Rural Prosperity
ವಿಕಸಿತ ಭಾರತ - ಜಿ ರಾಮ್ ಜಿ
प्रविष्टि तिथि:
24 OCT 2026 11:52 AM
"ವಿಕಸಿತ ಭಾರತ - ರೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ)"
ಗ್ರಾಮೀಣ ಉದ್ಯೋಗ ಮತ್ತು ಅಭಿವೃದ್ಧಿಗಾಗಿ ಒಂದು ಹೊಸ ಚೌಕಟ್ಟು
'ವಿಕಸಿತ ಭಾರತ @2047' ರ ದೃಷ್ಟಿಕೋನಕ್ಕೆ ಅನುಗುಣವಾಗಿ, ವಿಕಸಿತ ಭಾರತ – ಉದ್ಯೋಗ ಖಾತ್ರಿ ಯೋಜನೆ (ಗ್ರಾಮೀಣ) ಯೋಜನೆಯು ಗ್ರಾಮೀಣ ಅಭಿವೃದ್ಧಿಯಲ್ಲಿ ಒಂದು ಮಹತ್ವದ ಸುಧಾರಣೆಯನ್ನು ಸೂಚಿಸುತ್ತದೆ. ವಿಬಿ-ಜಿ-ರಾಮ್+ಜಿಕಾಯ್ದೆ, 2025 ಜುಲೈ 1, 2026 ರಂದು ಜಾರಿಗೆ ಬಂದಿದ್ದು, ದೇಶದ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಮಹಾತ್ಮ ಗಾಂಧಿ ನರೇಗಾ ಯೋಜನೆಯಿಂದ ವಿಬಿ-ಜಿ-ರಾಮ್+ಜಿಗೆ ಆದ ಈ ಬದಲಾವಣೆಯು ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ನಡೆದಿದೆ. ಹೊಸ ಚೌಕಟ್ಟಿನ ಪ್ರಾರಂಭದಿಂದಲೇ ಅನುಷ್ಠಾನಕ್ಕೆ ಬೆಂಬಲ ನೀಡುವ ಡಿಜಿಟಲ್ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
ಈ ಕಾಯ್ದೆಯು ಪ್ರತಿಯೊಂದು ಹಣಕಾಸು ವರ್ಷದಲ್ಲಿ 125 ದಿನಗಳ ವೇತನ ಸಹಿತ ಉದ್ಯೋಗದ ಶಾಸನಬದ್ಧ ಖಾತ್ರಿಯನ್ನು ಒದಗಿಸುತ್ತದೆ. ಈ ಖಾತರಿಯು ಕುಶಲವಲ್ಲದ ಕಾಯಿಕ ಕೆಲಸ ಮಾಡಲು ಸಿದ್ಧರಿರುವ ವಯಸ್ಕ ಸದಸ್ಯರನ್ನು ಹೊಂದಿರುವ ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೂ ಅನ್ವಯಿಸುತ್ತದೆ. ಇದು ಸಮೃದ್ಧ ಮತ್ತು ಸ್ಥಿತಿಸ್ಥಾಪಕ ಗ್ರಾಮೀಣ ಭಾರತಕ್ಕಾಗಿ ಸಬಲೀಕರಣ, ಬೆಳವಣಿಗೆ, ಸಂಯೋಜನೆ ಮತ್ತು ಸ್ಯಾಚುರೇಶನ್ (ಸಂಪೂರ್ಣ ತಲುಪುವಿಕೆ) ಅನ್ನು ಉತ್ತೇಜಿಸುತ್ತದೆ. ಇದು ನಾಲ್ಕು ವಿಷಯಾಧಾರಿತ ಕ್ಷೇತ್ರಗಳ ಮೇಲೆ ಗಮನ ಹರಿಸುತ್ತದೆ: ಜಲ ಭದ್ರತೆ, ಮೂಲಭೂತ ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ-ಸಂಬಂಧಿತ ಮೂಲಸೌಕರ್ಯ ಮತ್ತು ತೀವ್ರ ಹವಾಮಾನ ಘಟನೆಗಳ ಪರಿಣಾಮ ತಗ್ಗಿಸುವಿಕೆ.
