Social Welfare
ಅಗ್ಗದ ಕ್ಯಾನ್ಸರ್ ಔಷಧಗಳು: ನೂತನ ಶೇಕಡಾವಾರು ಲಾಭಾಂಶ ಮಿತಿಯು ರೋಗಿಗಳಿಗೆ ಏನನ್ನು ತಿಳಿಸುತ್ತದೆ?
प्रविष्टि तिथि:
06 NOV 2026 14:12 PM
137 ಕ್ಯಾನ್ಸರ್ ವಿರೋಧಿ ಔಷಧಗಳ ವ್ಯಾಪಾರಿ ಲಾಭಾಂಶವನ್ನು ಗರಿಷ್ಠ ಚಿಲ್ಲರೆ ಬೆಲೆಯ ಶೇಕಡಾ 30 ಕ್ಕೆ ಮಿತಿಗೊಳಿಸಲಾಗಿದೆ
|
ಪ್ರತಿಯೊಂದು ಕುಟುಂಬಕ್ಕೂ ಕೈಗೆಟುಕುವ ಮತ್ತು ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆಯನ್ನು ನೀಡುವುದು ಭಾರತ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. 2026 ರ ಅಕ್ಟೋಬರ್ 17 ರಂದು, ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು (ಎನ್ಪಿಪಿಎ) ಪೇಟೆಂಟ್ ಪಡೆದ ಔಷಧಗಳು ಸೇರಿದಂತೆ 137 ಅನುಸೂಚಿತವಲ್ಲದ ಕ್ಯಾನ್ಸರ್ ನಿರೋದಕ ಔಷಧಗಳ ವ್ಯಾಪಾರಿ ಲಾಭಾಂಶವನ್ನು ಗರಿಷ್ಠ ಚಿಲ್ಲರೆ ಬೆಲೆಯ ಶೇಕಡಾ 30 ಕ್ಕೆ ಮಿತಿಗೊಳಿಸಿತು. ಈ ಪರಿಷ್ಕೃತ ಬೆಲೆಗಳು 2026 ರ ನವೆಂಬರ್ 9 ರಿಂದ ಜಾರಿಗೆ ಬರಲಿವೆ. 2026 ರ ನವೆಂಬರ್ 4 ರ ವೇಳೆಗೆ, 70 ಕಂಪನಿಗಳು 120 ಔಷಧಗಳಿಗೆ ಸಂಬಂಧಿಸಿದಂತೆ ತಮ್ಮ ಪರಿಷ್ಕೃತ ಎಂಆರ್ಪಿ ಗಳನ್ನು ವರದಿ ಮಾಡಿದ್ದು, ಗರಿಷ್ಠ ಬೆಲೆ ಕಡಿತವು ಶೇಕಡಾ 96.45 ರಷ್ಟಾಗಿದೆ ಮತ್ತು ಇದರಿಂದ ಒಟ್ಟು ₹3,357.49 ಕೋಟಿ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ಎಂಆರ್ಪಿ ಯಲ್ಲಿನ ಸರಾಸರಿ ಕಡಿತವು ಶೇಕಡಾ 20 ರಿಂದ 70 ರಷ್ಟಿರುತ್ತದೆ.
|
ಕ್ಯಾನ್ಸರ್ ಔಷಧಗಳ ಬೆಲೆಗಳಲ್ಲಿ ಸರಾಸರಿ ಶೇಕಡಾ 20 ರಿಂದ 70 ರಷ್ಟು ಇಳಿಕೆ
ಭಾರತದಲ್ಲಿ ಕ್ಯಾನ್ಸರ್ ಚಿಕಿತ್ಸೆಯನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಸರ್ಕಾರವು ದೇಶಾದ್ಯಂತ ಚಿಲ್ಲರೆ ಮತ್ತು ಆಸ್ಪತ್ರೆ ಫಾರ್ಮಸಿಗಳಲ್ಲಿ ಔಷಧ ಪೂರೈಕೆ ಸರಪಳಿಯುದ್ದಕ್ಕೂ ವಿಧಿಸಲಾಗುತ್ತಿದ್ದ ಹೆಚ್ಚುವರಿ ಲಾಭಾಂಶವನ್ನು ನಿಯಂತ್ರಿಸಿದೆ.
- ಎಂಆರ್ಪಿ ಕಡಿತ: ಔಷಧ ಕಂಪನಿಗಳು ಗರಿಷ್ಠ ಚಿಲ್ಲರೆ ಬೆಲೆಯಲ್ಲಿ ಸರಾಸರಿ ಶೇಕಡಾ 20 ರಿಂದ 70 ರಷ್ಟು ಇಳಿಕೆಯನ್ನು ವರದಿ ಮಾಡಿವೆ. ನವೆಂಬರ್ 4, 2026 ರ ವರದಿಯ ಪ್ರಕಾರ, ದಾಖಲಾದ ಅತ್ಯಂತ ಹೆಚ್ಚಿನ ಬೆಲೆ ಕಡಿತವು ಶೇಕಡಾ 96.45 ರಷ್ಟಾಗಿದೆ.
- ಅಂದಾಜು ಉಳಿತಾಯ: ಈ ಎಂಆರ್ಪಿ ಕಡಿತದ ಪರಿಣಾಮವಾಗಿ, ಸಾರ್ವಜನಿಕರಿಗೆ ಒಟ್ಟು ₹3,357.49 ಕೋಟಿ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ (ನವೆಂಬರ್ 4, 2026 ರ ವರೆಗೆ). ಏಪ್ರಿಲ್ 2025 ರಿಂದ ಮಾರ್ಚ್ 2026 ರವರೆಗೆ ಮಾರಾಟವಾದ ಪ್ರಮಾಣಕ್ಕೆ ಮೂಲ ಬೆಲೆ ಮತ್ತು ಪರಿಷ್ಕೃತ ಬೆಲೆಗಳ ನಡುವಿನ ವ್ಯತ್ಯಾಸವನ್ನು ಅನ್ವಯಿಸಿ ಈ ಅಂದಾಜನ್ನು ಲೆಕ್ಕಹಾಕಲಾಗಿದೆ.
- ಹಿನ್ನೆಲೆ: ಈ ಲಾಭಾಂಶದ ಮಿತಿಯು ಕ್ಯಾನ್ಸರ್ ನಿರೋದಕ ಔಷಧಗಳ ಖರೀದಿ ಬೆಲೆ ಮತ್ತು ಗರಿಷ್ಠ ಚಿಲ್ಲರೆ ಬೆಲೆಯ ನಡುವಿನ ಅಗಾಧ ಅಂತರದ ಕುರಿತು ರಾಜ್ಯ ಪ್ರಾಧಿಕಾರಗಳು, ರೋಗಿಗಳು ಮತ್ತು ನಾಗರಿಕ ಸಮಾಜದಿಂದ ಬಂದ ಕಳವಳಗಳಿಗೆ ನೀಡಿರುವ ಸೂಕ್ತ ಸ್ಪಂದನೆಯಾಗಿದೆ.
- ಪರಿಶೀಲನೆ: ಗ್ರಾಹಕರು ಎನ್ಪಿಪಿಎ ವೆಬ್ಸೈಟ್ ಹಾಗೂ ಅಧಿಕೃತ 'ಫಾರ್ಮಾ ಸಹಿ ದಾಮ್' ಮೊಬೈಲ್ ಆಪ್ ಬಳಸಿ ಪರಿಷ್ಕೃತ ಬೆಲೆಗಳನ್ನು ಖಚಿತಪಡಿಸಿಕೊಳ್ಳಬಹುದು.
- ಬೆಲೆ ಲೆಕ್ಕಾಚಾರ: ಹೊಸ ಬೆಲೆಗಳನ್ನು ಮಾರ್ಚ್ 2026ರ ವಿತರಕರ ಬೆಲೆಯನ್ನು ಆಧಾರವಾಗಿಟ್ಟುಕೊಂಡು ಲೆಕ್ಕಹಾಕಲಾಗಿದೆ.
ವ್ಯಾಪಾರಿ ಲಾಭಾಂಶ ಎಂದರೇನು?
ವ್ಯಾಪಾರಿ ಲಾಭಾಂಶ ಎಂದರೆ ಸರಕು ಮತ್ತು ಸೇವಾ ತೆರಿಗೆಯನ್ನು ಹೊರತುಪಡಿಸಿ, ತಯಾರಕರು ಸ್ಟಾಕಿಸ್ಟ್ ಅಥವಾ ವಿತರಕರಿಗೆ ವಿಧಿಸುವ ಬೆಲೆ ಮತ್ತು ರೋಗಿಯು ಔಷಧಿಗಾಗಿ ಪಾವತಿಸುವ ಗರಿಷ್ಠ ಚಿಲ್ಲರೆ ಬೆಲೆಯ ನಡುವಿನ ವ್ಯತ್ಯಾಸವಾಗಿದೆ. ಈ ವ್ಯಾಪಾರಿ ಲಾಭಾಂಶವು ಅತ್ಯಂತ ಹೆಚ್ಚಿದ್ದಾಗ, ಪೂರೈಕೆ ಸರಪಳಿಯುದ್ದಕ್ಕೂ ಅತಿಯಾದ ಲಾಭವನ್ನು ಸೇರಿಸಲಾಗುತ್ತದೆ. ಇದು ರೋಗಿಗಳಿಗೆ ತಲುಪುವ ಅಂತಿಮ ವೆಚ್ಚವನ್ನು ಅಪಾರವಾಗಿ ಹೆಚ್ಚಿಸುತ್ತದೆ ಮತ್ತು ತಯಾರಕರು ಮಾರಾಟ ಮಾಡುವ ಮೂಲ ಬೆಲೆಗಿಂತಲೂ ಈಗಾಗಲೇ ದುಬಾರಿಯಾಗಿರುವ ಕ್ಯಾನ್ಸರ್ ಔಷಧಗಳನ್ನು ಅತ್ಯಂತ ಹೆಚ್ಚ್ ವೆಚ್ಚದಾಯಕವನ್ನಾಗಿ ಮಾಡುತ್ತದೆ.

