ಪ್ರವಾಸೋದ್ಯಮ ಸಚಿವಾಲಯ
‘ಸ್ಟ್ರಾಂಡೆಡ್ ಇನ್ ಇಂಡಿಯಾ’ ಪೋರ್ಟಲ್ ನಲ್ಲಿ ಮೊದಲ ಐದು ದಿನದಲ್ಲೇ ದೇಶಾದ್ಯಂತದಿಂದ 769 ವಿದೇಶೀ ಪ್ರವಾಸಿಗರ ನೋಂದಣಿ
प्रविष्टि तिथि:
06 APR 2020 11:59AM by PIB Bengaluru
‘ಸ್ಟ್ರಾಂಡೆಡ್ ಇನ್ ಇಂಡಿಯಾ’ ಪೋರ್ಟಲ್ ನಲ್ಲಿ ಮೊದಲ ಐದು ದಿನದಲ್ಲೇ ದೇಶಾದ್ಯಂತದಿಂದ 769 ವಿದೇಶೀ ಪ್ರವಾಸಿಗರ ನೋಂದಣಿ
ಪೋರ್ಟಲ್ ಮೂಲಕ ಸಹಾಯಕ್ಕಾಗಿ ವಿನಂತಿಸುವವರಿಗೆ ವಿವಿಧ ರೂಪಗಳಲ್ಲಿ ಸಹಾಯ ಹಸ್ತ
ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯವು ಕೋವಿಡ್ -19 ಜಾಗತಿಕ ಮಹಾಮಾರಿಯ ನಿಗ್ರಹಕ್ಕಾಗಿ ಅನಿವಾರ್ಯವಾದ ಲಾಕ್ ಡೌನ್ ಪರಿಸ್ಥಿತಿಯಿಂದ ಇರುವಲ್ಲೇ ಉಳಿಯುವಂತಾಗಿರುವ ವಿದೇಶೀ ಪ್ರವಾಸಿಗರನ್ನು ಗುರುತಿಸಿ, ನೆರವಾಗಲು 2020ರ ಮಾರ್ಚ್ 31ರಂದು www.strandedinindia.com ಪೋರ್ಟಲ್ ಆರಂಭಿಸಿದೆ. ಅಂಥ ಪ್ರವಾಸಿಗರು ಪೋರ್ಟಲ್ ಗೆ ಲಾಗ್ ಆನ್ ಆಗಿ, ಕೆಲವು ಮೂಲಭೂತ ಸಂಪರ್ಕ ಮಾಹಿತಿಗಳನ್ನು ಒದಗಿಸಬೇಕು ಮತ್ತು ತೊಂದರೆಯಲ್ಲಿದ್ದರೆ, ಅವರು ಎದುರಿಸುತ್ತಿರುವ ಸಮಸ್ಯೆಯ ಸ್ವರೂಪದ ಮಾಹಿತಿ ನೀಡಬೇಕು. ಈ ಪೋರ್ಟಲ್ ಆರಂಭವಾದ ಮೊದಲ 5 ದಿನಗಳಲ್ಲೇ ದೇಶಾದ್ಯಂತದಿಂದ 769 ವಿದೇಶೀ ಪ್ರವಾಸಿಗರು ಪೋರ್ಟಲ್ ನಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಪ್ರತಿಯೊಂದು ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತವು ಅಂಥ ವಿದೇಶೀ ಪ್ರವಾಸಿಗರನ್ನು ಗುರುತಿಸಲು ನೋಡಲ್ ಅಧಿಕಾರಿಯನ್ನು ಗುರುತಿಸಬೇಕು. ಪ್ರವಾಸೋದ್ಯಮ ಸಚಿವಾಲಯದ ಐದು ಪ್ರಾದೇಶಿಕ ಕಚೇರಿಗಳು, ಪೋರ್ಟಲ್‌ನಲ್ಲಿ ಲಾಗ್ ಇನ್ ಆಗಿ ನೆರವಿಗಾಗಿ ವಿನಂತಿ ಮಾಡಿರುವ ವಿದೇಶೀಯರಿಗೆ ಅಗತ್ಯವಿದ್ದಲ್ಲಿ ನೆರವು ಒದಗಿಸಲು ನೋಡಲ್ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಮನ್ವಯ ಸಾಧಿಸುತ್ತಿವೆ, ಪ್ರವಾಸೋದ್ಯಮ ಸಚಿವಾಲಯದ ಪ್ರಾದೇಶಿಕ ಕಚೇರಿಗಳು ವಲಸೆ ಮತ್ತು ಎಫ್.ಆರ್.ಆರ್.ಓ.ಗಳೊಂದಿಗೆ ಇರುವಲ್ಲೇ ಉಳಿದಿರುವ ವಿದೇಶೀ ಪ್ರವಾಸಿಗರಿಗೆ ವೀಸಾ ವಿಚಾರದಲ್ಲೂ ನೆರವಾಗುತ್ತಿವೆ. ದೇಶದ ಒಳಗೆ/ರಾಜ್ಯ ಮತ್ತು ಅವರ ತವರು ರಾಷ್ಟ್ರಕ್ಕೆ ತೆರಳಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಗೃಹ ಸಚಿವಾಲಯ ಮತ್ತು ಸಂಬಂಧಿತ ರಾಯಭಾರ ಕಚೇರಿ/ಹೈಕಮಿಷನ್/ಕನ್ಸೊಲೇಟ್ ಗಳೊಂದಿಗೂ ಸಮನ್ವಯ ಸಾಧಿಸುತ್ತಿದೆ.
