Infrastructure

ಸಮಯದ ಉಳಿತಾಯ, ಪ್ರಯಾಣದ ಅವಧಿ ಕಡಿತ

प्रविष्टि तिथि: 05 OCT 2026 12:37 PM

ಭಾರತದ ಮೂಲಸೌಕರ್ಯ ಸ್ಥಳಗಳನ್ನು ಹೇಗೆ ಹತ್ತಿರ ತರುತ್ತಿದೆ

 

ಸಮಯದ ಉಳಿತಾಯದ ಮೂಲಕ ಅಳೆಯಲಾಗುತ್ತಿರುವ ಸಂಪರ್ಕ ಜಾಲ

ಲಕ್ಷಾಂತರ ಪ್ರಯಾಣಿಕರಿಗೆ, ಉತ್ತಮ ಸಂಪರ್ಕ ಎಂದರೆ ಕೇವಲ ನಿರ್ಮಿಸಲಾದ ಕಿಲೋಮೀಟರ್‌ಗಳಷ್ಟೇ ಅಲ್ಲ, ಉಳಿತಾಯವಾದ ಸಮಯದ ಆಧಾರದ ಮೇಲೆ ಅಳೆಯಲ್ಪಡುತ್ತದೆ. ಭಾರತದಾದ್ಯಂತ, ಹೊಸ ಸೇತುವೆಗಳು, ಸುರಂಗಗಳು, ಎಕ್ಸ್‌ಪ್ರೆಸ್‌ವೇಗಳು ಮತ್ತು ರೈಲು ಸೇವೆಗಳು ನಗರಗಳು, ಪ್ರದೇಶಗಳು ಮತ್ತು ಸಮುದಾಯಗಳ ನಡುವಿನ ಪ್ರಯಾಣದ ಅವಧಿಯನ್ನು ಬದಲಾಯಿಸುತ್ತಿವೆ. ಸುತ್ತುಬಳಸಿನ ರಸ್ತೆಗಳು, ಕಠಿಣ ಭೂಪ್ರದೇಶಗಳು ಮತ್ತು ನಿಧಾನಗತಿಯ ಮಾರ್ಗಗಳ ಬದಲಿಗೆ ನೇರ ಮತ್ತು ವೇಗದ ಸಂಪರ್ಕಗಳನ್ನು ಒದಗಿಸುವ ಮೂಲಕ, ಈ ಯೋಜನೆಗಳು ಮೂಲಸೌಕರ್ಯ ಆಧಾರಿತ ಪರಿವರ್ತನೆಯನ್ನು ದೈನಂದಿನ ಪ್ರಯಾಣದಲ್ಲಿ ಸ್ಪಷ್ಟವಾಗಿ ಕಾಣುವಂತೆ ಮಾಡುತ್ತಿವೆ. ದೇಶದ ಹೆಚ್ಚು ಹೆಚ್ಚು ಭಾಗಗಳಿಗೆ ವೇಗದ ಸಂಪರ್ಕಗಳು ತಲುಪುತ್ತಿದ್ದಂತೆ, ದೈನಂದಿನ ಸಂಚಾರಕ್ಕೆ ದೂರವು ಇನ್ನು ಮುಂದೆ ಅಡೆತಡೆಯಾಗುತ್ತಿಲ್ಲ.

ಸೇತುವೆಗಳು: ಅಡೆತಡೆಗಳನ್ನು ದಾಟಿ, ಪ್ರಯಾಣದ ಸಮಯಕ್ಕೆ ಕಡಿತ

ಸೇತುವೆಗಳು ದೈನಂದಿನ ಪ್ರಯಾಣದಿಂದ ದೀರ್ಘ ಮತ್ತು ನಿಧಾನಗತಿಯ ನದಿ ದಾಟುವಿಕೆಗಳನ್ನು ಹೊರತುಪಡಿಸುತ್ತಿದ್ದು, ಒಮ್ಮೆ ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದ್ದ ಪ್ರಯಾಣವನ್ನು ಅತ್ಯಂತ ಕಡಿಮೆ ಅವಧಿಯ ಸಂಚಾರವನ್ನಾಗಿ ಪರಿವರ್ತಿಸುತ್ತಿವೆ.

