• Sitemap
  • Advance Search
Economy

ಯುಪಿಐ: ಭಾರತದ ಪಾವತಿ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆ

प्रविष्टि तिथि: 24 AUG 2026 14:13 PM

ಏಕೀಕೃತ ಪಾವತಿ ಪರಿಸರ ವ್ಯವಸ್ಥೆಯತ್ತ

ಭಾರತದ ಪಾವತಿ ರಂಗದಲ್ಲಿ ಕ್ರಾಂತಿಕಾರಿ ಬದಲಾವಣೆ

ಕಳೆದ ದಶಕದಲ್ಲಿ ಭಾರತದ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯು ಗಮನಾರ್ಹ ಬದಲಾವಣೆಗೆ ಒಳಪಟ್ಟಿದೆ. ಪ್ರತಿಯೊಬ್ಬ ನಾಗರಿಕನಿಗೂ ಸರಳ ಮತ್ತು ಸುರಕ್ಷಿತ ಪಾವತಿ ವ್ಯವಸ್ಥೆಯನ್ನು ತಲುಪಿಸುವ ದೂರದೃಷ್ಟಿಯೇ ಇದಕ್ಕೆ ಕಾರಣವಾಗಿದೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು ಅಭಿವೃದ್ಧಿಪಡಿಸಿದ ಏಕೀಕೃತ ಪಾವತಿ ಇಂಟರ್‌ಫೇಸ್ (ಯುಪಿಐ), ಭಾರತದ ಡಿಜಿಟಲ್ ಪಾವತಿ ಕ್ರಾಂತಿಯ ಪ್ರಮುಖ ಮೂಲಸ್ತಂಭವಾಗಿ ಹೊರಹೊಮ್ಮಿದೆ. ಇಂದು ಯುಪಿಐ 11 ದೇಶಗಳಲ್ಲಿ ಸ್ವೀಕಾರಾರ್ಹವಾಗಿದ್ದು, ಭಾರತದ ಈ ನೈಜ-ಸಮಯದ (ರಿಯಲ್-ಟೈಮ್) ಪಾವತಿ ವೇದಿಕೆಯನ್ನು ಅಳವಡಿಸಿಕೊಂಡ ಇತ್ತೀಚಿನ ದೇಶಗಳೆಂದರೆ ಗ್ರೀಸ್ ಮತ್ತು ಮಾಲ್ಡೀವ್ಸ್.

ಯುಪಿಐ ಮತ್ತು ಅದರ ವಿಕಾಸ

ಅಂತರ್‌ಸಂಪರ್ಕಿತ ವಿನ್ಯಾಸ ಮತ್ತು ಸುಲಭ ಬಳಕೆಯೊಂದಿಗೆ, ಯುಪಿಐ ವ್ಯಕ್ತಿಗಳು, ವ್ಯಾಪಾರಗಳು ಮತ್ತು ಸರ್ಕಾರಿ ಸಂಸ್ಥೆಗಳು ವಹಿವಾಟು ನಡೆಸುವ ರೀತಿಯನ್ನು ಮೂಲಭೂತವಾಗಿ ಬದಲಾಯಿಸಿದೆ.

  • ಯಾವುದೇ ಪಾಲ್ಗೊಳ್ಳುವ ಬ್ಯಾಂಕ್ ಅಥವಾ ಪಾವತಿ ಸೇವಾ ಪೂರೈಕೆದಾರರ ಒಂದೇ ಮೊಬೈಲ್ ಅಪ್ಲಿಕೇಶನ್ ಮೂಲಕ ಹಲವು ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವ ನೈಜ-ಸಮಯದ (ರಿಯಲ್-ಟೈಮ್) ಪಾವತಿ ವ್ಯವಸ್ಥೆ.
  • ಒಂದೇ ವೇದಿಕೆಯಲ್ಲಿ ಹಲವು ಬ್ಯಾಂಕಿಂಗ್ ಸೇವೆಗಳು, ಹಣ ರವಾನೆ ಮತ್ತು ವ್ಯಾಪಾರಿ ಪಾವತಿಗಳನ್ನು ಸಂಯೋಜಿಸುತ್ತದೆ.
  • 24/7 (ಅಹೋರಾತ್ರಿ) ಡಿಜಿಟಲ್ ಪಾವತಿಗಳನ್ನು ಸಕ್ರಿಯಗೊಳಿಸುತ್ತದೆ.
  • ವಹಿವಾಟಿನ ಭದ್ರತೆಯನ್ನು ಹೆಚ್ಚಿಸಲು ದ್ವಿ-ಹಂತದ ದೃಢೀಕರಣ ಮತ್ತು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಬಳಸುತ್ತದೆ.

