• Sitemap
  • Advance Search
Social Welfare

ಸಶಕ್ತ ನಾರಿ, ಸಶಕ್ತ ಭಾರತ

प्रविष्टि तिथि: 14 AUG 2026 15:45 PM

ಭಾರತದ ಪ್ರಗತಿಯ ಕಥೆಗೆ ಶಕ್ತಿ ತುಂಬುತ್ತಿರುವ ನಾರಿಯರು

"ಮಹಿಳೆಯರು ಕೇವಲ ಫಲಾನುಭವಿಗಳಾಗಿ ಉಳಿಯದೆ, ಭಾರತದ ಅಭಿವೃದ್ಧಿಯ ಪಯಣದ ಸಕ್ರಿಯ ರೂವಾರಿಗಳಾಗಿದ್ದಾರೆ." ಹುಟ್ಟಿನಿಂದ ಹಿಡಿದು ವೃದ್ಧಾಪ್ಯದವರೆಗಿನ ಪ್ರತಿಯೊಂದು ಹಂತದಲ್ಲೂ ಈಗ ಹೆಣ್ಣು ಮಗು, ಆರೋಗ್ಯ, ಪೋಷಣೆ, ಕೌಶಲ್ಯಗಳು, ಉದ್ಯಮಶೀಲತೆ ಮತ್ತು ನಾಯಕತ್ವವನ್ನು ಒಳಗೊಂಡಿವೆ. ಸ್ವಸಹಾಯ ಗುಂಪುಗಳು, ಉದ್ಯಮಶೀಲತೆ ಮತ್ತು ಡಿಜಿಟಲ್ ಸೇರ್ಪಡೆಯ ಮೂಲಕ ಆರ್ಥಿಕ ಸೇರ್ಪಡೆ ಹಾಗೂ ನಾಯಕತ್ವದ ಅವಕಾಶಗಳು ವಿಸ್ತರಿಸಿವೆ. ನೈರ್ಮಲ್ಯ, ವಸತಿ, ಸ್ವಚ್ಛ ಇಂಧನ ಮತ್ತು ನಲ್ಲಿ ನೀರಿಗೆ ಉತ್ತಮ ಲಭ್ಯತೆಯು ಮಹಿಳೆಯರ ಘನತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸಿದೆ. ಆಡಳಿತದಲ್ಲಿ ಹೆಚ್ಚುತ್ತಿರುವ ಭಾಗವಹಿಸುವಿಕೆಯು ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ವಿಸ್ತರಿಸುತ್ತಿರುವ ಪಾತ್ರವನ್ನು ಪ್ರತಿಬಿಂಬಿಸುತ್ತದೆ.

ಆರಂಭಗಳನ್ನು ರಕ್ಷಿಸುವುದು, ಭವಿಷ್ಯವನ್ನು ಪೋಷಿಸುವುದು

ಆರೋಗ್ಯ ಸೇವೆಗಳು, ಪೌಷ್ಟಿಕಾಂಶದ ಬೆಂಬಲ ಮತ್ತು ಸಾಂಸ್ಥಿಕ ಹೆರಿಗೆ ವ್ಯವಸ್ಥೆಗಳ ಮೂಲಕ ಮಾತೃತ್ವ ಮತ್ತು ಆರಂಭಿಕ ಬಾಲ್ಯದ ಆರೈಕೆಯನ್ನು ಬಲಪಡಿಸಲಾಗಿದೆ.

ಬೇಟಿ ಬಚಾವೋ ಬೇಟಿ ಪಢಾವೋ

  • ಬಿಬಿಬಿಯುಕ್ರಮವು ಜೀವನ-ಚಕ್ರದ ಉದ್ದಕ್ಕೂ ಕುಸಿಯುತ್ತಿರುವ ಮಕ್ಕಳ ಲಿಂಗ ಅನುಪಾತ ಮತ್ತು ಮಹಿಳಾ ಸಬಲೀಕರಣದ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುತ್ತದೆ.
  • ಇದು ಸಾಂಸ್ಥಿಕ ಹೆರಿಗೆಗಳು, ಹೆಣ್ಣುಮಕ್ಕಳ ಪ್ರೌಢಶಾಲಾ ದಾಖಲಾತಿ, ಶಾಲೆಯಿಂದ ಹೊರಗುಳಿಯುವುದನ್ನು (ಡ್ರಾಪ್‌ಔಟ್) ಕಡಿಮೆ ಮಾಡುವುದು ಮತ್ತು ಗರ್ಭಪೂರ್ವ ತಪಾಸಣೆ ನೋಂದಣಿಯ ಮೇಲೆ ಗಮನ ಹರಿಸುತ್ತದೆ.
  • ಎನ್‌ಎಫ್‌ಎಚ್‌ಎಸ್‌-5 (2019-21) ರ ಪ್ರಕಾರ, 2011 ರ ಜನಗಣತಿಯಲ್ಲಿ ಪ್ರತಿ 1,000 ಪುರುಷರಿಗೆ 943 ಮಹಿಳೆಯರಿದ್ದ ಅನುಪಾತವು, ಪ್ರತಿ 1,000 ಪುರುಷರಿಗೆ 1,020 ಮಹಿಳೆಯರಿಗೆ ಏರಿಕೆಯಾಗಿದೆ.

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ

  • ಗರ್ಭಿಣಿಯರು ಮತ್ತು ಬಾಣಂತಿಯರಿಗೆ ನೇರ ನಗದು ವರ್ಗಾವಣೆ ನೀಡುವ ಮಾತೃತ್ವ ಸೌಲಭ್ಯ ಯೋಜನೆ.
  • ಮಹಿಳೆಯರು ತಮ್ಮ ಮೊದಲ ಮಗುವಿಗೆ ಎರಡು ಕಂತುಗಳಲ್ಲಿ ₹5,000 ಮತ್ತು ಎರಡನೇ ಮಗು ಹೆಣ್ಣಾಗಿದ್ದರೆ ₹6,000 ಪಡೆಯುತ್ತಾರೆ.
  • ತಲುಪಿದ ವ್ಯಾಪ್ತಿ: 5.13 ಕೋಟಿ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ, 4.37 ಕೋಟಿ ಫಲಾನುಭವಿಗಳಿಗೆ ಪಾವತಿಸಲಾಗಿದೆ, ಒಟ್ಟು ₹20,571 ಕೋಟಿ ಪಾವತಿಸಲಾಗಿದೆ (31 ಜುಲೈ 2026 ರ ವೇಳಗೆ).

ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ

  • ಇದು ಹೆಚ್ಚಿನ ಅಪಾಯದ ಗರ್ಭಧಾರಣೆ ಹೊಂದಿರುವವರಿಗೆ ಪ್ರತಿ ತಿಂಗಳ 9 ರಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಗರ್ಭಪೂರ್ವ ತಪಾಸಣೆಯನ್ನು ಒದಗಿಸುತ್ತದೆ.
  • ತಲುಪಿದ ವ್ಯಾಪ್ತಿ: 13 ಆಗಸ್ಟ್ 2026 ರ ವೇಳಗೆ ದೇಶಾದ್ಯಂತ 7.50 ಕೋಟಿಗೂ ಹೆಚ್ಚು ಗರ್ಭಿಣಿಯರನ್ನು ಪರೀಕ್ಷಿಸಲಾಗಿದೆ; 8,812 ಸ್ವಯಂಸೇವಕರು ನೋಂದಾಯಿಸಿಕೊಂಡಿದ್ದಾರೆ; 22,000 ಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳು ಪಿಎಂಎಸ್‌ಎಂಎ ಸೇವೆಯನ್ನು ನೀಡುತ್ತಿವೆ.
  • 6.85 ಕೋಟಿಗೂ ಹೆಚ್ಚು ಗರ್ಭಪೂರ್ವ ತಪಾಸಣೆಗಳನ್ನು ನಡೆಸಲಾಗಿದೆ; ಡಿಜಿಟಲ್ ಟ್ರ್ಯಾಕಿಂಗ್‌ಗಾಗಿ 1.03 ಕೋಟಿ ಹೆಚ್ಚಿನ ಅಪಾಯದ ಗರ್ಭಧಾರಣೆಗಳನ್ನು ಗುರುತಿಸಲಾಗಿದೆ.

ಜನನಿ ಶಿಶು ಸುರಕ್ಷಾ ಕಾರ್ಯಕ್ರಮ

  • ಜೆಎಸ್‌ಎಸ್‌ಕೆಯು ಪ್ರತಿಯೊಬ್ಬ ಗರ್ಭಿಣಿಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಸಿಸೇರಿಯನ್ ಸೇರಿದಂತೆ ಉಚಿತ ಹೆರಿಗೆ, ಉಚಿತ ಸಾರಿಗೆ, ತಪಾಸಣೆ, ಔಷಧಿಗಳು, ರಕ್ತ ಮತ್ತು ಪೌಷ್ಟಿಕ ಆಹಾರದ ಸೌಲಭ್ಯವನ್ನು ಒದಗಿಸುತ್ತದೆ.
  • 2024-25 ಹಣಕಾಸು ವರ್ಷದಲ್ಲಿ: 1.99 ಕೋಟಿಗೂ ಹೆಚ್ಚು ಗರ್ಭಿಣಿಯರು ಮತ್ತು 16.85 ಲಕ್ಷಕ್ಕೂ ಹೆಚ್ಚು ಅಸ್ವಸ್ಥ ನವಜಾತ ಶಿಶುಗಳು ಫಲಾನುಭವಿಗಳಾಗಿ ನೆರವು ಪಡೆದಿದ್ದಾರೆ.
  • 2014-15 ರಿಂದ, ಈ ಯೋಜನೆಯಡಿಯಲ್ಲಿ 18.05 ಕೋಟಿಗೂ ಹೆಚ್ಚು ಫಲಾನುಭವಿಗಳು ಬೆಂಬಲವನ್ನು ಪಡೆದಿದ್ದಾರೆ.

ಫಲಿತಾಂಶಗಳು

  • ಮೊದಲ ತ್ರೈಮಾಸಿಕದ ಗರ್ಭಪೂರ್ವ ತಪಾಸಣೆಗಳು ಎನ್‌ಎಫ್‌ಎಚ್‌ಎಸ್‌-4 (2015-16) ರಲ್ಲಿದ್ದ ಶೇ. 58.6 ರಿಂದ ಎನ್‌ಎಫ್‌ಎಚ್‌ಎಸ್‌-6 (2023-24) ರಲ್ಲಿ ಶೇ. 76.2 ಕ್ಕೆ ಏರಿಕೆಯಾಗಿವೆ.
  • ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಗರ್ಭಪೂರ್ವ ತಪಾಸಣೆಗಳನ್ನು ಪೂರ್ಣಗೊಳಿಸಿದ ಮಹಿಳೆಯರ ಪ್ರಮಾಣವು ಎನ್‌ಎಫ್‌ಎಚ್‌ಎಸ್‌-4 (2015-16) ರಲ್ಲಿದ್ದ ಶೇ. 51.2 ರಿಂದ ಎನ್‌ಎಫ್‌ಎಚ್‌ಎಸ್‌-6 (2023-24) ರಲ್ಲಿ ಶೇ. 65.2 ಕ್ಕೆ ಬೆಳೆದಿದೆ.
  • ರಾಷ್ಟ್ರೀಯ ಮಟ್ಟದಲ್ಲಿ ಸಾಂಸ್ಥಿಕ ಹೆರಿಗೆಗಳು ಎನ್‌ಎಫ್‌ಎಚ್‌ಎಸ್‌-4 (2015-16) ರಲ್ಲಿದ್ದ ಶೇ. 78.9 ರಿಂದ ಎನ್‌ಎಫ್‌ಎಚ್‌ಎಸ್‌-6 (2023-24) ರಲ್ಲಿ ಶೇ. 90.6 ಕ್ಕೆ ಏರಿಕೆಯಾಗಿವೆ.

ಶಿಕ್ಷಣ, ಕೌಶಲ್ಯ ಮತ್ತು ಆಕಾಂಕ್ಷೆಯ ಬೆಳವಣಿಗೆ

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ 2020) ಯ ಬೆಂಬಲದೊಂದಿಗೆ ಹೆಣ್ಣುಮಕ್ಕಳ ಶಿಕ್ಷಣವು ಕೇವಲ ಶಾಲಾ ಪ್ರವೇಶದಿಂದ ನಿರಂತರತೆ, ಪ್ರಗತಿ ಮತ್ತು ಅಳೆಯಬಹುದಾದ ಫಲಿತಾಂಶಗಳ ಕಡೆಗೆ ಸಾಗಿದೆ.

  • ಲಿಂಗ ಸೇರ್ಪಡೆ ನಿಧಿ: ಶಾಲಾ ವ್ಯವಸ್ಥೆಯಾದ್ಯಂತ ವಂಚಿತ ಹೆಣ್ಣುಮಕ್ಕಳಿಗೆ ಗುರಿ ಆಧಾರಿತ ಬೆಂಬಲವನ್ನು ನೀಡುತ್ತದೆ.
  • ನಮ್ಯ ಮಾರ್ಗಗಳು: ಶಾಲೆಯಿಂದ ಹೊರಗುಳಿಯುವುದನ್ನು ಕಡಿಮೆ ಮಾಡುತ್ತದೆ ಮತ್ತು ಶಾಲೆ ಹಾಗೂ ಕಾಲೇಜುಗಳ ಮೂಲಕ ನಿರಂತರ ಭಾಗವಹಿಸುವಿಕೆಯನ್ನು ಬೆಂಬಲಿಸುತ್ತದೆ.
  • ಬಹುಶಿಸ್ತೀಯ ಆಯ್ಕೆಗಳು: ಒಂದೇ ಚೌಕಟ್ಟಿನಡಿಯಲ್ಲಿ ವಿವಿಧ ಶೈಕ್ಷಣಿಕ ಆಸಕ್ತಿಗಳನ್ನು ಮುಂದುವರಿಸಲು ಹೆಣ್ಣುಮಕ್ಕಳಿಗೆ ಅವಕಾಶ ನೀಡುತ್ತವೆ.