  • ಭೂಪೇನ್ ಹಜಾರಿಕಾ ಸೇತು / ಧೋಲಾ-ಸದಿಯಾ ಸೇತುವೆ, ಅಸ್ಸಾಂ-ಅರುಣಾಚಲ ಪ್ರದೇಶ (ಮೇ, 2017)

6 ಗಂಟೆಗಳು → 1 ಗಂಟೆ

ಅಸ್ಸಾಂನ ರೂಪಾಯಿ ಮತ್ತು ಅರುಣಾಚಲ ಪ್ರದೇಶದ ಮೇಕಾ/ರೋಯಿಂಗ್ ನಡುವಿನ ಪ್ರಯಾಣದ ಅವಧಿಯು ಆರು ಗಂಟೆಗಳಿಂದ ಒಂದು ಗಂಟೆಗೆ ಇಳಿಕೆಯಾಗಿದ್ದು, 5 ಗಂಟೆಗಳ ಸಮಯ ಉಳಿತಾಯವಾಗಿದೆ.

  • ಬೋಗಿಬೀಲ್ ಸೇತುವೆ, ಅಸ್ಸಾಂ (ಡಿಸೆಂಬರ್, 2018)

ಇಡೀ ದಿನದ ಪ್ರಯಾಣ → 1-2 ಗಂಟೆಗಳು

ಬ್ರಹ್ಮಪುತ್ರ ನದಿಯ ಮೇಲಿನ ಈ ರಸ್ತೆ-ಸಹ-ರೈಲು ಸೇತುವೆಯು ಧೇಮಾಜಿ ಮತ್ತು ದಿಬ್ರೂಗಢ ನಡುವಿನ ಸಂಪರ್ಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಮೊದಲು ಬಹುತೇಕ ಇಡೀ ದಿನ ತೆಗೆದುಕೊಳ್ಳುತ್ತಿದ್ದ ಪ್ರಯಾಣವು ಈಗ ಸುಮಾರು ಒಂದರಿಂದ ಎರಡು ಗಂಟೆಗಳಲ್ಲಿ ಪೂರ್ಣಗೊಳ್ಳುತ್ತದೆ.

  • ಅಟಲ್ ಸೇತು, ಮಹಾರಾಷ್ಟ್ರ (ಜನವರಿ, 2024)

2 ಗಂಟೆಗಳು → 20 ನಿಮಿಷಗಳು

ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್, ಮುಂಬೈ ಮತ್ತು ನವಿ ಮುಂಬೈ ನಡುವೆ ನೇರ ಸಂಪರ್ಕವನ್ನು ಒದಗಿಸುತ್ತಿದ್ದು, ಪ್ರಯಾಣದ ಅವಧಿಯನ್ನು ಸುಮಾರು 20 ನಿಮಿಷಗಳಿಗೆ ಕಡಿತಗೊಳಿಸಿದೆ.

  • ಕೋಸಿ ರೈಲ್ ಮಹಾಸೇತು, ಬಿಹಾರ (ಸೆಪ್ಟೆಂಬರ್, 2020)

8 ಗಂಟೆಗಳು → 30 ನಿಮಿಷಗಳು

ಕೋಸಿ ರೈಲ್ ಮಹಾಸೇತು ನಿರ್ಮಾಣದಿಂದ ನಿರ್ಮಲಿ ಮತ್ತು ಸರಾಯ್‌‌ಗಢ ನಡುವಿನ ರೈಲು ಪ್ರಯಾಣದ ಸಮಯವು ಸುಮಾರು ಎಂಟು ಗಂಟೆಗಳಿಂದ 30 ನಿಮಿಷಕ್ಕೆ ಇಳಿಕೆಯಾಗಿದೆ ಹಾಗೂ ದೂರವು ಸುಮಾರು 300 ಕಿ.ಮೀ ನಿಂದ 22 ಕಿ.ಮೀ ಗೆ ಕಡಿಮೆಯಾಗಿದೆ.

  • ಸಿಸ್ಸೇರಿ ನದಿ ಸೇತುವೆ, ಅರುಣಾಚಲ ಪ್ರದೇಶ (ನವೆಂಬರ್, 2019)

ಸುಮಾರು 5 ಗಂಟೆಗಳ ಸಮಯ ಉಳಿತಾಯ

200 ಮೀಟರ್ ಉದ್ದದ ಸಿಸ್ಸೇರಿ ನದಿ ಸೇತುವೆಯು ಪಾಸಿಘಾಟ್ ಮತ್ತು ರೋಯಿಂಗ್ ನಡುವಿನ ಪ್ರಯಾಣದ ಸಮಯವನ್ನು ಸುಮಾರು ಐದು ಗಂಟೆಗಳಷ್ಟು ಕಡಿಮೆ ಮಾಡಿದೆ, ಜೊತೆಗೆ ದಿಬಾಂಗ್ ವ್ಯಾಲಿ ಮತ್ತು ಸಿಯಾಂಗ್ ನಡುವಿನ ಸಂಪರ್ಕವನ್ನು ಬಲಪಡಿಸಿದೆ.