ಕಳೆದ ದಶಕದಲ್ಲಿ, ಯುಪಿಐ ಭಾರತದ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯ ಬೆನ್ನೆಲುಬಾಗಿ ಬೆಳೆದಿದೆ. ಯುಪಿಐ ವಿಕಾಸದ ಕೆಲವು ಪ್ರಮುಖ ಮೈಲಿಗಲ್ಲುಗಳು ಈ ಕೆಳಗಿನಂತಿವೆ:

2016

  • 21 ಸದಸ್ಯ ಬ್ಯಾಂಕ್‌ಗಳೊಂದಿಗೆ 2016ರ ಏಪ್ರಿಲ್‌ನಲ್ಲಿ ಪ್ರಯೋಗಾತ್ಮಕ (ಪೈಲಟ್) ಆಧಾರದ ಮೇಲೆ ಯುಪಿಐ ಅನ್ನು ಪ್ರಾರಂಭಿಸಲಾಯಿತು.
  • 2016ರ ಆಗಸ್ಟ್‌ನಲ್ಲಿ, ಪಾಲ್ಗೊಂಡ ಬ್ಯಾಂಕ್‌ಗಳು ತಮ್ಮ ಯುಪಿಐ-ಸಕ್ರಿಯಗೊಳಿಸಿದ ಮೊಬೈಲ್ ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗುವಂತೆ ಮಾಡುವ ಮೂಲಕ ಇದನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಯಿತು.
  • ಯುಪಿಐ ಬಳಸಿ ಡಿಜಿಟಲ್ ಪಾವತಿಗಳನ್ನು ಸಕ್ರಿಯಗೊಳಿಸಲು 2016 ರ ಡಿಸೆಂಬರ್‌ನಲ್ಲಿ ಭೀಮ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಯಿತು. ಇದು ಬಳಕೆದಾರರಿಗೆ ಮೊಬೈಲ್ ಸಾಧನಗಳ ಮೂಲಕ ನೇರವಾಗಿ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ವಹಿವಾಟು ನಡೆಸಲು ಅನುವು ಮಾಡಿಕೊಡುತ್ತದೆ.

2017

ಡೈನಾಮಿಕ್ ಕ್ಯೂಆರ್‌ – ಡೈನಾಮಿಕ್ ಕ್ಯೂಆರ್‌ ಕೋಡ್‌ಗಳ ಮೂಲಕ ಯುಪಿಐ ಪಾವತಿಗಳನ್ನು ಸಕ್ರಿಯಗೊಳಿಸುವ ರಿಟೇಲ್ ವರ್ತಕರ ವೇದಿಕೆಯನ್ನು ಪ್ರಾರಂಭಿಸಲಾಯಿತು. ಇದು ಹಣ ಸ್ವೀಕರಿಸುವವರ ಮಾಹಿತಿ ಮತ್ತು ನಿಖರ ಮೊತ್ತದಂತಹ ವಹಿವಾಟಿನ ವಿವರಗಳನ್ನು ಡೈನಾಮಿಕ್ ಆಗಿ ಸೇರಿಸುವ ಮೂಲಕ, ಮೊತ್ತವನ್ನು ಹಸ್ತಚಾಲಿತವಾಗಿ ನಮೂದಿಸುವುದನ್ನು ತಪ್ಪಿಸಿತು.

2018

ಡಿಜಿಟಲ್ ಪಾವತಿಗಳನ್ನು ಸರಳ, ಹೆಚ್ಚು ಸುರಕ್ಷಿತ ಮತ್ತು ಸುಗಮಗೊಳಿಸಲು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಯುಪಿಐ 2.0 ಅನ್ನು ಪರಿಚಯಿಸಲಾಯಿತು.