ಈ ಆದೇಶವು ಮಾರ್ಚ್ 2026ರ ಸರಾಸರಿ ವಿತರಕರ ಬೆಲೆಯನ್ನು ಆಧಾರವಾಗಿಟ್ಟುಕೊಂಡು ಪ್ರತಿ ಔಷಧಿಯ ನೂತನ ಗರಿಷ್ಠ ಚಿಲ್ಲರೆ ಬೆಲೆಯನ್ನು ನಿಗದಿಪಡಿಸುತ್ತದೆ. ಆ ಬೆಲೆಯ ವ್ಯಾಪ್ತಿಯಲ್ಲಿನ ವ್ಯಾಪಾರಿ ಲಾಭಾಂಶವು ಶೇಕಡಾ 30 ಕ್ಕಿಂತ ಹೆಚ್ಚಿರುವಂತಿಲ್ಲ, ಮತ್ತು ಸರಕು ಹಾಗೂ ಸೇವಾ ತೆರಿಗೆಯನ್ನು ಇದರ ಮೇಲೆಯೇ ಹೆಚ್ಚುವರಿಯಾಗಿ ಸೇರಿಸಲಾಗುತ್ತದೆ.

ಔಷಧಿಗಳ ಬೆಲೆಗಳನ್ನು ಹೇಗೆ ನಿಯಂತ್ರಿಸಲಾಗುತ್ತದೆ?
- ಅಗತ್ಯ ಔಷಧಗಳ ಲಭ್ಯತೆ: ರೋಗಿಗಳಿಗೆ ಅತ್ಯಗತ್ಯ ಜೀವ ರಕ್ಷಕ ಗಿಡಮೂಲಿಕೆ/ಔಷಧಗಳು ಕೈಗೆಟುಕುವ ಬೆಲೆಯಲ್ಲಿ ದೊರೆಯುವಂತೆ ಮಾಡಲು, ಸರ್ಕಾರವು 'ಔಷಧಗಳ (ಬೆಲೆ ನಿಯಂತ್ರಣ) ಆದೇಶ' (ಡಿಪಿಸಿಒ), 2013 ರ ಅಡಿಯಲ್ಲಿ ಔಷಧಿಗಳ ಬೆಲೆಗಳನ್ನು ನಿಯಂತ್ರಿಸುತ್ತದೆ.
- ಶಾಸನಬದ್ಧ ಚೌಕಟ್ಟು: ಇದು ಅತ್ಯಗತ್ಯ ಸರಕುಗಳ ಕಾಯ್ದೆಯ ಮ್ಯಾಂಡೇಟ್ ಅಡಿಯಲ್ಲಿ ಬರುತ್ತದೆ. ಅತಿಯಾದ ಲಾಭಕೋರತನವನ್ನು ತಡೆಗಟ್ಟುವುದು ಮತ್ತು ಮೂಲಭೂತ ಚಿಕಿತ್ಸೆಗಳು ಶೋಷಣೆಯಿಲ್ಲದೆ ಲಭ್ಯವಾಗುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.
- ಡಿಪಿಸಿಒ, 2013 ಔಷಧಿಗಳನ್ನು ಎರಡು ವರ್ಗಗಳಾಗಿ ವಿಂಗಡಿಸುತ್ತದೆ:
- ಅನುಸೂಚಿತ ಔಷಧಿಗಳು: ಇವು ಡಿಪಿಸಿಒ, 2013 ರ ಮೊದಲ ವೇಳಾಪಟ್ಟಿಯಲ್ಲಿ ಅಂದರೆ 'ರಾಷ್ಟ್ರೀಯ ಅತ್ಯಗತ್ಯ ಔಷಧಿಗಳ ಪಟ್ಟಿ' (ಎನ್ಎಲ್ಇಎಂ), 2022 ರಲ್ಲಿ ಸೇರಿಸಲಾದ ಔಷಧಿಗಳಾಗಿವೆ. ಸರ್ಕಾರವು ಇವುಗಳಲ್ಲಿ ಪ್ರತಿಯೊಂದಕ್ಕೂ ಗರಿಷ್ಠ ಬೆಲೆಯನ್ನು ನಿಗದಿಪಡಿಸುತ್ತದೆ. ಎನ್ಎಲ್ಇಎಂ 2022 ಪಟ್ಟಿಯು 388 ಔಷಧಿಗಳನ್ನು ಹೊಂದಿದ್ದು, ಅವುಗಳಲ್ಲಿ 63 ಕ್ಯಾನ್ಸರ್ ವಿರೋಧಿ ಔಷಧಿಗಳಾಗಿವೆ.
-
- ಅನುಸೂಚಿತವಲ್ಲದ ಔಷಧಿಗಳು: ಇವು ಡಿಪಿಸಿಒ, 2013 ರ ಮೊದಲ ವೇಳಾಪಟ್ಟಿಯಲ್ಲಿ ಸೇರದ ಔಷಧಿಗಳಾಗಿವೆ. ಸ್ಥಿರ ಗರಿಷ್ಠ ಬೆಲೆಯನ್ನು ಹೊಂದಿರುವ ಪರಿಶಿಷ್ಟ ಔಷಧಿಗಳಂತಲ್ಲದೆ, ಇವುಗಳನ್ನು ಬೆಲೆ ಮೇಲ್ವಿಚಾರಣೆಯ ಮೂಲಕ ನಿಯಂತ್ರಿಸಲಾಗುತ್ತದೆ: ಡಿಪಿಸಿಒ, 2013 ರ ಪ್ಯಾರಾಗ್ರಾಫ್ 20 ರ ಅಡಿಯಲ್ಲಿ, ತಯಾರಕರು ಹನ್ನೆರಡು ತಿಂಗಳುಗಳಲ್ಲಿ ಎಂಆರ್ಪಿಯನ್ನು ಶೇಕಡಾ 10 ಕ್ಕಿಂತ ಹೆಚ್ಚು ಹೆಚ್ಚಿಸುವಂತಿಲ್ಲ. ಒಂದು ವೇಳೆ ಹೆಚ್ಚಳವು 10% ಮೀರಿದರೆ, ಮುಂದಿನ ಹನ್ನೆರಡು ತಿಂಗಳುಗಳವರೆಗೆ ಬೆಲೆಯನ್ನು 10% ಮಟ್ಟಕ್ಕೆ ಹಿಂತಿರುಗಿಸಬೇಕಾಗುತ್ತದೆ.
- ವ್ಯಾಪಾರಿ ಲಾಭಾಂಶ ಯಾಗ್ಯೀಕರಣ: ಈ ಪರಿಶಿಷ್ಟ ಅತ್ಯಗತ್ಯ ಔಷಧಿಗಳನ್ನು ಹೊರತುಪಡಿಸಿ ಇತರ ದುಬಾರಿ ಔಷಧಿಗಳ ಬೆಲೆಯನ್ನು ನಿಯಂತ್ರಿಸಲು, ಸರ್ಕಾರವು 2019 ರಲ್ಲಿ 42 ಪರಿಶಿಷ್ಟೇತರ ಕ್ಯಾನ್ಸರ್ ವಿರೋಧಿ ಔಷಧಿಗಳನ್ನು ಒಳಗೊಂಡ 'ವ್ಯಾಪಾರಿ ಲಾಭಾಂಶ ಯಾಗ್ಯೀಕರಣ' ಪೈಲಟ್ ಉಪಕ್ರಮವನ್ನು ಜಾರಿಗೆ ತಂದಿತು, ಇದು ರೋಗಿಗಳ ವೆಚ್ಚವನ್ನು ಯಶಸ್ವಿಯಾಗಿ ತಗ್ಗಿಸಿತು.