ಈ ಕಾಯ್ದೆಯು ಸಂಯೋಜಿತ ಮತ್ತು ಸ್ಯಾಚುರೇಶನ್-ಆಧಾರಿತ ಯೋಜನೆಯ ಮೂಲಕ 'ಇಡೀ ಸರ್ಕಾರದ ಧೋರಣೆ'ಯನ್ನು ಸಂಸ್ಥಾಗತಗೊಳಿಸುತ್ತದೆ. ಇದರ ಕೇಂದ್ರಭಾಗದಲ್ಲಿ 'ವಿಕಸಿತ ಗ್ರಾಮ ಪಂಚಾಯತ್ ಯೋಜನೆಗಳ' (ವಿಜಿಪಿಪಿಗಳು) ತಯಾರಿಕೆಯಿದೆ. ಇವು ಗ್ರಾಮ ಪಂಚಾಯತಿಗಳ ವಿವಿಧ ಅಭಿವೃದ್ಧಿ ಅಗತ್ಯಗಳನ್ನು ಪೂರೈಸಲು ಒಂದು ಸಂಯೋಜಿತ ಚೌಕಟ್ಟನ್ನು ಒದಗಿಸುತ್ತವೆ.
ವಿಜಿಪಿಪಿs ಮೂಲಕ ಕೆಳಗಿನಿಂದ ಮೇಲ್ಮಟ್ಟದ ಯೋಜನೆ
ವಿಕಸಿತ ಗ್ರಾಮ ಪಂಚಾಯತ್ ಯೋಜನೆಗಳು (ವಿಜಿಪಿಪಿಗಳು) ವಿಬಿ-ಜಿ- ರಾಮ್- ಜಿ ಅಡಿಯಲ್ಲಿ ಒಂದು ಪ್ರಮುಖ ಸಂಸ್ಥಾಗತ ಸುಧಾರಣೆಯಾಗಿವೆ. ಇವು ತಳಮಟ್ಟದಲ್ಲಿ ಪಾಲುದಾರಿಕೆಯ, ಪುರಾವೆ-ಆಧಾರಿತ, ಸಂಪೂರ್ಣ ತಲುಪುವಿಕೆ ಮತ್ತು ಸಂಯೋಜಿತ ಯೋಜನೆಯನ್ನು ಸಕ್ರಿಯಗೊಳಿಸುತ್ತವೆ.
ವಿಜಿಪಿಪಿs ಸ್ಥಳೀಯ ಅಗತ್ಯಗಳನ್ನು ಗ್ರಾಮೀಣ ಅಭಿವೃದ್ಧಿ ಯೋಜನೆಯ ಕೇಂದ್ರಭಾಗದಲ್ಲಿರಿಸುತ್ತವೆ. ಇವುಗಳನ್ನು ಗ್ರಾಮಸಭೆ ಮತ್ತು ಗ್ರಾಮ ಪಂಚಾಯತಿಯ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ಸಿದ್ಧಪಡಿಸಲಾಗುತ್ತದೆ. ಗ್ರಾಮಸಭೆಯು ಈ ಯೋಜನೆಗಳಿಗೆ ಸೂಕ್ತ ಶಿಫಾರಸು ಮತ್ತು ಅನುಮೋದನೆಯನ್ನು ನೀಡುತ್ತದೆ. ವಿಜಿಪಿಪಿs ಗ್ರಾಮಗಳು ತಮ್ಮ ನೈಜ ಅಭಿವೃದ್ಧಿ ಅಗತ್ಯಗಳು, ಅಸ್ತಿತ್ವದಲ್ಲಿರುವ ಆಸ್ತಿಗಳು ಮತ್ತು ಅಭಿವೃದ್ಧಿಯ ಅಂತರಗಳನ್ನು ಗುರುತಿಸಲು ಹಾಗೂ ಅದಕ್ಕೆ ತಕ್ಕಂತೆ ಕಾಮಗಾರಿಗಳಿಗೆ ಆದ್ಯತೆ ನೀಡಲು ಅನುವು ಮಾಡಿಕೊಡುತ್ತವೆ.
ವಿಜಿಪಿಪಿ ಪ್ರಕ್ರಿಯೆಯು ಹೇಗೆ ಕಾರ್ಯನಿರ್ವಹಿಸುತ್ತದೆ?
- ಪಾಲುದಾರಿಕೆಯ ಯೋಜನೆ: ಗ್ರಾಮ ಪಂಚಾಯತಿಗಳು ಗ್ರಾಮಸಭೆಯ ಪಾಲ್ಗೊಳ್ಳುವಿಕೆಯೊಂದಿಗೆ ಸ್ಥಳೀಯ ಅಗತ್ಯಗಳ ಆಧಾರದ ಮೇಲೆ ಕಾಮಗಾರಿಗಳನ್ನು ಗುರುತಿಸುತ್ತವೆ ಮತ್ತು ಅವುಗಳಿಗೆ ಆದ್ಯತೆ ನೀಡುತ್ತವೆ.