ಸುರಂಗಗಳು: ಕಠಿಣ ಭೂಪ್ರದೇಶಗಳನ್ನು ಸೀಳಿ ಸಮಯದ ಉಳಿತಾಯ

ಸುರಂಗಗಳು ಭಾರತದ ಅತ್ಯಂತ ಕಠಿಣ ಭೂಪ್ರದೇಶಗಳ ಮೂಲಕ ಅತ್ಯಂತ ಹತ್ತಿರದ ಮಾರ್ಗವನ್ನು ಕಲ್ಪಿಸುತ್ತಿವೆ. ಪರ್ವತಗಳು, ಅಂಕುಡೊಂಕಾದ ರಸ್ತೆಗಳು ಮತ್ತು ಅಪಾಯಕಾರಿ ಮಾರ್ಗಗಳನ್ನು ಬೈಪಾಸ್ ಮಾಡುವ ಮೂಲಕ, ಇವು ಪ್ರಯಾಣದ ಸಮಯವನ್ನು ತಗ್ಗಿಸುವುದರ ಜೊತೆಗೆ ಪ್ರಯಾಣವನ್ನು ಸುಗಮಗೊಳಿಸುತ್ತಿವೆ.

  • ಅಟಲ್ ಸುರಂಗ, ಹಿಮಾಚಲ ಪ್ರದೇಶ (ಅಕ್ಟೋಬರ್, 2020)

4–5 ಗಂಟೆಗಳ ಸಮಯ ಉಳಿತಾಯ

9.02 ಕಿ.ಮೀ ಉದ್ದದ ಈ ಸುರಂಗವು ರೋಹ್ತಂಗ್ ಪಾಸ್ ಅನ್ನು ಬೈಪಾಸ್ ಮಾಡಲಿದ್ದು, ಮನಾಲಿ ಮತ್ತು ಸರ್ಚು ನಡುವಿನ ದೂರವನ್ನು 46 ಕಿ.ಮೀ ನಷ್ಟು ಕಡಿಮೆ ಮಾಡುತ್ತದೆ. ಜೊತೆಗೆ ಲಾಹಾಲ್-ಸ್ಪಿತಿಗೆ ಎಲ್ಲಾ ಹವಾಮಾನಗಳಲ್ಲೂ ಸಂಪರ್ಕವನ್ನು ಒದಗಿಸುತ್ತದೆ.

  • ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಸುರಂಗ, ಜಮ್ಮು ಮತ್ತು ಕಾಶ್ಮೀರ (ಏಪ್ರಿಲ್, 2017)

ಸಮೀಪದ 2 ಗಂಟೆಗಳ ಸಮಯ ಉಳಿತಾಯ

9 ಕಿ.ಮೀ ಉದ್ದದ ಈ ಸುರಂಗವು ಕಠಿಣ ಭೂಪ್ರದೇಶವನ್ನು ಬೈಪಾಸ್ ಮಾಡುವ ಮೂಲಕ, ಪ್ರಯಾಣದ ದೂರವನ್ನು ಸುಮಾರು 30 ಕಿ.ಮೀ ನಷ್ಟು ಕಡಿತಗೊಳಿಸುತ್ತದೆ ಮತ್ತು ಜಮ್ಮು ಹಾಗೂ ಶ್ರೀನಗರ ನಡುವಿನ ಪ್ರಯಾಣದ ಅವಧಿಯನ್ನು ಸುಮಾರು ಎರಡು ಗಂಟೆಗಳಷ್ಟು ಕಡಿಮೆ ಮಾಡುತ್ತದೆ.

  • ಬನಿಹಾಲ್-ಖಾಜಿಗುಂಡ್ ರಸ್ತೆ ಸುರಂಗ, ಜಮ್ಮು ಮತ್ತು ಕಾಶ್ಮೀರ (ಏಪ್ರಿಲ್, 2022)

1.5 ಗಂಟೆಗಳ ಸಮಯ ಉಳಿತಾಯ

8.45 ಕಿ.ಮೀ ಉದ್ದದ ಅವಳಿ-ಟ್ಯೂಬ್ ಸುರಂಗವು ರಸ್ತೆ ಮಾರ್ಗದ ದೂರವನ್ನು 16 ಕಿ.ಮೀ นಷ್ಟು ಕಡಿತಗೊಳಿಸುತ್ತದೆ ಹಾಗೂ ಪ್ರಯಾಣದ ಸಮಯವನ್ನು ಸುಮಾರು ಒಂದೂವರೆ ಗಂಟೆಯಷ್ಟು ತಗ್ಗಿಸುತ್ತದೆ.