- ವಿಶೇಷ ಸಾರ್ವಜನಿಕ ಹಿತಾಸಕ್ತಿ ಅಧಿಕಾರ: ಇದನ್ನು ಆಧಾರವಾಗಿಟ್ಟುಕೊಂಡು, ಹಾಗೂ ಚಿಲ್ಲರೆ ಮತ್ತು ಆಸ್ಪತ್ರೆ ಫಾರ್ಮಸಿಗಳ ಬೆಲೆಗಳ ನಡುವಿನ ಅಗಾಧ ವ್ಯತ್ಯಾಸ ಮತ್ತು ಹೆಚ್ಚಿನ ಲಾಭಾಂಶವನ್ನು ತೋರಿಸುವ ಮಾರುಕಟ್ಟೆ ದತ್ತಾಂಶವನ್ನು ಆಧರಿಸಿ, ಸರ್ಕಾರವು ಡಿಪಿಸಿಒ, 2013 ರ ಪ್ಯಾರಾಗ್ರಾಫ್ 19 ರ ಅಡಿಯಲ್ಲಿ ತನ್ನ ವಿಶೇಷ ಸಾರ್ವಜನಿಕ ಹಿತಾಸಕ್ತಿ ಅಧಿಕಾರವನ್ನು ಚಲಾಯಿಸಿತು. ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ಅಡಿಯಲ್ಲಿ ರಚಿಸಲಾದ ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ, ಪ್ರಾಧಿಕಾರವು 17 ಅಕ್ಟೋಬರ್ 2026 ರ ತನ್ನ ಆದೇಶದ ಮೂಲಕ (ಪೇಟೆಂಟ್ ಪಡೆದವು ಸೇರಿದಂತೆ) 137 ಪರಿಶಿಷ್ಟೇತರ ಕ್ಯಾನ್ಸರ್ ವಿರೋಧಿ ಔಷಧಿಗಳನ್ನು ವ್ಯಾಪಾರಿ ಲಾಭಾಂಶ ಯಾಗ್ಯೀಕರಣದ ವ್ಯಾಪ್ತಿಗೆ ತಂದಿತು.
|
ರಾಷ್ಟ್ರೀಯ ಅತ್ಯಗತ್ಯ ಔಷಧಿಗಳ ಪಟ್ಟಿ ಎಂದರೇನು?
ರಾಷ್ಟ್ರೀಯ ಅತ್ಯಗತ್ಯ ಔಷಧಿಗಳ ಪಟ್ಟಿ ಎನ್ನುವುದು ಭಾರತಕ್ಕೆ ಅಗತ್ಯವಿರುವ ಮತ್ತು ಹೆಚ್ಚಿನ ಆದ್ಯತೆಯ ಔಷಧಿಗಳ ಅಧಿಕೃತ ಪಟ್ಟಿಯಾಗಿದೆ. ಇದರ ಇತ್ತೀಚಿನ ಪರಿಷ್ಕರಣೆಯಾದ 'ಎನ್ಎಲ್ಇಎಂ 2022' ಅನ್ನು ಸರ್ಕಾರದ "ಸಬ್ಕೋ ದವಾಯಿ, ಸಸ್ತಿ ದವಾಯಿ" (ಎಲ್ಲರಿಗೂ ಔಷಧಿ, ಅಗ್ಗದ ಔಷಧಿ) ಪರಿಕಲ್ಪನೆಯಡಿಯಲ್ಲಿ 2022 ರ ಸೆಪ್ಟೆಂಬರ್ 13 ರಂದು ಯೂನಿಯನ್ ಆರೋಗ್ಯ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ಬಿಡುಗಡೆ ಮಾಡಿದರು.
- ಇತಿಹಾಸ: ಇದನ್ನು ಮೊದಲು 1996 ರಲ್ಲಿ ರಚಿಸಲಾಯಿತು, ನಂತರ 2003, 2011, 2015 ಮತ್ತು 2022 ರಲ್ಲಿ ಪರಿಷ್ಕರಿಸಲಾಯಿತು.
- ರಚನೆ ಪ್ರಕ್ರಿಯೆ: ವೈದ್ಯರು, ವಿಜ್ಞಾನಿಗಳು, ಉದ್ಯಮ ತಜ್ಞರೊಂದಿಗೆ ಸಮಾಲೋಚಿಸಿ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳನ್ನು ಪರಿಶೀಲಿಸಿದ ನಂತರ 'ಔಷಧಿಗಳ ಮೇಲಿನ ಕಾಯಂ ರಾಷ್ಟ್ರೀಯ ಸಮಿತಿ' ಎಂಬ ತಜ್ಞರ ಸಮಿತಿಯು ಇದನ್ನು ತಯಾರಿಸಿತು.
ಈ ಪಟ್ಟಿಯ ಮುಖ್ಯ ಪ್ರಾಮುಖ್ಯತೆ
- ವೆಚ್ಚ ಕಡಿತ: ಕುಟುಂಬಗಳು ತಮ್ಮ ಸ್ವಂತ ಜೇಬಿನಿಂದ ಮಾಡುವ ವೈದ್ಯಕೀಯ ವೆಚ್ಚಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
- ಉತ್ತಮ ಆರೋಗ್ಯ ರಕ್ಷಣೆ: ಔಷಧಿಗಳು ಸುರಕ್ಷಿತ, ಪರಿಣಾಮಕಾರಿ ಮತ್ತು ಉತ್ತಮ ಗುಣಮಟ್ಟದಿಂದ ಕೂಡಿರುವುದನ್ನು ಖಚಿತಪಡಿಸುತ್ತದೆ.
- ಸುಧಾರಿತ ಯೋಜನೆ: ಸರ್ಕಾರದ ಖರೀದಿ ಪ್ರಕ್ರಿಯೆ, ಆಸ್ಪತ್ರೆ ಬಜೆಟ್ಗಳು, ಆರೋಗ್ಯ ವಿಮೆ ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ತರಬೇತಿಗೆ ಮಾರ್ಗದರ್ಶನ ನೀಡುತ್ತದೆ.
ಆದೇಶದ ಹಿನ್ನೆಲೆಯಲ್ಲಿರುವ ಶಾಸನಬದ್ಧ ಅಧಿಕಾರ: ಡಿಪಿಸಿಒ, 2013 ರ ಪ್ಯಾರಾಗ್ರಾಫ್ 19
- ಸರ್ಕಾರಕ್ಕೆ ವಿಶೇಷ ಅಧಿಕಾರಗಳು: ಅಸಾಧಾರಣ ಸಂದರ್ಭಗಳಲ್ಲಿ, ಪ್ರಚಲಿತ ನಿಯಮಗಳನ್ನು ಮೀರಿದ ಸಾರ್ವಜನಿಕ ಹಿತಾಸಕ್ತಿಯಲ್ಲಿ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅಧಿಕಾರವಿದೆ.
- ಬೆಲೆ ನಿಗದಿ ಅಥವಾ ಬದಲಾವಣೆ: ಸರ್ಕಾರವು ಅಗತ್ಯವೆಂದು ಭಾವಿಸುವಷ್ಟು ಸಮಯದವರೆಗೆ ಯಾವುದೇ ಔಷಧಿಗೆ ಗರಿಷ್ಠ ಬೆಲೆ ಅಥವಾ ಚಿಲ್ಲರೆ ಬೆಲೆಯನ್ನು ನಿಗದಿಪಡಿಸುವ ಅಧಿಕಾರವನ್ನು ಹೊಂದಿದೆ.
- ಈಗಾಗಲೇ ನಿಗದಿಯಾದ ಬೆಲೆಯ ಪರಿಷ್ಕರಣೆ: ಈಗಾಗಲೇ ಬೆಲೆಯನ್ನು ನಿಗದಿಪಡಿಸಿದ್ದರೆ, ಸಗಟು ಬೆಲೆ ಸೂಚ್ಯಂಕಕ್ಕೆ ಸಂಬಂಧಿಸಿದ ಸಾಮಾನ್ಯ ವಾರ್ಷಿಕ ಪರಿಷ್ಕರಣೆಗೆ ಕಾಯದೆ ಸರ್ಕಾರವು ಅದನ್ನು ನೇರವಾಗಿ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.
|
ಹೊಸ ಆದೇಶವು ಕ್ಯಾನ್ಸರ್ ಔಷಧಗಳ ಮೇಲೆ ವ್ಯಾಪಾರಿ ಲಾಭಾಂಶವನ್ನು ಹೇಗೆ ಮಿತಿಗೊಳಿಸುತ್ತದೆ?
- ವ್ಯಾಪಾರಿ ಲಾಭಾಂಶವನ್ನು ಗರಿಷ್ಠ ಚಿಲ್ಲರೆ ಬೆಲೆಯ 30% ಕ್ಕೆ ಮಿತಿಗೊಳಿಸಲಾಗಿದೆ: ವ್ಯಾಪಾರಿ ಲಾಭಾಂಶವು (ತಯಾರಕರು ವಿತರಕರಿಗೆ ವಿಧಿಸುವ ಬೆಲೆ ಮತ್ತು ರೋಗಿಯು ಪಾವತಿಸುವ ಬೆಲೆಯ ನಡುವೆ ಸೇರಿಸಲಾದ ಹೆಚ್ಚುವರಿ ಲಾಭ) 30% ಕ್ಕಿಂತ ಹೆಚ್ಚಿರಬಾರದು.
