ಈಶಾನ್ಯ ರಾಜ್ಯಗಳ ಅಭಿವೃಧ್ಧಿ ಸಚಿವಾಲಯ  
                
                
                
                
                
                
                    
                    
                        ಲಾಕ್‌ಡೌನ್ ಜಾರಿಗೊಳಿಸಲು ಈಶಾನ್ಯ ಪ್ರದೇಶದ ಅಂತರರಾಷ್ಟ್ರೀಯ ಗಡಿಯನ್ನು (ಅಂದಾಜು 5500 ಕಿಮೀ) ಪರಿಣಾಮಕಾರಿಯಾಗಿ ಮುಚ್ಚಲಾಗಿದೆ: ಡಾ.ಜಿತೇಂದ್ರ ಸಿಂಗ್
                    
                    
                        
                    
                
                
                    Posted On:
                03 APR 2020 3:42PM by PIB Bengaluru
                
                
                
                
                
                
                ಲಾಕ್‌ಡೌನ್ ಜಾರಿಗೊಳಿಸಲು ಈಶಾನ್ಯ ಪ್ರದೇಶದ ಅಂತರರಾಷ್ಟ್ರೀಯ ಗಡಿಯನ್ನು (ಅಂದಾಜು 5500 ಕಿಮೀ) ಪರಿಣಾಮಕಾರಿಯಾಗಿ ಮುಚ್ಚಲಾಗಿದೆ: ಡಾ.ಜಿತೇಂದ್ರ ಸಿಂಗ್
 
ಮಾನ್ಯ ರಾಜ್ಯ ಸಚಿವರಾದ  (ಸ್ವತಂತ್ರ) ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯ, ಡಾ.ಜಿತೇಂದ್ರ ಸಿಂಗ್ ಅವರು ವಿಡಿಯೋ ಕಾನ್ಫರೆನ್ಸ್   ಮೂಲಕ ವಿವರವಾದ ವಿಮರ್ಶಾ ಸಭೆಯನ್ನು ನಡೆಸಿದರು.  ಸಾಮಾಜಿಕ ಅಂತರದ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸುಕೊಂಡು, ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ, ಈಶಾನ್ಯ ಮಂಡಳಿ (ಎನ್ಇಸಿ) ಮತ್ತು ಎನ್ಇಡಿಎಫ್ಐ  ಅಧಿಕಾರಿಗಳೊಂದಿಗೆ ಈಶಾನ್ಯ ಪ್ರದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯ ವಿರುದ್ಧ ಹೋರಾಡಲು ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ಸಭೆ ನಡೆಸಿದರು.  ಸಭೆಯಲ್ಲಿ  ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ, ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ,  ಈಶಾನ್ಯ ಮಂಡಳಿ (ಎನ್ಇಸಿ) ಕಾರ್ಯದರ್ಶಿ, ಸಿಎಂಡಿ ನಾರ್ತ್ ಈಸ್ಟರ್ನ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಶನ್ ಲಿಮಿಟೆಡ್ (ಎನ್ಇಡಿಎಫ್ಐ) ಮತ್ತು  ಸಚಿವಾಲಯದ ಮತ್ತು ಎನ್ಇಸಿಯ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.  ಸಚಿವಾಲಯದ 100% ಕೆಲಸವು ಇ-ಆಫೀಸ್ನಲ್ಲಿದೆ ಎಂದು ಆರಂಭದಲ್ಲಿ ಮಾನ್ಯ ಸಚಿವರಿಗೆ ತಿಳಿಸಲಾಯಿತು, ಇದು ಹೋಮ್ ಮೋಡ್ (ಮನೆಯಿಂದ ಕೆಲಸ ಮಾಡುವುದು) ನಿಂದ ಕೆಲಸ ಮಾಡಲು ಸರ್ಕಾರದ ನಿರ್ದೇಶನಗಳನ್ನು ಅನುಸರಿಸಲು ಸುಲಭವಾಗುತ್ತದೆ.
ಈಶಾನ್ಯ ರಾಜ್ಯಗಳಲ್ಲಿ  ಲಾಕ್ ಡೌನ್ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ.   ಈಶಾನ್ಯ ಪ್ರದೇಶದ ದೀರ್ಘ ಅಂತರರಾಷ್ಟ್ರೀಯ ಗಡಿ (ಅಂದಾಜು 5500 ಕಿಮೀ) ಅನ್ನು ಪರಿಣಾಮಕಾರಿಯಾಗಿ ಮುಚ್ಚಲಾಗಿದೆ.
ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ಮತ್ತು ಅದರ ಸಂಸ್ಥೆಗಳು ಮತ್ತು  ಸಾರ್ವಜನಿಕ ವಲಯದ ಉದ್ದಿಮೆಗಳು ಅಂದರೆ ಎನ್ಇಸಿ, ಎನ್ಇಡಿಎಫ್ಐ, ಎನ್ಹೆಚ್ಡಿಸಿ,  ಎನ್ ಇ ಆರ್ ಎ ಎಮ್ ಎ ಸಿ, ಸಿಬಿಟಿಸಿ ಮತ್ತು ಎನ್ ಇ ಆರ್ ಸಿ ಒ ಎಮ್ ಪಿ  ಸಂಸ್ಥೆಗಳ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗದವರು ಒಂದು ದಿನದ ಸಂಬಳವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಳಲ್ಲೊಂದಾದ ಪಿಎಂ-ಕೇರ್ಸ್ ನಿಧಿಗೆ ನೀಡಿದ್ದಾರೆ.
ಎನ್ಇಡಿಎಫ್ಐ ತಮ್ಮ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ನಿಧಿಯಿಂದ ಪಿಎಂ-ಕೇರ್ಸ್ ನಿಧಿಗೆ ಎರಡು ಕೋಟಿ  ರೂಪಾಯಿಗಳನ್ನು ದೇಣಿಕೆ ನೀಡಿದ್ದಾರೆ
ಈ ಮೊದಲೇ ನಿರ್ಧರಿಸಿದಂತೆ ಸಚಿವಾಲಯವು  /  ಈಶಾನ್ಯ ಮಂಡಳಿ (ಎನ್ಇಸಿ)  ಈಗಾಗಲೇ ಈಶಾನ್ಯ ರಾಜ್ಯಗಳಿಗೆ 25 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಈ ನಿಧಿಯು ತೆರೆದ ನಿಧಿಯ ಸ್ವರೂಪದಲ್ಲಿರುತ್ತದೆ, ಇದನ್ನು ಕೋವಿಡ್-19 ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆಗೆ ಬಳಸಿಕೊಳ್ಳಬಹುದು ಮತ್ತು ಅಸ್ತಿತ್ವದಲ್ಲಿರುವ ಕೇಂದ್ರ ಪ್ಯಾಕೇಜ್ಗಳ ವ್ಯಾಪ್ತಿಗೆ ಬರುವುದಿಲ್ಲ. ತುರ್ತುಪರಿಸ್ಥಿತಿಯಲ್ಲಿ ಯಾವುದೇ ಕಾರ್ಯಗಳಿಗೆ ಉಪಯೋಗಿಸಿಕೊಳ್ಳಬಹುದಾಧ
ತೆರೆದ ನಿಧಿಗಳು ರಾಜ್ಯಗಳಿಗೆ ತ್ವರಿತವಾಗಿ ಉಪಯೋಗಿಸಲು ಅನುವು ಮಾಡಿಕೊಡುತ್ತದೆ. ಈ ನಿಧಿಯು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯ / ಎನ್ಇಸಿ ಯು ಈಶಾನ್ಯ ರಾಜ್ಯಗಳಿಗೆ ಅಸ್ತಿತ್ವದಲ್ಲಿರುವ ಯೋಜನೆಗಳ ಅಡಿಯಲ್ಲಿ ಹಂಚಿಕೆ ಮಾಡಿದ ನಿಧಿಗೆ ಹೆಚ್ಚುವರಿಯಾಗಿರುತ್ತದೆ. ರಾಜ್ಯವಾರು ನಿಧಿಯ ಹಂಚಿಕೆ ಹೀಗಿದೆ:
 
