎಂ.ಎಂ.ಟಿ.ಪಿ.ಎ ನಿಂದ 2026 ರಲ್ಲಿ 1,728 ಎಂ.ಎಂ.ಟಿ.ಪಿ.ಎಗೆ ಹೆಚ್ಚಿದ್ದು, ಸುಮಾರು ದ್ವಿಗುಣಗೊಂಡಿದೆ.
- ಹಡಗುಗಳ ಟರ್ನ್‌ಅರೌಂಡ್ ಸಮಯ 2025-26 ರಲ್ಲಿ 94 ಗಂಟೆಗಳಿಂದ 48.8 ಗಂಟೆಗಳಿಗೆ ಸುಧಾರಿಸಿದೆ.
- ಪ್ರಮುಖ ಬಂದರುಗಳು 2014-15ರ ಹಣಕಾಸು ವರ್ಷದಲ್ಲಿದ್ದ 581 ಎಂ.ಟಿ ಸರಕಿಗೆ ಹೋಲಿಸಿದರೆ 2025-26ರ ಹಣಕಾಸು ವರ್ಷದಲ್ಲಿ ಜಂಟಿಯಾಗಿ 915.17 ಎಂ.ಟಿ ಸರಕನ್ನು ನಿರ್ವಹಿಸಿವೆ.
- ಸಾಗರಮಾಲಾ ಕಾರ್ಯಕ್ರಮವು ಬಂದರು ಆಧಾರಿತ ಅಭಿವೃದ್ಧಿ, ಕರಾವಳಿ ಸಂಪರ್ಕ ಮತ್ತು ಲಾಜಿಸ್ಟಿಕ್ಸ್ ಏಕೀಕರಣವನ್ನು ಬಲಪಡಿಸಿತು.
- ರಾಷ್ಟ್ರೀಯ ಜಲಮಾರ್ಗಗಳು 2014 ರಲ್ಲಿ 5 ರಿಂದ 2026 ರಲ್ಲಿ 111 ಕ್ಕೆ ಹೆಚ್ಚಾಗಿದ್ದು, ಅವುಗಳಲ್ಲಿ 32 ಕಾರ್ಯಾಚರಣೆಯಲ್ಲಿವೆ.
- ಭಾರತವು 2025 ರಲ್ಲಿ ವಿಶ್ವದ ನಂ. 1 ಹಡಗು ಮರುಬಳಕೆ ದೇಶವಾಯಿತು, ಇದರ ಜಾಗತಿಕ ಪಾಲು 30.1% (2024) ರಿಂದ 35.4% (2025) ಗೆ ಏರಿಕೆಯಾಗಿದೆ — 2024 ರಲ್ಲಿ 1.86 ಮಿಲಿಯನ್ ಗ್ರಾಸ್ ಟನ್‌ಗಳಷ್ಟಿದ್ದ ಹಡಗು ಮರುಬಳಕೆಯನ್ನು ಸುಮಾರು 60% ರಷ್ಟು ಹೆಚ್ಚಿಸಿ 2.99 ಮಿಲಿಯನ್ ಗ್ರಾಸ್ ಟನ್‌ಗಳಿಗೆ ತಲುಪಿಸಲಾಗಿದೆ.
- ವಿಶ್ವ ಬ್ಯಾಂಕ್ ಪ್ರಕಟಿಸಿದ ಕಂಟೈನರ್ ಪೋರ್ಟ್ ಪರ್ಫಾರ್ಮೆನ್ಸ್ ಇಂಡೆಕ್ಸ್ (CPPI) 2025 ರ ಪ್ರಕಾರ ಜವಾಹರಲಾಲ್ ನೆಹರು ಬಂದರು 22 ನೇ ಶ್ರೇಯಾಂಕ ಪಡೆದಿದೆ.