  • ಸೆಲಾ ಸುರಂಗ, ಅರುಣಾಚಲ ಪ್ರದೇಶ (ಮಾರ್ಚ್, 2024)

ಪ್ರಯಾಣದ ಅವಧಿಯಲ್ಲಿ 1 ಗಂಟೆಗೂ ಹೆಚ್ಚು ಕಡಿತ

ಸುಮಾರು 13,000 ಅಡಿ ಎತ್ತರದಲ್ಲಿ ನಿರ್ಮಿಸಲಾಗಿರುವ ಈ ಸುರಂಗವು, ಸಮರತಾಂತ್ರಿಕವಾಗಿ ಅತ್ಯಂತ ಪ್ರಮುಖವಾಗಿರುವ ತೇಜ್‌ಪುರ-ತವಾಂಗ್ ಮಾರ್ಗದಲ್ಲಿ ಎಲ್ಲಾ ಹವಾಮಾನಗಳಲ್ಲೂ ಸುಗಮ ಸಂಚಾರವನ್ನು ಖಚಿತಪಡಿಸುತ್ತದೆ.

 

ಎಕ್ಸ್‌ಪ್ರೆಸ್‌ವೇಗಳು ಮತ್ತು ಆರ್ಥಿಕ ಕಾರಿಡಾರ್‌ಗಳು

ಎಕ್ಸ್‌ಪ್ರೆಸ್‌ವೇಗಳು ಕಿರು ಮಾರ್ಗಗಳು, ನಿಯಂತ್ರಿತ ಪ್ರವೇಶ ಮತ್ತು ಹೆಚ್ಚಿನ ವೇಗದ ಸಂಚಾರದ ಮೂಲಕ ನಗರಗಳ ನಡುವಿನ ಪ್ರಯಾಣದ ವೇಗವನ್ನು ಬದಲಾಯಿಸುತ್ತಿವೆ. ಒಮ್ಮೆ ಹಲವು ಗಂಟೆಗಳನ್ನು ತೆಗೆದುಕೊಳ್ಳುತ್ತಿದ್ದ ದೀರ್ಘ ಪ್ರಯಾಣಗಳು ಈಗ ಅತ್ಯಂತ ವೇಗದ ರಸ್ತೆ ಸಂಚಾರವಾಗಿ ಪರಿವರ್ತನೆಗೊಳ್ಳುತ್ತಿವೆ.

 

  • ದೆಹಲಿ-ಮೀರತ್ ಎಕ್ಸ್‌ಪ್ರೆಸ್‌‌ವೇ (2021)

2.5 ಗಂಟೆಗಳು → 50 ನಿಮಿಷಗಳು

82 ಕಿ.ಮೀ ಉದ್ದದ ಈ ಯೋಜನೆಯು ದೆಹಲಿ ಮತ್ತು ಮೀರತ್ ನಡುವಿನ ಪ್ರಯಾಣದ ಅವಧಿಯನ್ನು ಸುಮಾರು ಎರಡೂವರೆ ಗಂಟೆಗಳಿಂದ 50 ನಿಮಿಷಗಳಿಗೆ ಕಡಿತಗೊಳಿಸಿದೆ.

  • ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ (ಮಾರ್ಚ್, 2023)

3 ಗಂಟೆಗಳು → 75 ನಿಮಿಷಗಳು

118 ಕಿ.ಮೀ ಉದ್ದದ ಈ ಎಕ್ಸ್‌ಪ್ರೆಸ್‌ವೇ ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನು ಸುಮಾರು ಮೂರು ಗಂಟೆಗಳಿಂದ 75 ನಿಮಿಷಗಳಿಗೆ ತಗ್ಗಿಸಿದೆ.

  • ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ (ಏಪ್ರಿಲ್, 2026)

6 ಗಂಟೆಗಳು → 2.5 ಗಂಟೆಗಳು

213 ಕಿ.ಮೀ ಉದ್ದದ ಈ ಪ್ರವೇಶ-ನಿಯಂತ್ರಿತ ಕಾರಿಡಾರ್ ದೆಹಲಿ ಮತ್ತು ಡೆಹ್ರಾಡೂನ್ ನಡುವಿನ ಪ್ರಯಾಣದ ಸಮಯವನ್ನು ಆರು ಗಂಟೆಗಿಂತ ಹೆಚ್ಚು ಅವಧಿಯಿಂದ ಸುಮಾರು ಎರಡೂವರೆ ಗಂಟೆಗಳಿಗೆ ಇಳಿಸಿದೆ.