- ಆಸ್ತಿ ಮ್ಯಾಪಿಂಗ್: ಈ ಪ್ರಕ್ರಿಯೆಯು ಗ್ರಾಮ ಪಂಚಾಯತಿಯಲ್ಲಿನ ಅಸ್ತಿತ್ವದಲ್ಲಿರುವ ಆಸ್ತಿಗಳು, ಮೂಲಸೌಕರ್ಯಗಳು ಮತ್ತು ಸೇವಾ ವಿತರಣೆಯ ಅಂತರಗಳ ಸಮಗ್ರ ಪಟ್ಟಿಯೊಂದಿಗೆ ಪ್ರಾರಂಭವಾಗುತ್ತದೆ.
- ಅಸ್ತಿತ್ವದಲ್ಲಿರುವ ಆಸ್ತಿಗಳ ಸೇರ್ಪಡೆ: ಈ ಪಟ್ಟಿಯು ವಿವಿಧ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಅಡಿಯಲ್ಲಿ ಸೃಷ್ಟಿಸಲಾದ ಆಸ್ತಿಗಳನ್ನು ಒಳಗೊಂಡಿರುತ್ತದೆ.
- ಜಿಐಎಸ್-ಆಧಾರಿತ ಯೋಜನೆ: ಯೋಜನಾ ಪ್ರಕ್ರಿಯೆಯು ಜಿಐಎಸ್, ಯುಕ್ತಧಾರಾ, ಪಿಎಂ ಗತಿ ಶಕ್ತಿ ಮತ್ತು ಇತರ ಡಿಜಿಟಲ್ ಉಪಕರಣಗಳನ್ನು ಬಳಸುತ್ತದೆ. ಭೂ-ಸ್ಥಳೀಯ ಮತ್ತು ಸ್ಥಳೀಯವಲ್ಲದ ಮಾಹಿತಿಯು ಸ್ಥಳೀಯ ಅಗತ್ಯಗಳು ಮತ್ತು ಅಸ್ತಿತ್ವದಲ್ಲಿರುವ ಆಸ್ತಿಗಳ ಆಧಾರದ ಮೇಲೆ ಪುರಾವೆ-ಆಧಾರಿತ ಹಾಗೂ ಸಂಯೋಜಿತ ಯೋಜನೆಗೆ ಬೆಂಬಲ ನೀಡುತ್ತದೆ.
- ಅಂತರಗಳ ಮೌಲ್ಯಮಾಪನ: ಈ ವೇದಿಕೆಗಳಿಂದ ದೊರೆಯುವ ಮಾಹಿತಿಯು ಸ್ಥಳಾವಕಾಶದ ಯೋಜನೆ, ಉತ್ತಮ ಆಸ್ತಿ ಮ್ಯಾಪಿಂಗ್ ಮತ್ತು ಕೆಲಸಗಳ ಪುನರಾವರ್ತನೆಯನ್ನು ತಡೆಯಲು ಬೆಂಬಲಿಸುತ್ತದೆ. ಮೂಲಸೌಕರ್ಯ ಕೊರತೆಗಳು, ಅಭಿವೃದ್ಧಿಯ ಆದ್ಯತೆಗಳು ಮತ್ತು ಸಂಭಾವ್ಯ ಮಧ್ಯಸ್ಥಿಕೆಗಳನ್ನು ಗುರುತಿಸಲು ಸಹ ಇದು ಸಹಾಯ ಮಾಡುತ್ತದೆ.
- ಸರ್ಕಾರದಾದ್ಯಂತ ಸಂಯೋಜನೆ: ವಿಜಿಪಿಪಿಗಳು ಕಾರ್ಯಕ್ರಮಗಳು ಸಮಗ್ರ ಗ್ರಾಮೀಣ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳು, ಇಲಾಖೆಗಳು ಮತ್ತು ಪಾಲುದಾರರ ಸಂಪನ್ಮೂಲಗಳನ್ನು ಒಂದೆಡೆ ತರುವ ಮೂಲಕ 'ಇಡೀ ಸರ್ಕಾರದ ಧೋರಣೆ'ಯನ್ನು ಉತ್ತೇಜಿಸುತ್ತವೆ.