- ಭಾರತ್ ಮೆರಿಟೈಮ್ ಇನ್ಶೂರೆನ್ಸ್ ಪೂಲ್ (BMIP) ಅನ್ನು 12 ಮೇ 2026 ರಂದು ಪ್ರಾರಂಭಿಸಲಾಗಿದೆ. ಇದು USD 1.5 ಬಿಲಿಯನ್ ಮೌಲ್ಯದ ದೇಶೀಯ ವಿಮಾ ಪೂಲ್ ಆಗಿದ್ದು, USD 1.4 ಬಿಲಿಯನ್ (₹12,980 ಕೋಟಿ) ಸಾರ್ವಭೌಮ ಗ್ಯಾರಂಟಿಯನ್ನು ಹೊಂದಿದೆ. ಇದು ಭಾರತೀಯ ಧ್ವಜ ಹೊಂದಿರುವ/ನಿಯಂತ್ರಿತ ಹಡಗುಗಳಿಗೆ ಹಲ್ & ಮೆಷಿನರಿ, ಕಾರ್ಗೋ, ರಕ್ಷಣೆ ಮತ್ತು ನಷ್ಟ ಪರಿಹಾರ ಹಾಗೂ ಯುದ್ಧದ ಅಪಾಯಗಳನ್ನು ಕವರ್ ಮಾಡುತ್ತದೆ. 29 ಜುಲೈ 2026 ರ ವೇಳೆಗೆ, ಈ ಪೂಲ್ ಅಡಿಯಲ್ಲಿ ಕಾರ್ಗೋ ವಾರ್ ರಿಸ್ಕ್ ಮತ್ತು ಹಲ್ ವಾರ್ ರಿಸ್ಕ್ ಕವರ್ ಮಾಡುವ ಒಟ್ಟು 1,608 ಪಾಲಿಸಿಗಳನ್ನು ನೀಡಲಾಗಿದೆ.
ಲಾಜಿಸ್ಟಿಕ್ಸ್ ಮತ್ತು ಕೈಗಾರಿಕಾ ಸಾಮರ್ಥ್ಯವನ್ನು ಬಲಪಡಿಸುವುದು
ಉದ್ಯಮ ಮತ್ತು ವ್ಯಾಪಾರಕ್ಕೆ ಬೆಂಬಲ ನೀಡುವ ಪರಸ್ಪರ ಸಂಪರ್ಕಿತ ಜಾಲವಾಗಿ ಮೂಲಸೌಕರ್ಯವನ್ನು ಹೆಚ್ಚಾಗಿ ಯೋಜಿಸಲಾಗುತ್ತಿದೆ. ಗತಿಶಕ್ತಿಯಿಂದ ಹಿಡಿದು ಕೈಗಾರಿಕಾ ಕಾರಿಡಾರ್‌ಗಳವರೆಗೆ, ಸಮನ್ವಯ, ದಕ್ಷತೆ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಸುಧಾರಿಸುವುದರ ಮೇಲೆ ಗಮನ ಹರಿಸಲಾಗಿದೆ.
- ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ 3,291 ಕ್ಕೂ ಹೆಚ್ಚು ಡೇಟಾ ಪದರಗಳನ್ನು ಬಳಸಿ 58 ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಮೂಲಸೌಕರ್ಯ ಯೋಜನೆಯನ್ನು ಸಂಯೋಜಿಸಿದೆ.
- 11 ಆಗಸ್ಟ್ 2026 ರ ವೇಳೆಗೆ, ಒಟ್ಟು ಅಂದಾಜು ₹18.66 ಲಕ್ಷ ಕೋಟಿ ವೆಚ್ಚದ 396 ಮೂಲಸೌಕರ್ಯ ಯೋಜನೆಗಳನ್ನು ನೆಟ್‌ವರ್ಕ್ ಪ್ಲಾನಿಂಗ್ ಗ್ರೂಪ್ ವ್ಯವಸ್ಥೆಯ ಮೂಲಕ ಮೌಲ್ಯಮಾಪನ ಮಾಡಲಾಗಿದೆ. ಇವುಗಳಲ್ಲಿ 256 ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದ್ದು, 198 ಯೋಜನೆಗಳು ಅನುಷ್ಠಾನದಲ್ಲಿವೆ.
- ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು ಬಹುಮಾದರಿ ಲಾಜಿಸ್ಟಿಕ್ಸ್ ದಕ್ಷತೆ ಮತ್ತು ಪೂರೈಕೆ ಸರಪಳಿ ಏಕೀಕರಣವನ್ನು ಬಲಪಡಿಸಿದೆ.
- ಪ್ರಗತಿ (PRAGATI) ವ್ಯವಸ್ಥೆಯು ₹85 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ 382 ಯೋಜನೆಗಳನ್ನು ಪರಿಶೀಲಿಸಿದೆ ಮತ್ತು 2,958 ಸಮಸ್ಯೆಗಳನ್ನು ಪರಿಹರಿಸಿದೆ.
- 4,220 ಕ್ಕೂ ಹೆಚ್ಚು ಕೈಗಾರಿಕಾ ಪಾರ್ಕ್‌ಗಳನ್ನು ಇಂಡಿಯಾ ಇಂಡಸ್ಟ್ರಿಯಲ್ ಲ್ಯಾಂಡ್ ಬ್ಯಾಂಕ್ (IILB) ನಲ್ಲಿ ಮ್ಯಾಪ್ ಮಾಡಲಾಗಿದೆ.
- ದೇಶಾದ್ಯಂತ 272 ಪ್ಲಗ್-ಆಂಡ್-ಪ್ಲೇ ಕೈಗಾರಿಕಾ ಪಾರ್ಕ್‌ಗಳು ಕಾರ್ಯಾಚರಣೆಯಲ್ಲಿವೆ.
- 7 ಕೈಗಾರಿಕಾ ಕಾರಿಡಾರ್‌ಗಳಲ್ಲಿ 20 ಕೈಗಾರಿಕಾ ಸ್ಮಾರ್ಟ್ ಸಿಟಿಗಳಿಗೆ ಅನುಮೋದನೆ ನೀಡಲಾಗಿದೆ.
- 100 ಹೊಸ ಪ್ಲಗ್-ಆಂಡ್-ಪ್ಲೇ ಕೈಗಾರಿಕಾ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲು ಮಾರ್ಚ್ 2026 ರಲ್ಲಿ ಭವ್ಯ (BHAVYA) ಯೋಜನೆಯನ್ನು ಅನುಮೋದಿಸಲಾಗಿದೆ.
- ₹3,030 ಕೋಟಿ ವೆಚ್ಚದಲ್ಲಿ ‘ಭವ್ಯ ರಸಾಯನ್ ಯೋಜನೆ’ ಗೆ 24 ಜುಲೈ 2026 ರಂದು ಅನುಮೋದನೆ ನೀಡಲಾಗಿದೆ. ಈ ಯೋಜನೆಯನ್ನು 2026-27 ರಿಂದ 2030-31 ರ ಹಣಕಾಸು ವರ್ಷದವರೆಗೆ ಐದು ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳಿಸಲಾಗುವುದು.
- ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು 7 ಪ್ರಧಾನಮಂತ್ರಿ ಮಿತ್ರ (MITRA) ಪಾರ್ಕ್‌ಗಳನ್ನು ಪ್ರಸ್ತಾಪಿಸಲಾಗಿದೆ.
ನೀರು, ವಸತಿ ಮತ್ತು ನಗರಾಭಿವೃದ್ಧಿ
ಮೂಲಸೌಕರ್ಯಗಳ ವಿಸ್ತರಣೆಯು ಜನರ ಮನೆಗಳು ಮತ್ತು ದೈನಂದಿನ ಅಗತ್ಯಗಳನ್ನು ನೇರವಾಗಿ ತಲುಪುತ್ತಿದೆ. ನಲ್ಲಿ ನೀರು ಲಭ್ಯತೆ ಮತ್ತು ಕೈಗೆಟುಕುವ ದರದ ವಸತಿಯಿಂದ ಹಿಡಿದು ನಗರ ನವೀಕರಣದವರೆಗೆ, ಈ ಪ್ರಯತ್ನಗಳು ಗ್ರಾಮೀಣ ಮತ್ತು ನಗರ ಭಾರತದಲ್ಲಿ ಉತ್ತಮ ಜೀವನ ಪರಿಸ್ಥಿತಿಗಳನ್ನು ರೂಪಿಸುತ್ತಿವೆ.