ಪೋರ್ಟಲ್ ನ ಸಾಮರ್ಥ್ಯ ಮತ್ತು ಸೌಲಭ್ಯಗಳು ಉಳಿದಲ್ಲೇ ಉಳಿದಿರುವ ವಿದೇಶೀ ಪ್ರವಾಸಿಗರಿಗೆ ಇ-ಮೇಲ್, ದೂರವಾಣಿ ಮೂಲಕ ಸಂಪರ್ಕಿಸಲು ಮತ್ತು ಆ ವ್ಯಕ್ತಿಗೆ ಅಗತ್ಯವಿರುವ ಬೆಂಬಲದ ಸ್ವರೂಪ ತಿಳಿಸಲು ನೆರವಾಗಿದೆ. ಅವರಿಗೆ ಭಾರತದಲ್ಲಿ ತಮ್ಮ ರಾಷ್ಟ್ರಗಳಿಗೆ ಸಂಬಂಧಿಸಿದ ವಿದೇಶಿ ಕಚೇರಿಯೊಂದಿಗೆ ಸಂಪರ್ಕ ಹೊಂದಲು ಅವಕಾಶ ಕಲ್ಪಿಸಲಾಗಿದೆ ಮತ್ತು ಭಾರತದಿಂದ ಹೊರಹೋಗುವ ವಿಮಾನಗಳ ಬಗ್ಗೆ ಮಾಹಿತಿ ಒದಗಿಸಲಾಗುತ್ತಿದೆ. ಅಗತ್ಯವಿರುವ ಕಡೆ ಅವರಿಗೆ ವೈದ್ಯಕೀಯ ನೆರವು, ಆಹಾರ ಮತ್ತು ವಸತಿ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.
ಅಮೆರಿಕದ ಪ್ರಜೆಯಾದ ಒಬ್ಬರು ಮಹಿಳೆ, ಕೋವಿಡ್-19 ಲಾಕ್ ಡೌನ್ ವೇಳೆ ಬಿಹಾರದ ಸುಪಾಲ್ ಜಿಲ್ಲೆಯಲ್ಲಿ ಉಳಿದುಕೊಳ್ಳುವಂತಾಗಿತ್ತು, ಈ ಮಧ್ಯೆ ಅವರ ಮಗ ದೆಹಲಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಪೋರ್ಟಲ್ ಅವರಿಗೆ ಅಂತರ ಸಚಿವಾಲಯ, ಅಂತರ ಇಲಾಖೆ ಮತ್ತು ರಾಜ್ಯ-ಕೇಂದ್ರದ ಸಹಯೋಗದೊಂದಿಗೆ ವಿಶೇಷ ಪ್ರಯಾಣ ಅನುಮತಿ ದೊರಕಿಸಿ ದೆಹಲಿಗೆ ಪ್ರಯಾಣಿಸಲು ಅನುವು ಮಾಡಿಕೊಟ್ಟಿತು. ಅವರು ಸುರಕ್ಷಿತವಾಗಿ ಆ ಸ್ಥಳ ತಲುಪಿದರು ಮತ್ತು ನೆರವು ನೀಡಿದ ಸಂಬಂಧಿತ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇಬ್ಬರು ಕೋಸ್ಟರಿಕದ ಪ್ರಜೆಗಳು, ಚೆನ್ನೈಗೆ ಶಸ್ತ್ರಚಿಕಿತ್ಸೆಗೋಸ್ಕರ ಬಂದಿದ್ದರು (ವೈದ್ಯಕೀಯ ಪ್ರವಾಸೋದ್ಯಮ) ಶಸ್ತ್ರಚಿಕಿತ್ಸೆಯ ಬಳಿಕ ಚೆನ್ನೈನಲ್ಲೇ ಉಳಿದುಕೊಂಡಿದ್ದರು. ರಾಜ್ಯ ಸರ್ಕಾರ, ಕೋಸ್ಟರಿಕದ ರಾಯಭಾರ ಕಚೇರಿ ಮತ್ತು ಪ್ರವಾಸಿಗರು ಉಳಿದುಕೊಂಡಿದ್ದ ಹೋಟೆಲ್ ಪ್ರವಾಸಿಗರ ಆಪ್ತ ಸಂಪರ್ಕದ ಫಲವಾಗಿ ಹುರಿದುಂಬಿಸಿ, ಭಯಭೀತರಾಗಿ, ಅಧೀರರಾಗಿದ್ದ ಪ್ರವಾಸಿಗರಿಗೆ ಸಹಾಯ ಮಾಡಿತು. ಈಗ ಅವರು ಸುರಕ್ಷಿತ ಮತ್ತು ಉತ್ತಮವಾಗಿದ್ದಾರೆ.
