Rural Prosperity
ಮಳೆ ನೀರನ್ನು ಸಂಗ್ರಹಿಸಿ
प्रविष्टि तिथि:
26 OCT 2026 11:16 AM
ಜಲ ಸಂರಕ್ಷಣೆಗಾಗಿ ನವೀಕೃತ ರಾಷ್ಟ್ರೀಯ ಕರೆ
ಕ್ಯಾಚ್ ದಿ ರೈನ್ ಅಭಿಯಾನದ ಒಂದು ನೋಟ 'ಕ್ಯಾಚ್ ದಿ ರೈನ್' ಎನ್ನುವುದು ಮಳೆನೀರು ಕೊಯ್ಲು, ಭೂಗತ ಜಲ ಮರುಪೂರಣ ಮತ್ತು ಜಲಮೂಲಗಳ ಪುನರುಜ್ಜೀವನದ ಮೇಲೆ ಕೇಂದ್ರೀಕೃತವಾಗಿರುವ ರಾಷ್ಟ್ರವ್ಯಾಪಿ ಅಭಿಯಾನವಾಗಿದೆ. ಈ ಅಭಿಯಾನವು ಸಮುದಾಯಗಳು ಮತ್ತು ಸಂಸ್ಥೆಗಳನ್ನು ಮಳೆನೀರನ್ನು ಸಂರಕ್ಷಿಸಲು ಮತ್ತು ಜಲ ಭದ್ರತೆಯನ್ನು ಬಲಪಡಿಸಲು ಪ್ರೋತ್ಸಾಹಿಸುತ್ತದೆ. ಇದು ಮಾನ್ಸೂನ್ ನೀರಿನ ಸಂಗ್ರಹಣೆಯನ್ನು ಗರಿಷ್ಠಗೊಳಿಸಲು ಕೊಳಗಳು ಮತ್ತು ಜಲಾಶಯಗಳನ್ನು ಸ್ವಚ್ಛಗೊಳಿಸುವುದನ್ನು ಉತ್ತೇಜಿಸುತ್ತದೆ. ಅಲ್ಲದೆ, ನೀರು ಸಂಗ್ರಹಣಾ ಪ್ರದೇಶಗಳಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸಲು ಮಳೆಗಡಣೆ (ಕಾಡು ಬೆಳೆಸುವುದು) ಪ್ರೋತ್ಸಾಹಿಸುತ್ತದೆ.
ಈ ಅಭಿಯಾನದ ಸಮಯದಲ್ಲಿ ಶಿಫಾರಸು ಮಾಡಲಾದ ಪ್ರಮುಖ ಜಲ ಸಂರಕ್ಷಣೆ ಕ್ರಮಗಳು:
- ಮನೆಗಳು, ಸೊಸೈಟಿಗಳು ಮತ್ತು ಕೆಲಸದ ಸ್ಥಳಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು.
- ಸೂಕ್ತ ಸ್ಥಳಗಳಲ್ಲಿ ಮರುಪೂರಣ ಗುಂಡಿಗಳು ಮತ್ತು ಶಾಫ್ಟ್ಗಳನ್ನು ಸ್ಥಾಪಿಸುವುದು.
- ಭೂಗತ ಜಲ ಮರುಪೂರಣಕ್ಕೆ ಅನುಕೂಲವಾಗುವಂತೆ ಬಳಕೆಯಲ್ಲಿಲ್ಲದ ಬೋರ್ವೆಲ್ಗಳನ್ನು ರಿಪೇರಿ ಮಾಡುವುದು.
- ಬಾವಿಗಳು, ಪುರಾತನ ಮೆಟ್ಟಿಲು ಬಾವಿಗಳು ಮತ್ತು ಸಾಂಪ್ರದಾಯಿಕ ಜಲಮೂಲಗಳನ್ನು ಪುನರುಜ್ಜೀವನಗೊಳಿಸುವುದು.
