Infrastructure
ಭಾರತದ ನವೀಕರಿಸಬಹುದಾದ ಇಂಧನ ಪ್ರಯಾಣ: ಸ್ವಚ್ಛ ಭವಿಷ್ಯದತ್ತ ಹೆಜ್ಜೆ
प्रविष्टि तिथि:
13 NOV 2026 13:08 PM
ಭಾರತದ ಇಂಧನ ವಲಯದ ಚಿತ್ರಣ
ಬೆಳೆಯುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು, ಇಂಧನ ಭದ್ರತೆಯನ್ನು ಬಲಪಡಿಸಲು ಮತ್ತು ಸ್ವಚ್ಛ ಭವಿಷ್ಯವನ್ನು ಬೆಂಬಲಿಸಲು ಭಾರತದ ನವೀಕರಿಸಬಹುದಾದ ಇಂಧನ ವಲಯವು ವೇಗವಾಗಿ ವಿಸ್ತರಿಸುತ್ತಿದೆ. ಈ ಪರಿವರ್ತನೆಯು ಸೌರ, ಗಾಳಿ, ಜಲವಿದ್ಯುತ್, ಜೈವಿಕ ಇಂಧನ, ಭೂಶಾಖೆಯ ಇಂಧನ ಮತ್ತು ಹಸಿರು ಜಲಜನಕವನ್ನು ಒಳಗೊಂಡಿದೆ.
ನೀತಿ ಬೆಂಬಲ, ಮೂಲಭೂತ ಸೌಕರ್ಯ ಅಭಿವೃದ್ಧಿ, ದೇಶೀಯ ಉತ್ಪಾದನೆ, ಉತ್ಪಾದನಾ ವಿಸ್ತರಣೆ ಮತ್ತು ವಿಶಾಲವಾದ ಇಂಧನ ಪ್ರವೇಶವು ಈ ರೂಪಾಂತರಕ್ಕೆ ರೂಪ ನೀಡುತ್ತಿವೆ. ಮನೆಗಳಿಗೆ ರೂಫ್‌ಟಾಪ್ ಸೌರಶಕ್ತಿಯಿಂದ ಹಿಡಿದು ದೊಡ್ಡ ಗಾಳಿ ವಿದ್ಯುತ್, ತೇಲುವ ಸೌರ ಯೋಜನೆಗಳು ಮತ್ತು ಶೇಖರಣಾ ಯೋಜನೆಗಳವರೆಗೆ, ಭಾರತವು ತನ್ನ ಇಂಧನ ಮಿಶ್ರಣದಲ್ಲಿ ನವೀಕರಿಸಬಹುದಾದ ಇಂಧನಗಳ ಪಾಲನ್ನು ಸ್ಥಿರವಾಗಿ ಹೆಚ್ಚಿಸುತ್ತಿದೆ.
ಒಂದು ನೋಟದಲ್ಲಿ ಅಂಕಿಅಂಶಗಳು:
- ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯ: ಅಕ್ಟೋಬರ್ 2026 ರ ವೇಳೆಗೆ ಸುಮಾರು 560 ಗಿಗಾವ್ಯಾಟ್, ಇದು 2014 ರಲ್ಲಿ 249 ಗಿಗಾವ್ಯಾಟ್ ಇತ್ತು.
- ಫಾಸಿಲ್ ಅಲ್ಲದ (ಅಶ್ಮೀಭೂತ ಇಂಧನ ರಹಿತ) ಸಾಮರ್ಥ್ಯ: ಜುಲೈ 31, 2026 ರ ಹೊತ್ತಿಗೆ 308 ಗಿಗಾವ್ಯಾಟ್, ಇದು ಒಟ್ಟು ಸ್ಥಾಪಿತ ಸಾಮರ್ಥ್ಯದ ಶೇಕಡಾ 55 ರಷ್ಟಿದೆ.
- ನವೀಕರಿಸಬಹುದಾದ ಇಂಧನ ಸ್ಥಾಪಿತ ಸಾಮರ್ಥ್ಯದಲ್ಲಿ ಭಾರತವು ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ.
- ಭಾರತವು ಜುಲೈ 2024 ರಿಂದ ಜೂನ್ 2026 ರ ಅವಧಿಯಲ್ಲಿ ತನ್ನ ನವೀಕರಿಸಬಹುದಾದ ಇಂಧನ ವಲಯದಲ್ಲಿ 63.7 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡಿದೆ.
|
ಭಾರತ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ (ಬ್ರೇಸ್) 2026
ಹೂಡಿಕೆ. ನಾವೀನ್ಯತೆ. ಸ್ಫೂರ್ತಿ.