- ಜಲ್ ಜೀವನ್ ಮಿಷನ್ (JJM) ಅಡಿಯಲ್ಲಿ, ಗ್ರಾಮೀಣ ನಲ್ಲಿ ನೀರಿನ ಸೌಲಭ್ಯವು 2019 ರಲ್ಲಿ 3.23 ಕೋಟಿಯಿಂದ 10 ಆಗಸ್ಟ್ 2026 ರ ವೇಳೆಗೆ ಸುಮಾರು 15.91 ಕೋಟಿ ಕುಟುಂಬಗಳಿಗೆ ಹೆಚ್ಚಾಗಿದೆ.
- ಜಲ್ ಜೀವನ್ ಮಿಷನ್ 2.0 ಗೆ ಮಾರ್ಚ್ 2026 ರಲ್ಲಿ ಅನುಮೋದನೆ ನೀಡಲಾಗಿದೆ. ಈ ಮಿಷನ್ ಅನ್ನು ₹8.69 ಲಕ್ಷ ಕೋಟಿಯ ಹೆಚ್ಚುವರಿ ವೆಚ್ಚದೊಂದಿಗೆ ಡಿಸೆಂಬರ್ 2028 ರವರೆಗೆ ವಿಸ್ತರಿಸಲಾಗಿದೆ.
- ಪ್ರಧಾನಮಂತ್ರಿ ಆವಾಸ್ ಯೋಜನೆ-ನಗರ (PMAY-U) ಅಡಿಯಲ್ಲಿ, 12 ಆಗಸ್ಟ್ 2026 ರ ವೇಳೆಗೆ 99.25 ಲಕ್ಷ ಮನೆಗಳು ಪೂರ್ಣಗೊಂಡಿವೆ. ಪಿಎಂಎವೈ-ನಗರ 2.0 ಅಡಿಯಲ್ಲಿ ಸುಮಾರು 96% ಮನೆಗಳನ್ನು ಮಹಿಳೆಯರಿಗೆ ಹಂಚಿಕೆ ಮಾಡಲಾಗಿದೆ.
- ಪ್ರಧಾನಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (PMAY-G) ಅಡಿಯಲ್ಲಿ, ಮಂಜೂರಾದ 3.91 ಕೋಟಿ ಮನೆಗಳಲ್ಲಿ, 12 ಆಗಸ್ಟ್ 2026 ರ ವೇಳೆಗೆ 3.13 ಕೋಟಿ ಮನೆಗಳು ಪೂರ್ಣಗೊಂಡಿವೆ. ಪಿಎಂಎವೈ- ಗ್ರಾಮೀಣ ಅಡಿಯಲ್ಲಿ ಮಂಜೂರಾದ ಸುಮಾರು 75% ಮನೆಗಳು ಮಹಿಳೆಯರ ಹೆಸರಿನಲ್ಲಿವೆ ಅಥವಾ ಜಂಟಿ ಮಾಲೀಕತ್ವದಲ್ಲಿವೆ.
- 2019 ರಲ್ಲಿ ಪ್ರಾರಂಭಿಸಲಾದ ಸ್ವಾಮಿಹ್ (SWAMIH) ಫಂಡ್ ಜೂನ್ 2026 ರ ವೇಳೆಗೆ 63,000 ಕ್ಕೂ ಹೆಚ್ಚು ಮನೆಗಳನ್ನು ಹಸ್ತಾಂತರಿಸಿದ್ದು, ಸುಮಾರು 2.52 ಲಕ್ಷ ಜನರಿಗೆ ಅನುಕೂಲ ಮಾಡಿಕೊಟ್ಟಿದೆ.
- ಅಮೃತ್ (AMRUT) ಮತ್ತು ಅಮೃತ್ 2.0 ಅಡಿಯಲ್ಲಿ, 2015 ರಿಂದ ಸುಮಾರು ₹2.79 ಲಕ್ಷ ಕೋಟಿ ಮೌಲ್ಯದ ಯೋಜನೆಗಳನ್ನು ಮಂಜೂರು ಮಾಡಲಾಗಿದೆ.