ಸಮಗ್ರ ಶಿಕ್ಷಣ ಮತ್ತು ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ

  • ಭಾರತದ ಶಾಲಾ ಶಿಕ್ಷಣ ವ್ಯವಸ್ಥೆ (2025-26): ದೇಶಾದ್ಯಂತ 14.67 ಲಕ್ಷ ಶಾಲೆಗಳು, 1.02 ಕೋಟಿ ಶಿಕ್ಷಕರು ಮತ್ತು 24.72 ಕೋಟಿ ವಿದ್ಯಾರ್ಥಿಗಳು.
  • ಶಾಲೆಯಲ್ಲಿ ಹೆಣ್ಣುಮಕ್ಕಳ ದಾಖಲಾತಿ: 2025-26 ರಲ್ಲಿ 11.96 ಕೋಟಿ ಹೆಣ್ಣುಮಕ್ಕಳು ನೋಂದಾಯಿಸಿಕೊಂಡಿದ್ದಾರೆ.
  • ಕೆಜಿಬಿವಿ: ದಾಖಲಾತಿಯು 6.07 ಲಕ್ಷದಿಂದ (2020–21) 7.58 ಲಕ್ಷಕ್ಕೆ (2025–26) ಹೆಚ್ಚಾಗಿದೆ.

ವೇತನ ಧನ (ಸ್ಕಾಲ್ಶಿಪ್) ಮತ್ತು ಆರ್ಥಿಕ ಬೆಂಬಲ

  • ಕೇಂದ್ರ ವಲಯದ ಸ್ಕಾಲರ್ಶಿಪ್: ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮೆರಿಟ್ ಹೊಂದಿರುವ ಹೆಣ್ಣುಮಕ್ಕಳಿಗೆ ಸುಮಾರು 50% ಸ್ಕಾಲರ್‌ಶಿಪ್‌ಗಳನ್ನು ಕಾಯ್ದಿರಿಸುತ್ತದೆ.
  • ರಾಷ್ಟ್ರೀಯ ಪಿಜಿ ಸ್ಕಾಲರ್ಶಿಪ್: ಆಯ್ಕೆಯಾದ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹1.5 ಲಕ್ಷ ನೀಡುತ್ತದೆ, ಇದರಲ್ಲಿ ವಾರ್ಷಿಕವಾಗಿ 3,000 ಮಹಿಳೆಯರು ಸೇರಿದ್ದಾರೆ.
  • ಎಐಸಿಟಿಇ  ಪ್ರಗತಿ  ಸ್ಕಾಲರ್ಶಿಪ್: 2014-15 ರಿಂದ ವಾರ್ಷಿಕವಾಗಿ 10,000 ಸ್ಕಾಲರ್‌ಶಿಪ್‌ಗಳನ್ನು ನೀಡಲಾಗುತ್ತಿದ್ದು; 2024-25 ರ ವೇಳೆಗೆ ಸುಮಾರು 36,000 ಹೆಣ್ಣುಮಕ್ಕಳು ಇದರ ಪ್ರಯೋಜನ ಪಡೆದಿದ್ದಾರೆ.
  • ಫಲಿತಾಂಶ: ಉನ್ನತ ಶಿಕ್ಷಣದಲ್ಲಿ ಮಹಿಳೆಯರ ದಾಖಲಾತಿಯು 2021-22 ರಲ್ಲಿದ್ದ 2.07 ಕೋಟಿಯಿಂದ 2022-23 ರಲ್ಲಿ 2.18 ಕೋಟಿಗೆ ಹೆಚ್ಚಾಗಿದೆ. 2014-15 ರಲ್ಲಿದ್ದ 1.57 ಕೋಟಿಗೆ (38.4%) ಹೋಲಿಸಿದರೆ ಮಹಿಳಾ ದಾಖಲಾತಿಯಲ್ಲಿ ಸುಮಾರು 60.32 ಲಕ್ಷ ಹೆಚ್ಚಳವಾಗಿದೆ.

ಎಸ್ಟಿಇಎಂ ಮತ್ತು ಉನ್ನತ ಶಿಕ್ಷಣದಲ್ಲಿ ಮಹಿಳೆಯರು

  • ಡಿಸೆಂಬರ್ 2019 ರಿಂದ ಪ್ರಾರಂಭವಾದ ವಿಜ್ಞಾನ ಜ್ಯೋತಿ ಯೋಜನೆ: 300 ಜಿಲ್ಲೆಗಳಲ್ಲಿ (ಮಾರ್ಚ್ 2026 ರ ವೇಳಗೆ) 1.12 ಲಕ್ಷಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ (IX-XII ತರಗತಿಗಳು) ಅನುಕೂಲ ಮಾಡಿಕೊಟ್ಟಿದೆ.
  • ಐಐಟಿಗಳು/ಎನ್‌ಐಟಿಗಳಲ್ಲಿನ ಹೆಚ್ಚುವರಿ ಸೀಟುಗಳು ಮಹಿಳೆಯರ ಭಾಗವಹಿಸುವಿಕೆಯನ್ನು ಶೇ. 10 ಕ್ಕಿಂತ ಕಡಿಮೆಯಿಂದ ಶೇ. 20 ಕ್ಕಿಂತ ಹೆಚ್ಚಿಸಿದೆ.
  • 2024-25ರಲ್ಲಿ ಎಸ್ಟಿಇಎಂ ವಿಷಯಗಳಲ್ಲಿ ಯುಜಿಸಿ ನೆಟ್‌-ಜೆಆರ್‌ಎಫ್‌ ಪಡೆದವರಲ್ಲಿ ಮಹಿಳೆಯರು ಶೇ. 53 ಕ್ಕಿಂತ ಹೆಚ್ಚಿದ್ದಾರೆ.

ಕೌಶಲ್ಯ ಮತ್ತು ಡಿಜಿಟಲ್ ಸೇರ್ಪಡೆ

ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ

ಪಿಎಂಕೆವಿವೈ ಅಲ್ಪಾವಧಿಯ, ಉದ್ಯಮಕ್ಕೆ ಅಗತ್ಯವಿರುವ ತರಬೇತಿಯನ್ನು ನೀಡುತ್ತದೆ; ಇದರ ಫಲಾನುಭವಿಗಳಲ್ಲಿ ಸುಮಾರು 45% ರಷ್ಟು ಮಹಿಳೆಯರಿದ್ದಾರೆ.