ಭಾರತ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ 2026 ನವೆಂಬರ್ 2 ರಿಂದ 5 ರವರೆಗೆ ಹೊಸ ದೆಹಲಿಯಲ್ಲಿ ನಡೆಯಿತು. ಈ ಶೃಂಗಸಭೆಯು ಜಾಗತಿಕ ನೀತಿ ನಿರೂಪಕರು, ಹೂಡಿಕೆದಾರರು, ಉದ್ಯಮ ನಾಯಕರು, ತಯಾರಕರು ಮತ್ತು ನಾವೀನ್ಯಕಾರರನ್ನು ಒಂದೆಡೆ ತಂದಿತು. ಆಸ್ಟ್ರೇಲಿಯಾ, ಡೆನ್ಮಾರ್ಕ್, ಯುರೋಪಿಯನ್ ಒಕ್ಕೂಟ, ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್ಸ್, ನಾರ್ವೆ, ಸ್ವೀಡನ್ ಮತ್ತು ಯುುನೈಟೆಡ್ ಕಿಂಗ್‌ಡಮ್ ದೇಶಗಳು ಪಾಲುದಾರ ರಾಷ್ಟ್ರಗಳಾಗಿ ಭಾಗವಹಿಸಿದ್ದವು. ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶ ಸೇರಿದಂತೆ ಹದಿಮೂರು ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ನವೀಕರಿಸಬಹುದಾದ ಇಂಧನ ಸಾಮರ್ಥ್ಯ, ಹೂಡಿಕೆ ಅವಕಾಶಗಳು ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ಪ್ರದರ್ಶಿಸಿದವು. ಈ ಕಾರ್ಯಕ್ರಮದಲ್ಲಿ 400 ಕ್ಕೂ ಹೆಚ್ಚು ತಯಾರಕರು, ತಂತ್ರಜ್ಞಾನ ಒದಗಿಸುವವರು, ಸ್ಟಾರ್ಟ್‌ಅಪ್‌ಗಳು ಮತ್ತು ಸಂಶೋಧನಾ ಸಂಸ್ಥೆಗಳನ್ನು ಒಳಗೊಂಡ ಪ್ರದರ್ಶನವೂ ಇತ್ತು. ನವೀಕರಿಸಬಹುದಾದ ಇಂಧನ ಹಣಕಾಸು, ಸ್ವಚ್ಛ ಇಂಧನ ಉತ್ಪಾದನೆ, ಇಂಧನ ಶೇಖರಣೆ, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಕಾರ್ಯಪಡೆಯ ಅಭಿವೃದ್ಧಿಯ ಕುರಿತು ಚರ್ಚೆಗಳು ನಡೆದವು.
|
ಸೌರಶಕ್ತಿ: ವಿಸ್ತರಣೆ ಮತ್ತು ಜನಸಾಮಾನ್ಯರಿಗೆ ತಲುಪುವಿಕೆ
ಭಾರತದ ಸ್ಥಾಪಿತ ಸೌರಶಕ್ತಿ ಸಾಮರ್ಥ್ಯವು (ಅಕ್ಟೋಬರ್ 31, 2026 ರ ವೇಳೆಗೆ) ಸುಮಾರು 175 ಗಿಗಾವ್ಯಾಟ್‌ಗಳನ್ನು ತಲುಪಿದೆ. ಇದು 2014 ರಲ್ಲಿ ಕೇವಲ 2.8 ಗಿಗಾವ್ಯಾಟ್ ಇತ್ತು. ಪ್ರಸ್ತುತ ಸೌರಶಕ್ತಿಯು ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಅತಿ ದೊಡ್ಡ ಭಾಗವಾಗಿದೆ. 2025 ರಲ್ಲಿ ಭಾರತವು 37 ಗಿಗಾವ್ಯಾಟ್‌ಗಳಿಗೂ ಅಧಿಕ ಸೌರಶಕ್ತಿ ಸಾಮರ್ಥ್ಯವನ್ನು ಸೇರಿಸುವ ಮೂಲಕ (ಅಮೆರಿಕವು 34 ಗಿಗಾವ್ಯಾಟ್ ಸೇರಿಸಿದೆ), ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಸೌರಶಕ್ತಿ ಬೆಳವಣಿಗೆಯ ಮಾರುಕಟ್ಟೆಯಾಗಿ ಹೊರಹೊಮ್ಮಿದೆ.

ಪಿಎಂ-ಸೂರ್ಯ ಘರ್: ಮುಫ್ಟ್ ಬಿಜ್ಲಿ ಯೋಜನೆ ಫೆಬ್ರವರಿ 2024 ರಲ್ಲಿ 1 ಕೋಟಿ ಕುಟುಂಬಗಳಿಗಾಗಿ ಒಟ್ಟು ₹75,021 ಕೋಟಿ ವೆಚ್ಚದಲ್ಲಿ ಈಯೋಜನೆಯನ್ನು ಪ್ರಾರಂಭಿಸಲಾಯಿತು
- ದೇಶಾದ್ಯಂತ ರೂಫ್‌ಟಾಪ್ ಸೌರಶಕ್ತಿ ಸ್ಥಾಪನೆಗಳಿಂದ ಈಗ 65.26 ಲಕ್ಷ ಕುಟುಂಬಗಳು ಪ್ರಯೋಜನ ಪಡೆಯುತ್ತಿವೆ (ನವೆಂಬರ್ 02, 2026 ರ ಹೊತ್ತಿಗೆ).
- ಫಲಾನುಭವಿಗಳಿಗೆ ಸರಿಸುಮಾರು ₹35,800 ಕೋಟಿ ಸಬ್ಸಿಡಿಯನ್ನು ವರ್ಗಾಯಿಸಲಾಗಿದೆ.