- ನೀರು ಸಂಗ್ರಹಣೆಯನ್ನು ಹೆಚ್ಚಿಸಲು ಕೊಳಗಳು ಮತ್ತು ಜಲಾಶಯಗಳಲ್ಲಿ ಹೂಳು ತೆಗೆಯುವುದು.
- ನೀರು ಸಂಗ್ರಹಣೆ ಮತ್ತು ಮರುಪೂರಣ ಪ್ರದೇಶಗಳಲ್ಲಿ ಮರಗಳನ್ನು ನೆಡುವುದನ್ನು ಉತ್ತೇಜಿಸುವುದು.
ಜಲ್ ಸಂಚಯ್ ಜನ್ ಭಾಗಿದಾರಿ (ಜೆಸ್ಜೆಬಿ) 1.0 (2024) ಜಲ್ ಸಂಚಯ್ ಜನ್ ಭಾಗಿದಾರಿ 1.0 ಜಲ ಸಂರಕ್ಷಣೆಯಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಬಲಪಡಿಸಿತು. ಜೆಸ್ಜೆಬಿ 1.0 ಅನ್ನು 2024ರ ಏಪ್ರಿಲ್ 1 ರಿಂದ 2025ರ ಮೇ 31 ರವರೆಗೆ ಅನುಷ್ಠಾನಗೊಳಿಸಲಾಯಿತು. ಈ ಯೋಜನೆ ಸಮುದಾಯ, ಸಿಎಸ್ಆರ್ ಮತ್ತು ವೆಚ್ಚ - ಈ 3C ತತ್ವಗಳನ್ನು ಅನುಸರಿಸಿತು. ಇದು ಜಲ ಸಂರಕ್ಷಣಾ ಪ್ರಯತ್ನಗಳನ್ನು ವೇಗಗೊಳಿಸಲು ನಡೆಯುತ್ತಿರುವ ಸರ್ಕಾರಿ ಯೋಜನೆಗಳೊಂದಿಗೆ ಸಮನ್ವಯವನ್ನು ಸಜ್ಜುಗೊಳಿಸಿತು. ಈ ಉಪಕ್ರಮವು ಕಡಿಮೆ ವೆಚ್ಚದ ಭೂಗತ ಜಲ ಮರುಪೂರಣ ಮತ್ತು ನೀರು ಸಂಗ್ರಹಣಾ ರಚನೆಗಳನ್ನು ಉತ್ತೇಜಿಸಿತು. ಇದು ನಿಷ್ಕ್ರಿಯಗೊಂಡ ಬೋರ್ವೆಲ್ಗಳ ಪುನರುಜ್ಜೀವನ ಮತ್ತು ಸ್ಥಳೀಯವಾಗಿ ಸೂಕ್ತವಾದ ಪರಿಹಾರಗಳನ್ನು ಬೆಂಬಲಿಸಿತು. ಈ ರಚನೆಗಳನ್ನು 'ಸಮಗ್ರ ಸರ್ಕಾರ' ಮತ್ತು 'ಸಮಗ್ರ ಸಮಾಜ' ವಿಧಾನದ ಮೂಲಕ ಅಭಿವೃದ್ಧಿಪಡಿಸಲಾಯಿತು. ಈ ಅಭಿಯಾನದ ಅವಧಿಯಲ್ಲಿ 10 ಲಕ್ಷಕ್ಕೂ ಅಧಿಕ ಭೂಗತ ಜಲ ಮರುಪೂರಣ ರಚನೆಗಳನ್ನು ನಿರ್ಮಿಸಲಾಗಿದೆ ಮತ್ತು 27 ಲಕ್ಷಕ್ಕೂ ಹೆಚ್ಚು ಕೃತಕ ಮರುಪೂರಣ ರಚನೆಗಳನ್ನು ವರದಿ ಮಾಡಲಾಗಿದೆ.
