ನಾಗರೀಕ ವಿಮಾನಯಾನ ಸಚಿವಾಲಯ
ಲೈಫ್ಲೈನ್ ಉಡಾನ್ ವಿಮಾನಗಳ ಮೂಲಕ ಏಪ್ರಿಲ್ 7, 2020 ರಂದು ದೇಶಾದ್ಯಂತ 39 ಟನ್ಗಳಷ್ಟು ವೈದ್ಯಕೀಯ ಸರಬರಾಜುಗಳ ವಿತರಣೆ
Posted On:
08 APR 2020 5:37PM by PIB Bengaluru
ಲೈಫ್ಲೈನ್ ಉಡಾನ್ ವಿಮಾನಗಳ ಮೂಲಕ ಏಪ್ರಿಲ್ 7, 2020 ರಂದು ದೇಶಾದ್ಯಂತ 39 ಟನ್ಗಳಷ್ಟು ವೈದ್ಯಕೀಯ ಸರಬರಾಜುಗಳ ವಿತರಣೆ
ದೇಶೀಯ ಅಗತ್ಯ ವಿಮಾನ ಸರಕು ಚಲನೆಯನ್ನು ಯೋಜಿಸಲು ಮತ್ತು ಟ್ರ್ಯಾಕ್ ಮಾಡಲು ಲೈಫ್ಲೈನ್ ಉಡಾನ್ ಪೋರ್ಟಲ್ ನೆರವು
ಏಪ್ರಿಲ್ 7, 2020 ರಂದು ಲೈಫ್ಲೈನ್ ಉಡಾನ್ ವಿಮಾನಗಳು ದೇಶಾದ್ಯಂತ 39.3 ಟನ್ ವೈದ್ಯಕೀಯ ಸರಬರಾಜುಗಳ ಸಾಗಾಟ ನಡೆಸಿವೆ. ಕೋವಿಡ್ -19 ಲಾಕ್ಡೌನ್ ಸಮಯದಲ್ಲಿ ಈ ವಿಮಾನಗಳು ಒಟ್ಟು ಸುಮಾರು 240 ಟನ್ ಸರಕು ಸಾಗಿಸಿವೆ. 1,41,080 ಕಿ.ಮೀ ವ್ಯಾಪ್ತಿಯಲ್ಲಿ 161 ವಿಮಾನಗಳನ್ನು ಲೈಫ್ಲೈನ್ ಉಡಾನ್ ಅಡಿಯಲ್ಲಿ ನಿರ್ವಹಿಸಲಾಗಿದೆ. ಈ ಪೈಕಿ 99 ವಿಮಾನಗಳನ್ನು ಏರ್ ಇಂಡಿಯಾ ಮತ್ತು ಅಲೈಯನ್ಸ್ ಏರ್ ನಿರ್ವಹಿಸುತ್ತಿದ್ದರೆ, 54 ವಿಮಾನಗಳನ್ನು ಐಎಎಫ್ ನಿರ್ವಹಿಸಿದೆ. ಅಂತರರಾಷ್ಟ್ರೀಯ ಮಾರ್ಗದಲ್ಲಿ, ಏಪ್ರಿಲ್ 7, 2020 ರಂದು, ಏರ್ ಇಂಡಿಯಾ 6.14 ಟನ್ ವೈದ್ಯಕೀಯ ಉಪಕರಣಗಳನ್ನು ಹಾಂಗ್ ಕಾಂಗ್ನಿಂದ ತಂದಿದೆ ಮತ್ತು ಏರ್ ಇಂಡಿಯಾ 8.85 ಟನ್ ಸರಬರಾಜುಗಳನ್ನು ಕೊಲಂಬೊಗೆ ಕೊಂಡೊಯ್ದಿತು.