- ಅಕ್ಟೋಬರ್ 2026 ರವರೆಗೆ ಸುಮಾರು 21 ಲಕ್ಷ ಕುಟುಂಬಗಳು ಶೂನ್ಯ ವಿದ್ಯುತ್ ಬಿಲ್ ಪಡೆದಿವೆ.
- ಇಲ್ಲಿಯವರೆಗೆ ಈ ಯೋಜನೆಯಡಿಯಲ್ಲಿ ಒಟ್ಟು 19.1 ಗಿಗಾವ್ಯಾಟ್ ರೂಫ್‌ಟಾಪ್ ಸೌರ ಸಾಮರ್ಥ್ಯವನ್ನು ಸ್ಥಾಪಿಸಲಾಗಿದೆ.
ಪ್ರಧಾನಮಂತ್ರಿ ಸೂರ್ಯ ಸರೋವರ ಯೋಜನೆ
ಸರ್ಕಾರವು ಜುಲೈ 31, 2026 ರಂದು ₹5,070 ಕೋಟಿ ವೆಚ್ಚದಲ್ಲಿ ಪ್ರಧಾನಮಂತ್ರಿ ಸೂರ್ಯ ಸರೋವರ ಯೋಜನೆಗೆ ಅನುಮೋದನೆ ನೀಡಿತು. ಇದು ಶಕ್ತಿ ಶೇಖರಣಾ ವ್ಯವಸ್ಥೆಗಳೊಂದಿಗೆ ತೇಲುವ ಸೌರ ದ್ಯುತಿವಿದ್ಯುಜ್ಜನಕ ಯೋಜನೆಗಳ ಅಭಿವೃದ್ಧಿಯೊಂದಿಗೆ ಭಾರತದ ಸೌರಶಕ್ತಿ ವಿಸ್ತರಣೆಗೆ ಹೊಸ ಆಯಾಮವನ್ನು ನೀಡುತ್ತದೆ.
- ಗುರಿ: 5,000 ಮೆಗಾವ್ಯಾಟ್ ಸಾಮರ್ಥ್ಯದ ತೇಲುವ ಸೌರ ಪಿವಿ ಯೋಜನೆಗಳು.
- ಕನಿಷ್ಠ ಎರಡು ಗಂಟೆಗಳ ಅವಧಿಯ, 10,000 ಮೆಗಾವ್ಯಾಟ್-ಗಂಟೆಗೆ ಸಮಾನವಾದ ಜೊತೆಯಾಗಿ ಸ್ಥಾಪಿಸಲಾದ ಶೇಖರಣಾ ವ್ಯವಸ್ಥೆ.
- 2026-27 ನೇ ಹಣಕಾಸು ವರ್ಷದಿಂದ 2030-31 ನೇ ಹಣಕಾಸು ವರ್ಷದವರೆಗೆ ಯೋಜನೆಗಳಿಗೆ ಅನುಮೋದನೆ ನೀಡಲಾಗುವುದು.
ಪವನ ಶಕ್ತಿ
ಭಾರತದ ನವೀಕರಿಸಬಹುದಾದ ಇಂಧನ ವಿಸ್ತರಣೆಯಲ್ಲಿ ಪವನ ಶಕ್ತಿಯು ಪ್ರಮುಖ ಸ್ತಂಭವಾಗಿ ಮುಂದುವರಿದಿದೆ. ಸ್ಥಾಪಿತ ಪವನ ವಿದ್ಯುತ್ ಸಾಮರ್ಥ್ಯದಲ್ಲಿ ಭಾರತವು ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿದೆ. ಈ ವಲಯವು ಬಲವಾದ ವಾರ್ಷಿಕ ಸೇರ್ಪಡೆಗಳು ಮತ್ತು ಬೆಳೆಯುತ್ತಿರುವ ದೇಶೀಯ ಉತ್ಪಾದನೆಯನ್ನು ಕಾಣುತ್ತಿದೆ.
- ಸ್ಥಾಪಿತ ಸಾಮರ್ಥ್ಯ: ಅಕ್ಟೋಬರ್ 29, 2026 ರಂತೆ 59.20 ಗಿಗಾವ್ಯಾಟ್.
- ಭಾರತವು 2025-26 ನೇ ಹಣಕಾಸು ವರ್ಷದಲ್ಲಿ 6.05 ಗಿಗಾವ್ಯಾಟ್ ಅನ್ನು ಸೇರಿಸಿದೆ, ಇದು ಇಲ್ಲಿಯವರೆಗಿನ ಅತ್ಯಧಿಕ ವಾರ್ಷಿಕ ಪವನ ಸಾಮರ್ಥ್ಯದ ಸೇರ್ಪಡೆಯಾಗಿದ್ದು, 2024-25 ಕ್ಕಿಂತ ಶೇಕಡಾ 46 ರಷ್ಟು ಹೆಚ್ಚಾಗಿದೆ.
- ಸುಮಾರು 28 ಗಿಗಾವ್ಯಾಟ್ ಹೆಚ್ಚುವರಿ ಪವನ ಸಾಮರ್ಥ್ಯವು ಅನುಷ್ಠಾನದ ಹಂತದಲ್ಲಿದೆ.