  • ಪಿಎಂಕೆವಿವೈ 1.0: 19.85 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ.
  • ಪಿಎಂಕೆವಿವೈ 2.0: 1.10 ಕೋಟಿ ಅಭ್ಯರ್ಥಿಗಳಿಗೆ ತರಬೇತಿ/ದೃಷ್ಟಿಕೋನ ನೀಡಲಾಗಿದೆ.
  • ಪಿಎಂಕೆವಿವೈ 3.0: 7.37 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ.
  • ಪಿಎಂಕೆವಿವೈ 4.0: 28 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದ್ದು, 19.36 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪ್ರಮಾಣಪತ್ರ ಪಡೆದಿದ್ದಾರೆ.

ಯುವ ಹದಿಹರೆಯದ ಹೆಣ್ಣುಮಕ್ಕಳಿಗೆ ವೃತ್ತಿಪರ ತರಬೇತಿಯ ಮೂಲಕ ಆಕಾಂಕ್ಷೆಗಳ ಪೋಷಣೆ

  • ನವ್ಯಾ (2025): 27 ಆಕಾಂಕ್ಷಿ ಮತ್ತು ಈಶಾನ್ಯ ಜಿಲ್ಲೆಗಳು ಹಾಗೂ 19 ರಾಜ್ಯಗಳಾದ್ಯಂತ 16-18 ವರ್ಷ ವಯಸ್ಸಿನ ಹೆಣ್ಣುಮಕ್ಕಳಿಗೆ ಡಿಜಿಟಲ್ ಮಾರ್ಕೆಟಿಂಗ್, ಸೈಬರ್ ಭದ್ರತೆ ಮತ್ತು ಎಐ ಆಧಾರಿತ ಸೇವೆಗಳಲ್ಲಿ ತರಬೇತಿ ನೀಡುತ್ತದೆ.
  • ಜೂನ್ 2026 ರ ವೇಳಗೆ: ಯೋಜನೆ ಪ್ರಾರಂಭವಾದಾಗಿನಿಂದ 1,060 ಹೆಣ್ಣುಮಕ್ಕಳಿಗೆ ತರಬೇತಿ ನೀಡಲಾಗಿದೆ.

ಆರೋಗ್ಯ, ಪೋಷಣೆ ಮತ್ತು ಘನತೆಯುಕ್ತ ಜೀವನ

ಆಯುಷ್ಮಾನ್ ಭಾರತ್

  • ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ : ನಗದು ರಹಿತ ದ್ವಿತೀಯ ಮತ್ತು ತೃತೀಯ ಹಂತದ ವೈದ್ಯಕೀಯ ಆರೈಕೆಯನ್ನು ಒದಗಿಸುತ್ತದೆ; 12 ಆಗಸ್ಟ್ 2026 ರ ವೇಳಗೆ 45.5 ಕೋಟಿ ಆಯುಷ್ಮಾನ್ ಕಾರ್ಡ್‌ಗಳನ್ನು ಸೃಷ್ಟಿಸಲಾಗಿದ್ದು, ಅವುಗಳಲ್ಲಿ 22.48 ಕೋಟಿ ಕಾರ್ಡ್‌ಗಳನ್ನು ಮಹಿಳೆಯರಿಗೆ ನೀಡಲಾಗಿದೆ ಮತ್ತು 5.25 ಕೋಟಿಗೂ ಹೆಚ್ಚು ಆಸ್ಪತ್ರೆ ದಾಖಲಾತಿಗಳು ಮಹಿಳೆಯರದಾಗಿವೆ.
  • ಆಯುಷ್ಮಾನ್ ಆರೋಗ್ಯ ಮಂದಿರಗಳು: 12 ಆಗಸ್ಟ್ 2026 ರ ವೇಳಗೆ 1.86 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಆರೋಗ್ಯ ಮಂದಿರಗಳು ಕಾರ್ಯನಿರ್ವಹಿಸುತ್ತಿದ್ದು, ಮಹಿಳೆಯರಿಗೆ ಮಾತೃತ್ವ ಮತ್ತು ತಡೆಗಟ್ಟುವ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತಿವೆ.
  • ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್  12 ಆಗಸ್ಟ್ 2026 ರ ವೇಳಗೆ 110 ಕೋಟಿಗೂ ಹೆಚ್ಚು ಆರೋಗ್ಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಜೋಡಿಸಿದೆ; 12 ಆಗಸ್ಟ್ 2026 ರ ವೇಳಗೆ ಮಹಿಳೆಯರು ಶೇ. 49.72 ರಷ್ಟು ಆಭಾ ಖಾತೆಗಳನ್ನು ಹೊಂದಿದ್ದಾರೆ.

ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0

  • ಮಿಷನ್ ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಅಪೌಷ್ಟಿಕತೆಯನ್ನು ಎದುರಿಸಲು ಮತ್ತು ಆರಂಭಿಕ ಬಾಲ್ಯದ ವಿಕಾಸವನ್ನು ಸುಧಾರಿಸಲು ಗಮನ ಹರಿಸುತ್ತದೆ. ಇದು ಹಲವಾರು ಪೌಷ್ಟಿಕಾಂಶ ಮತ್ತು ಅಂಗನವಾಡಿ ಉಪಕ್ರಮಗಳನ್ನು ಒಂದೇ ಸಂಯೋಜಿತ ಚೌಕಟ್ಟಿನಡಿಯಲ್ಲಿ ತರುತ್ತದೆ.
  • 31 ಜುಲೈ 2026 ರ ವೇಳಗೆ 64.46 ಲಕ್ಷಕ್ಕೂ ಹೆಚ್ಚು ಗರ್ಭಿಣಿಯರು, 45.44 ಲಕ್ಷಕ್ಕೂ ಹೆಚ್ಚು ಬಾಣಂತಿಯರು ಮತ್ತು 15.68 ಲಕ್ಷ ಹದಿಹರೆಯದ ಹೆಣ್ಣುಮಕ್ಕಳು ಸೇರಿದಂತೆ ಒಟ್ಟು 8.94 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಸೇವೆ ನೀಡಲಾಗುತ್ತಿದೆ.
  • ಕಳೆದ ಐದು ವರ್ಷಗಳಲ್ಲಿ 1.29 ಲಕ್ಷ ಅಂಗನವಾಡಿ ಕೇಂದ್ರಗಳನ್ನು ಸಕ್ಷಮ್ ಅಂಗನವಾಡಿಗಳಾಗಿ ಮೇಲ್ದರ್ಜೆಗೇರಿಸಲಾಗಿದೆ.
  • 31 ಜುಲೈ 2026 ರ ವೇಳಗೆ ಸುಮಾರು 13.31 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಕರ್ತವ್ಯದಲ್ಲಿದ್ದಾರೆ.