- ಎಲ್ಲಾ ಆವೃತ್ತಿಗಳಿಗೆ ಅನ್ವಯಿಸುತ್ತದೆ: ಈ ನಿಯಮವು ಕೆಳಗೆ ಪಟ್ಟಿ ಮಾಡಲಾದ ಎಲ್ಲಾ ಕ್ಯಾನ್ಸರ್ ವಿರೋಧಿ ಔಷಧಗಳಿಗೆ ಅನ್ವಯಿಸುತ್ತದೆ; ಅವುಗಳ ಡೋಸ್ ಅಥವಾ ರೂಪ (ಮಾತ್ರೆಗಳು, ಇಂಜೆಕ್ಷನ್ಗಳು ಮತ್ತು ಮುಂತಾದವು) ಯಾವುದೇ ಆಗಿರಲಿ ಮತ್ತು ಅವುಗಳನ್ನು ಪ್ರತ್ಯೇಕವಾಗಿ ಅಥವಾ ಸಂಯೋಜನೆಯಲ್ಲಿ ಮಾರಾಟ ಮಾಡಲಿ, ಈ ನಿಯಮ ಅನ್ವಯಿಸುತ್ತದೆ.
- ಮಾರ್ಚ್ 2026ರ ಬೆಲೆಗಳ ಆಧಾರದ ಮೇಲೆ: ಈ ಲೆಕ್ಕಾಚಾರದ ಆರಂಭಿಕ ಬೆಲೆಯು ಮಾರ್ಚ್ 2026 ರಲ್ಲಿ ಇದ್ದ ವಿತರಕರ ಬೆಲೆಯಾಗಿರಬೇಕು (ಸ್ಟಾಕಿಸ್ಟ್/ವಿತರಕರಿಗೆ ವಿಧಿಸುವ ಬೆಲೆ).
ನೂತನ ಗರಿಷ್ಠ ಚಿಲ್ಲರೆ ಬೆಲೆಯನ್ನು ಹೇಗೆ ಲೆಕ್ಕಹಾಕಲಾಗುತ್ತದೆ?
ರೋಗಿಗೆ ವಿಧಿಸಬಹುದಾದ ಗರಿಷ್ಠ ಚಿಲ್ಲರೆ ಬೆಲೆಗೆ ಈ ಆದೇಶವು ಸೂತ್ರವನ್ನು ನಿಗದಿಪಡಿಸುತ್ತದೆ:

ಆದೇಶದ ವ್ಯಾಪ್ತಿಗೆ ಒಳಪಡುವ ಕ್ಯಾನ್ಸರ್ ವಿರೋಧಿ ಔಷಧಗಳು
|
ಕ್ರಮ ಸಂಖ್ಯೆ
|
ಔಷಧಿಯ ಹೆಸರು
|
ಕ್ರಮ ಸಂಖ್ಯೆ
|
ಔಷಧಿಯ ಹೆಸರು
|
|
1
|
ಅಬೆಮಾಸಿಸಿಕ್ಲಿಬ್
|
70
|
ಲೆನ್ವಾಟಿನಿಬ್
|
|
2
|
ಅಬಿರಾಟೆರೋನ್ ಅಸಿಟೇಟ್
|
71
|
ಲೋಮುಸ್ಟೈನ್
|
|
3
|
ಅಕಾಲಾಬ್ರುಟಿನಿಬ್
|
72
|
ಲಾರ್ಲಾಟಿನಿಬ್
|
|
4
|
ಅಫಾಟಿನಿಬ್
|
73
|
ಲಿಂಫೋಸೀಕ್ ಕಿಟ್
|
|
5
|
ಅಲೆಕ್ಟಿನಿಬ್
|
74
|
ಮೆಗೆಸ್ಟ್ರಾಲ್
|
|
6
|
ಆಲ್ಪೆಲಿಸಿಬ್
|
75
|
ಮಿಡೋಸ್ಟೌರಿನ್
|
|
7
|
ಅಮಿವಾಂಟಾಮಾಬ್
|
76
|
ಮಿರ್ವೆಟುಕ್ಸಿಮಾಬ್ ಸೊರಾವ್ಟಾನ್ಸಿನ್
|
|
8
|
ಅನಾಸ್ಟ್ರೋಜೋಲ್
|
77
|
ಮೈಟೊಮೈಸಿನ್
|
|
9
|
ಅಪಾಲುಟಮೈಡ್
|
78
|
ಮೈಟೊಕ್ಸಾಂಟ್ರೋನ್
|
|
10
|
ಆಸ್ಕಿಮಿನಿಬ್
|
79
|
ನೆಲರಾಬೈನ್
|
|
11
|
ಅಟೆಜೋಲಿಜುಮಾಬ್
|
80
|
ನೆಟುಪಿಟಾಂಟ್
|
|
12
|
ಅವೇಲುಮಾಬ್
|
81
|
ನಿಲೋಟಿನಿಬ್
|
|
13
|
ಆಕ್ಸಿಟಿನಿಬ್
|
82
|
ನಿಮೋಟುಜುಮಾಬ್
|
|
14
|
ಅಜಾಸಿಟಿಡಿನ್
|
83
|
ನಿಂಟೆಡಾನಿಬ್
|
|
15
|
ಬೆಲಾಂಟಾಮಾಬ್ ಮಾಫೊಡೋಟಿನ್
|
84
|
ನಿರಾಪಾರಿಬ್
|
|
16
|
ಬೆವಾಸಿಜುಮಾಬ್
|
85
|
ನಿವೋಲುಮಾಬ್
|
|
17
|
ಬೋಸುಟಿನಿಬ್
|
86
|
ಒಬಿನುಟುಜುಮಾಬ್
|
|
18
|
ಬ್ರೆಂಟ್ುಕ್ಸಿಮಾಬ್ ವೆಡೋಟಿನ್
|
87
|
ಒಫಾಟುಮುಮಾಬ್
|
|
19
|
ಬ್ರಿಗಾಟಿನಿಬ್
|
88
|
ಓಲಾಪಾರಿಬ್
|
|
20
|
ಬುಸಲ್ಫಾನ್
|
89
|
ಒಸಿಮರ್ಟಿನಿಬ್
|
|
21
|
ಕ್ಯಾಬಾಜಿಟಾಕ್ಸೆಲ್
|
90
|
ಪಾಲ್ಬೋಸಿಕ್ಲಿಬ್
|
|
22
|
ಕ್ಯಾಬೋಜಾಂಟಿನಿಬ್ (S)- ಮ್ಯಾಲಿಯೇಟ್
|
91
|
ಪಾನಿಟುಮುಮಾಬ್ (ವೆಕ್ಟಿಬಿಕ್ಸ್)
|
|
23
|
ಕ್ಯಾಪ್ಮಾಟಿನಿಬ್
|
92
|
ಪಾಜೋಪಾನಿಬ್ (ಹೈಡ್ರೋಕ್ಲೋರೈಡ್ ಆಗಿ)
|
|
24
|
ಕಾರ್ಫಿಲ್ಜೋಮಿಬ್
|
93
|
ಪೆಗಾಸ್ಪಾರ್ಜಿನೇಸ್
|
|
25
|
ಕಾರ್ಮುಸ್ಟೈನ್
|
94
|
ಪೆಗ್ಫಿಲ್ಗ್ರಾಸ್ಟಿಮ್
|
|
26
|
ಸೆರಿಟಿನಿಬ್
|
95
|
ಪೆಗಿಲೇಟೆಡ್ ಇಂಟರ್ಫೆರಾನ್ ಆಲ್ಫಾ 2B
|
|
27
|
ಸೆಟುಕ್ಸಿಮಾಬ್
|
96
|
ಪೆಂಬ್ರೋಲಿಜುಮಾಬ್
|
|
28
|
ಕ್ಲಾಡ್ರಿಬೈನ್
|
97
|
ಪೆಮೆಟ್ರೆಕ್ಸ್ಡ್
|
|
29
|
ಕ್ಲೋಫಾರಾಬೈನ್
|
98
|
ಪೆರ್ಟುಜುಮಾಬ್
|
|
30
|
ಕ್ರಿಜೋಟಿನಿಬ್
|
99
|
ಪೆರ್ಟುಜುಮಾಬ್ + ಟ್ರಾಸ್ಟುಜುಮಾಬ್
|
|
31
|
ಸೈಟಾರಾಬೈನ್
|
100
|
ಪ್ಲೆರಿಕ್ಸಾಫೋರ್
|
|
32
|
ಡಾಬ್ರಾಫೆನಿಬ್
|
101
|
ಪೋಲಾಟುಜುಮಾಬ್ ವೆಡೋಟಿನ್
|
|
33
|
ಡಾಕೋಮಿಟಿನಿಬ್
|
102
|
ಪೋಮಲಿಡೋಮೈಡ್
|
|
34
|
ಡಾರಾಟುಮುಮಾಬ್
|
103
|
ರಾಮುಸಿರುಮಾಬ್
|
|
35
|
ಡಾರೋಲುಟಮೈಡ್
|
104
|
ರೆಗೋರಾಫೆನಿಬ್
|
|
36
|
ಡಾಸಾಟಿನಿಬ್
|
105
|
ರೆಲುಗೋಲಿಕ್ಸ್
|
|
37
|
ಡಾಟೋಪೋಟಮಾಬ್ ಡೆರುಕ್ಸ್ಟೇಕನ್
|
106
|