- ಪವನ ಟರ್ಬೈನ್ ಉತ್ಪಾದನಾ ಸಾಮರ್ಥ್ಯವು ಮಾರ್ಚ್ 2026 ರಲ್ಲಿ ಸುಮಾರು 24 ಗಿಗಾವ್ಯಾಟ್ ತಲುಪಿದೆ (ಇದು 2014 ರಲ್ಲಿ 10 ಗಿಗಾವ್ಯಾಟ್ ಇತ್ತು). ಈ ವಲಯವು ಪ್ರಮುಖ ಘಟಕಗಳಲ್ಲಿ ಶೇಕಡಾ 70-80 ರಷ್ಟು ಸ್ಥಳೀಯ ಉತ್ಪಾದನೆಯನ್ನು ಸಾಧಿಸಿದೆ.
- ಕೇಂದ್ರ ಸಂಪುಟವು ಜೂನ್ 19, 2024 ರಂದು 1 ಗಿಗಾವ್ಯಾಟ್ ಕಡಲಾಚೆಯ ಪವನ ಯೋಜನೆಗಳಿಗಾಗಿ ₹7,453 ಕೋಟಿ ಮೌಲ್ಯದ ವಿಜಿಎಫ್ ಯೋಜನೆಗೆ ಅನುಮೋದನೆ ನೀಡಿದೆ.
ಜೈವಿಕ ಶಕ್ತಿ
ಅಕ್ಟೋಬರ್ 29, 2026 ರಂತೆ ಜೈವಿಕ ವಿದ್ಯುತ್ ಸಾಮರ್ಥ್ಯವು 11.75 ಗಿಗಾವ್ಯಾಟ್ ಆಗಿದೆ. ನವೆಂಬರ್ 02, 2026 ರಂತೆ 839 ಸಿಬಿಜಿ (CBG) ಸ್ಥಾವರಗಳು ನೋಂದಾಯಿಸಲ್ಪಟ್ಟಿದ್ದು, ಸಿಬಿಜಿ ಪರಿಸರ ವ್ಯವಸ್ಥೆಯು ವಿಸ್ತರಿಸಿದೆ. ಇವುಗಳಲ್ಲಿ 210 ಸ್ಥಾವರಗಳು ಕಾರ್ಯಾರಂಭಗೊಂಡಿದ್ದು, 255 ನಿರ್ಮಾಣ ಹಂತದಲ್ಲಿವೆ.
- ಜೈವಿಕ ದ್ರವ್ಯರಾಶಿ ಸಹ-ಉತ್ಪಾದನೆ: ಸೆಪ್ಟೆಂಬರ್ 30, 2026 ರಂತೆ ಬಗಾಸ್ ಆಧಾರಿತ 9821.32 ಮೆಗಾವ್ಯಾಟ್ ಮತ್ತು ಬಗಾಸ್ ರಹಿತ 1047.85 ಮೆಗಾವ್ಯಾಟ್ ಸಾಮರ್ಥ್ಯವಿದೆ.
- ತ್ಯಾಜ್ಯದಿಂದ ವಿದ್ಯುತ್ : ಸೆಪ್ಟೆಂಬರ್ 30, 2026 ರಂತೆ ಗ್ರಿಡ್‌ಗೆ ಸಂಪರ್ಕಗೊಂಡಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವು 324.24 ಮೆಗಾವ್ಯಾಟ್ ಆಗಿತ್ತು. ಆಫ್-ಗ್ರಿಡ್ ಸ್ಥಾವರಗಳು ಮತ್ತೊಂದು 554.16 ಮೆಗಾವ್ಯಾಟ್ ಕೊಡುಗೆ ನೀಡಿವೆ.
- ರಾಷ್ಟ್ರೀಯ ಜೈವಿಕ ಇಂಧನ ಕಾರ್ಯಕ್ರಮ: ಈ ಕಾರ್ಯಕ್ರಮವು ಹಣಕಾಸಿನ ನೆರವಿನ ಮೂಲಕ ತ್ಯಾಜ್ಯದಿಂದ ವಿದ್ಯುತ್, ಜೈವಿಕ ದ್ರವ್ಯರಾಶಿ ಮತ್ತು ಬಯೋಕಾಸ್ ಯೋಜನೆಗಳನ್ನು ಬೆಂಬಲಿಸುತ್ತದೆ. ಮೊದಲ ಹಂತವು 2021-22 ರಿಂದ 2025-26 ರವರೆಗೆ ₹858 ಕೋಟಿ ವೆಚ್ಚದಲ್ಲಿ ರೂಪುಗೊಂಡಿತ್ತು.