  • ಮುಂಬೈ-ನಾಗಪುರ ಸಮೃದ್ಧಿ ಮಹಾಮಾರ್ಗ (ಡಿಸೆಂಬರ್, 2022)

16 ಗಂಟೆಗಳು → 8 ಗಂಟೆಗಳು

701 ಕಿ.ಮೀ ಉದ್ದದ ಈ ಪ್ರವೇಶ-ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಮುಂಬೈ ಮತ್ತು ನಾಗಪುರ ನಡುವಿನ ಪ್ರಯಾಣದ ಅವಧಿಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ.

  • ಅಹಮದಾಬಾದ್-ಧೋಲೇರಾ ಎಕ್ಸ್‌ಪ್ರೆಸ್‌ವೇ (ಮಾರ್ಚ್, 2026)

ಅಹಮದಾಬಾದ್-ಧೋಲೇರಾ: 100 ಕಿ.ಮೀ ಮತ್ತು 2 ಗಂಟೆ 15 ನಿಮಿಷಗಳಿಂದ → 83 ಕಿ.ಮೀ ಮತ್ತು 45 ನಿಮಿಷಗಳಿಗೆ

ಅಹಮದಾಬಾದ್‌ನಿಂದ ಭಾವನಗರ: 169 ಕಿ.ಮೀ ಮತ್ತು 3 ಗಂಟೆ 15 ನಿಮಿಷಗಳಿಂದ → 141 ಕಿ.ಮೀ ಮತ್ತು 1 ಗಂಟೆ 45 ನಿಮಿಷಗಳಿಗೆ

109 ಕಿ.ಮೀ ಗೂ ಹೆಚ್ಚು ಉದ್ದದ ಈ ಪ್ರವೇಶ-ನಿಯಂತ್ರಿತ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಅಹಮದಾಬಾದ್ ಮತ್ತು ಧೋಲೇರಾ ನಡುವೆ ಹೈ-ಸ್ಪೀಡ್ ಲಿಂಕ್ ಅನ್ನು ಒದಗಿಸುತ್ತದೆ.

  • ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇ (ಹಂತ-1- ಜುಲೈ, 2026)

ದೆಹಲಿ-ಅಮೃತಸರ: 8 ಗಂಟೆಗಳು → 4 ಗಂಟೆಗಳು

ದೆಹಲಿ-ಕತ್ರಾ: 14 ಗಂಟೆಗಳು → 6 ಗಂಟೆಗಳು

ಶ್ರೀ ಮಾತಾ ವೈಷ್ಣೋದೇವಿ ಕ್ಷೇತ್ರಕ್ಕೆ ತೆರಳುವ ಯಾತ್ರಿಕರು ಮತ್ತು ಪ್ರವಾಸಿಗರ ಸಂಚಾರವನ್ನು ಉತ್ತೇಜಿಸಲು ಹಾಗೂ ಈ ಕಾರಿಡಾರ್ ಉದ್ದಕ್ಕೂ ಕೈಗಾರಿಕಾ ಮತ್ತು ಲಾಜಿಸ್ಟಿಕ್ಸ್ ಅಭಿವೃದ್ಧಿಯನ್ನು ವೇಗಗೊಳಿಸಲು ಈ ಎಕ್ಸ್‌ಪ್ರೆಸ್‌ವೇ ಅಭಿವೃದ್ಧಿಪಡಿಸಲಾಗುತ್ತಿದೆ.

  • ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ

33 ಗಂಟೆಗಳು → 12 ಗಂಟೆಗಳು

ದೆಹಲಿ ಮತ್ತು ಮುಂಬೈ ನಡುವಿನ ಪ್ರಯಾಣದ ಸಮಯವನ್ನು ಸುಮಾರು 33 ಗಂಟೆಗಳಿಂದ 12 ಗಂಟೆಗಳಿಗೆ ತಗ್ಗಿಸಲು ಈ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಅಭಿವೃದ್ಧಿಪಡಿಸಲಾಗುತ್ತಿದೆ.