ಮಿಷನ್ ಇಂದ್ರಧನುಷ್

  • 18 ಮಾರ್ಚ್ 2026ರ ವೇಳಗೆ, 11.87 ಕೋಟಿ ಮಕ್ಕಳು ಮತ್ತು 3.96 ಕೋಟಿ ಗರ್ಭಿಣಿಯರು ಯು-ವಿನ್  ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ, ಇದು ಫಲಾನುಭವಿಗಳಿಗೆ ಲಸಿಕೆ ಸೇವೆಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸುತ್ತದೆ ಮತ್ತು ಟ್ರ್ಯಾಕ್ ಮಾಡುತ್ತದೆ.
  • ತಡೆಗಟ್ಟಬಹುದಾದ ರೋಗಗಳ ವಿರುದ್ಧ 5.46 ಕೋಟಿ ಮಕ್ಕಳು ಮತ್ತು 1.32 ಕೋಟಿ ಗರ್ಭಿಣಿಯರಿಗೆ ಲಸಿಕೆ ಹಾಕಲಾಗಿದೆ.
  • 17 ಫೆಬ್ರವರಿ 2026 ರ ವೇಳಗೆ, 8.73 ಕೋಟಿ ಮಹಿಳೆಯರನ್ನು ಗರ್ಭಕಂಠದ ಕ್ಯಾನ್ಸರ್ ಪರೀಕ್ಷೆಗೆ ಒಳಪಡಿಸಲಾಗಿದೆ.
  • ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 14 ವರ್ಷ ವಯಸ್ಸಿನ ಸುಮಾರು 1.2 ಕೋಟಿ ಅರ್ಹ ಫಲಾನುಭವಿ ಹೆಣ್ಣುಮಕ್ಕಳಿಗಾಗಿ 28 ಫೆಬ್ರವರಿ 2026 ರಂದು ದೇಶಾದ್ಯಂತ 'ಹೆಚ್‌ಪಿವಿ ಲಸಿಕೆ ಅಭಿಯಾನ' ವನ್ನು ಪ್ರಾರಂಭಿಸಲಾಯಿತು.
  • 15 ಜುಲೈ 2026 ರ ವೇಳಗೆ, ದೇಶಾದ್ಯಂತ ಒಟ್ಟು 52,10,302 ಹೆಣ್ಣುಮಕ್ಕಳು ಹೆಚ್‌ಪಿವಿ ಲಸಿಕೆಯನ್ನು ಪಡೆದಿದ್ದಾರೆ.

ಆರ್ಥಿಕ ಸೇರ್ಪಡೆ ಮತ್ತು ಆರ್ಥಿಕ ಸಬಲೀಕರಣ

ಸುಕನ್ಯಾ ಸಮೃದ್ಧಿ ಯೋಜನೆ

ಠೇವಣಿಗಳು ₹250 ರಿಂದ ಪ್ರಾರಂಭವಾಗುತ್ತವೆ ಮತ್ತು ಸೆಕ್ಷನ್ 80C ಅಡಿಯಲ್ಲಿ ವಾರ್ಷಿಕ ಶೇ. 8.2 ರಷ್ಟು ತೆರಿಗೆ ರಹಿತ ಬಡ್ಡಿಯನ್ನು ಪಡೆಯುತ್ತವೆ.

ಉನ್ನತ ಶಿಕ್ಷಣ ಮತ್ತು ಮದುವೆಗಾಗಿ ಭಾಗಶಃ ಹಣವನ್ನು ಹಿಂಪಡೆಯಲು ಅವಕಾಶ ನೀಡುತ್ತದೆ, ಇದು ಕುಟುಂಬದ ಸಂಘಟಿತ ಉಳಿತಾಯವನ್ನು ಉತ್ತೇಜಿಸುತ್ತದೆ.

ಪ್ರಾರಂಭವಾದಾಗಿನಿಂದ, ಒಟ್ಟು ಠೇವಣಿ ₹3.33 ಲಕ್ಷ ಕೋಟಿ ದಾಟಿದೆ (ಡಿಸೆಂಬರ್ 2025 ರ ವೇಳಗೆ).

ಡಿಎವೈ-ಎನ್ಆರ್ಎಲ್ಎಂ - ಸ್ವಸಹಾಯ ಗುಂಪುಗಳ ವ್ಯವಸ್ಥೆ

  • 1.51 ಕೋಟಿ ಸಮುದಾಯ ಕೆಡರ್ ಸದಸ್ಯರೊಂದಿಗೆ 7,627 ಬ್ಲಾಕ್‌ಗಳನ್ನು ಒಳಗೊಂಡಂತೆ ಸ್ವಸಹಾಯ ಗುಂಪುಗಳನ್ನು ದೇಶಾದ್ಯಂತ ವಿಸ್ತರಿಸಲಾಗಿದೆ.
  • ಯೋಜನೆ ಪ್ರಾರಂಭವಾದಾಗಿನಿಂದ, 6 ಫೆಬ್ರವರಿ 2026 ರ ವೇಳಗೆ 50,548 ಕ್ಕೂ ಹೆಚ್ಚು ತರಬೇತಿ ಪಡೆದ ಬ್ಯಾಂಕ್ ಸಖಿಯರ ಮೂಲಕ ಸ್ವಸಹಾಯ ಗುಂಪುಗಳು ₹12.18 ಲಕ್ಷ ಕೋಟಿಗೂ ಹೆಚ್ಚು ಬ್ಯಾಂಕ್ ಸಾಲವನ್ನು ಪಡೆದುಕೊಂಡಿವೆ.
  • ಜೂನ್ 30, 2026 ರ ವೇಳಗೆ, 'ಸ್ಟಾರ್ಟ್-ಅಪ್ ವಿಲೇಜ್ ಎಂಟರ್‌ಪ್ರಿನರ್‌ಶಿಪ್ ಪ್ರೋಗ್ರಾಂ' ಅಡಿಯಲ್ಲಿ 4.32 ಲಕ್ಷ ಉದ್ಯಮಗಳಿಗೆ ಬೆಂಬಲ ನೀಡಲಾಗಿದೆ.