ರಿಬೋಸಿಕ್ಲಿಬ್
|
|
38
|
ಡೆಸಿಟಾಬೈನ್
|
107
|
ರುಕಾಪಾರಿಬ್
|
|
39
|
ಡೆಗಾರೆಲಿಕ್ಸ್
|
108
|
ರುಕ್ಸೋಲಿಟಿನಿಬ್
|
|
40
|
ಡೆನೋಸುಮಾಬ್
|
109
|
ಸೆಲ್ಪರ್ಕಾಟಿನಿಬ್
|
|
41
|
ಡೋಸ್ಟಾರ್ಲಿಮಾಬ್
|
110
|
ಸೆಲುಮೆಟಿನಿಬ್
|
|
42
|
ಡುರ್ವಾಲುಮಾಬ್
|
111
|
ಸೆರ್ಪ್ಲುಲಿಮಾಬ್
|
|
43
|
ಎಲ್ರಾನಾಟಾಮಾಬ್
|
112
|
ಸೋಟೋರಾಸಿಬ್
|
|
44
|
ಎನ್ಫೋರ್ಟುಮಾಬ್ ವೆಡೋಟಿನ್
|
113
|
ಸುನಿಟಿನಿಬ್
|
|
45
|
ಎಂಟ್ರೆಕ್ಟಿನಿಬ್
|
114
|
ಟಾಲ್ಕ್ವೆಟಾಮಾಬ್
|
|
46
|
ಎಂಜಾಲುಟಮೈಡ್
|
115
|
ಟೆಕ್ಲಿಸ್ಟಾಮಾಬ್
|
|
47
|
ಎಪಿರುಬಿಸಿನ್
|
116
|
ಟೆಗಾಫುರ್ + ಯುರಾಸಿಲ್
|
|
48
|
ಎರ್ಡಾಫಿಟಿನಿಬ್
|
117
|
ಟೆಗಾಫುರ್, ಗಿಮೆರಾಸಿಲ್ ಮತ್ತು ಒಟೆರಾಸಿಲ್
|
|
49
|
ಎರಿಬುಲಿನ್ ಮೆಸಿಲೇಟ್
|
118
|
ಟೆಮ್ಸಿರೋಲಿಮಸ್
|
|
50
|
ಎರ್ಲೋಟಿನಿಬ್
|
119
|
ಟೆಪೋಟಿನಿಬ್
|
|
51
|
ಎಸ್ಟ್ರಾಮುಸ್ಟೈನ್
|
120
|
ಥಿಯೋಟೆಪಾ
|
|
52
|
ಎವೆರೋಲಿಮಸ್
|
121
|
ಟಿಸ್ಲೆಲಿಜುಮಾಬ್
|
|
53
|
ಎಕ್ಸೆಮೆಸ್ಟೇನ್
|
122
|
ಟೋಸಿಲಿಜುಮಾಬ್
|
|
54
|
ಫ್ಲುಡಾರಾಬೈನ್
|
123
|
ಟೋಪೋಟೇಕನ್
|
|
55
|
ಫುಲ್ವೆಸ್ಟ್ರಾಂಟ್
|
124
|
ಟೋರಿಪಾಲಿಮಾಬ್
|
|
56
|
ಗಿಲ್ಟೆರಿಟಿನಿಬ್
|
125
|
ಟ್ರಾಬೆಕ್ಟೆಡಿನ್
|
|
57
|
ಗೋಸೆರೆಲಿನ್ ಅಸಿಟೇಟ್
|
126
|
ಟ್ರಾಮೆಟಿನಿಬ್
|
|
58
|
ಇಬ್ರಿಟುಮೋಮಾಬ್
|
127
|
ಟ್ರೆಮೆಲಿಮುಮಾಬ್
|
|
59
|
ಇಬ್ರುಟಿನಿಬ್
|
128
|
ಟ್ರಿಯೋಸಲ್ಫಾನ್
|
|
60
|
ಐಡೆಲಾಸ್ಟಿಸಿಬ್
|
129
|
ಟ್ರೈಫ್ಲುರಿಡಿನ್ + ಟಿಪಿಲಾಸಿಲ್
|
|
61
|
ಇಫೋಸ್ಫಮೈಡ್ ಮತ್ತು ಮೆಸ್ನಾ
|
130
|
ಟ್ರಿಪ್ಟೋರೆಲಿನ್
|
|
62
|
ನಿವೋಲುಮಾಬ್ ಮತ್ತು ರೆಲಾಟ್ಲಿಮಾಬ್
|
131
|
ಟುಕಾಟಿನಿಬ್
|
|
63
|
ಪೆಗಿಲೇಟೆಡ್ ಲಿಪೋಸೋಮಲ್ ಇರಿನೋಟೇಕನ್
|
132
|
ವೆಮುರಾಫೆನಿಬ್
|
|
64
|
ಇನೋಟುಜುಮಾಬ್ ಒಜೊಗಾಮಿಸಿನ್
|
133
|
ವೆನೆಟೋಕ್ಲಾಕ್ಸ್
|
|
65
|
ಇಂಟರ್ಫೆರಾನ್ ಆಲ್ಫಾ 2B
|
134
|
ವಿನೋರೆಲ್ಬೈನ್ ಟಾರ್ಟರೇಟ್
|
|
66
|
ಇಪಿಲಿಮುಮಾಬ್
|
135
|
ವೋರಾಸಿಡೆನಿಬ್
|
|
67
|
ಐವೋಸಿಡೆನಿಬ್
|
136
|
ಜಾನುಬ್ರುಟಿನಿಬ್
|
|
68
|
ಲಪಾಟಿನಿಬ್
|
137
|
ಜೋಲ್ಬೆಟುಕ್ಸಿಮಾಬ್
|
|
69
|
ಲಾಜೆರ್ಟಿನಿಬ್
|
|
|
ಮೂಲ: ರಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ, ಎನ್ಪಿಪಿಎ ಆದೇಶ ಎಸ್ಒ 5690(ಇ) ಅಕ್ಟೋಬರ್ 17, 2026
ರೋಗಿಗಳು ಮತ್ತು ಕಂಪನಿಗಳಿಗೆ ಆಗುವ ಬದಲಾವಣೆಗಳು
- ಬೆಲೆ ಮರುಲೆಕ್ಕಾಚಾರ: ತಯಾರಕರು ಮಾರ್ಚ್ 2026 ರ ತಮ್ಮ ಸರಾಸರಿ ವಿತರಕರ ಬೆಲೆಗಳನ್ನು ಬಳಸಿಕೊಂಡು ಗರಿಷ್ಠ ಚಿಲ್ಲರೆ ಬೆಲೆಗಳನ್ನು ಮರುಲೆಕ್ಕಾಚಾರ ಮಾಡಬೇಕು. ರೋಗಿ ನೆರವು ಕಾರ್ಯಕ್ರಮಗಳಡಿ ನೀಡಲಾಗುವ ಉಚಿತ ಔಷಧಗಳು ಮತ್ತು ನೇರ ಸರ್ಕಾರಿ ಮಾರಾಟವು ಈ ಲೆಕ್ಕಾಚಾರಕ್ಕೆ ಒಳಪಡುವುದಿಲ್ಲ.
- ಜಾರಿಗೆ ಬರುವ ದಿನಾಂಕ: ಹೊಸದಾಗಿ ನಿಗದಾದ ಕಡಿಮೆ ಬೆಲೆಗಳು ನವೆಂಬರ್ 9, 2026 ರಿಂದ ಜಾರಿಗೆ ಬರಲಿವೆ. ಹೊಸ ಬೆಲೆ ಮಿತಿಗಿಂತ ಈಗಾಗಲೇ ಕಡಿಮೆ ದರದಲ್ಲಿರುವ ಔಷಧಿಗಳ ಬೆಲೆಯನ್ನು ಹೆಚ್ಚಿಸುವಂತಿಲ್ಲ.
- ಮಾಹಿತಿ ನೀಡುವುದು ಮತ್ತು ಪ್ರಕಟಣೆ: ಕಂಪನಿಗಳು ತಮ್ಮ ಪರಿಷ್ಕೃತ ಬೆಲೆಗಳ ಕುರಿತು ಎನ್ಪಿಪಿಎಗೆ ಮಾಹಿತಿ ನೀಡಬೇಕು. ಅಲ್ಲದೆ, ಬೆಲೆ ಕಡಿತದ ವಿವರಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಬೇಕು, ತಮ್ಮ ವೆಬ್ಸೈಟ್ಗಳಲ್ಲಿ ಅಪ್ಲೋಡ್ ಮಾಡಬೇಕು ಮತ್ತು ಎಲ್ಲಾ ಚಿಲ್ಲರೆ ವ್ಯಾಪಾರಿಗಳು ಹಾಗೂ ಆಸ್ಪತ್ರೆಗಳಿಗೆ ತಲುಪಿಸಬೇಕು.