ಗೊಬರ್ಧನ್: ತ್ಯಾಜ್ಯವನ್ನು ಇಂಧನ ಬೆಳವಣಿಗೆಯನ್ನಾಗಿ ಪರಿವರ್ತಿಸುವುದು
- ಗ್ಯಾಲ್ವನೈಸಿಂಗ್ ಆರ್ಗಾನಿಕ್ ಬಯೋ-ಅಗ್ರೋ ರಿಸೋರ್ಸಸ್ ಧನ್– ರಾಷ್ಟ್ರೀಯ ವೃತ್ತಾಕಾರದ ಜೈವಿಕ ಇಂಧನ ಯೋಜನೆ: ಸರ್ಕಾರದಿಂದ ಆಗಸ್ಟ್ 6, 2026 ರಂದು ಅನುಮೋದಿಸಲ್ಪಟ್ಟಿದ್ದು, 2026-27 ರಿಂದ 2035-36 ರ ವರೆಗೆ ₹23,731 ಕೋಟಿ ವೆಚ್ಚವನ್ನು ಹೊಂದಿದೆ.
- ಈ ಯೋಜನೆಯು ದೇಶೀಯ ಸಿಬಿಜಿ ಉತ್ಪಾದನೆಯನ್ನು ಸುಮಾರು ಹತ್ತು ಪಟ್ಟು ಹೆಚ್ಚಿಸುವ ಮತ್ತು ರಾಷ್ಟ್ರೀಯ ವೃತ್ತಾಕಾರದ ಜೈವಿಕ ಆರ್ಥಿಕತೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.
ಜಲವಿದ್ಯುತ್
ನವೀಕರಿಸಬಹುದಾದ ವಿದ್ಯುತ್‌ನ ಪ್ರಮುಖ ಮೂಲವಾಗಿ ಜಲವಿದ್ಯುತ್ ಮುಂದುವರಿದಿದ್ದು, ವಿಶ್ವಾಸಾರ್ಹ ಮತ್ತು ಹೊಂದಿಕೊಳ್ಳುವ ವಿದ್ಯುತ್ ಉತ್ಪಾದನೆಯನ್ನು ಒದಗಿಸುತ್ತದೆ. ಸೌರ ಮತ್ತು ಪವನ ಸಾಮರ್ಥ್ಯವು ವಿಸ್ತರಿಸುತ್ತಿದ್ದಂತೆ ಇದು ಗ್ರಿಡ್ ಸ್ಥಿರತೆಯನ್ನು ಬೆಂಬಲಿಸುತ್ತದೆ. ದೊಡ್ಡ ಮತ್ತು ಸಣ್ಣ ಜಲವಿದ್ಯುತ್ ಸೇರಿದಂತೆ ಜಲವಿದ್ಯುತ್‌ನ ಒಟ್ಟು ಸಾಮರ್ಥ್ಯವು 57.49 ಗಿಗಾವ್ಯಾಟ್ ಆಗಿದೆ (ಅಕ್ಟೋಬರ್ 29, 2026 ರಂತೆ).
ಸಣ್ಣ ಜಲವಿದ್ಯುತ್ ಅಭಿವೃದ್ಧಿ ಯೋಜನೆ
- ಸಣ್ಣ ಜಲವಿದ್ಯುತ್ ಅಭಿವೃದ್ಧಿ ಯೋಜನೆಯನ್ನು ಮಾರ್ಚ್ 2026 ರಲ್ಲಿ 2026-27 ರಿಂದ 2030-31 ರ ವರೆಗೆ ₹2,584.60 ಕೋಟಿ ವೆಚ್ಚದಲ್ಲಿ ಸರ್ಕಾರ ಅನುಮೋದಿಸಿದೆ.
- ಈ ಯೋಜನೆಯು 1-25 ಮೆಗಾವ್ಯಾಟ್ ಸಾಮರ್ಥ್ಯದ ಯೋಜನೆಗಳ ಮೂಲಕ ಸುಮಾರು 1,500 ಮೆಗಾವ್ಯಾಟ್ ಸಣ್ಣ ಜಲವಿದ್ಯುತ್ ಸಾಮರ್ಥ್ಯವನ್ನು ಸೇರಿಸುವ ಗುರಿಯನ್ನು ಹೊಂದಿದೆ. ಇದು ವಿಶೇಷವಾಗಿ ಗುಡ್ಡಗಾಡು ಮತ್ತು ಈಶಾನ್ಯ ಪ್ರದೇಶಗಳಲ್ಲಿನ ಯೋಜನೆಗಳನ್ನು ಬೆಂಬಲಿಸುತ್ತದೆ.
ಹಸಿರು ಜಲಜನಕ
ಷ್ಟಪಟ್ಟು ಕರಗಿಸಬಹುದಾದ ಕ್ಷೇತ್ರಗಳಿಗೆ ಹಸಿರು ಜಲಜನಕವು ಸ್ವಚ್ಛ ಇಂಧನ ಆಯ್ಕೆಯಾಗಿ ಹೊರಹೊಮ್ಮಿದೆ. ಇದು ಇಂಧನ ಭದ್ರತೆ ಮತ್ತು ಕೈಗಾರಿಕಾ ಬೆಳವಣಿಗೆಯನ್ನು ಬೆಂಬಲಿಸುತ್ತದೆ.