  • ಇನ್ಬಾಕ್ಸ್ನಲ್ಲಿ ಇನ್ವಾಯ್ಸ್: ಪಾವತಿಗಳನ್ನು ದೃಢೀಕರಿಸುವ ಮೊದಲು ಬಳಕೆದಾರರಿಗೆ ಬಿಲ್ಲುಗಳು ಅಥವಾ ಇನ್‌ವಾಯ್ಸ್‌ಗಳನ್ನು ವೀಕ್ಷಿಸಲು ಅವಕಾಶ ನೀಡುತ್ತದೆ.
  • ಸೈನ್ಡ್ ಇಂಟೆಂಟ್ ಮತ್ತು ಕ್ಯೂಆರ್‌: ಸುರಕ್ಷತೆಯನ್ನು ಕಾಯ್ದುಕೊಳ್ಳುವ ಜೊತೆಗೆ ಪಾವತಿ ದೃಢೀಕರಣವನ್ನು ಸರಳಗೊಳಿಸುತ್ತದೆ.
  • ಯುಪಿಐ ಮ್ಯಾಂಡೇಟ್ಸ್: ಪೂರ್ವ-ಅನುಮೋದಿತ ಸೂಚನೆಗಳ ಮೂಲಕ ಮರುಕಳಿಸುವ ಪಾವತಿಗಳನ್ನು ಸಕ್ರಿಯಗೊಳಿಸುತ್ತದೆ.
  • ಓವರ್ಡ್ರಾಫ್ಟ್ ಖಾತೆ ಲಿಂಕ್ ಮಾಡುವುದು: ಬಳಕೆದಾರರು ತಮ್ಮ ಓವರ್‌ಡ್ರಾಫ್ಟ್ ಖಾತೆಗಳನ್ನು ಬಳಸಿ ಯುಪಿಐ ವಹಿವಾಟು ನಡೆಸಲು ಅನುವು ಮಾಡಿಕೊಡುತ್ತದೆ.

2019

  • ಗೊತ್ತುಪಡಿಸಿದ ಮಧ್ಯವರ್ತಿಗಳ ಮೂಲಕ ಐಪಿಒ ಗಳಿಗೆ ಅರ್ಜಿ ಸಲ್ಲಿಸುವಾಗ ಚಿಲ್ಲರೆ ಪ್ರತ್ಯೇಕ ಹೂಡಿಕೆದಾರರಿಗೆ ಯುಪಿಐ ಅನ್ನು ಪರ್ಯಾಯ ಪಾವತಿ ವ್ಯವಸ್ಥೆಯಾಗಿ ಬಳಸಲು ಸೆಬಿ ಅನುಮತಿಸಿತು.
  • ಅಕ್ಟೋಬರ್ 2019 ರಲ್ಲಿ ಯುಪಿಐ ತಿಂಗಳಿಗೆ ಒಂದು ಶತಕೋಟಿ (100 ಕೋಟಿ) ವಹಿವಾಟುಗಳ ಮೈಲಿಗಲ್ಲನ್ನು ದಾಟಿತು. ಇದು ದೇಶಾದ್ಯಂತ ಅದರ ವೇಗದ ಅಳವಡಿಕೆಯನ್ನು ಪ್ರತಿಬಿಂಬಿಸುತ್ತದೆ.