ಲಖ್ಪತಿ ದೀದಿ ಯೋಜನೆ

  • ಸ್ವಸಹಾಯ ಗುಂಪಿನ ಮಹಿಳೆಯರು ಕನಿಷ್ಠ ₹1 ಲಕ್ಷದ ಸುಸ್ಥಿರ ವಾರ್ಷಿಕ ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ.
  • ವ್ಯಾಪ್ತಿ: ಮಾರ್ಚ್ 31, 2026 ರ ವೇಳಗೆ 34 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು, 757 ಜಿಲ್ಲೆಗಳು, 94.31 ಲಕ್ಷ ಸ್ವಸಹಾಯ ಗುಂಪುಗಳು ಮತ್ತು 10.14 ಕೋಟಿ ಸ್ವಸಹಾಯ ಗುಂಪಿನ ಸದಸ್ಯರು.
  • ಇದು 6,611 ಮಾಸ್ಟರ್ ಟ್ರೈನರ್‌ಗಳು, 4.09 ಲಕ್ಷ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮತ್ತು 3.87 ಕೋಟಿ ಸಂಭಾವ್ಯ ಲಖ್‌ಪತಿ ದೀದಿಯರ ಬಲವಾದ ಜಾಲದ ಮೂಲಕ ಅನುಷ್ಠಾನವನ್ನು ಸಾಧ್ಯವಾಗಿಸುತ್ತದೆ.

ಪ್ರಧಾನ ಮಂತ್ರಿ ಜನ ಧನ್ ಯೋಜನೆ

  • 12 ಆಗಸ್ಟ್ 2026 ರ ವೇಳಗೆ ಒಟ್ಟು 58.90 ಕೋಟಿ ಜನ-ಧನ್ ಖಾತೆಗಳನ್ನು ತೆರೆಯಲಾಗಿದೆ.
  • 1 ಜುಲೈ 2026 ರ ವೇಳಗೆ, 32.68 ಕೋಟಿ ಜನ-ಧನ್ ಖಾತೆಗಳು ಮಹಿಳೆಯರಿಗೆ ಸೇರಿವೆ.

ಪ್ರಧಾನ ಮಂತ್ರಿ ಮುದ್ರಾ ಯೋಜನೆ

  • 8 ಏಪ್ರಿಲ್ 2026 ರ ವೇಳಗೆ ಒಟ್ಟಾರೆಯಾಗಿ 57.79 ಕೋಟಿಗೂ ಹೆಚ್ಚು ಸಾಲಗಳನ್ನು ಮಂಜೂರು ಮಾಡಲಾಗಿದ್ದು, ₹40.07 ಲಕ್ಷ ಕೋಟಿ ವಿತರಿಸಲಾಗಿದೆ.
  • ಮಂಜೂರಾದ ಸಾಲಗಳಲ್ಲಿ ಮೂರನೇ ಎರಡರಷ್ಟು ಸಾಲಗಳನ್ನು ಮಹಿಳಾ ಉದ್ಯಮಿಗಳಿಗೆ ನೀಡಲಾಗಿದೆ.

ಪಿಎಂ ಸ್ವನಿಧಿ

  • ತಲುಪಿದ ವ್ಯಾಪ್ತಿ: 13 ಆಗಸ್ಟ್ 2026 ರ ವೇಳಗೆ ಯೋಜನೆಯು 78,24,611 ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ; ಇದರಲ್ಲಿ ಫಲಾನುಭವಿಗಳ ಪೈಕಿ ಶೇ. 46 ರಷ್ಟು ಮಹಿಳೆಯರಿದ್ದಾರೆ.

ನಮೋ ಡ್ರೋನ್ ದೀದಿ ಯೋಜನೆ

  • ಜಮೀನುಗಳಲ್ಲಿ ಗೊಬ್ಬರ ಮತ್ತು ಕೀಟನಾಶಕಗಳನ್ನು ಸಿಂಪಡಿಸಲು ಡ್ರೋನ್‌ಗಳನ್ನು ಚಲಾಯಿಸಲು ಸ್ವಸಹಾಯ ಗುಂಪಿನ ಮಹಿಳೆಯರಿಗೆ ತರಬೇತಿ ನೀಡುತ್ತದೆ.
  • ₹1,261 ಕೋಟಿ ವೆಚ್ಚದಲ್ಲಿ (2023-24 ರಿಂದ 2025-26) ಅನುಮೋದಿಸಲಾಗಿದೆ; ಮಹಿಳಾ ಸ್ವಸಹಾಯ ಗುಂಪುಗಳಿಗೆ 15,000 ಡ್ರೋನ್‌ಗಳನ್ನು ನೀಡುವ ಗುರಿಯನ್ನು ಹೊಂದಿದೆ.
  • ಯೋಜನೆ ಪ್ರಾರಂಭವಾದಾಗಿನಿಂದ, ನಮೋ ಡ್ರೋನ್ ದೀದಿ ಉಪಕ್ರಮದ ಅಡಿಯಲ್ಲಿ 500+ ಸೇರಿದಂತೆ ಒಟ್ಟು 1,094 ಡ್ರೋನ್‌ಗಳನ್ನು ಮಹಿಳಾ ಸ್ವಸಹಾಯ ಗುಂಪುಗಳಿಗೆ ವಿತರಿಸಲಾಗಿದೆ, ಇದು ಕೃಷಿ ಉತ್ಪಾದಕತೆ ಮತ್ತು ಜೀವನೋಪಾಯವನ್ನು ಹೆಚ್ಚಿಸಿದೆ.

ವೂಮೆನಿಯಾ - ಜೆಮ್

  • 2.1 ಲಕ್ಷಕ್ಕೂ ಹೆಚ್ಚು ಮಹಿಳಾ ನೇತೃತ್ವದ ಉದ್ಯಮಗಳು ನೋಂದಾಯಿಸಿಕೊಂಡಿವೆ; 2025-26ರ ಹಣಕಾಸು ವರ್ಷದಲ್ಲಿ 13.7 ಲಕ್ಷ ಆರ್ಡರ್‌ಗಳನ್ನು ಪಡೆದುಕೊಂಡಿವೆ.
  • ಮಹಿಳಾ ಎಂಎಸ್‌ಎಂಇ ಗಳಿಗೆ ₹28,000 ಕೋಟಿಗೂ ಹೆಚ್ಚಿನ ಗುತ್ತಿಗೆ ಮೌಲ್ಯವನ್ನು ನೀಡಲಾಗಿದೆ, ಇದು 2024-25ರ ಹಣಕಾಸು ವರ್ಷಕ್ಕಿಂತ ಶೇ. 27.60 ರಷ್ಟು ಹೆಚ್ಚಾಗಿದೆ; ಇದು ಜೆಮ್‌ ನ ಒಟ್ಟು ಆರ್ಡರ್ ಮೌಲ್ಯದ ಶೇ. 5.6 ರಷ್ಟನ್ನು ಪಡೆದುಕೊಂಡಿದೆ.

ಸೆಲ್ಫ್ ಹೆಲ್ಪ್ ಎಂಟರ್ಪ್ರಿನರ್ ಮಾರ್ಟ್

  • ಕೇಂದ್ರ ಬಜೆಟ್ 2026-27 ರಲ್ಲಿ ಘೋಷಿಸಲಾಗಿದ್ದು, 1 ಕೋಟಿ ಮಹಿಳೆಯರಿಗೆ ಅನುಕೂಲ ಮಾಡುವ ಗುರಿಯನ್ನು ಹೊಂದಿದೆ.
  • ಅವರು ಸ್ವಂತ ಸುಸ್ಥಿರ ಉದ್ಯಮಗಳನ್ನು ಹೊಂದಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ.