 

ರೈಲ್ವೆ: ವೇಗವಾದ ರೈಲುಗಳು, ಕಡಿತಗೊಂಡ ಪ್ರಯಾಣದ ಅವಧಿ

ಹೊಸ ಪೀಳಿಗೆಯ ರೈಲುಗಳು ಮತ್ತು ಮೀಸಲಾದ ಹೈ-ಸ್ಪೀಡ್ ಕಾರಿಡಾರ್‌ಗಳು ರೈಲು ಪ್ರಯಾಣದಲ್ಲಿ ಮಹತ್ತರವಾದ ಸಮಯದ ಉಳಿತಾಯವನ್ನು ತರುತ್ತಿವೆ. 2026 ರ ರೈಲ್ವೆ ವೇಳಾಪಟ್ಟಿಯು ಈ ಬದಲಾವಣೆಯನ್ನು ಪ್ರತಿಬಿಂಬಿಸುತ್ತಿದ್ದು, ಸಮಗ್ರ ಜಾಲದಾದ್ಯಂತ 549 ರೈಲುಗಳ ವೇಗವನ್ನು ಹೆಚ್ಚಿಸಲಾಗಿದೆ. ಇವುಗಳಲ್ಲಿ, 20 ರೈಲುಗಳ ಪ್ರಯಾಣದ ಅವಧಿಯು 60 ನಿಮಿಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯದಷ್ಟು ವೇಗವಾಗಿದೆ. ಇನ್ನಿತರ 48 ರೈಲುಗಳು 31–59 ನಿಮಿಷಗಳಷ್ಟು ಸಮಯವನ್ನು ಉಳಿಸಿದರೆ, 105 ರೈಲುಗಳು 16–30 ನಿಮಿಷಗಳಷ್ಟು ವೇಗವನ್ನು ಪಡೆದುಕೊಂಡಿವೆ. ಇನ್ನುಳಿದ 376 ರೈಲುಗಳ ಸಂಚಾರದ ಅವಧಿಯನ್ನು 5–15 ನಿಮಿಷಗಳಷ್ಟು ಹೆಚ್ಚಿಸಲಾಗಿದೆ.

ಹೊಸ ಪೀಳಿಗೆಯ ರೈಲುಗಳು

 

  • ವಂದೇ ಭಾರತ್ ಎಕ್ಸ್‌ಪ್ರೆಸ್, ನವದೆಹಲಿ-ವಾರಾಣಸಿ (ಫೆಬ್ರವರಿ, 2019)

ಹಿಂದಿನ ಸೇವೆಗಳಿಗಿಂತ 40–50% ರಷ್ಟು ವೇಗ

ಭಾರತದ ಮೊದಲ ವಂದೇ ಭಾರತ್ ರೈಲನ್ನು 15 ಫೆಬ್ರವರಿ 2019 ರಂದು ನವದೆಹಲಿ-ಕಾನ್ಪುರ-ಪ್ರಯಾಗ್‌ರಾಜ್-ವಾರಾಣಸಿ ಕಾರಿಡಾರ್‌ನಲ್ಲಿ ಪ್ರಾರಂಭಿಸಲಾಯಿತು. ನವದೆಹಲಿ ಮತ್ತು ವಾರಾಣಸಿ ನಡುವಿನ ನಿಗದಿತ ಪ್ರಯಾಣದ ಅವಧಿಯು ಸುಮಾರು ಎಂಟು ಗಂಟೆಗಳಾಗಿದ್ದು, ಈ ಮಾರ್ಗದ ಹಿಂದಿನ ಸೇವೆಗಳಿಗಿಂತ ಇದು ಸುಮಾರು 40-50% ರಷ್ಟು ವೇಗವಾಗಿದೆ.

  • ವಂದೇ ಭಾರತ್ ಎಕ್ಸ್‌ಪ್ರೆಸ್, ಕತ್ರಾ-ಶ್ರೀನಗರ (ಜೂನ್, 2025)

2–3 ಗಂಟೆಗಳ ಸಮಯ ಉಳಿತಾಯ

ಈ ರೈಲು ಕತ್ರಾ-ಶ್ರೀನಗರ ನಡುವಿನ ಪ್ರಯಾಣದ ಅವಧಿಯನ್ನು ಸುಮಾರು ಮೂರು ಗಂಟೆಗಳಿಗೆ ಕಡಿತಗೊಳಿಸಿದೆ. ವಿಸ್ತರಿಸಲಾದ ಜಮ್ಮು-ಶ್ರೀನಗರ ಸೇವೆಯು ಈಗ 4 ಗಂಟೆ 50 ನಿಮಿಷಗಳಲ್ಲಿ ಈ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ.