ಒಬ್ಬರು ಆಸ್ಟ್ರೇಲಿಯಾದ ಪ್ರವಾಸಿ ತನ್ನ ಕುಟುಂಬದೊಂದಿಗೆ ಬಂದು ಅಹಮದಾಬಾದ್ ನಲ್ಲಿ ಉಳಿದುಕೊಂಡಿದ್ದರು. ಆ ಪ್ರವಾಸಿಗರಿಗೆ ಮೂರ್ಚೆ ರೋಗವಿದ್ದು, ಲಾಕ್‌ಡೌನ್ ಕಾರಣ ಆಸ್ಟ್ರೇಲಿಯಾದ ವೈದ್ಯರು ಸೂಚಿಸಿದ ಔಷಧಿಗಳಿಲ್ಲದ ಸ್ಥಿತಿ ಉಂಟಾಗಿತ್ತು. ಪೋರ್ಟಲ್ ಜಿಲ್ಲಾಧಿಕಾರಿ ಕಚೇರಿಯ ಮೂಲಕ ಪ್ರವಾಸಿಗರನ್ನು ತಲುಪಲು ಸಹಾಯ ಮಾಡಿತು. ಅವರಿಗೆ ಸಾಕಷ್ಟು ಔಷಧಿಗಳನ್ನು ನೀಡಲಾಯಿತು ಮತ್ತು ಅವರಿಗೆ ಆಹಾರ ಮತ್ತು ಸ್ಥಳೀಯ ಸಾರಿಗೆಯ ನೆರವೂ ನೀಡಲಾಯಿತು. ಈಗ, ಅವರು ಆರಾಮವಾಗಿದ್ದಾರೆ ಮತ್ತು ಸುರಕ್ಷಿತವಾಗಿದ್ದಾರೆ.
ಮೇಲೆ ತಿಳಿಸಿರುವ ಘಟನೆಗಳು ನಿರ್ಣಾಯಕ ಸಮಯದಲ್ಲಿ ನಿರ್ಣಾಯಕ ನೆರವು ಪಡೆಯಲು ಪೋರ್ಟಲ್ ಅನೇಕ ವಿದೇಶಿಯರಿಗೆ ಸಹಾಯ ಮಾಡಿದ ಕೆಲವು ನಿರ್ದರ್ಶನಗಳಾಗಿವೆ. ಮುಂದಿನ ದಿನಗಳಲ್ಲಿ, ಪೋರ್ಟಲ್ ತನ್ನ ಉದ್ದೇಶವನ್ನು ಪೂರೈಸುತ್ತಲೇ ಇರುತ್ತದೆ ಮತ್ತು ಭಾರತದಲ್ಲಿ ನಮ್ಮ ವಿದೇಶಿ ಅತಿಥಿಗಳು ತಮ್ಮ ವಾಸ್ತವ್ಯದ ಸಮಯದಲ್ಲಿ ಅವರ ಸೌಕರ್ಯ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ. ಇದು ಅತಿಥಿ ದೇವೋ ಭವ ಎಂಬುದರ ಸ್ಫೂರ್ತಿಯಾಗಿದ್ದು, ಅನೂಹ್ಯ ಭಾರತವನ್ನು ಮುನ್ನಡೆಸುತ್ತಿರುವ ಮಂತ್ರವಾಗಿದೆ. !
***
(रिलीज़ आईडी: 1611554)
आगंतुक पटल : 290
इस विज्ञप्ति को इन भाषाओं में पढ़ें:
Assamese
,
Tamil
,
English
,
Urdu
,
हिन्दी
,
Marathi
,
Bengali
,
Punjabi
,
Gujarati
,
Odia
,
Telugu
,
Malayalam