ಜಲ್ ಸಂಚಯ್ ಜನ್ ಭಾಗಿದಾರಿ 2.0 (2025) 2025ರ ಜೂನ್ 1ರಂದು ಪ್ರಾರಂಭವಾದ ಜಲ್ ಸಂಚಯ್ ಜನ್ ಭಾಗಿದಾರಿ 2.0, ಹಿಂದಿನ ಉಪಕ್ರಮದ ಆಧಾರದ ಮೇಲೆ ಮುಂದುವರೆಯಿತು. ಇದು ವಿಶೇಷವಾಗಿ ಅತಿ ಹೆಚ್ಚು ಶೋಷಿತ ಮತ್ತು ನಿರ್ಣಾಯಕ ಜಿಲ್ಲೆಗಳಲ್ಲಿ ಭೂಗತ ಜಲ ಮರುಪೂರಣದ ಮೇಲೆ ಗಮನಹರಿಸಿತು. ಈ ವಿಧಾನವು ಕಡಿಮೆ ವೆಚ್ಚದ ಮತ್ತು ಅತಿ ಸ್ಥಳೀಯ ಮಧ್ಯಸ್ಥಿಕೆಗಳಿಗೆ ಒತ್ತು ನೀಡಿತು. 2025ರ ನವೆಂಬರ್ನಲ್ಲಿ, 6ನೇ ರಾಷ್ಟ್ರೀಯ ಜಲ ಪ್ರಶಸ್ತಿಗಳ ಸಂದರ್ಭದಲ್ಲಿ ಜೆಎಸ್ಜೆಬಿ1.0 ಅಡಿಯಲ್ಲಿ ಸಲ್ಲಿಸಲಾದ ಮಾದರಿ ಕೊಡುಗೆಗಳನ್ನು ಗುರುತಿಸಿ ಗೌರವಿಸಲಾಯಿತು.

|
ಜೆಎಸ್ಜೆಬಿ ಉಪಕ್ರಮದ ಪ್ರಭಾವದ ಮೌಲ್ಯಮಾಪನ ಮತ್ತು ಸಾಧನೆ ಜಲ್ ಸಂಚಯ್ ಜನ್ ಭಾಗಿದಾರಿ (ಜೆಸ್ಜೆಬಿ) ಉಪಕ್ರಮದ ಅಡಿಯಲ್ಲಿ, 1.55 ಕೋಟಿಗೂ ಅಧಿಕ ಕೃತಕ ಮರುಪೂರಣ ಮತ್ತು ಸಂಗ್ರಹಣಾ ರಚನೆಗಳನ್ನು ನಿರ್ಮಿಸಲಾಗಿದೆ. ಇದರ ಜೊತೆಗೆ, ಜೆಸ್ಜೆಬಿ 1.0 ನ ಪ್ರಭಾವದ ಮೌಲ್ಯಮಾಪನ ಅಧ್ಯಯನವನ್ನು ನಡೆಸಲಾಗಿದ್ದು, ಇದು 2025ರ ಜೂನ್ 1 ರಿಂದ 2025ರ ಡಿಸೆಂಬರ್ 31 ರವರೆಗಿನ ಮಳೆಯ ದತ್ತಾಂಶವನ್ನು ಬಳಸಿ 23 ಲಕ್ಷ ರಚನೆಗಳನ್ನು ಮೌಲ್ಯಮಾಪನ ಮಾಡಿದೆ. ಈ ಮಧ್ಯಸ್ಥಿಕೆಗಳ ಮೂಲಕ ಅಂದಾಜು 2.43 ಬಿಲಿಯನ್ ಘನ ಮೀಟರ್ಗಳಷ್ಟು ಭೂಗತ ಜಲ ಮರುಪೂರಣವಾಗಿದೆ ಎಂದು ಈ ಅಧ್ಯಯನವು ಅಂದಾಜಿಸಿದೆ.