	
		
			| ಕ್ರಮ ಸಂಖ್ಯೆ | ರಾಜ್ಯ | ಮಂಜೂರು ಮಾಡಲಾದ ನಿಧಿ (ಕೋಟಿ ರೂ.ಗಳಲ್ಲಿ) | 
		
			| 1 | ಅರುಣಾಚಲ ಪ್ರದೇಶ | 3.25 | 
		
			| 2 | ಅಸ್ಸಾಂ | 5.00 | 
		
			| 3 | ಮಣಿಪುರ | 3.00 | 
		
			| 4 | ಮೇಘಾಲಯ | 3.00 | 
		
			| 5 | ಮಿಜೋರಾಂ | 3.00 | 
		
			| 6 | ನಾಗಾಲ್ಯಾಂಡ್ | 3.00 | 
		
			| 7 | ಸಿಕ್ಕಿಂ | 1.75 | 
		
			| 8 | ತ್ರಿಪುರ | 3.00 | 
	
 
ಸಚಿವಾಲಯವು ತನ್ನ ಪ್ರಮುಖ ಕಾರ್ಯಕ್ರಮವಾದ  ಎನ್ ಇ ಎಸ್ ಐ ಡಿ ಎಸ್ ಅಡಿಯಲ್ಲಿ ಈಶಾನ್ಯ ರಾಜ್ಯಗಳಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಬಲಪಡಿಸುವ ಯೋಜನೆಗಳನ್ನು ಕೋರಿದೆ.  ಏಪ್ರಿಲ್ 6 ರೊಳಗೆ ರಾಜ್ಯಗಳು ತಮ್ಮ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ತಿಳಿಸಲಾಗಿದೆ.  ಆರೋಗ್ಯ ಕ್ಷೇತ್ರದ ಯೋಜನೆಗಳಿಗೆ ಹೆಚ್ಚಿನ ಆದ್ಯತೆಯ ಮೇರೆಗೆ ಅನುಮತಿ ನೀಡಲಾಗುವುದು.
                
                
                
                
                
                (Release ID: 1610943)
                Visitor Counter : 256