- ಎನ್ಪಿಪಿಎ ವೆಬ್ಸೈಟ್ ಮಾಹಿತಿ: ಎನ್ಪಿಪಿಎ ತನ್ನ ವೆಬ್ಸೈಟ್ನಲ್ಲಿ ಈ ಔಷಧಿಗಳ ಪರಿಷ್ಕೃತ ಬೆಲೆಗಳನ್ನು ಪ್ರಕಟಿಸಿದೆ ಮತ್ತು ಕಂಪನಿಗಳು ತಮ್ಮ ಪರಿಷ್ಕೃತ ಬೆಲೆಗಳನ್ನು ಸಲ್ಲಿಸಿದಂತೆ ಪಟ್ಟಿಯನ್ನು ಕಾಲಕಾಲಕ್ಕೆ ನವೀಕರಿಸಲಾಗುತ್ತದೆ.
- ಪ್ರಗತಿ: ನವೆಂಬರ್ 4, 2026 ರ ವೇಳೆಗೆ, 70 ಕಂಪನಿಗಳು 120 ಔಷಧಿಗಳಿಗೆ ಸಂಬಂಧಿಸಿದ 1,136 ಸ್ಟಾಕ್ ಕೀಪಿಂಗ್ ಯೂನಿಟ್ಗಳ ಪರಿಷ್ಕೃತ ಎಂಆರ್ಪಿ ಗಳನ್ನು ವರದಿ ಮಾಡಿದ್ದವು.

- ಪೂರ್ವಾನುಮತಿಯಿಲ್ಲದೆ ಔಷಧಗಳ ಉತ್ಪಾದನೆಯನ್ನು ಕಡಿತಗೊಳಿಸಲು ಕಂಪನಿಗಳಿಗೆ ಅನುಮತಿಯಿಲ್ಲ, ಮತ್ತು ಔಷಧದ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಮೊದಲು 6 ತಿಂಗಳ ಮುಂಚಿತವಾಗಿ ನೋಟಿಸ್ ನೀಡಬೇಕಾಗುತ್ತದೆ.
- ಆಸ್ಪತ್ರೆಗಳು ಮತ್ತು ಕೆಮಿಸ್ಟ್ಗಳು ಹೊಸ ಬೆಲೆಗಳನ್ನು ಸ್ಪಷ್ಟವಾಗಿ ಪ್ರದರ್ಶಿಸಬೇಕು. ತಮ್ಮ ಬೆಲೆಗಳನ್ನು ಕಡಿಮೆ ಮಾಡದ ಯಾವುದೇ ಕಂಪನಿಯು ಹೆಚ್ಚುವರಿ ವಸೂಲಿ ಮಾಡಿದ ಮೊತ್ತವನ್ನು ಬಡ್ಡಿಯೊಂದಿಗೆ ಠೇವಣಿ ಮಾಡಬೇಕಾಗುತ್ತದೆ.
ಕ್ಯಾನ್ಸರ್ ಆರೈಕೆಗಾಗಿ ಸರ್ಕಾರದ ವ್ಯಾಪಕ ಬೆಂಬಲ
ಸಾರ್ವಜನಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಕ್ಯಾನ್ಸರ್ ಚಿಕಿತ್ಸೆ, ತಪಾಸಣೆ ಮತ್ತು ಔಷಧಿಗಳನ್ನು ಒದಗಿಸಲು ಸರ್ಕಾರವು ವಿವಿಧ ಆರೋಗ್ಯ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಎಬಿ-ಪಿಎಂಜೆಎವೈಕ್ಯಾನ್ಸರ್ ಚಿಕಿತ್ಸೆ ಸೇರಿದಂತೆ ನಗದು ರಹಿತ ಆಸ್ಪತ್ರೆ ಆರೈಕೆ
- ಭಾರತ ಸರ್ಕಾರವು ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಮೂಲಕ ಸಮಾಜದ ಶೇಕಡಾ 40 ರಷ್ಟು ಬಡ ಕುಟುಂಬಗಳಿಗೆ ಮತ್ತು 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ₹5 ಲಕ್ಷದವರೆಗೆ ಚಿಕಿತ್ಸಾ ನೆರವು ನೀಡುತ್ತದೆ.
- ಈ ಯೋಜನೆಯು (ಜೂನ್ 30, 2026 ರ ವೇಳೆಗೆ) ₹1.92 ಲಕ್ಷ ಕೋಟಿ ಮೌಲ್ಯದ 12.69 ಕೋಟಿ ಆಸ್ಪತ್ರೆ ದಾಖಲಾತಿಗಳನ್ನು ಅನುಮೋದಿಸಿದೆ.
- ಈ ಯೋಜನೆಯು ನೋಂದಾಯಿತ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳ ಮೂಲಕ ಮೆಡಿಕಲ್ ಆಂಕಾಲಜಿ, ಸರ್ಜಿಕಲ್ ಆಂಕಾಲಜಿ ಮತ್ತು ವಿಕಿರಣ (ರೇಡಿಯೇಶನ್) ಆಂಕಾಲಜಿ ಸೇರಿದಂತೆ 27 ವೈದ್ಯಕೀಯ ವಿಭಾಗಗಳಲ್ಲಿ 1,961 ಚಿಕಿತ್ಸಾ ವಿಧಾನಗಳಿಗೆ ನಗದು ರಹಿತ ಚಿಕಿತ್ಸೆಯನ್ನು ನೀಡುತ್ತದೆ.
- ಯೋಜನೆಯಡಿಯಲ್ಲಿ, ಮೆಡಿಕಲ್ ಆಂಕಾಲಜಿಗಾಗಿ ಸುಮಾರು ₹2,926 ಕೋಟಿ ಮೌಲ್ಯದ 19.5 ಲಕ್ಷ ಆಸ್ಪತ್ರೆ ದಾಖಲಾತಿಗಳನ್ನು ಅನುಮೋದಿಸಲಾಗಿದೆ (ನವೆಂಬರ್ 4, 2026 ರ ವೇಳೆಗೆ).
ಎನ್ಪಿ-ಎನ್ಸಿಡಿ: ತಪಾಸಣೆಯಿಂದ ಚಿಕಿತ್ಸೆಯವರೆಗೆ ಕ್ಯಾನ್ಸರ್ ಆರೈಕೆ
- ರಾಷ್ಟ್ರೀಯ ಆರೋಗ್ಯ ಅಭಿಯಾನದ ಭಾಗವಾಗಿರುವ ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮದ ಮೂಲಕ ಸರ್ಕಾರವು ಮೂಲಸೌಕರ್ಯ, ಮಾನವ ಸಂಪನ್ಮೂಲ ಅಭಿವೃದ್ಧಿ, ತಪಾಸಣೆ, ಆರಂಭಿಕ ರೋಗನಿರ್ಣಯ, ಉಲ್ಲೇಖನ (ಫಲಿತಾಂಶಗಳ ಆಧಾರಿತ ರೆಫರಲ್), ಚಿಕಿತ್ಸೆ ಮತ್ತು ಆರೋಗ್ಯ ಉತ್ತೇಜನವನ್ನು ಬಲಪಡಿಸುತ್ತದೆ.
- ಎನ್ಪಿ-ಎನ್ಸಿಡಿ ಅಡಿಯಲ್ಲಿ:
- ಕ್ಯಾನ್ಸರ್ ರೋಗಿಗಳಿಗಾಗಿ 770 ಜಿಲ್ಲಾ ಎನ್ಸಿಡಿ ಕ್ಲಿನಿಕ್ಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 6,410 ಎನ್ಸಿಡಿ ಕ್ಲಿನಿಕ್ಗಳು ಮತ್ತು 524 ಡೇ ಕೇರ್ ಕ್ಯಾನ್ಸರ್ ಸೆಂಟರ್ಗಳನ್ನು ಸ್ಥಾಪಿಸಲಾಗಿದೆ.
- ಕ್ಯಾನ್ಸರ್ ಚಿಕಿತ್ಸಾ ಮೂಲಸೌಕರ್ಯವನ್ನು ಬಲಪಡಿಸಲು, ದೇಶಾದ್ಯಂತ ಗುಣಮಟ್ಟದ ಕ್ಯಾನ್ಸರ್ ಆರೈಕೆಯ ಸಮಾನ ಲಭ್ಯತೆಯನ್ನು ಸುಧಾರಿಸಲು ಸರ್ಕಾರವು 'ತೃತೀಯ ಹಂತದ ಕ್ಯಾನ್ಸರ್ ಸೌಲಭ್ಯಗಳ ಬಲವರ್ಧನೆ ಯೋಜನೆ'ಯಡಿ ರಾಜ್ಯ ಕ್ಯಾನ್ಸರ್ ಸಂಸ್ಥೆಗಳು, ತೃತೀಯ ಹಂತದ ಕ್ಯಾನ್ಸರ್ ಆರೈಕೆ ಕೇಂದ್ರಗಳು ಮತ್ತು ಎನ್ಪಿ-ಎನ್ಸಿಡಿ ಅಡಿಯಲ್ಲಿ ಡಿಸಿಸಿಸಿಗಳ ಸ್ಥಾಪನೆಗೆ ಬೆಂಬಲ ನೀಡುತ್ತಿದೆ.