|
ಜಲ್ ಸಂಚಯ್ ಜನ್ ಭಾಗಿದಾರಿ: ಕ್ಯಾಚ್ ದಿ ರೈನ್ (2026) ಜೂನ್ 1, 2026 ರಂದು ಪ್ರಾರಂಭಿಸಲಾದ 2026 ರ ಉಪಕ್ರಮವು, ಜಲ್ ಶಕ್ತಿ ಅಭಿಯಾನ: ಕ್ಯಾಚ್ ದಿ ರೈನ್ ಅಭಿಯಾನದೊಂದಿಗೆ ಸಂಯೋಜಿಸುವ ಮೂಲಕ ಜೆಸ್ಜೆಬಿ ವಿಧಾನವನ್ನು ವಿಸ್ತರಿಸಿತು. ಈ ಅಭಿಯಾನವು ಮಳೆನೀರು ಕೊಯ್ಲು, ಭೂಗತ ಜಲ ಮರುಪೂರಣ, ಜಲ ಸಂರಕ್ಷಣೆ, ಜಲ ಆಸ್ತಿಗಳ ಸೃಷ್ಟಿ ಮತ್ತು ಸಮುದಾಯದ ಭಾಗವಹಿಸುವಿಕೆಯ ಮೇಲೆ ಗಮನಹರಿಸಿತು. ಇದು ಸ್ಥಳೀಯವಾಗಿ ಸೂಕ್ತವಾದ, ಕಡಿಮೆ ವೆಚ್ಚದ ಮಧ್ಯಸ್ಥಿಕೆಗಳನ್ನು ಉತ್ತೇಜಿಸಿತು ಮತ್ತು ಸುಸ್ಥಿರ ನೀರಿನ ನಿರ್ವಹಣೆಯ ಮೂಲಕ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಿತು.
ಈ ಅಭಿಯಾನವು ವಿಬಿ-ಜಿ ರಾಮ್ ಜಿ, ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ ಅಡಿಯಲ್ಲಿ ಪ್ರತಿ ಹನಿಗೂ ಹೆಚ್ಚು ಬೆಳೆ, ಪಿಎಂಕೆಎಸ್ವೈ ಅಡಿಯಲ್ಲಿ ಜಲಮೂಲಗಳ ದುರಸ್ತಿ, ನವೀಕರಣ ಮತ್ತು ಪುನಃಸ್ಥಾಪನೆ, ಸಿಎಎಂಪಿಎ, ಹಣಕಾಸು ಆಯೋಗದ ಅನುದಾನಗಳು ಮತ್ತು ಇತರ ರಾಜ್ಯ ಸರ್ಕಾರದ ಯೋಜನೆಗಳಂತಹ ವಿವಿಧ ಸರ್ಕಾರಿ ಯೋಜನೆಗಳ ಸಮನ್ವಯವನ್ನು ಬಳಸಿಕೊಂಡಿತು. ಈ ಉಪಕ್ರಮವು ಪಂಚಾಯತ್ ರಾಜ್ ಸಂಸ್ಥೆಗಳು, ನಗರ ಸ್ಥಳೀಯ ಸಂಸ್ಥೆಗಳು, ಮಹಿಳಾ ಗುಂಪುಗಳು, ಯುವಕರು, ಶೈಕ್ಷಣಿಕ ಸಂಸ್ಥೆಗಳು, ನಾಗರಿಕ ಸಮುದಾಯ ಸಂಸ್ಥೆಗಳು ಮತ್ತು ಸ್ಥಳೀಯ ಸಮುದಾಯಗಳನ್ನು ಒಟ್ಟುಗೂಡಿಸಿತು. ಈ ಪಾಲುದಾರರು ಯೋಜನೆ, ಅನುಷ್ಠಾನ ಮತ್ತು ಸಮುದಾಯ ನೇತೃತ್ವದ ಜಲ ಸಂರಕ್ಷಣೆಯನ್ನು ಬೆಂಬಲಿಸುತ್ತಾರೆ. ಪಾರದರ್ಶಕತೆ, ಮೇಲ್ವಿಚಾರಣೆ ಮತ್ತು ಸಾರ್ವಜನಿಕ ಪ್ರತಿಕ್ರಿಯೆಯನ್ನು ಸುಲಭಗೊಳಿಸುವಲ್ಲಿ ಜೆಸ್ಜೆಬಿ: ಸಿಟಿಆರ್ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಪ್ರಮುಖ ಪಾತ್ರ ವಹಿಸಿವೆ.