- ಬಹುಹಂತದ ಕ್ರೋಢೀಕರಣ: ವಿಜಿಪಿಪಿs ಯೋಜನೆಗಳನ್ನು ಬ್ಲಾಕ್ (ತಾಲೂಕು), ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕ್ರೋಢೀಕರಿಸಲಾಗುತ್ತದೆ. ಈ ಕ್ರೋಢೀಕರಿಸಿದ ಯೋಜನೆಗಳು 'ವಿಕಸಿತ ಭಾರತ ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ಬೆಂಬಲ'ಕ್ಕೆ ಕೊಡುಗೆ ನೀಡುತ್ತವೆ.
- ಅನುಮತಿಸಲಾದ ಕಾಮಗಾರಿಗಳು: ವಿಜಿಪಿಪಿ ಚೌಕಟ್ಟು ನಾಲ್ಕು ವಿಷಯಾಧಾರಿತ ಕ್ಷೇತ್ರಗಳಲ್ಲಿ 318 ಪ್ರಕಾರದ ಅನುಮತಿಸಲಾದ ಕಾಮಗಾರಿಗಳನ್ನು ಗುರುತಿಸುತ್ತದೆ.
ವಿಜಿಪಿಪಿ ಪ್ರಕ್ರಿಯೆಯು ಉದ್ಯೋಗ-ಸಂಯೋಜಿತ ಆಸ್ತಿ ಸೃಷ್ಟಿ, ಸುಧಾರಿತ ಮೂಲಭೂತ ಸೌಕರ್ಯಗಳು ಮತ್ತು ಸಾರ್ವಜನಿಕ ಮಧ್ಯಸ್ಥಿಕೆಗಳ ಒಮ್ಮುಖದ ಮೂಲಕ ಸಮಗ್ರ ಗ್ರಾಮ ಅಭಿವೃದ್ಧಿಯನ್ನು ಬೆಂಬಲಿಸಲು ಉದ್ದೇಶಿಸಿದೆ.
ವಿಬಿ ಜಿ-ರಾಮ್ ಜಿ: ತಳಮಟ್ಟದಲ್ಲಿನ ಪ್ರಗತಿ
ವಿಬಿ-ಜಿ ರಾಮ್ ಜಿ ಯೋಜನೆಯು 2026ರ ಜುಲೈ 1ರಂದು ಅನುಷ್ಠಾನಗೊಂಡಾಗಿನಿಂದ, 2026ರ ಸೆಪ್ಟೆಂಬರ್ 24ರ ವೇಳೆಗೆ ಗಮನಾರ್ಹವಾದ ಪ್ರಗತಿಯನ್ನು ಸಾಧಿಸಿದೆ.
- ಸಕ್ರಿಯ ಕಾರ್ಮಿಕರು: 2026-27ರಲ್ಲಿ 10.88 ಕೋಟಿ
- ಸೃಷ್ಟಿಯಾದ ಆಸ್ತಿಗಳು: 2.83 ಲಕ್ಷ
- ಉತ್ಪಾದಿತ ವ್ಯಕ್ತಿ-ದಿನಗಳು: 31.69 ಕೋಟಿಗಿಂತ ಹೆಚ್ಚು
- ಮಹಿಳೆಯರ ಭಾಗವಹಿಸುವಿಕೆ: 2026-27ರಲ್ಲಿ ಶೇಕಡಾ 61.65
- ಬೇಡಿಕೆಯ ಮೇರೆಗೆ ಕಾರ್ಮಿಕರಿಗೆ ಉದ್ಯೋಗ ಒದಗಿಸಲಾಗಿದೆ: ಸುಮಾರು 2.23 ಕೋಟಿ ಗ್ರಾಮೀಣ ಕುಟುಂಬಗಳಿಗೆ ಸೇರಿದ 2.81 ಕೋಟಿಗೂ ಅಧಿಕ ಮಂದಿಗೆ
- ಜಾರಿಯಲ್ಲಿರುವ ಕೆಲಸಗಳು: 97.17 ಲಕ್ಷ
- ಭವಿಷ್ಯದ ಉದ್ಯೋಗ ಬೇಡಿಕೆಯನ್ನು ಪೂರೈಸಲು ಸಿದ್ಧವಿರುವ ಅನುಮೋದಿತ ಕೆಲಸಗಳು: 73.24 ಲಕ್ಷ
- ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಕೆಲಸದ ಸ್ಥಳಗಳು: ಸುಮಾರು 20.16 ಲಕ್ಷ
- ಪ್ರಸ್ತುತ ದೇಶಾದ್ಯಂತ ಕೆಲಸಗಳನ್ನು ನಿರ್ವಹಿಸುತ್ತಿರುವ ಗ್ರಾಮ ಪಂಚಾಯತ್ಗಳ ಸಂಖ್ಯೆ: ಸುಮಾರು 2.31 ಲಕ್ಷ
- ಡಿಬಿಟಿ ವಹಿವಾಟುಗಳು: 2026-27ರಲ್ಲಿ 3.76 ಕೋಟಿ
- ಕೂಲಿ ದರ: ಪ್ರತಿದಿನಕ್ಕೆ ರೂ. 300 ರಿಂದ ರೂ. 450 ರವರೆಗೆ
- ನೀಡಲಾದ ಒಟ್ಟು ಗ್ರಾಮೀಣ ಉದ್ಯೋಗ ಖಾತರಿ ಕಾರ್ಡ್ಗಳು: 15.17 ಕೋಟಿ
ಹಣಕಾಸಿನ ಪ್ರಗತಿ
- 2026-27ನೇ ಸಾಲಿಗೆ ಮಧ್ಯಂತರ ಹಂಚಿಕೆಯಾಗಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು ರೂ. 93,841 ಕೋಟಿ ಅನುದಾನವನ್ನು ನೀಡಲಾಗಿದೆ.