ಸುರಕ್ಷತೆ, ಭದ್ರತೆ, ಘನತೆ ಮತ್ತು ಜೀವನ ಮಟ್ಟಗಳು

ಮಿಷನ್ ಶಕ್ತಿ

  • ಮಹಿಳೆಯರ ರಕ್ಷಣೆ ಮತ್ತು ಬೆಂಬಲಕ್ಕಾಗಿ 'ಸಂಬಲ್' (ಸುರಕ್ಷತೆ) ಮತ್ತು 'ಸಾಮರ್ಥ್ಯ' (ಸಬಲೀಕರಣ) ವಿಭಾಗಗಳನ್ನು ಸಂಯೋಜಿಸುತ್ತದೆ.
  • ದೇಶಾದ್ಯಂತ 15.2 ಲಕ್ಷ ಒನ್ ಸ್ಟಾಪ್ ಸೆಂಟರ್‌ಗಳು ಮತ್ತು 642 ನಾರಿ ಅದಾಲತ್‌ಗಳು ಕಾರ್ಯನಿರ್ವಹಿಸುತ್ತಿವೆ.
  • ಮಹಿಳಾ ಹೆಲ್ಪ್‌ಲೈನ್ (181) 31 ಜುಲೈ 2026 ರವರೆಗೆ ತುರ್ತು ಸ್ಪಂದನೆಗೆ (112) ಸಂಪರ್ಕಗೊಂಡು 24x7 ನೆರವಿನೊಂದಿಗೆ 1.05 ಕೋಟಿಗೂ ಹೆಚ್ಚು ಮಹಿಳೆಯರಿಗೆ ಬೆಂಬಲ ನೀಡಿದೆ.
  • 'ಶೀ-ಬಾಕ್ಸ್' ಪೋರ್ಟಲ್ ಉದ್ಯೋಗ ಸ್ಥಳದಲ್ಲಿ ನಡೆಯುವ ಕಿರುಕುಳದ ದೂರುಗಳನ್ನು ವೇಗವಾಗಿ ಪರಿಹರಿಸಲು ಆನ್‌ಲೈನ್‌ನಲ್ಲಿ ವರದಿ ಮಾಡಲು ಅನುವು ಮಾಡಿಕೊಡುತ್ತದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ

  • ಪಿಎಂಎವೈ-ಅರ್ಬನ್ (2015) ಮತ್ತು ಪಿಎಂಎವೈ-ಗ್ರಾಮೀಣ್ (2016) ಮೂಲಭೂತ ಸೌಕರ್ಯಗಳೊಂದಿಗೆ ಪಕ್ಕಾ ಮನೆಗಳನ್ನು ಒದಗಿಸುತ್ತವೆ.
  • ಪಿಎಂಎವೈ-ಗ್ರಾಮೀಣ್: 13 ಆಗಸ್ಟ್ 2026 ರ ವೇಳಗೆ 96.06 ಲಕ್ಷಕ್ಕೂ ಹೆಚ್ಚು ಅಂದರೆ ಶೇ. 24.73 ರಷ್ಟು ಮನೆಗಳನ್ನು ಮಹಿಳೆಯರಿಗೆ ಮಾತ್ರ ಹಂಚಿಕೆ ಮಾಡಲಾಗಿದೆ.
  • ಪಿಎಂಎವೈ-U 2.0: 9 ಆಗಸ್ಟ್ 2026 ರ ವೇಳಗೆ 1.25 ಕೋಟಿ ಮನೆಗಳನ್ನು ಮಂಜೂರು ಮಾಡಲಾಗಿದ್ದು, 1 ಕೋಟಿ ಮನೆಗಳನ್ನು ಮಹಿಳೆಯರಿಗೆ ಹಂಚಿಕೆ ಮಾಡಲಾಗಿದೆ.

ಭಾಗವಹಿಸುವಿಕೆ, ಪ್ರಾತಿನಿಧ್ಯ ಮತ್ತು ನಿರ್ಧಾರ ಕೈಗೊಳ್ಳುವಿಕೆ

  • 8 ಫೆಬ್ರವರಿ 2026 ರ ಅಂತಿಮ ಮತದಾರರ ಪಟ್ಟಿಯಲ್ಲಿದ್ದ 96.88 ಕೋಟಿ ಜನರಲ್ಲಿ ಮಹಿಳೆಯರು 47.15 ಕೋಟಿಗೂ ಹೆಚ್ಚಿದ್ದಾರೆ.
  • 19 ಮಾರ್ಚ್ 2025ರ ವೇಳಗೆ, 14.5 ಲಕ್ಷ ಮಹಿಳೆಯರು ಚುನಾಯಿತ ಪಂಚಾಯತ್ ರಾಜ್ ಪ್ರತಿನಿಧಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಇದು ಒಟ್ಟು ಸಂಖ್ಯೆಯ ಸುಮಾರು ಶೇ. 46 ರಷ್ಟಿದೆ.
  • ನಾರಿ ಶಕ್ತಿ ವಂದನ್ ಅಧಿನಿಯಮ, 2023 (106 ನೇ ಸಂವಿಧಾನ ತಿದ್ದುಪಡಿ ಕಾಯ್ದೆ) ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ದೆಹಲಿ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿಯನ್ನು ಒದಗಿಸುತ್ತದೆ, ಇದು ಜನಗಣತಿಯ ನಂತರದ ಗಡಿ ನಿರ್ಣಯ ಪ್ರಕ್ರಿಯೆಯ ನಂತರ ಜಾರಿಗೆ ಬರಲಿದೆ.
  • 2025 ರಲ್ಲಿ, 17 ಮಹಿಳಾ ಕೆಡೆಟ್‌ಗಳ ಮೊದಲ ಬ್ಯಾಚ್ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ ಎನ್‌ಡಿಎ ಪದವಿ ಪಡೆಯಿತು.
  • 2026 ರ ಆರಂಭದ ವೇಳೆಗೆ, 2022 ರಿಂದ ಒಟ್ಟು 158 ಮಹಿಳಾ ಕೆಡೆಟ್‌ಗಳು ಎನ್‌ಡಿಎ ಗೆ ಸೇರ್ಪಡೆಗೊಂಡಿದ್ದಾರೆ.