ರಾಷ್ಟ್ರೀಯ ಹಸಿರು ಜಲಜನಕ ಮಿಷನ್
ಹಸಿರು ಜಲಜನಕ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು ಮತ್ತು ಈ ವಲಯದಲ್ಲಿನ ಅವಕಾಶಗಳು ಹಾಗೂ ಸವಾಲುಗಳಿಗೆ ವ್ಯವಸ್ಥಿತ ಪ್ರತಿಕ್ರಿಯೆಯನ್ನು ಉತ್ತೇಜಿಸಲು ಸರ್ಕಾರವು 2023 ರಲ್ಲಿ ರಾಷ್ಟ್ರೀಯ ಹಸಿರು ಜಲಜನಕ ಮಿಷನ್ ಅನ್ನು ಪ್ರಾರಂಭಿಸಿತು.
- 2030 ರ ವೇಳೆಗೆ 5 ಮಿಲಿಯನ್ ಮೆಟ್ರಿಕ್ ಟನ್ ಹಸಿರು ಜಲಜನಕ ಉತ್ಪಾದನೆಯನ್ನು ಗುರಿಯಾಗಿಟ್ಟುಕೊಂಡು ₹19,744 ಕೋಟಿ ವೆಚ್ಚದಲ್ಲಿ ಜನವರಿ 2023 ರಲ್ಲಿ ಅನುಮೋದಿಸಲಾಗಿದೆ.
- ಭಾರತೀಯ ಕಂಪನಿಗಳು 2023 ರಿಂದ 5.5 ಲಕ್ಷ ಎಂಟಿಪಿಎ ಹಸಿರು ಜಲಜನಕ ಆಫ್‌ಟೇಕ್ ಬದ್ಧತೆಗಳಿಗೆ ಸಹಿ ಹಾಕಿವೆ, ಇದು ವಿಶ್ವದ ಅತಿ ದೊಡ್ಡ ಪೂರೈಕೆ ಬದ್ಧತೆಯಾಗಿದೆ.
- ಭಾರತೀಯ ಕಂಪನಿಗಳು 2026 ರಲ್ಲಿ 4 ಲಕ್ಷ ಎಂಟಿಪಿಎ ಗೂ ಅಧಿಕ ಹಸಿರು ಜಲಜನಕಕ್ಕೆ ಸಮಾನವಾದ 18 ಹೊಸ ಆಫ್‌ಟೇಕ್ ಒಪ್ಪಂದಗಳಿಗೆ ಸಹಿ ಹಾಕಿವೆ.
- 2023 ರಿಂದ ಒಟ್ಟು 5.5 ಲಕ್ಷ ಎಂಟಿಪಿಎ ಆಫ್‌ಟೇಕ್ ಬದ್ಧತೆಗಳಲ್ಲಿ ಶೇಕಡಾ 70 ಕ್ಕಿಂತ ಹೆಚ್ಚು ರಫ್ತುಗಳಿಗಾಗಿ ಮೀಸಲಿಡಲಾಗಿದೆ.
- ಹಸಿರು ಜಲಜನಕ ಯೋಜನೆಗಳು ಸುಮಾರು ₹90,000 ಕೋಟಿ (9.5 ಬಿಲಿಯನ್ ಯುಎಸ್ ಡಾಲರ್) ಹೂಡಿಕೆಯನ್ನು ಆಕರ್ಷಿಸುವ ನಿರೀಕ್ಷೆಯಿದೆ.
- ಉತ್ಪಾದನಾ ಸಾಮರ್ಥ್ಯ: ಫೆಬ್ರವರಿ 2026 ರ ವೇಳೆಗೆ ಸುಮಾರು 8,000 ಟನ್ ವಾರ್ಷಿಕ ಹಸಿರು ಜಲಜನಕ ಉತ್ಪಾದನಾ ಸಾಮರ್ಥ್ಯವನ್ನು ಕಾರ್ಯರೂಪಕ್ಕೆ ತರಲಾಗಿದೆ.
- ಸಾರಿಗೆ: ಜುಲೈ 2026 ರಲ್ಲಿ, ಸರ್ಕಾರವು 21 ಮಾರ್ಗಗಳಲ್ಲಿ 70 ಜಲಜನಕ ಚಾಲಿತ ವಾಹನಗಳಿಗಾಗಿ ಮಿಷನ್ ಅಡಿಯಲ್ಲಿ 12 ಪ್ರಾಯೋಗಿಕ ಯೋಜನೆಗಳನ್ನು ಪ್ರಾರಂಭಿಸಿತು.
- ಜಿಂದ್-ಸೋನಿಪತ್ ವಿಭಾಗದಲ್ಲಿ ಭಾರತದ ಮೊದಲ ಸ್ಥಳೀಯ ಹಸಿರು ಜಲಜನಕ ಇಂಧನ ಕೋಶ ಚಾಲಿತ ರೈಲು ಜುಲೈ 2026 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ಭೂಶಾಖದ ಇಂಧನ ಭೂಶಾಖದ ಇಂಧನೆಯು ಸೌರ ಮತ್ತು ಪವನದಂತಹ ಬದಲಾಗುವ ಮೂಲಗಳಿಗೆ ಪೂರಕವಾಗಿರಬಲ್ಲ ವಿಶ್ವಾಸಾರ್ಹ ನವೀಕರಿಸಬಹುದಾದ ಮೂಲವನ್ನು ನೀಡುತ್ತದೆ. ಇದು ವಿದ್ಯುತ್ ಉತ್ಪಾದಿಸಲು ಅಥವಾ ನೇರ ಶಾಖವನ್ನು ಒದಗಿಸಲು ಭೂಮಿಯೊಳಗೆ ಸಂಗ್ರಹವಾಗಿರುವ ಶಾಖವನ್ನು ಬಳಸುತ್ತದೆ.