ಜಲ್ ಶಕ್ತಿ ಅಭಿಯಾನ: ಕ್ಯಾಚ್ ದಿ ರೈನ್ ವಿಶ್ವ ಜಲ ದಿನವಾದ 2021ರ ಮಾರ್ಚ್ 22 ರಂದು 'ಜಲ್ ಶಕ್ತಿ ಅಭಿಯಾನ: ಕ್ಯಾಚ್ ದಿ ರೈನ್' ಆರಂಭವಾಯಿತು. ಇದರ ಮಾರ್ಗದರ್ಶ ಸೂತ್ರ: "ಮಳೆ ಎಲ್ಲಿ ಬೀಳುತ್ತದೋ, ಯಾವಾಗ ಬೀಳುತ್ತದೋ ಅಲ್ಲೇ ಅದನ್ನು ಸಂಗ್ರಹಿಸಿ" ಎಂಬುದಾಗಿದೆ. ಈ ಅಭಿಯಾನವು 256 ಜಿಲ್ಲೆಗಳ 1,592 ನೀರು-ಒತ್ತಡದ ಬ್ಲಾಕ್ಗಳನ್ನು ಒಳಗೊಂಡಿದ್ದ 2019 ರ ಜಲ್ ಶಕ್ತಿ ಅಭಿಯಾನದ ಯಶಸ್ಸಿನ ಮೇಲೆ ರೂಪುಗೊಂಡಿದೆ. ಇದು ಮಳೆನೀರು ಕೊಯ್ಲು ಉತ್ತೇಜಿಸುವುದರ ಜೊತೆಗೆ, ಭೂಗತ ಜಲ ಮರುಪೂರಣ, ಜಲಾನಯನ ಅಭಿವೃದ್ಧಿ, ಜಲಮೂಲಗಳ ಪುನರುಜ್ಜೀವನ, ಮಳೆಗಡಣೆ ಮತ್ತು 'ಜನ ಆಂದೋಲನ' ವಿಧಾನದ ಮೂಲಕ ಸಮುದಾಯದ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಿತು. ಅಂದಿನಿಂದ ಈ ಅಭಿಯಾನವನ್ನು ವಾರ್ಷಿಕವಾಗಿ ವಿಭಿನ್ನ ಥೀಮ್ಗಳು ಮತ್ತು ಗಮನಹರಿಸುವ ಕ್ಷೇತ್ರಗಳೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ.