ವಿಕಸಿತ ಭಾರತದ ತಡಿಪಾಯವಾಗಿ ನಾರಿ ಶಕ್ತಿ

ಸರ್ಕಾರದ ಗಮನವು ಕಲ್ಯಾಣ ಯೋಜನೆಗಳನ್ನು ಮಹಿಳೆಯರ ನಾಯಕತ್ವ, ಘನತೆ ಮತ್ತು ಅವಕಾಶಗಳ ವೇದಿಕೆಯಾಗಿ ಮರುರೂಪಿಸಿದೆ. 2047ರ ವೇಳೆಗೆ ವಿಕಸಿತ ಭಾರತವನ್ನು ನಿರ್ಮಿಸುವಲ್ಲಿ ಮಹಿಳೆಯರು ಕಾರ್ಮಿಕರಾಗಿ, ಉದ್ಯಮಿಗಳಾಗಿ, ರೈತರಾಗಿ ಮತ್ತು ನಾಯಕಿಯರಾಗಿ ಹೆಚ್ಚು ಪ್ರಮುಖರಾಗುತ್ತಿದ್ದಾರೆ. ಶಿಕ್ಷಣ, ಆದಾಯ ಮತ್ತು ನಿರ್ಧಾರ ಕೈಗೊಳ್ಳುವಿಕೆಗೆ ಸಿಕ್ಕಿರುವ ಲಭ್ಯತೆಯು ಈಗ ಕುಟುಂಬಗಳು ಮತ್ತು ಸಮುದಾಯಗಳ ಮೇಲೆ ಧನಾತ್ಮಕ ಪರಿಣಾಮವನ್ನು ಬೀರಿದೆ. ಉದ್ಯಮಶೀಲತೆಯಿಂದ ಹಿಡಿದು ತಳಮಟ್ಟದ ಆಡಳಿತದವರೆಗೆ, ನಾರಿ ಶಕ್ತಿಯು ಶಕ್ತಿ ಮತ್ತು ಸ್ಪಷ್ಟ ಉದ್ದೇಶದೊಂದಿಗೆ ಮುನ್ನಡೆಯುತ್ತಿದೆ.

References

Ministry of Women and Child Development

MissionShaktiGuidelines.pdf

https://pmmvy.wcd.gov.in/

https://www.poshantracker.in/statistics

https://www.pib.gov.in/PressReleasePage.aspx?PRID=2294872&reg=48&lang=1

Ministry of Education

https://udiseplus.gov.in/#/en/home

file:///C:/Users/dell/Downloads/UDISE+2025_26_Booklet_nep.pdf  (Page 81)

https://newsonair.gov.in/govt-says-over-7-lakh-girls-are-currently-enrolled-in-kasturba-gandhi-balika-vidyalaya/

Ministry of Skill Development and Entrepreneurship

https://www.skillindiadigital.gov.in/pmkvy-dashboard

https://www.pib.gov.in/PressReleasePage.aspx?PRID=2297193&reg=48&lang=1

 Prime Minister's Office

https://www.pib.gov.in/PressReleasePage.aspx?PRID=2227542&reg=6&lang=1 

Ministry of Health and Family Welfare

file:///C:/Users/dell/Downloads/NFHS-5_NRReport_val1__NFHS-5_INDIA_REPORT.pdf

https://sansad.in/getFile/annex/270/AU1218_UuTmW5.pdf?source=pqars

https://www.pib.gov.in/PressReleaseIframePage.aspx?PRID=2118786&reg=48&lang=2   

AU1136_kCnH0M.pdf 

https://www.nfhsiips.in/nfhsuser/assets/National%20Family%20Health%20Survey%20(NFHS-6)%202023-2024%20Fact%20Sheets.pdf (Page 4)

https://www.pib.gov.in/PressReleasePage.aspx?PRID=2244518&reg=3&lang=1

Press Release Page | Press Information Bureau

https://static.pib.gov.in/WriteReadData/specificdocs/documents/2025/jan/doc202513480101.pdf

PMJAY - Dashboard

ABDM-Insights

Press Release Page | Press Information Bureau

Ministry of Finance

https://www.pib.gov.in/PressReleasePage.aspx?PRID=2287200&lang=1&reg=3&utm 

https://newsonair.gov.in/over-4-crore-53-lakh-bank-accounts-opened-under-sukanya-samriddhi-yojana-says-govt/

https://www.nsiindia.gov.in/(S(bivxnengkkhfls3i1nysmlzq))/internalpage.aspx?Id_Pk=290

https://www.pib.gov.in/PressReleasePage.aspx?PRID=2249915&reg=3&lang=1

Ministry of Defence

https://www.pib.gov.in/PressReleasePage.aspx?PRID=2132691&reg=48&lang=2

Ministry of Home Affairs

https://www.pib.gov.in/newsite/PrintRelease.aspx?lang=2&reg=3&relid=95372&utm

Ministry of Science & Technology

Press Release: Press Information Bureau

Ministry of Rural Development

https://www.pib.gov.in/PressReleasePage.aspx?PRID=2224571&reg=3&lang=1

https://lakhpatididi.gov.in/insight-hub/

https://she-mart.in/

https://pmayg.gov.in/netiay/PBIDashboard/PMAYGDashboard.aspx

https://www.pib.gov.in/PressReleasePage.aspx?PRID=2297771&reg=48&lang=2

Ministry of Housing and Urban Affairs

PM SVANidhi

https://www.pib.gov.in/PressReleasePage.aspx?PRID=2296797&reg=48&lang=1

Cabinet

https://www.pib.gov.in/PressReleasePage.aspx?PRID=2237548&reg=48&lang=2

Election Commission

Press Release Page | Press Information Bureau

https://www.pib.gov.in/PressReleasePage.aspx?PRID=2088064&reg=48&lang=2

PIB Backgrounder

 https://static.pib.gov.in/WriteReadData/specificdocs/documents/2026/jun/doc202663882201.pdf

https://www.pib.gov.in/PressReleasePage.aspx?PRID=2267960&lang=1&reg=3&utm

Press Release Page | Press Information Bureau

Press Note Details: Press Information Bureau

https://www.pib.gov.in/PressNoteDetails.aspx?NoteId=154880&ModuleId=3&reg=48&lang=2

Press Release Page | Press Information Bureau

https://www.pib.gov.in/PressReleasePage.aspx?PRID=2250664&reg=3&lang=1

https://www.pib.gov.in/PressReleasePage.aspx?PRID=2267102&lang=2&reg=48&utm

https://static.pib.gov.in/WriteReadData/specificdocs/documents/2026/aug/doc2026813953401.pdf

https://www.pib.gov.in/FactsheetDetails.aspx?id=150688&NoteId=150688&ModuleId=16&reg=48&lang=1

https://www.pib.gov.in/PressReleasePage.aspx?PRID=2289268&reg=3&lang=1

https://static.pib.gov.in/WriteReadData/specificdocs/documents/2026/aug/doc2026812952101.pdf

Click here for pdf file

 

*****

(तथ्य सामग्री आईडी: 150919) आगंतुक पटल : 26


Provide suggestions / comments
इस विश्लेषक को इन भाषाओं में पढ़ें : English , Urdu , Bengali , Assamese , Malayalam , हिन्दी