- ಇದರಲ್ಲಿ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮೊದಲ ಕಂತಾಗಿ ರೂ. 25,880 ಕೋಟಿ ಮೌಲ್ಯದ 'ಮದರ್ ಸ್ಯಾಂಕ್ಷನ್' ಅನ್ನು ಬಿಡುಗಡೆ ಮಾಡಲಾಗಿದೆ.

ತಂತ್ರಜ್ಞಾನ-ಸಮರ್ಥಿತ ಪಾರದರ್ಶಕತೆ ಮತ್ತು ಆಡಳಿತ ವಿಬಿ-ಜಿ ರಾಮ್ ಜಿ ಅನುಷ್ಠಾನದಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸುತ್ತದೆ. ಡಿಜಿಟಲ್ ವ್ಯವಸ್ಥೆಗಳು ಕಾರ್ಮಿಕರ ಪರಿಶೀಲನೆ, ಮೇಲ್ವಿಚಾರಣೆ, ಪಾವತಿಗಳು ಮತ್ತು ಪಾರದರ್ಶಕತೆಯನ್ನು ಬೆಂಬಲಿಸುತ್ತವೆ. ಇವು ಉದ್ಯೋಗವನ್ನು ಸುಸ್ಥಿರ ಆಸ್ತಿ ಸೃಷ್ಟಿ ಮತ್ತು ಗ್ರಾಮೀಣ ಅಭಿವೃದ್ಧಿಯೊಂದಿಗೆ ಜೋಡಿಸುತ್ತವೆ.
- ಡಿಜಿಟಲ್ ಪರಿಶೀಲನೆ: ಮುಖ ಗುರುತಿಸುವಿಕೆ ಮತ್ತು ಬಯೋಮೆಟ್ರಿಕ್ ದೃಢೀಕರಣದ ಮೂಲಕ ಇ-ಕೆವೈಸಿ ಮತ್ತು ಕಾರ್ಮಿಕರ ಹಾಜರಾತಿಯನ್ನು ದಾಖಲಿಸಲಾಗುತ್ತದೆ. ಇದು ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದೃಢತೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ.
- ಡಿಜಿಟಲ್ ಕೆಲಸದ ಮೇಲ್ವಿಚಾರಣೆ: ಜಿಯೋ-ಟ್ಯಾಗಿಂಗ್, ಡಿಜಿಟಲ್ ಮಾಪನ, ಎಲೆಕ್ಟ್ರಾನಿಕ್ ಮೆಷರ್ಮೆಂಟ್ ಬುಕ್ಗಳು ಮತ್ತು ಮೊಬೈಲ್ ಆಧಾರಿತ ಮೇಲ್ವಿಚಾರಣೆಯು ಅನುಷ್ಠಾನದ ವಿವಿಧ ಹಂತಗಳಲ್ಲಿ ನಿಗಾ ಇಡಲು ಸಹಾಯ ಮಾಡುತ್ತದೆ.
- ಡಿಜಿಟಲ್ ಪಾವತಿಗಳು: ಈ ಚೌಕಟ್ಟಿನಡಿಯಲ್ಲಿ ನೇರ ಲಾಭ ವರ್ಗಾವಣೆ ಮೂಲಕ ಪಾವತಿಗಳನ್ನು ಬೆಂಬಲಿಸಲಾಗುತ್ತದೆ.