2020-2022

  • ಚಂದಾದಾರಿಕೆಗಳು, ಯುಟಿಲಿಟಿ ಬಿಲ್ಲುಗಳು, ವಿಮಾ ಕಂತುಗಳು, ಎಸ್‌ಐಪಿ ಗಳು ಮತ್ತು ಇಎಂಐಗಳಿಗಾಗಿ ಮರುಕಳಿಸುವ ಇ-ಮ್ಯಾಂಡೇಟ್‌ಗಳನ್ನು ಬೆಂಬಲಿಸಲು ಯುಪಿಐ ಆಟೋ ಪೈ ಅನ್ನು ಪ್ರಾರಂಭಿಸಲಾಯಿತು.
  • ಯುಪಿಐ 123ಪೇ ಪ್ರಾರಂಭಿಸುವ ಮೂಲಕ ಫೀಚರ್ ಫೋನ್ (ಸಾಮಾನ್ಯ ಬಟನ್ ಫೋನ್) ಬಳಕೆದಾರರನ್ನು ಡಿಜಿಟಲ್ ಪಾವತಿಗಳ ಪರಿಸರ ವ್ಯವಸ್ಥೆಗೆ ತರಲಾಯಿತು. ಇದು ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಂಖ್ಯೆ, ಅಪ್ಲಿಕೇಶನ್ ಆಧಾರಿತ ಕಾರ್ಯನಿರ್ವಹಣೆ, ಮಿಸ್ಡ್ ಕಾಲ್ ಆಧಾರಿತ ವಿಧಾನ ಮತ್ತು ಸಾಮೀಪ್ಯ ಧ್ವನಿ ಆಧಾರಿತ ಪಾವತಿಗಳ ಮೂಲಕ ವಹಿವಾಟು ನಡೆಸಲು ಅನುವು ಮಾಡಿಕೊಡುತ್ತದೆ.
  • ಕಡಿಮೆ ಮೌಲ್ಯದ ವಹಿವಾಟುಗಳನ್ನು ವೇಗವಾಗಿ ಮತ್ತು ಪಿನ್ ರಹಿತವಾಗಿ ಮಾಡಲು ಯುಪಿಐ ಲೈಟ್‌ ಅನ್ನು ಪರಿಚಯಿಸಲಾಯಿತು.
  • ಯುಪಿಐ ಜೊತೆಗೆ ಕ್ರೆಡಿಟ್ ಕಾರ್ಡ್‌ಗಳ ಸಂಯೋಜನೆಯು ಬಳಕೆದಾರರಿಗೆ ಡಿಜಿಟಲ್ ಪಾವತಿ ಆಯ್ಕೆಗಳನ್ನು ಮತ್ತಷ್ಟು ವಿಸ್ತರಿಸಿತು.
  • 2021-22ರ ಹಣಕಾಸು ವರ್ಷದಲ್ಲಿ, ಯುಪಿಐ US$1 ಟ್ರಿಲಿಯನ್‌ಗಿಂತಲೂ ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಿತು ಮತ್ತು ಮಾರ್ಚ್ 2022 ರಲ್ಲಿ ಮಾಸಿಕ 5 ಶತಕೋಟಿ (500 ಕೋಟಿ) ವಹಿವಾಟುಗಳನ್ನು ದಾಟಿತು.
  • ಇದು ಭೂತಾನ್‌ನಲ್ಲಿ ಪ್ರಾರಂಭವಾಗುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲೂ ವಿಸ್ತರಿಸಿತು, ಇದು ಅದರ ಮೊದಲ ಗಡಿ-ದಾಟಿದ ನಿಯೋಜನೆಯಾಗಿದೆ.

2023

  • 'ಕ್ರೆಡಿಟ್ ಲೈನ್ ಆನ್ ಯುಪಿಐ'ಅನ್ನು ಪರಿಚಯಿಸಲಾಯಿತು, ಇದು ಪೂರ್ವ-ಮಂಜೂರಾದ ಬ್ಯಾಂಕ್ ಕ್ರೆಡಿಟ್ ಲೈನ್‌ಗಳನ್ನು ಪಾವತಿ ಖಾತೆಯಾಗಿ ಲಿಂಕ್ ಮಾಡಲು ಅವಕಾಶ ನೀಡುತ್ತದೆ.
  • 2023-24ರ ಹಣಕಾಸು ವರ್ಷದಲ್ಲಿ ಭಾರತದ ಡಿಜಿಟಲ್ ಪಾವತಿ ವಹಿವಾಟುಗಳಲ್ಲಿ ಯುಪಿಐ ~70% ಪಾಲನ್ನು ಹೊಂದಿದೆ.

