ಗೃಹ ವ್ಯವಹಾರಗಳ ಸಚಿವಾಲಯ
ಕೋವಿಡ್-19 ವಿರುದ್ಧ ಹೋರಾಡಲು 21 ದಿನಗಳ ಲಾಕ್ ಡೌನ್ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಭಿತ್ತನೆ ಹಾಗೂ ಕಟಾವು ಕಾರ್ಯ ಸುಗಮವಾಗಿ ನಡೆಯಲು ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ಪತ್ರ
प्रविष्टि तिथि:
03 APR 2020 7:12PM by PIB Bengaluru
ಕೋವಿಡ್-19 ವಿರುದ್ಧ ಹೋರಾಡಲು 21 ದಿನಗಳ ಲಾಕ್ ಡೌನ್ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಭಿತ್ತನೆ ಹಾಗೂ ಕಟಾವು ಕಾರ್ಯ ಸುಗಮವಾಗಿ ನಡೆಯಲು ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ಪತ್ರ
ಕೋವಿಡ್-19 ವಿರುದ್ಧ ಹೋರಾಡಲು 21 ದಿನಗಳ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ನಿರ್ಬಂಧಗಳಿಂದ ಕೃಷಿ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿರುವುದರಿಂದ ಭಿತ್ತನೆ ಹಾಗೂ ಕಟಾವು ಕಾರ್ಯಗಳನ್ನು ಗಮನದಲ್ಲಿರಿಸಿಕೊಂಡು ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್ಎ) ಎಲ್ಲ ರಾಜ್ಯಗಳಿಗೆ ಸೂಚನೆಯನ್ನು ಕಳುಹಿಸಿದೆ. (https://pib.gov.in/PressReleseDetail.aspx?PRID=1608644).
ಈ ಸಲಹೆಗಳಲ್ಲಿ ಕೃಷಿಕರಿಗೆ ಕೃಷಿ ಚಟುವಟಿಕೆಗಳು, ತೋಟಗಾರಿಕೆ ಕೆಲಸಗಳು, ಕೃಷಿ ಉತ್ಪನ್ನಗಳ ಖರೀದಿ, ಮಂಡಿಗಳ ವ್ಯಾಪಾರ ವಹಿವಾಟು, ಕಟಾವು ಮಾಡಿದ ಬೆಳೆಗಳ ಸಾಗಾಣೆ ಮತ್ತು ಭಿತ್ತನೆ ಚಟುವಟಿಕೆಗಳು ಮತ್ತಿತರ ಕಾರ್ಯಗಳಿಗೆ ವಿನಾಯಿತಿ ನೀಡಲಾಗಿದೆ.
ಯಾವುದ್ಯಾವುದಕ್ಕೆ ವಿನಾಯಿತಿ ನೀಡಲಾಗಿದೆ ಎಂಬುದನ್ನು ಪುನರುಚ್ಚರಿಸಿರುವ ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಅಜಯ್ ಕುಮಾರ್ ಭಲ್ಲ, ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, 21 ದಿನಗಳ ಲಾಕ್ ಡೌನ್ ಅವಧಿಯಲ್ಲಿ ಕೃಷಿ ಚಟುವಟಿಕೆಗಳಿಗೆ ವಿನಾಯಿತಿ ನೀಡಿರುವ ಅಂಶವನ್ನು ಖಾತ್ರಿಪಡಿಸಿದ್ದು, ತಳಮಟ್ಟದಲ್ಲಿ ಅವುಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಸುಗಮ ರೀತಿಯಲ್ಲಿ ಕಟಾವು ಮತ್ತು ಭಿತ್ತನೆ ಕಾರ್ಯಗಳು ನಡೆಯುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯಗಳಿಗೆ ಕಳುಹಿಸಿರುವ ಸೂಚನೆಯಲ್ಲಿ ತಿಳಿಸಲಾಗಿದೆ.
ರಾಜ್ಯಗಳಿಗೆ ಕಳುಹಿಸಿರುವ ಸೂಚನಾ ಪತ್ರ ನೋಡಲು ಇಲ್ಲಿ ಕ್ಲಿಕ್ ಮಾಡಿ
Click here to see Communication to States
(रिलीज़ आईडी: 1610920)
आगंतुक पटल : 283