  • ವಂದೇ ಭಾರತ್ ಎಕ್ಸ್‌ಪ್ರೆಸ್, ಬನಾರಸ್-ಖಜುರಾಹೊ (ನವೆಂಬರ್, 2025)

-2 ಗಂಟೆ 40 ನಿಮಿಷಗಳ ಸಮಯ ಉಳಿತಾಯ

ಈ ಹಿಂದೆ ಸಂಚರಿಸುತ್ತಿದ್ದ ವಿಶೇಷ ರೈಲುಗಳಿಗೆ ಹೋಲಿಸಿದರೆ ಈ ರೈಲು ಸುಮಾರು 2 ಗಂಟೆ 40 ನಿಮಿಷಗಳ ಸಮಯವನ್ನು ಉಳಿಸುತ್ತದೆ.

  • ವಂದೇ ಭಾರತ್ ಎಕ್ಸ್‌ಪ್ರೆಸ್, ಎರ್ನಾಕುಲಂ-ಬೆಂಗಳೂರು (ನವೆಂಬರ್, 2025)

2 ಗಂಟೆಗೂ ಹೆಚ್ಚು ಸಮಯ ಉಳಿತಾಯ

ಈ ಸೇವೆಯು 8 ಗಂಟೆ 40 ನಿಮಿಷಗಳಲ್ಲಿ ಪ್ರಯಾಣವನ್ನು ಪೂರೈಸಲಿದ್ದು, ಪ್ರಯಾಣದ ಅವಧಿಯನ್ನು ಎರಡು ಗಂಟೆಗೂ ಹೆಚ್ಚು ಕಡಿಮೆ ಮಾಡುತ್ತದೆ.

  • ವಂದೇ ಭಾರತ್ ಎಕ್ಸ್‌ಪ್ರೆಸ್, ಲಕ್ನೋ-ಸಹಾರನ್‌ಪುರ (ನವೆಂಬರ್, 2025)

ಸಮೀಪದ 1 ಗಂಟೆಯ ಸಮಯ ಉಳಿತಾಯ

ಈ ರೈಲು ಸುಮಾರು 7 ಗಂಟೆ 45 ನಿಮಿಷಗಳಲ್ಲಿ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ.

ವಂದೇ ಭಾರತ್ ಸ್ಲೀಪರ್, ಹೌರಾ-ಗುವಾಹಾಟಿ (ಜನವರಿ, 2026)

17 ಗಂಟೆಗಳು → 14 ಗಂಟೆಗಳು

ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸರಾಯ್‌ಘಾಟ್ ಎಕ್ಸ್‌‌ಪ್ರೆಸ್‌ಗೆ ಹೋಲಿಸಿದರೆ ಸುಮಾರು ಮೂರು ಗಂಟೆಗಳ ಸಮಯವನ್ನು ಉಳಿಸುತ್ತದೆ. ಇದು ಸುಮಾರು 823 ಪ್ರಯಾಣಿಕರಿಗಾಗಿ 16 ಹವಾನಿಯಂತ್ರಿತ ಬೋಗಿಗಳನ್ನು ಹೊಂದಿದೆ.

ಹೈ-ಸ್ಪೀಡ್ ರೈಲು ಕಾರಿಡಾರ್‌ಗಳು

  • ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು ಕಾರಿಡಾರ್

ರಸ್ತೆ ಮಾರ್ಗದಲ್ಲಿ 8–9 ಗಂಟೆಗಳು → 1 ಗಂಟೆ 58 ನಿಮಿಷಗಳು

320 ಕಿ.ಮೀ/ಗಂಟೆ ಕಾರ್ಯಚರಣೆಯ ವೇಗವನ್ನು ಹೊಂದಿರುವ ಈ 508 ಕಿ.ಮೀ ಉದ್ದದ ಕಾರಿಡಾರ್ 12 ನಿಲ್ದಾಣಗಳಿಗೆ ಸೇವೆ ನೀಡಲಿದೆ. ಇದು ಠಾಣೆ ಕ್ರೀಕ್ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಸುಮಾರು 7 ಕಿ.ಮೀ ಉದ್ದದ ಭಾರತದ ಮೊದಲ ಸಮುದ್ರದಾಳದ ರೈಲು ಸುರಂಗವನ್ನು ಒಳಗೊಂಡಿದೆ. ಇದರ ಮೊದಲ ಸೇವೆಯನ್ನು ಆಗಸ್ಟ್ 2027 ಕ್ಕೆ ಪ್ರಾರಂಭಿಸುವ ಗುರಿ ಹೊಂದಲಾಗಿದೆ.