- ಸ್ಮಾರ್ಟ್ ಸಿಟೀಸ್ ಮಿಷನ್ ಅಡಿಯಲ್ಲಿ, ಮಾರ್ಚ್ 2026 ರ ವೇಳೆಗೆ ₹1,56,257 ಕೋಟಿ ಮೌಲ್ಯದ ಒಟ್ಟು 7,790 ಯೋಜನೆಗಳು ಪೂರ್ಣಗೊಂಡಿವೆ.
ಶಕ್ತಿಯುತ, ಭವಿಷ್ಯಕ್ಕೆ ಸಿದ್ಧವಿರುವ ಭಾರತಕ್ಕೆ ಮೂಲಸೌಕರ್ಯ
ಭಾರತದ ಮೂಲಸೌಕರ್ಯದ ಪಯಣವು ರಾಷ್ಟ್ರೀಯ ಅಭಿವೃದ್ಧಿಯ ಪ್ರಮಾಣ ಮತ್ತು ಆಕಾಂಕ್ಷೆಯಲ್ಲಿನ ನಿರ್ಣಾಯಕ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ಇಂದು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಬೆಂಬಲಿಸುವುದು ಮಾತ್ರವಲ್ಲದೆ ನಾಳೆಯ ಅಗತ್ಯಗಳನ್ನು ಮುಂಚಿತವಾಗಿ ಗ್ರಹಿಸುವ ಸ್ಥಿತಿಸ್ಥಾಪಕ, ಹೆಚ್ಚಿನ ಸಾಮರ್ಥ್ಯದ ವ್ಯವಸ್ಥೆಗಳನ್ನು ನಿರ್ಮಿಸುವತ್ತ ಗಮನ ಹರಿಸಲಾಗಿದೆ. ಒಟ್ಟಾರೆಯಾಗಿ, ಈ ಉಪಕ್ರಮಗಳು ಹೆಚ್ಚು ಪರಿಣಾಮಕಾರಿ, ಅಂತರ್ಗತ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಭಾರತಕ್ಕೆ ಅಡಿಪಾಯವನ್ನು ಬಲಪಡಿಸುತ್ತಿವೆ.
References
Prime Minister's Office
https://www.pib.gov.in/PressReleasePage.aspx?PRID=1703457®=3&lang=2
https://www.pib.gov.in/PressReleasePage.aspx?PRID=2133723®=3&lang=2
https://www.pmindia.gov.in/en/news_updates/cabinet-approves-implementation-of-the-pradhan-mantri-awaas-yojana-gramin-pmay-g-during-fy-2024-25-to-2028-29/
Cabinet
https://www.pib.gov.in/PressReleasePage.aspx?PRID=2295480®=48&lang=1
https://www.pib.gov.in/PressReleasePage.aspx?PRID=2292445®=48&lang=1
https://www.pib.gov.in/PressReleasePage.aspx?PRID=2292433®=48&lang=2
Ministry of Defence
https://www.pib.gov.in/PressReleaseIframePage.aspx?PRID=1796961®=3&lang=2
Ministry of Finance
https://www.indiabudget.gov.in/doc/eb/sbe87.pdf
https://www.indiabudget.gov.in/doc/eb/sbe87.pdf
https://www.pib.gov.in/PressReleasePage.aspx?PRID=2257087®=3&lang=1
Ministry of Civil Aviation
https://www.pib.gov.in/PressReleasePage.aspx?PRID=2267024®=3&lang=1
https://www.pib.gov.in/PressReleasePage.aspx?PRID=2245471®=1&lang=1
Ministry of Railways
https://www.pib.gov.in/PressReleasePage.aspx?PRID=2256054®=3&lang=2
https://www.pib.gov.in/PressReleasePage.aspx?PRID=2248962&v=1&v=1fdkfdkfmdskf®v=s11%60®=3&lang=2
https://www.pib.gov.in/PressReleasePage.aspx?PRID=1882109®=3&lang=1
https://www.pib.gov.in/PressReleasePage.aspx?PRID=2209846®=1&lang=1
Ministry of Housing & Urban Affairs
https://www.pib.gov.in/PressReleasePage.aspx?PRID=2223878®=3&lang=1
https://pmayg.dord.gov.in/netiayHome/Home.aspx
https://www.pib.gov.in/PressReleasePage.aspx?PRID=2293938®=3&lang=1
https://www.pib.gov.in/PressReleaseDetail.aspx?PRID=2231861®=6&lang=1
https://pmay-urban.gov.in/
https://www.pib.gov.in/PressReleasePage.aspx?PRID=2266262®=48&lang=2
Ministry of Information & Broadcasting