2024

  • ಯುಪಿಐ ಸರ್ಕಲ್‌ ಅನ್ನು ಪರಿಚಯಿಸಲಾಯಿತು, ಇದು ಪ್ರಾಥಮಿಕ ಬಳಕೆದಾರರ ಬ್ಯಾಂಕ್ ಖಾತೆಯಲ್ಲಿ ಪೂರ್ವನಿರ್ಧರಿತ ವಹಿವಾಟು ಮಿತಿಗಳೊಂದಿಗೆ ದ್ವಿತೀಯ ಬಳಕೆದಾರರನ್ನು ಅನುಮೋದಿಸಲು ಪ್ರಾಥಮಿಕ ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.
  • ತೆರಿಗೆ ಪಾವತಿಗಳಿಗಾಗಿ ಯುಪಿಐ ವಹಿವಾಟು ಮಿತಿಯನ್ನು ಆರ್‌ಬಿಐ ಪ್ರತಿ ವಹಿವಾಟಿಗೆ ₹1 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಿದೆ. ಕ್ಯಾಪಿಟಲ್ ಮಾರ್ಕೆಟ್‌ಗಳು, ಐಪಿಒ ಚಂದಾದಾರಿಕೆಗಳು, ಸಾಲ ವಸೂಲಾತಿ, ವಿಮೆ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಆಯ್ದ ವರ್ಗಗಳಿಗೂ ಹೆಚ್ಚಿನ ಮಿತಿಗಳು ಅನ್ವಯಿಸುತ್ತವೆ.
  • ಯುಪಿಐ 123Pay ನ ಪ್ರತಿ ವಹಿವಾಟಿನ ಮಿತಿಯನ್ನು ₹10,000 ಗೆ ಏರಿಸಲಾಯಿತು.
  • ಯುಪಿಐ ಲೈಟ್‌ ವ್ಯಾಲೆಟ್ ಮಿತಿಯನ್ನು ₹5,000 ಗೆ ಹೆಚ್ಚಿಸಲಾಯಿತು, ಮತ್ತು ಪ್ರತಿ ವಹಿವಾಟಿನ ಮಿತಿಯನ್ನು ₹1,000 ಗೆ ಏರಿಸಲಾಯಿತು.

2025

  • ಯುಪಿಐಗಾಗಿ 'ಆನ್-ಡಿವೈಸ್ ಆಥೆಂಟಿಕೇಶನ್' ಅನ್ನು ಪರಿಚಯಿಸಲಾಯಿತು, ಇದು ಸ್ಮಾರ್ಟ್‌ಫೋನ್ ಫಿಂಗರ್‌ಪ್ರಿಂಟ್ ಅಥವಾ ಫೇಸ್ ಅನ್‌ಲಾಕ್ ಮೂಲಕ ಪಾವತಿಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ.
  • ಆಧಾರ್ ಆಧಾರಿತ ಫೇಸ್ ಆಥೆಂಟಿಕೇಶನ್ ಯುಪಿಐ ಪಿನ್ ಹೊಂದಿಸುವ ಪ್ರಕ್ರಿಯೆಯನ್ನು ಸರಳಗೊಳಿಸಿತು, ವಿಶೇಷವಾಗಿ ಮೊದಲ ಬಾರಿಗೆ ಬಳಸುವವರಿಗೆ, ಹಿರಿಯ ನಾಗರಿಕರಿಗೆ ಮತ್ತು ಡೆಬಿಟ್ ಕಾರ್ಡ್‌ಗಳ ಸುಲಭ ಲಭ್ಯತೆ ಇಲ್ಲದವರಿಗೆ ಇದು ಸಹಕಾರಿಯಾಗಿದೆ.

ಇಂದಿನ ಯುಪಿಐ

ಯುಪಿಐ ವಹಿವಾಟಿನ ಪ್ರಮಾಣ ಮತ್ತು ಮೌಲ್ಯ ಎರಡರಲ್ಲೂ ಅಭೂತಪೂರ್ವ ಬೆಳವಣಿಗೆಗೆ ಸಾಕ್ಷಿಯಾಗಿದ್ದು, ಇದು ವ್ಯಕ್ತಿಗಳು, ವ್ಯಾಪಾರಗಳು ಮತ್ತು ಹಣಕಾಸು ಸಂಸ್ಥೆಗಳಿಂದ ವ್ಯಾಪಕವಾಗಿ ಅಳವಡಿಸಿಕೊಂಡಿರುವುದನ್ನು ಪ್ರತಿಬಿಂಬಿಸುತ್ತದೆ.