  • ಘೋಷಿಸಲಾದ ಏಳು ಹೈ-ಸ್ಪೀಡ್ ರೈಲು ಕಾರಿಡಾರ್‌ಗಳು

ಸುಮಾರು 1–4 ಗಂಟೆಗಳಲ್ಲಿ ಪ್ರಮುಖ ನಗರಗಳ ಸಂಪರ್ಕ

ಕೇಂದ್ರ ಬಜೆಟ್ 2026–27 ರಲ್ಲಿ ಘೋಷಿಸಲಾದ ಈ ಕಾರಿಡಾರ್‌ಗಳು ಅಂದಾಜು ₹16 ಲಕ್ಷ ಕೋಟಿ ಹೂಡಿಕೆಯೊಂದಿಗೆ ಸುಮಾರು 4,000 ಕಿ.ಮೀ ವ್ಯಾಪಿಸಿವೆ.

ಕಾರಿಡಾರ್

ಸೂಚಕ ಪ್ರಯಾಣದ ಅವಧಿ

ದೆಹಲಿ–ವಾರಾಣಸಿ

3 ಗಂಟೆ 50 ನಿಮಿಷಗಳು

ವಾರಾಣಸಿ–ಪಟ್ನಾ–ಸಿಲಿಗುರಿ

2 ಗಂಟೆ 55 ನಿಮಿಷಗಳು

ಚೆನ್ನೈ–ಬೆಂಗಳೂರು

1 ಗಂಟೆ 13 ನಿಮಿಷಗಳು

ಬೆಂಗಳೂರು–ಹೈದರಾಬಾದ್

2 ಗಂಟೆಗಳು

ಚೆನ್ನೈ–ಹೈದರಾಬಾದ್

2 ಗಂಟೆ 55 ನಿಮಿಷಗಳು

ಮುಂಬೈ–ಪುಣೆ

48 ನಿಮಿಷಗಳು

ಪುಣೆ–ಹೈದರಾಬಾದ್

1 ಗಂಟೆ 55 ನಿಮಿಷಗಳು

ಪ್ರಯಾಣಿಕರಿಗೆ ಮತ್ತು ಸಮುದಾಯಗಳಿಗೆ ಮರಳಿ ದೊರೆತ ಸಮಯ

ಭಾರತದ ಸಾರಿಗೆ ಜಾಲದ ಈ ಬದಲಾವಣೆಯು ಜನರು ಮತ್ತು ಪ್ರದೇಶಗಳು ಒಂದಕ್ಕೊಂದು ಸಂಪರ್ಕ ಸಾಧಿಸುವ ರೀತಿಯನ್ನೇ ಸಂಪೂರ್ಣವಾಗಿ ಬದಲಾಯಿಸುತ್ತಿದೆ. ಸೇತುವೆಗಳು ಮತ್ತು ಸುರಂಗಗಳು ಹೊಸ ಮಾರ್ಗಗಳನ್ನು ತೆರೆಯುತ್ತಿದ್ದರೆ, ಎಕ್ಸ್‌ಪ್ರೆಸ್‌ವೇಗಳು ಮತ್ತು ಆಧುನಿಕ ರೈಲು ಸೇವೆಗಳು ದೂರದ ಪ್ರಯಾಣಕ್ಕೆ ಹೊಸ ವ್ಯಾಖ್ಯಾನ ನೀಡುತ್ತಿವೆ. ಈ ಎಲ್ಲಾ ಯೋಜನೆಗಳು ಒಟ್ಟಾಗಿ ಸಂಚಾರವನ್ನು ಇನ್ನಷ್ಟು ಸುಗಮಗೊಳಿಸುತ್ತಿರುವುದಲ್ಲದೆ, ವಿವಿಧ ಪ್ರದೇಶಗಳ ನಡುವಿನ ಸಂಪರ್ಕ ಸಾಧ್ಯತೆಗಳನ್ನು ವಿಸ್ತರಿಸುತ್ತಿವೆ.

 

 References

Ministry of Road Transport & Highways:

Ministry of Railways:

Prime Minister’s Office:

Press Information Bureau:

Ministry of Finance:

Ministry of Defence:

Government of Maharashtra:

 

Click to see pdf

(तथ्य सामग्री आईडी: 151075) आगंतुक पटल : 3


Provide suggestions / comments
इस विश्लेषक को इन भाषाओं में पढ़ें : English , हिन्दी , Assamese , Urdu , Telugu , Bengali