|
ವರ್ಷ
|
ವಿಷಯ / ಗಮನ
|
ಪ್ರಮುಖ ಚಟುವಟಿಕೆಗಳ ಕ್ಷೇತ್ರಗಳು
|
|
2021
|
ಮಳೆ ಎಲ್ಲಿ ಬೀಳುತ್ತದೋ, ಯಾವಾಗ ಬೀಳುತ್ತದೋ ಅಲ್ಲೇ ಅದನ್ನು ಸಂಗ್ರಹಿಸಿ
|
ಮಳೆನೀರು ಕೊಯ್ಲು ಮತ್ತು ಜಲ ಸಂರಕ್ಷಣೆ; ಜಲಮೂಲಗಳ ಜಿಯೋ-ಟ್ಯಾಗಿಂಗ್; ವೈಜ್ಞಾನಿಕ ಜಲ ಸಂರಕ್ಷಣಾ ಯೋಜನೆ; ಜಲ್ ಶಕ್ತಿ ಕೇಂದ್ರಗಳು ಮತ್ತು ಜಾಗೃತಿ ಚಟುವಟಿಕೆಗಳು
|
|
2022
|
ಜಲ ಸಂರಕ್ಷಣಾ ಚಟುವಟಿಕೆಗಳ ವಿಸ್ತರಣೆ
|
ಸಾಂಪ್ರದಾಯಿಕ ಜಲಮೂಲಗಳ ಪುನರುಜ್ಜೀವನ; ಭೂಗತ ಜಲ ಮರುಪೂರಣ ಮತ್ತು ಜಲಾನಯನ ಅಭಿವೃದ್ಧಿ; ತೇವಾಂಶ ಮತ್ತು ನದಿಗಳ ನವೀಕರಣ; ಸ್ಪ್ರಿಂಗ್-ಶೆಡ್ (ಬುಗ್ಗೆ ಪ್ರದೇಶ) ಅಭಿವೃದ್ಧಿ ಮತ್ತು ಜಲಾನಯನ ಪ್ರದೇಶದ ರಕ್ಷಣೆ
|
|
2023
|
ಕುಡಿಯುವ ನೀರಿಗಾಗಿ ಮೂಲ ಸುಸ್ಥಿರತೆ
|
150 ನೀರು-ಒತ್ತಡದ ಜಿಲ್ಲೆಗಳ ಮೇಲೆ ಗಮನ; ಕುಡಿಯುವ ನೀರಿನ ಮೂಲಗಳ ಬಲಪಡಿಸುವಿಕೆ; ಭೂಗತ ಜಲ ಮರುಪೂರಣ ಮತ್ತು ಮೂಲ ಸುಸ್ಥಿರತೆ; ಕ್ಷೇತ್ರ ಮಟ್ಟದ ಮೇಲ್ವಿಚಾರಣೆ ಮತ್ತು ಸಮುದಾಯದ ಭಾಗವಹಿಸುವಿಕೆ
|
|
2024
|
ನಾರಿ ಶಕ್ತಿಯಿಂದ ಜಲ್ ಶಕ್ತಿ
|
ಮಹಿಳಾ ನೇತೃತ್ವದ ಜಲ ಸಂರಕ್ಷಣಾ ಉಪಕ್ರಮಗಳು; ಜಲಮೂಲಗಳಲ್ಲಿ ಹೂಳು ತೆಗೆಯುವುದು ಮತ್ತು ಸ್ವಚ್ಛಗೊಳಿಸುವುದು; ಮರುಪೂರಣಕ್ಕಾಗಿ ಕೈಬಿಟ್ಟ ಬೋರ್ವೆಲ್ಗಳ ಪುನರುಜ್ಜೀವನ; ಸ್ಥಳೀಯ ಜಲ ಸಂಪನ್ಮೂಲಗಳ ಮಳೆಗಡಣೆ (ಕಾಡು ಬೆಳೆಸುವುದು) ಮತ್ತು ನವೀಕರಣ
|
2024ರ ಅಭಿಯಾನವು ಮಹಿಳಾ ನೇತೃತ್ವದ ಜಲ ಸಂರಕ್ಷಣಾ ಉಪಕ್ರಮಗಳಿಗೆ ವಿಶೇಷ ಒತ್ತು ನೀಡಿತು. ಜಲ ಸಂರಕ್ಷಣೆ, ನೈರ್ಮಲ್ಯ ಮತ್ತು ಸ್ವಚ್ಛತೆಯಲ್ಲಿ ಮಾದರಿ ಸಾಧನೆಗೈದವರನ್ನು 'ಸ್ವಚ್ಛ ಸುಜಲ್ ಶಕ್ತಿ ಸಮ್ಮಾನ್' ಮೂಲಕ ಗೌರವಿಸುವುದು ಮುಂದುವರಿದಿದೆ.