2016-17 ರ ಹಣಕಾಸು ವರ್ಷದಿಂದ 2025-26 ರ ಹಣಕಾಸು ವರ್ಷದವರೆಗೆ:

  • ವಾರ್ಷಿಕ ವಹಿವಾಟು ಪ್ರಮಾಣವು 2 ಕೋಟಿ ವಹಿವಾಟುಗಳಿಂದ 24,162 ಕೋಟಿಗೂ ಹೆಚ್ಚು ವಹಿವಾಟುಗಳಿಗೆ ಹೆಚ್ಚಾಗಿದೆ. ಇದು ಸುಮಾರು 12,000 ಪಟ್ಟು ಹೆಚ್ಚಳವನ್ನು ಪ್ರತಿನಿಧಿಸುತ್ತದೆ.
  • ವಾರ್ಷಿಕ ವಹಿವಾಟಿನ ಮೌಲ್ಯವು ₹0.07 ಲಕ್ಷ ಕೋಟಿಯಿಂದ ಸುಮಾರು ₹314 ಲಕ್ಷ ಕೋಟಿಗೆ ಬೆಳೆದಿದ್ದು, 4,000 ಕ್ಕೂ ಹೆಚ್ಚು ಪಟ್ಟು ಹೆಚ್ಚಳವನ್ನು ದಾಖಲಿಸಿದೆ.

ಯುಪಿಐ ಭಾರತದಲ್ಲಿ ಡಿಜಿಟಲ್ ಪಾವತಿಗಳ ಪ್ರಮಾಣ ಮತ್ತು ತಲುಪುವಿಕೆಯನ್ನು ಮರುರೂಪಿಸಿದೆ. ಜುಲೈ 2026 ರಲ್ಲಿ:

  • ಯುಪಿಐ ಪರಿಸರ ವ್ಯವಸ್ಥೆಯು 741 ಲೈವ್ ಬ್ಯಾಂಕ್‌ಗಳನ್ನು ಒಳಗೊಂಡಿದ್ದು, ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಾದ್ಯಂತ ಇದರ ವ್ಯಾಪಕ ಅಳವಡಿಕೆಯನ್ನು ತೋರಿಸುತ್ತದೆ.
  • ಯುಪಿಐ 2,365.8 ಕೋಟಿ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಿದೆ; ಮತ್ತು
  • ಒಟ್ಟು ವಹಿವಾಟು ಮೌಲ್ಯವು ₹29.87 ಲಕ್ಷ ಕೋಟಿಯಷ್ಟಿದೆ.

A person pointing at a graphAI-generated content may be incorrect.

ಯುಪಿಐನ ಜಾಗತಿಕ ಹೆಜ್ಜೆಗುರುತು

ಯುಪಿಐ ಜಾಗತಿಕವಾಗಿ ಮುಂಚೂಣಿಯಲ್ಲಿರುವ ನೈಜ-ಸಮಯದ (ರಿಯಲ್-ಟೈಮ್) ಪಾವತಿ ವ್ಯವಸ್ಥೆಯಾಗಿ ಹೊರಹೊಮ್ಮಿದೆ. 2024 ರ ವೇಳೆಗೆ, ಜಾಗತಿಕ ನೈಜ-ಸಮಯದ ಪಾವತಿ ವಹಿವಾಟಿನ ಪ್ರಮಾಣದಲ್ಲಿ ಯುಪಿಐ ~49% ಪಾಲನ್ನು ಹೊಂದಿದೆ. ಈ ಸಾಧನೆಯನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ ಜೂನ್ 2025 ರಲ್ಲಿ ಪ್ರಕಟಿಸಿದ "ಗ್ರೋಯಿಂಗ್ ರಿಟೇಲ್ ಡಿಜಿಟಲ್ ಪೇಮೆಂಟ್ಸ್: ದಿ ವ್ಯಾಲ್ಯೂ ಆಫ್ ಇಂಟರೊಪರೇಬಿಲಿಟಿ" ವರದಿಯಲ್ಲಿ ಎತ್ತಿಹಿಡಿಯಲಾಗಿದೆ.

A diagram of a companyAI-generated content may be incorrect.