ಭೂಶಾಖದ ಇಂಧನದ ಕುರಿತ ರಾಷ್ಟ್ರೀಯ ನೀತಿ (ಸೆಪ್ಟೆಂಬರ್ 15, 2025 ರಂದು ಅಧಿಸೂಚನೆ ಹೊರಡಿಸಲಾಗಿದೆ)
- ಈ ನೀತಿಯು ಭೂಶಾಖದ ಸಂಪನ್ಮೂಲಗಳ ಪರಿಶೋಧನೆ, ಅಭಿವೃದ್ಧಿ ಮತ್ತು ಬಳಕೆಗಾಗಿ ಚೌಕಟ್ಟನ್ನು ಒದಗಿಸುತ್ತದೆ.
- ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯು 381 ಬಿಸಿನೀರಿನ ಬುಗ್ಗೆಗಳಾದ್ಯಂತ ಪರಿಶೋಧನೆಯ ಆಧಾರದ ಮೇಲೆ ಭಾರತದ ಭೂಶಾಖದ ಸಾಮರ್ಥ್ಯವನ್ನು ಸುಮಾರು 10,600 ಮೆಗಾವ್ಯಾಟ್ ಎಂದು ಅಂದಾಜಿಸಿದೆ, ಇದರಲ್ಲಿ 42 ಭೂಶಾಖದ ಅಭಿವ್ಯಕ್ತಿಗಳನ್ನು ಭರವಸೆಯ ಕ್ಷೇತ್ರಗಳಾಗಿ ಗುರುತಿಸಲಾಗಿದೆ.
- ಈ ನೀತಿಯು ತಂತ್ರಜ್ಞಾನ ಪಾಲುದಾರಿಕೆಗಳು, ಜ್ಞಾನ ವರ್ಗಾವಣೆ ಮತ್ತು ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಭೂಶಾಖದ ಇಂಧನಕ್ಕಾಗಿ ಆಸ್ಟ್ರೇಲಿಯಾ, ಐಸ್ಲ್ಯಾಂಡ್, ಸೌದಿ ಅರೇಬಿಯಾ ಮತ್ತು ಅಮೆರಿಕ ದೇಶಗಳೊಂದಿಗೆ ಭಾರತವು ಸಹಕಾರವಿರುವ ಕಾರ್ಯವಿಧಾನಗಳನ್ನು ಹೊಂದಿದೆ.
- ಪ್ರಾಯೋಗಿಕ ಉತ್ಪಾದನಾ ಸ್ಥಾವರ, ಸಂಪನ್ಮೂಲ ಮೌಲ್ಯಮಾಪನ ಯೋಜನೆಗಳು ಮತ್ತು ಸೌರ-ಭೂಶಾಖದ ಹೈಬ್ರಿಡ್ ಸ್ಥಾವರ ಸೇರಿದಂತೆ ಜುಲೈ-ಆಗಸ್ಟ್ 2025 ರ ಅವಧಿಯಲ್ಲಿ ಐದು ಯೋಜನೆಗಳನ್ನು ಅನುಮೋದಿಸಲಾಗಿದೆ. ಇವು ಭೂಶಾಖದ ಅನ್ವಯಿಕೆಗಳ ತಾಂತ್ರಿಕ-ಆರ್ಥಿಕ ಕಾರ್ಯಸಾಧ್ಯತೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿವೆ.
ಮುಂದಿನ ದೃಷ್ಟಿಕೋನ: ಭಾರತದ ಇಂಧನ ಭವಿಷ್ಯವನ್ನು ನಿರ್ಮಿಸುವುದು
ಸ್ವಚ್ಛ ಮತ್ತು ನವೀಕರಿಸಬಹುದಾದ ಮೂಲಗಳಿಂದ ಚಾಲಿತವಾಗುವ ಇಂಧನ ವ್ಯವಸ್ಥೆಯನ್ನು ಭಾರತವು ನಿರ್ಮಿಸುತ್ತಿದೆ. ವಿಸ್ತರಿಸುತ್ತಿರುವ ಸೌರ, ಪವನ, ಜಲವಿದ್ಯುತ್ ಮತ್ತು ಜೈವಿಕ ಇಂಧನ ಸಾಮರ್ಥ್ಯವು ದೇಶೀಯ ಉತ್ಪಾದನೆ, ಇಂಧನ ಶೇಖರಣೆ ಮತ್ತು ಹಸಿರು ಜಲಜನಕ ಹಾಗೂ ಭೂಶಾಖದ ಇಂಧನದಂತಹ ಉದಯೋನ್ಮುಖ ತಂತ್ರಜ್ಞಾನಗಳಿಂದ ಬೆಂಬಲಿಸಲ್ಪಡುತ್ತಿದೆ.