- ತೃತೀಯ ಹಂತದ ಕ್ಯಾನ್ಸರ್ ಆರೈಕೆಯನ್ನು ಬಲಪಡಿಸಲು ದೇಶಾದ್ಯಂತ 19 ರಾಜ್ಯ ಕ್ಯಾನ್ಸರ್ ಸಂಸ್ಥೆಗಳು ಮತ್ತು 20 ತೃತೀಯ ಹಂತದ ಕ್ಯಾನ್ಸರ್ ಆರೈಕೆ ಕೇಂದ್ರಗಳಿಗೆ ಅನುಮೋದನೆ ನೀಡಲಾಗಿದೆ.
- ಹೆಚ್ಚುವರಿಯಾಗಿ, ಟಾಟಾ ಮೆಮೋರಿಯಲ್ ಸೆಂಟರ್ ವಾರಾಣಸಿ, ವಿಶಾಖಪಟ್ಟಣಂ, ನ್ಯೂ ಚಂಡೀಗಢ್, ಗುವಾಹಾಟಿ, ಸಂಗ್ರೂರ್ ಮತ್ತು ಮುಜಾಫರ್ಪುರದಲ್ಲಿ ಕ್ಯಾನ್ಸರ್ ಆರೈಕೆ ಒದಗಿಸಲು ಆರು ಆಸ್ಪತ್ರೆಗಳನ್ನು ಸ್ಥಾಪಿಸಿದೆ.
- ರೋಗನಿರ್ಣಯ, ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಸೌಲಭ್ಯಗಳು ಸೇರಿದಂತೆ ಕ್ಯಾನ್ಸರ್ ಚಿಕಿತ್ಸಾ ಸೇವೆಗಳನ್ನು ಎಲ್ಲಾ 22 ಹೊಸ ಎಐಐಎಂಎಸ್ ಗಳಿಗೂ ವಿಸ್ತರಿಸಲಾಗಿದೆ.
- ಜೊತೆಗೆ, ಝಜ್ಜರ್ನ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ ಮತ್ತು ಕೋಲ್ಕತ್ತಾದ ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ಎರಡನೇ ಆವರಣವು ಅತ್ಯಾಧುನಿಕ ರೋಗನಿರ್ಣಯ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುತ್ತವೆ.
- ಈ ಕಾರ್ಯಕ್ರಮವು ಜನಸಂಖ್ಯಾ ಆಧಾರಿತ ತಪಾಸಣೆ, ಅಪಾಯಕಾರಿ ಅಂಶಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮದ ಮೂಲಕ ಕ್ಯಾನ್ಸರ್ ಕಣ್ಗಾವಲನ್ನು ಬಲಪಡಿಸುವುದಕ್ಕೆ ಬೆಂಬಲ ನೀಡುತ್ತದೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಮಾನ್ಯ ಕ್ಯಾನ್ಸರ್ಗಳ ತಪಾಸಣೆ
- ದೇಶಾದ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರಗಳಾಗಿರುವ 'ಆಯುಷ್ಮಾನ್ ಆರೋಗ್ಯ ಮಂದಿರಗಳು' ತಮ್ಮ ಸಮುದಾಯಗಳಲ್ಲಿ ಕ್ಯಾನ್ಸರ್ ತಪಾಸಣೆಯನ್ನು ಒದಗಿಸುತ್ತವೆ.
- ದೇಶಾದ್ಯಂತ 1.86 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಆರೋಗ್ಯ ಮಂದಿರಗಳು ಕಾರ್ಯಾಚರಿಸುತ್ತಿವೆ (ಆಗಸ್ಟ್ 12, 2026 ರ ವೇಳೆಗೆ). ಅವು ಇತರ ಪ್ರಾಥಮಿಕ ಆರೋಗ್ಯ ಸೇವೆಗಳ ಜೊತೆಗೆ 30 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಸಾಮಾನ್ಯ ಕ್ಯಾನ್ಸರ್ಗಳಿಗೆ (ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್) ತಪಾಸಣೆ ನಡೆಸುತ್ತವೆ.
- ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರು (ಆಶಾ) ಮತ್ತು ಸಹಾಯಕ ನರ್ಸ್ ಮಿಡ್ವೈಫ್ಗಳಂತಹ ತರಬೇತಿ ಪಡೆದ ಮುಂಚೂಣಿ ಕಾರ್ಯಕರ್ತರ ಮೂಲಕ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ತಪಾಸಣೆ ಸೇವೆಗಳನ್ನು ಒದಗಿಸಲಾಗುತ್ತದೆ.
- ಜುಲೈ 2026 ರ ವೇಳೆಗೆ ನಡೆಸಲಾದ ತಪಾಸಣೆಗಳ ವಿವರ:
- ಬಾಯಿಯ ಕ್ಯಾನ್ಸರ್: 36.11 ಕೋಟಿ
- ಸ್ತನ ಕ್ಯಾನ್ಸರ್: 16.94 ಕೋಟಿ
- ಗರ್ಭಕಂಠದ (ಸೆರ್ವಿಕಲ್) ಕ್ಯಾನ್ಸರ್: 9.31 ಕೋಟಿ
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಉಚಿತ ಹೆಚ್ಪಿವಿ ಲಸಿಕೆ
- ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 14 ವರ್ಷದ ಅರ್ಹ ಫಲಾನುಭವಿ ಬಾಲಕಿಯರಿಗಾಗಿ (ಸುಮಾರು 1.2 ಕೋಟಿ) ಫೆಬ್ರವರಿ 28, 2026 ರಂದು ರಾಷ್ಟ್ರವ್ಯಾಪಿ ಹ್ಯೂಮನ್ ಪಾಪಿಲೋಮವೈರಸ್ ಲಸಿಕೆ ಅಭಿಯಾನವನ್ನು ಪ್ರಾರಂಭಿಸಲಾಯಿತು.
- ಫೆಬ್ರವರಿ 2026 ರಲ್ಲಿ ಪ್ರಾರಂಭವಾದಾಗಿನಿಂದ ಈ ಅಭಿಯಾನದ ಅಡಿಯಲ್ಲಿ ಭಾರತವು 80 ಲಕ್ಷಕ್ಕೂ ಹೆಚ್ಚು ಹೆಚ್ಪಿವಿ ಲಸಿಕೆಯ ಡೋಸ್ಗಳನ್ನು ಉಚಿತವಾಗಿ ನೀಡಿದೆ (ಸೆಪ್ಟೆಂಬರ್ 11, 2026 ರ ವೇಳೆಗೆ).
ಕಡಿಮೆ ವೆಚ್ಚದ ಔಷಧ ಮಳಿಗೆಗಳು: ಜನೌಷಧಿ ಮತ್ತು ಅಮೃತ್ (ಅಮೃತ್)
- ಸಾಮಾನ್ಯ ಜನರಿಗೆ ಕ್ಯಾನ್ಸರ್ ಔಷಧಗಳು ಸೇರಿದಂತೆ ಅತ್ಯಗತ್ಯ ಔಷಧಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಸರ್ಕಾರವು ವಿವಿಧ ಯೋಜನೆಗಳನ್ನು ನಡೆಸುತ್ತಿದೆ.
- ಇವುಗಳು ಕೈಗೆಟುಕುವ ಬೆಲೆಯ ಕ್ಯಾನ್ಸರ್ ಔಷಧಗಳು, ಸ್ಟೆಂಟ್ಗಳು ಮತ್ತು ಇಂಪ್ಲಾಂಟ್ಗಳ ಲಭ್ಯತೆಯನ್ನು ಸುಧಾರಿಸುತ್ತವೆ, ಸ್ವಂತ ಜೇಬಿನಿಂದ ಮಾಡುವ ವೆಚ್ಚವನ್ನು ಕಡಿಮೆ ಮಾಡುತ್ತವೆ ಮತ್ತು ದೀರ್ಘಕಾಲೀನ ಚಿಕಿತ್ಸೆಗೆ ಬೆಂಬಲ ನೀಡುತ್ತವೆ.
ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ (ಪಿಎಂಬಿಜೆಪಿ)
- ಪಿಎಂಬಿಜೆಪಿ ಯೋಜನೆಯು ಕ್ಯಾನ್ಸರ್ ಸೇರಿದಂತೆ ಎಲ್ಲಾ ಪ್ರಮುಖ ಚಿಕಿತ್ಸಾ ವಿಭಾಗಗಳನ್ನು ಒಳಗೊಂಡಂತೆ 2,110 ಔಷಧಗಳು ಮತ್ತು 315 ಶಸ್ತ್ರಚಿಕಿತ್ಸಾ ಪರಿಕರಗಳು ಹಾಗೂ ವೈದ್ಯಕೀಯ ಉಪಕರಣಗಳನ್ನು ಒಳಗೊಂಡಿದೆ.
- ದೇಶಾದ್ಯಂತ 20,149 ಜನೌಷಧಿ ಕೇಂದ್ರಗಳು ಕಾರ್ಯಾಚರಿಸುತ್ತಿವೆ (ಜೂನ್ 30, 2026 ರ ವೇಳೆಗೆ).