ಜಲ್ ಶಕ್ತಿ ಕೇಂದ್ರಗಳು ಜಲ್ ಶಕ್ತಿ ಕೇಂದ್ರಗಳು ಜಿಲ್ಲಾ ಮಟ್ಟದ ಜ್ಞಾನ ಮತ್ತು ಸೌಲಭ್ಯ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ. ಇವು ಸಮುದಾಯಗಳಿಗೆ ಮತ್ತು ಸ್ಥಳೀಯ ಆಡಳಿತಕ್ಕೆ ಈ ಕೆಳಗಿನವುಗಳ ಮೂಲಕ ಬೆಂಬಲ ನೀಡುತ್ತವೆ:
- ಮಳೆನೀರು ಕೊಯ್ಲು ತಂತ್ರಗಳ ಕುರಿತು ಮಾಹಿತಿ ಒದಗಿಸುವುದು
- ತಾಂತ್ರಿಕ ಮಾರ್ಗದರ್ಶನ ನೀಡುವುದು
- ಜಲ ಸಂರಕ್ಷಣಾ ಯೋಜನೆ ಮತ್ತು ಅನುಷ್ಠಾನಕ್ಕೆ ಬೆಂಬಲಿಸುವುದು
ಮಳೆನೀರು ಕೊಯ್ಲಿನಿಂದ ಗ್ರಾಮೀಣ ಸ್ಥಿತಿಸ್ಥಾಪಕತ್ವದವರೆಗೆ ಜಲ ಸಂರಕ್ಷಣೆಯು ಸುಸ್ಥಿರ ನೀರಿನ ನಿರ್ವಹಣೆಯ ಮೇಲೆ ಕೇಂದ್ರೀಕೃತವಾಗಿರುವ ಸಮುದಾಯ-ಚಾಲಿತ ಚಳುವಳಿಯಾಗಿ ರೂಪುಗೊಂಡಿದೆ. 'ಕ್ಯಾಚ್ ದಿ ರೈನ್' ಮತ್ತು 'ಜಲ್ ಸಂಚಯ್ ಜನ್ ಭಾಗಿದಾರಿ'ಯಂತಹ ಉಪಕ್ರಮಗಳು ಮಳೆನೀರು ಕೊಯ್ಲು, ಭೂಗತ ಜಲ ಮರುಪೂರಣ ಮತ್ತು ಜಲಮೂಲಗಳ ಪುನರುಜ್ಜೀವನವನ್ನು ಉತ್ತೇಜಿಸುತ್ತವೆ. ವೈಜ್ಞಾನಿಕ ಯೋಜನೆ, ಸ್ಥಳೀಯ ಮಾಲೀಕತ್ವ ಮತ್ತು ಸಂಪನ್ಮೂಲಗಳ ಸಮನ್ವಯತೆಯು ಜಲ ಭದ್ರತೆ, ಗ್ರಾಮೀಣ ಜೀವನೋಪಾಯ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುತ್ತಿವೆ. ಸಮುದಾಯದ ಮಾಲೀಕತ್ವವನ್ನು ಸಮನ್ವಯತೆ, ಡಿಜಿಟಲ್ ಮೇಲ್ವಿಚಾರಣೆ ಮತ್ತು ಆಸ್ತಿ ಸೃಷ್ಟಿಯೊಂದಿಗೆ ಜೋಡಿಸುವ ಮೂಲಕ, ಜೆಸ್ಜೆಬಿ: ಸಿಟಿಆರ್ ಜಲ-ಸುರಕ್ಷಿತ ಭಾರತಕ್ಕೆ ಭದ್ರಟಿಅಯನ್ನು ಹಾಕುತ್ತಿದೆ.
******
References
PIB Backgrounders
https://www.pib.gov.in/FeaturesDeatils.aspx?NoteId=159260&ModuleId=2®=%203&lang=1
Click here to see pdf
(तथ्य सामग्री आईडी: 151151)
आगंतुक पटल : 51
Provide suggestions / comments