ವಿದ್ಯುತ್ ಬೇಡಿಕೆಯು ಹೆಚ್ಚಾದಂತೆ, ನವೀಕರಿಸಬಹುದಾದ ಇಂಧನವು ವಿಶ್ವಾಸಾರ್ಹ ವಿದ್ಯುತ್, ಹೆಚ್ಚಿನ ಇಂಧನ ಭದ್ರತೆ ಮತ್ತು ಸ್ವಚ್ಛ ಭವಿಷ್ಯವನ್ನು ಬೆಂಬಲಿಸುತ್ತದೆ. ಮುಂದುವರಿದ ನೀತಿ ಬೆಂಬಲ ಮತ್ತು ತಾಂತ್ರಿಕ ಪ್ರಗತಿಯು ಸಮರ್ಥನೀಯ, ಸ್ವಾವಲಂಬಿ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಇಂಧನ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
References
Cabinet
https://www.pib.gov.in/PressReleasePage.aspx?PRID=2241799®=3&lang=1
https://www.pib.gov.in/PressNoteDetails.aspx?ModuleId=3&NoteId=158349®=48&lang=2
https://www.pib.gov.in/PressReleasePage.aspx?PRID=2292445®=48&lang=1
Ministry of Power:
https://npp.gov.in/dashBoard/cp-map-dashboard
Prime Minister Office (PMO):
https://x.com/PMOIndia/status/2117118441916445054
Ministry of New and Renewable Energy (MNRE)
https://mnre.gov.in/documents/guidelines/physical-achievements-kzN2kTMtQWa?pageTitle=Physical-Achievements
https://www.pib.gov.in/PressReleaseDetail.aspx?PRID=2329695®=48&lang=1
https://www.pib.gov.in/PressReleasePage.aspx?PRID=2296782®=48&lang=1
https://www.pib.gov.in/PressReleasePage.aspx?PRID=2250039®=48&lang=2
https://www.pib.gov.in/PressReleasePage.aspx?PRID=2293256®=48&lang=1
https://www.pib.gov.in/PressReleasePage.aspx?PRID=2244667®=48&lang=2
https://www.pib.gov.in/PressReleasePage.aspx?PRID=2245157&lang=2®=48
https://www.pib.gov.in/PressReleasePage.aspx?PRID=2250039&lang=1®=3
https://www.pib.gov.in/PressReleasePage.aspx?PRID=2291541®=48&lang=1
https://www.pib.gov.in/PressReleaseIframePage.aspx?PRID=2026700®=48&lang=2
https://www.pib.gov.in/PressReleasePage.aspx?PRID=2200435®=48&lang=2
https://pmkusum.mnre.gov.in/#/landing
https://mnre.gov.in/en /physical-progress/
https://mnre.gov.in/en/bio-energy-overview/
https://mnre.gov.in/en/new-technologies-overview/
https://www.pib.gov.in/PressReleasePage.aspx?PRID=1777364®=48&lang=2
https://www.pib.gov.in/PressReleasePage.aspx?PRID=2268992®=48&lang=2
https://pmsuryaghar.gov.in/#/
https://www.pib.gov.in/PressReleasePage.aspx?PRID=2249408®=3&lang=1
Ministry of Petroleum & Natural Gas
https://www.pib.gov.in/PressReleasePage.aspx?PRID=2266034®=48&lang=2
https://www.pib.gov.in/PressReleasePage.aspx?PRID=2295494®=3&lang=1
https://ppac.gov.in/download.php?file=rep_studies/1785837484_LPG_Profile_Report_Q1_FY_2026-27_Final_Web.pdf
https://www.pmuy.gov.in/index.aspx
https://gobardhan.eil.co.in/
Department of Atomic Energy (DAE)
https://www.pib.gov.in/PressReleasePage.aspx?PRID=2198951®=3&lang=1
https://www.pib.gov.in/PressNoteDetails.aspx?NoteId=156593&ModuleId=3®=3&lang=2
https://www.pib.gov.in/PressReleasePage.aspx?PRID=2294814®=48&lang=1
https://www.pib.gov.in/PressReleasePage.aspx?PRID=2249537®=48&lang=2
https://www.pib.gov.in/PressReleasePage.aspx?PRID=2247971&lang=2®=48
Ministry of Railways
https://www.pib.gov.in/PressReleasePage.aspx?PRID=2285240®=48&lang=1
PIB Backgrounders
https://www.pib.gov.in/FactsheetDetails.aspx?Id=150630®=3&lang=1
https://www.pib.gov.in/FactsheetDetails.aspx?Id=149232®=48&lang=2
https://www.pib.gov.in/PressReleasePage.aspx?PRID=2270740®=3&lang=1
https://www.pib.gov.in/PressNoteDetails.aspx?NoteId=156593&ModuleId=3®=3&lang=2
https://www.pib.gov.in/PressNoteDetails.aspx?NoteId=155990&ModuleId=3®=48&lang=2
Click here to see pdf
******
(तथ्य सामग्री आईडी: 151200)
आगंतुक पटल : 23
Provide suggestions / comments