ಯುಪಿಐನ ಜಾಗತಿಕ ಹೆಜ್ಜೆಗುರುತು ವಿಸ್ತರಿಸುತ್ತಲೇ ಇದೆ

ಯುಪಿಐ ಪ್ರಸ್ತುತ ಭೂತಾನ್, ನೇಪಾಳ, ಸಿಂಗಾಪುರ, ಯುಎಇ, ಫ್ರಾನ್ಸ್, ಶ್ರೀಲಂಕಾ, ಮಾರಿಷಸ್ ಮತ್ತು ಖತಾರ್ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸುಗಮವಾದ ಗಡಿ-ದಾಟಿದ ಡಿಜಿಟಲ್ ಪಾವತಿಗಳನ್ನು ಸಕ್ರಿಯಗೊಳಿಸಿದೆ.

  • ಜೂನ್ 2026 ರಲ್ಲಿ, ಎನ್‌ಪಿಸಿಐ ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ ಕಾಂಬೋಡಿಯಾದಲ್ಲಿ ಯುಪಿಐ ಸ್ವೀಕಾರವನ್ನು ಪ್ರಾರಂಭಿಸಲು ಎಸಿಎಲ್‌ಇಡಿಎ ಬ್ಯಾಂಕ್ ಪಿಎಲ್‌ಸಿ. ಜೊತೆಗೆ ಪಾಲುದಾರಿಕೆ ಮಾಡಿಕೊಂಡಿತು, ಇದು ಭಾರತದ ಗಡಿ-ದಾಟಿದ ಡಿಜಿಟಲ್ ಪಾವತಿ ಸಂಪರ್ಕವನ್ನು ಮತ್ತಷ್ಟು ಬಲಪಡಿಸಿತು.
  • ಜೂನ್ 2026 ರಲ್ಲಿ, ಗಡಿ-ದಾಟಿದ ಹಣ ರವಾನೆಗಾಗಿ ಗ್ರೀಸ್‌ನಲ್ಲಿ ಯುಪಿಐ ಲೈವ್ ಆಯಿತು. ಇಲ್ಲಿ ಅರ್ಹ ಗ್ರಾಹಕರು ಗ್ರೀಸ್ – ಭಾರತ ನಡುವೆ (ಯೂರೋಬ್ಯಾಂಕ್ ಮೂಲಕ) ತಕ್ಷಣವೇ, ಸುರಕ್ಷಿತವಾಗಿ ಮತ್ತು ಸುಲಭವಾಗಿ ಹಣವನ್ನು ವರ್ಗಾಯಿಸಬಹುದು.
  • 30 ಜುಲೈ 2026 ರಂದು, ಮಾಲ್ಡೀವ್ಸ್‌ನ ತತ್ಕ್ಷಣದ ಪಾವತಿ ವ್ಯವಸ್ಥೆಯಾದ 'ಫವಾರ' ಮತ್ತು ಭಾರತದ ಯುಪಿಐ ನಡುವೆ ಗಡಿ-ದಾಟಿದ ಹಣ ರವಾನೆ ಪ್ರಕ್ರಿಯೆಯು ಲೈವ್ ಆಯಿತು. ಇದು ಮಾಲ್ಡೀವ್ಸ್ ಮತ್ತು ಭಾರತದ ನಡುವಿನ ಗಡಿ-ದಾಟಿದ ಡಿಜಿಟಲ್ ಹಣಕಾಸು ಸಂಪರ್ಕ ಮತ್ತು ದ್ವಿಪಕ್ಷೀಯ ಆರ್ಥಿಕ ಸಹಕಾರದಲ್ಲಿ ಕ್ರಾಂತಿಕಾರಿ ಮೈಲಿಗಲ್ಲಾಗಿದೆ.
  • ಇಂದಿನ ದಿನಾಂಕದ ವೇಳೆಗೆ, ಯುಪಿಐ ಸ್ವೀಕಾರ ಮತ್ತು/ಅಥವಾ ಗಡಿ-ದಾಟಿದ ಹಣ ರವಾನೆಗಾಗಿ 11 ವಿದೇಶಗಳಲ್ಲಿ ಯುಪಿಐ ಸಕ್ರಿಯವಾಗಿದೆ.