- ತಂತ್ರಜ್ಞಾನ-ಸಮರ್ಥಿತ ಮೇಲ್ವಿಚಾರಣೆ: ಪ್ರಾದೇಶಿಕ ತಂತ್ರಜ್ಞಾನ-ಸಮರ್ಥಿತ ಯೋಜನೆ, ನೈಜ-ಸಮಯದ ಡ್ಯಾಶ್ಬೋರ್ಡ್ಗಳು ಮತ್ತು ಎಐ-ಸಮರ್ಥಿತ ವಿಶ್ಲೇಷಣೆಗಳು ಮೇಲ್ವಿಚಾರಣೆ, ವರದಿ ಮಾಡುವಿಕೆ ಮತ್ತು ಸರಿಪಡಿಸುವ ಕ್ರಮಗಳನ್ನು ಬೆಂಬಲಿಸುತ್ತವೆ.
- ಡಿಜಿಟಲ್ ವೇದಿಕೆಗಳು ಮತ್ತು ಸಾಮರ್ಥ್ಯ ವರ್ಧನೆ: ಸಮರ್ಪಿತ ಡಿಜಿಟಲ್ ವೇದಿಕೆಗಳು, ನಾಗರಿಕ ಭಾಗವಹಿಸುವಿಕೆಯ ವೇದಿಕೆಗಳು ಮತ್ತು ದೊಡ್ಡ ಪ್ರಮಾಣದ ಸಾಮರ್ಥ್ಯ ವರ್ಧನಾ ಕಾರ್ಯಕ್ರಮಗಳು ಅನುಷ್ಠಾನವನ್ನು ಮತ್ತಷ್ಟು ಬೆಂಬಲಿಸುತ್ತವೆ.
ತಳಮಟ್ಟದಿಂದ ಗ್ರಾಮೀಣ ಅಭಿವೃದ್ಧಿ ನಿರ್ಮಾಣ ವಿಬಿ-ಜಿ ರಾಮ್ ಜಿ ಉದ್ಯೋಗ, ಸಹಭಾಗಿತ್ವದ ಯೋಜನೆ ಮತ್ತು ಗ್ರಾಮೀಣ ಅಭಿವೃದ್ಧಿಯನ್ನು ಒಂದೆಡೆ ತರುತ್ತದೆ. ವಿಜಿಪಿಪಿಗಳ ಮೂಲಕ ಗ್ರಾಮ ಪಂಚಾಯತ್ಗಳು ಸ್ಥಳೀಯ ಅಗತ್ಯಗಳನ್ನು ಗುರುತಿಸುತ್ತವೆ, ಅಸ್ತಿತ್ವದಲ್ಲಿರುವ ಆಸ್ತಿಗಳನ್ನು ಮ್ಯಾಪ್ ಮಾಡುತ್ತವೆ ಮತ್ತು ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡುತ್ತವೆ. ತಂತ್ರಜ್ಞಾನ, ಸಮನ್ವಯ ಮತ್ತು ಡಿಜಿಟಲ್ ವ್ಯವಸ್ಥೆಗಳು ಅನುಷ್ಠಾನ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸುತ್ತವೆ. ಈ ಚೌಕಟ್ಟu ಉದ್ಯೋಗವನ್ನು ಸುಸ್ಥಿರ ಆಸ್ತಿ ಸೃಷ್ಟಿಯೊಂದಿಗೆ ಜೋಡಿಸಿ, ಚೇತೋಹಾರಿ ಜೀವಾನೋಪಾಯ ಮತ್ತು ಸಮಗ್ರ ಗ್ರಾಮೀಣ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ.
References
Ministry of Rural Development
https://vbgramg.dord.gov.in/vbgramg/home.aspx
https://vbgramg.dord.gov.in/vbgramg/WriteReaddata/data/Draft_Framework_for_Viksit_Gram_Panchayat_Plan_(VGPP)_RGVS-2026_26.06.2026.pdf
https://vbgramgrep.dord.gov.in/VBGRAMG/vbgramg_ataglance/At_a_glance.aspx
PIB Backgrounders
https://www.pib.gov.in/PressReleasePage.aspx?PRID=2259691®=48&lang=2
Click here to see pdf
*****
(तथ्य सामग्री आईडी: 151148)
आगंतुक पटल : 68
Provide suggestions / comments