https://www.pib.gov.in/PressReleasePage.aspx?PRID=2098788®=3&lang=2
Ministry of Commerce and Industry
https://indiaindustriallandbank.gov.in/login1
https://pmgatishakti.gov.in/pmgatishakti/login
https://www.pib.gov.in/PressReleaseIframePage.aspx?PRID=2131526®=3&lang=2
https://www.pib.gov.in/PressReleseDetailm.aspx?PRID=2225808®=3&lang=2
Ministry of Jal Shakti
https://www.jalshakti-dowr.gov.in/static/uploads/2026/02/71facba772426d78db2d39f8c0c2a34b.pdf
https://www.pib.gov.in/PressReleasePage.aspx?PRID=2295509®=3&lang=1
https://www.pib.gov.in/PressNoteDetails.aspx?NoteId=158959&ModuleId=3®=48&lang=1
Ministry of Power
https://www.pib.gov.in/PressReleasePage.aspx?PRID=2215761®=3&lang=2
https://www.pib.gov.in/PressReleasePage.aspx?PRID=2157549®=3&lang=2
https://www.pib.gov.in/PressReleasePage.aspx?PRID=2215761®=3&lang=2
Ministry of Road Transport & Highways
https://www.pib.gov.in/PressReleasePage.aspx?PRID=2223330®=3&lang=1
https://www.pib.gov.in/PressReleaseIframePage.aspx?PRID=2220128®=3&lang=2
https://www.pib.gov.in/PressReleasePage.aspx?PRID=2290493®=48&lang=2
Ministry of Health and Family Welfare
https://nextgen.ehospital.gov.in/dashboard/
Ministry of Ports, Shipping and Waterways
https://www.pib.gov.in/PressReleasePage.aspx?PRID=2202412®=3&lang=2
https://www.pib.gov.in/PressReleasePage.aspx?PRID=2249113®=3&lang=1
https://www.pib.gov.in/PressReleasePage.aspx?PRID=2227665®=3&lang=1
https://www.pib.gov.in/PressReleasePage.aspx?PRID=2297606®=48&lang=1
Ministry of Electronics and Information Technology (MeitY)
https://www.digilocker.gov.in/web/statistics
https://pmwani.gov.in/wani
Ministry of Rural Development
https://www.pib.gov.in/PressReleasePage.aspx?PRID=2201070®=3&lang=1
https://pmgsy.dord.gov.in/dbweb
https://www.pib.gov.in/PressReleasePage.aspx?PRID=2288999®=48&lang=2
Press Information Bureau
https://www.pib.gov.in/PressNoteDetails.aspx?NoteId=154355&ModuleId=3®=3&lang=2
https://static.pib.gov.in/WriteReadData/specificdocs/documents/2022/jul/doc20227169101.pdf
https://www.pib.gov.in/PressReleasePage.aspx?PRID=2214872®=3&lang=2
https://www.pib.gov.in/PressReleasePage.aspx?PRID=2278422®=48&lang=2
https://www.pib.gov.in/PressReleasePage.aspx?PRID=2293256®=48&lang=1
India’s Infrastructure Transformation: From Connectivity to Capacity
*****
(तथ्य सामग्री आईडी: 150874)
आगंतुक पटल : 5
Provide suggestions / comments