- 2021-22 ರಿಂದ 2025-26 ರವರೆಗಿನ ಐದು ಹಣಕಾಸು ವರ್ಷಗಳಲ್ಲಿ, ಪಿಎಂಬಿಜೆಪಿ ದೇಶಾದ್ಯಂತ ಜನೌಷಧಿ ಕೇಂದ್ರಗಳ ಮೂಲಕ ₹7,873.85 ಕೋಟಿ ಮಾರಾಟವನ್ನು ಮಾಡಿದೆ, ಇದು ನಾಗರಿಕರಿಗೆ ಸುಮಾರು ₹37,200 ಕೋಟಿ ಉಳಿತಾಯಕ್ಕೆ ಕಾರಣವಾಗಿದೆ (ಮಾರ್ಚ್ 31, 2026 ರ ವೇಳೆಗೆ).
ಚಿಕಿತ್ಸಾ ಫಾರ್ಮಸಿಗಳಿಗಾಗಿ ಕೈಗೆಟುಕುವ ಔಷಧಗಳು ಮತ್ತು ನಂಬಿಗಸ್ತ ಇಂಪ್ಲಾಂಟ್ಗಳು (ಅಮೃತ್)
- ಅಮೃತ್ ಯೋಜನೆಯು ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಇತರ ಗಂಭೀರ ಕಾಯಿಲೆಗಳಿಗೆ ಅಗತ್ಯವಿರುವ ಔಷಧಗಳನ್ನು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುವ ಗುರಿಯನ್ನು ಹೊಂದಿದೆ.
- ಈ ಉಪಕ್ರಮವು 6,500 ಕ್ಕೂ ಹೆಚ್ಚು ಔಷಧಗಳು, ಇಂಪ್ಲಾಂಟ್ಗಳು, ಶಸ್ತ್ರಚಿಕಿತ್ಸಾ ಉತ್ಪನ್ನಗಳು ಮತ್ತು ಇತರ ಆರೋಗ್ಯ ರಕ್ಷಣಾ ವಸ್ತುಗಳನ್ನು ಗರಿಷ್ಠ ಚಿಲ್ಲರೆ ಬೆಲೆಯಲ್ಲಿ ಸರಾಸರಿ ಶೇಕಡಾ 50 ರಷ್ಟು ರಿಯಾಯಿತಿಯಲ್ಲಿ ನೀಡುತ್ತದೆ.
- 24 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳಲ್ಲಿ 285 ಅಮೃತ್ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ.
- ಪ್ರಾರಂಭವಾದಾಗಿನಿಂದ, ಅಮೃತ್ 8.13 ಕೋಟಿಗೂ ಹೆಚ್ಚು ರೋಗಿಗಳಿಗೆ ಸೇವೆ ಸಲ್ಲಿಸಿದೆ.
- ಜಾಲದ ಮೂಲಕ ಎಂಆರ್ಪಿಯಲ್ಲಿ ಸುಮಾರು ₹22,323 ಕೋಟಿ ಮೌಲ್ಯದ ಔಷಧಗಳು ಮತ್ತು ಆರೋಗ್ಯ ರಕ್ಷಣಾ ಉತ್ಪನ್ನಗಳನ್ನು ವಿತರಿಸಲಾಗಿದ್ದು, ಇದರ ಪರಿಣಾಮವಾಗಿ ರೋಗಿಗಳಿಗೆ ಸುಮಾರು ₹10,969 ಕೋಟಿ ಉಳಿತಾಯವಾಗಿದೆ ಮತ್ತು ಅವರ ಸ್ವಂತ ಆರೋಗ್ಯ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡಿದೆ (ಸೆಪ್ಟೆಂಬರ್ 24, 2026 ರ ವೇಳೆಗೆ).
ಕ್ಯಾನ್ಸರ್ ಆರೈಕೆಗಾಗಿ ಟೆಲಿ-ಸಮಾಲೋಚನೆ
ವಿಶೇಷವಾಗಿ ದೂರದ ಮತ್ತು ಸೌಲಭ್ಯ ವಂಚಿತ ಪ್ರದೇಶಗಳಲ್ಲಿ ತಜ್ಞರ ಆರೈಕೆಯ ಲಭ್ಯತೆಯನ್ನು ಸುಧಾರಿಸಲು ಇಸಂಜೀವಿನಿ ವೇದಿಕೆಯ ಮೂಲಕ ಟೆಲಿ-ಸಮಾಲೋಚನಾ ಸೇವೆಗಳನ್ನು ಒದಗಿಸಲಾಗುತ್ತಿದೆ. ಇದು ಆಂಕಾಲಜಿ ಆರೈಕೆಯನ್ನು ಸಹ ಒಳಗೊಂಡಿದೆ.
- 50 ಕೋಟಿಗೂ ಹೆಚ್ಚು ರೋಗಿಗಳು ಕ್ಯಾನ್ಸರ್ ಆರೈಕೆ ಸೇರಿದಂತೆ ಎಲ್ಲಾ ರೀತಿಯ ಆರೈಕೆಗಾಗಿ ಈ ಸೇವೆಯನ್ನು ಬಳಸಿಕೊಂಡಿದ್ದಾರೆ (ಅಕ್ಟೋಬರ್ 21, 2026 ರ ವೇಳೆಗೆ).
ಕ್ಯಾನ್ಸರ್ ಚಿಕಿತ್ಸೆಗಳನ್ನು ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು
ವ್ಯಾಪಾರಿ ಲಾಭಾಂಶದ ಮಿತಿಯು ಕ್ಯಾನ್ಸರ್ ಆರೈಕೆಯ ಪ್ರತಿಯೊಂದು ಹಂತದಲ್ಲೂ ಸರ್ಕಾರವು ನೀಡುತ್ತಿರುವ ಬೆಂಬಲಕ್ಕೆ ಮತ್ತಷ್ಟು ಶಕ್ತಿ ತುಂಬುತ್ತದೆ: ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ತಪಾಸಣೆ, ಹೆಣ್ಣುಮಕ್ಕಳಿಗೆ ಉಚಿತ ಹೆಚ್ಪಿವಿ ಲಸಿಕೆ, ಎಬಿ-ಪಿಎಂಜೆಎವೈಅಡಿಯಲ್ಲಿ ನಗದು ರಹಿತ ಆಸ್ಪತ್ರೆ ಚಿಕಿತ್ಸೆ, ಮತ್ತು ಜನೌಷಧಿ ಕೇಂದ್ರಗಳು ಹಾಗೂ ಅಮೃತ್ ಫಾರ್ಮಸಿಗಳಲ್ಲಿ ಕಡಿಮೆ ವೆಚ್ಚದ ಔಷಧಗಳು. ಒಟ್ಟಾಗಿ, ಈ ಕ್ರಮಗಳು ಗುಣಮಟ್ಟದ ಕ್ಯಾನ್ಸರ್ ಆರೈಕೆಯನ್ನು ಹೆಚ್ಚು ಕುಟುಂಬಗಳ ವಾಸಸ್ಥಳಕ್ಕೆ ಹತ್ತಿರದಲ್ಲಿ ದೊರೆಯುವಂತೆ ಮಾಡುತ್ತವೆ.
References
Ministry of Chemicals and Fertilizers
https://www.pib.gov.in/PressReleasePage.aspx?PRID=2321092®=48&lang=2
https://www.pib.gov.in/PressReleasePage.aspx?PRID=2324743
https://nppa.gov.in/storage/uploads/tender/277271-17-10-2026.pdf
https://www.pib.gov.in/PressReleasePage.aspx?PRID=2297568®=3&lang=1
https://nppa.gov.in/storage/uploads/pdf/DPCO-inclusive-of-all-ammendmentscompressedpdf-6f9edc1bf7c000eb02b7eee6c180b527.pdf
https://nppa.gov.in/en/search_medicine_price
https://www.pib.gov.in/PressReleasePage.aspx?PRID=2329698
https://nppa.gov.in/storage/uploads/tender/revised-mrp-report-04112026-04-11-2026.pdf
https://x.com/nppa_india/status/2117986916121628974
https://x.com/Pharmadept/status/2117305360692466164
Ministry of Health and Family Welfare
https://www.pib.gov.in/PressReleasePage.aspx?PRID=1858931®=48&lang=2
https://www.pib.gov.in/PressReleasePage.aspx?PRID=2286948®=48&lang=2
https://www.pib.gov.in/PressReleasePage.aspx?PRID=2294278
https://dashboard.nha.gov.in/public/
https://sansad.in/getFile/lsapps/loksabhaquestions/annex/188/AU931_DhFQWt.pdf
https://elibrary.sansad.in/server/api/core/bitstreams/b3b40e24-2357-43ce-b2ec-89a9d548f521/view
https://www.pib.gov.in/PressReleaseDetail.aspx?PRID=2309109®=3&lang=1
https://esanjeevani.mohfw.gov.in/
https://www.pib.gov.in/PressReleasePage.aspx?PRID=2314433®=48&lang=2
PIB Backgrounders
https://www.pib.gov.in/FactsheetDetails.aspx?Id=150834®=5&lang=1
Click to see pdf
*****
(तथ्य सामग्री आईडी: 151176)
आगंतुक पटल : 77
Provide suggestions / comments