ಹಣಕಾಸು ಸಚಿವಾಲಯ 
                
                
                
                
                
                
                    
                    
                        5 ಲಕ್ಷ ರೂ.ಗಳ ವರೆಗಿನ ಆದಾಯ ತೆರಿಗೆ ಮರುಪಾವತಿ ಬಾಕಿಯನ್ನು ತಕ್ಷಣ ಬಿಡುಗಡೆ ಮಾಡಿದ ಐಟಿ ಇಲಾಖೆ
                    
                    
                        
                    
                
                
                    Posted On:
                08 APR 2020 6:16PM by PIB Bengaluru
                
                
                
                
                
                
                5 ಲಕ್ಷ ರೂ.ಗಳ ವರೆಗಿನ ಆದಾಯ ತೆರಿಗೆ ಮರುಪಾವತಿ ಬಾಕಿಯನ್ನು ತಕ್ಷಣ ಬಿಡುಗಡೆ ಮಾಡಿದ ಐಟಿ ಇಲಾಖೆ
ಸುಮಾರು 14 ಲಕ್ಷ ತೆರಿಗೆ ಪಾವತಿದಾರರಿಗೆ ಅನುಕೂಲ
ಎಲ್ಲಾ ಜಿ ಎಸ್ ಟಿ ಮತ್ತು ಸೀಮಾ ಸುಂಕ ( ಕಸ್ಟಮ್ಸ್ ) ಮರುಪಾವತಿ ಕೂಡ ತಕ್ಷಣ ಬಿಡುಗಡೆ
ಎಂಎಸ್ಎಂಇ ಗಳು ಸೇರಿದಂತೆ ಸುಮಾರು ಒಂದು ಲಕ್ಷ ವಾಣಿಜ್ಯ ಸಂಸ್ಥೆಗಳಿಗೆ ಪ್ರಯೋಜನ
ಒಟ್ಟು ಸುಮಾರು 18,000 ಕೋಟಿ ರೂ. ಮರುಪಾವತಿ ತಕ್ಷಣ ಮಂಜೂರು
 
ಕೋವಿಡ್-19 ಸಂಕಷ್ಟದ ಹಿನ್ನೆಲೆಯಲ್ಲಿ ಮತ್ತು ವಾಣಿಜ್ಯೋದ್ಯಮಿಗಳು ಹಾಗೂ ಸಾರ್ವಜನಿಕರಿಗೆ ತಕ್ಷಣದ ಪರಿಹಾರವನ್ನು ಒದಗಿಸುವ ಸಲುವಾಗಿ 5 ಲಕ್ಷ ರೂ.ಗಳ ವರೆಗಿನ ಎಲ್ಲಾ ಆದಾಯ ತೆರಿಗೆ ಮರುಪಾವತಿ ಬಾಕಿಯನ್ನು ತಕ್ಷಣವೇ ಬಿಡುಗಡೆಗೆ ನಿರ್ಧರಿಸಲಾಗಿದೆ. ಇದರಿಂದ ಸುಮಾರು 14 ಲಕ್ಷ ತೆರಿಗೆ ಪಾವತಿದಾರರಿಗೆ ಅನುಕೂಲವಾಗಲಿದೆ. 
ಅಂತೆಯೇ ಎಲ್ಲಾ ಜಿ ಎಸ್ ಟಿ ಮತ್ತು ಸೀಮಾ ಸುಂಕ (ಕಸ್ಟಮ್ಸ್ ) ಮರುಪಾವತಿ ಬಾಕಿಯನ್ನೂ ಸಹ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದ್ದು, ಇದರಿಂದಾಗಿ ಎಂಎಸ್ಎಂಇ ಸೇರಿ, ಸುಮಾರು ಒಂದು ಲಕ್ಷ ವಾಣಿಜ್ಯ ಸಂಸ್ಥೆಗಳಿಗೆ ಅನುಕೂಲವಾಗಲಿದೆ. ಒಟ್ಟಾರೆ ಸುಮಾರು 18,000 ಕೋಟಿ ರೂ. ಮರುಪಾವತಿ ಹಣ ಮಂಜೂರು ಮಾಡಲಾಗಿದೆ. 
****
                
                
                
                
                
                (Release ID: 1612331)
                Visitor Counter : 349
                
                
                
                    
                
                
                    
                
                Read this release in: 
                
                        
                        
                            Odia 
                    
                        ,
                    
                        
                        
                            English 
                    
                        ,
                    
                        
                        
                            Urdu 
                    
                        ,
                    
                        
                        
                            हिन्दी 
                    
                        ,
                    
                        
                        
                            Marathi 
                    
                        ,
                    
                        
                        
                            Bengali 
                    
                        ,
                    
                        
                        
                            Assamese 
                    
                        ,
                    
                        
                        
                            Manipuri 
                    
                        ,
                    
                        
                        
                            Punjabi 
                    
                        ,
                    
                        
                        
                            Gujarati 
                    
                        ,
                    
                        
                        
                            Tamil 
                    
                        ,
                    
                        
                        
                            Telugu 
                    
                        ,
                    
                        
                        
                            Malayalam