ಡಿಜಿಟಲ್ ರೂಪಾಂತರದ ಒಂದು ದಶಕ

ಡಿಜಿಟಲ್ ಪಾವತಿಗಳನ್ನು ಸರಳ, ಸುರಕ್ಷಿತ ಮತ್ತು ಅಂತರ್‌ಸಂಪರ್ಕಿತಗೊಳಿಸುವ ಮೂಲಕ ಯುಪಿಐ ಭಾರತವು ವಹಿವಾಟು ನಡೆಸುವ ರೀತಿಯನ್ನೇ ಮರುರೂಪಿಸಿದೆ. ಇದರ ವೇಗದ ಅಳವಡಿಕೆ, ನಿರಂತರ ನಾವೀನ್ಯತೆ ಮತ್ತು ವಿಸ್ತರಿಸುತ್ತಿರುವ ಜಾಗತಿಕ ಉಪಸ್ಥಿತಿಯು ಯುಪಿಐ ಅನ್ನು ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಪ್ರಮುಖ ಘಟಕವನ್ನಾಗಿ ಮಾಡಿದೆ.

References

 

Ministry of Electronics & Information Technology

https://www.digitalindia.gov.in/initiative/unified-payment-interface-upi/

https://www.digitalindia.gov.in/growth-story/

https://www.digitalindia.gov.in/initiative/upi-123pay/

 

Ministry of Finance

https://www.pib.gov.in/PressReleasePage.aspx?PRID=1735075&reg=48&lang=2

https://www.pib.gov.in/PressReleaseIframePage.aspx?PRID=1810601&lang=2&reg=48

http://pib.gov.in/PressReleasePage.aspx?PRID=2110407&reg=48&lang=2

https://www.pib.gov.in/PressReleasePage.aspx?PRID=2088182&lang=1&reg=3

https://www.pib.gov.in/PressReleasePage.aspx?PRID=2257087&lang=1&reg=3

https://www.pib.gov.in/PressReleasePage.aspx?PRID=2200569&reg=48&lang=2

https://www.pib.gov.in/PressReleasePage.aspx?PRID=2268591&reg=3&lang=1

https://www.pib.gov.in/PressReleasePage.aspx?PRID=2279646&reg=3&lang=1

https://www.pib.gov.in/PressReleasePage.aspx?PRID=2292288&reg=48&lang=2

 

National Payments Corporation of India (NPCI)

https://www.bhimupi.org.in/about-bhim.html

https://www.bhimupi.org.in/upi2.html

https://www.bhimupi.org.in/upiautopay.html

https://www.npci.org.in/product/upi/product-statistics

https://www.npci.org.in/product/upi/upi-lite

https://www.npci.org.in/product/upi-circle

https://www.npci.org.in/uploads/DFS_Secretary_Launches_Initiatives_to_Simplify_Digital_Payment_Experience_at_GFF_2025_c74afc4dd6.pdf

 

Ministry of Drinking Water & Sanitation

https://www.pib.gov.in/PressReleasePage.aspx?PRID=1479881&reg=48&lang=2

 

RBI

https://rbi.org.in/scripts/BS_SpeechesView.aspx?Id=1034

https://rbi.org.in/scripts/BS_SpeechesView.aspx?Id=1327

https://www.rbi.org.in/Scripts/NotificationUser.aspx?Id=12532&Mode=0

https://rbi.org.in/scripts/BS_PressReleaseDisplay.aspx?prid=58449

https://rbidocs.rbi.org.in/rdocs/Speeches/PDFs/UPI170820182C164878486345FFBEC7D7A55B7B7892.PDF

 

Others

https://www.kotak.bank.in/en/stories-in-focus/accounts-deposits/current-account/what-is-upi-and-upi-full-form.html

https://www.bseindia.com/static/publicissues/unified-interface

https://razorpay.com/blog/what-is-upi-autopay-recurring-payments-razorpay-subscriptions/

https://bankingfrontiers.com/npci-launches-upi-platform-based-qr-codes/

Click here to see PDF

 

*****

(तथ्य सामग्री आईडी: 150967) आगंतुक पटल : 13


Provide suggestions / comments
इस विश्लेषक को इन भाषाओं में पढ़ें : English , Urdu , Bengali , Telugu , हिन्दी , Telugu_Vw , Malayalam