ವೈದ್ಯಕೀಯ ಏರ್ ಕಾರ್ಗೋಗೆ ಮೀಸಲಾದ ಲೈಫ್ಲೈನ್ ಉಡಾನ್ ವಿಮಾನಗಳ ದೈನಂದಿನ ಮಾಹಿತಿ ಇತ್ತೀಚಿನ ಛಾಯಾಚಿತ್ರಗಳೊಂದಿಗೆ https://esahaj.gov.in/lifeline_udan ನಲ್ಲಿ ಲಭ್ಯವಿದೆ ವಿಮಾನಗಳು ಮತ್ತು ಸರಕುಗಳ ವಿವರಗಳನ್ನು ವಿವಿಧ ಏಜೆನ್ಸಿಗಳು ಮತ್ತು ಸರ್ಕಾರಿ ಘಟಕಗಳು ನಿರಂತರವಾಗಿ ಅಪ್ಲೋಡ್ ಮಾಡುತ್ತವೆ, ಇದು ಪೋರ್ಟಲ್ನಿಂದ ವಿವಿಧ ವಿವರಗಳನ್ನು ಸಂಯೋಜಿಸುವ ಮೂಲಕ ಪರಿಣಾಮಕಾರಿಯಾಗಿ ಮಾಡಲು ಯೋಜನೆಯನ್ನು ಶಕ್ತಗೊಳಿಸುತ್ತದೆ. ಬಳಕೆದಾರರು ಎದುರಿಸುತ್ತಿರುವ ಯಾವುದೇ ಸಮಸ್ಯೆಗಳನ್ನು ಆಧರಿಸಿ, ಅಗತ್ಯಗಳಿಗೆ ತಕ್ಕಂತೆ ಮತ್ತು ಉದ್ದೇಶವನ್ನು ಪೂರೈಸಲು ಪೋರ್ಟಲ್ ಅನ್ನು ಅಪ್ ಡೇಟ್ ಮಾಡಲಾಗುತ್ತಿದೆ ಮತ್ತು ಮಾರ್ಪಡಿಸಲಾಗುತ್ತಿದೆ.
ದಿನಾಂಕ
|
ಏರ್ ಇಂಡಿಯಾ
|
ಅಲಯನ್ಸ್
|
ಐಎಎಫ್
|
ಇಂಡಿಗೊ
|
ಸ್ಪೈಸ್ಜೆಟ್
|
ಒಟ್ಟು ವಿಮಾನಗಳು
|
07.04.2020
|
04
|
02
|
03
|
-
|
-
|
09
|
ಏರ್ ಇಂಡಿಯಾ ಮತ್ತು ಐಎಎಫ್ ಮುಖ್ಯವಾಗಿ ಜಮ್ಮು ಮತ್ತರು ಕಾಶ್ಮೀರ, ಲಡಾಖ್, ಈಶಾನ್ಯ ರಾಜ್ಯಗಳು ಮತ್ತು ಇತರ ದ್ವೀಪ ಪ್ರದೇಶಗಳಿಗೆ ಸಹಕರಿಸಿವೆ.
ದೇಶೀಯ ಸರಕು ನಿರ್ವಾಹಕರು: ಬ್ಲೂ ಡಾರ್ಟ್, ಸ್ಪೈಸ್ಜೆಟ್ ಮತ್ತು ಇಂಡಿಗೊ ವಾಣಿಜ್ಯ ಆಧಾರದ ಮೇಲೆ ಸರಕು ಸಾಗಣೆಯನ್ನು ನಿರ್ವಹಿಸುತ್ತಿವೆ. ಸ್ಪೈಸ್ಜೆಟ್ 2020 ರ ಮಾರ್ಚ್ 24 ರಿಂದ 7 ಏಪ್ರಿಲ್ 2020 ರವರೆಗೆ 2,77, 080 ಕಿ.ಮೀ.ಗಳನ್ನು ಕ್ರಮಿಸಿ 1,647.59 ಟನ್ ಸರಕುಗಳನ್ನು ಸಾಗಿಸಿದೆ. ಇವುಗಳಲ್ಲಿ 55 ರಲ್ಲಿ ಅಂತರರಾಷ್ಟ್ರೀಯ ಸರಕು ವಿಮಾನಗಳು ಇದ್ದವು. ಬ್ಲೂ ಡಾರ್ಟ್ 62 ದೇಶೀಯ ಸರಕು ವಿಮಾನಗಳಲ್ಲಿ 62,245 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾರ್ಚ್ 25 ರಿಂದ 7 ಏಪ್ರಿಲ್ ವರೆಗೆ 951.73 ಟನ್ ಸರಕುಗಳನ್ನು ಸಾಗಾಟ ಮಾಡಿದೆ. ಇಂಡಿಗೊ 3 - 4 ಏಪ್ರಿಲ್ 2020 ರಂದು 6103 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮತ್ತು 3.14 ಟನ್ ಸರಕುಗಳನ್ನು ಸಾಗಿಸಿದೆ.
ಸ್ಪೈಸ್ಜೆಟ್ನ ದೇಶೀಯ ಸರಕು ಸಾಗಣೆ (07.4.2020 ರಂತೆ)
ದಿನಾಂಕ
|
ವಿಮಾನಗಳ ಸಂಖ್ಯೆ
|
ಟನ್
|
ಕಿ.ಮೀ.
|
07.04.2020
|
12
|
96.89
|
13,634
|
ಸ್ಪೈಸ್ಜೆಟ್ನ ಅಂತಾರಾಷ್ಟ್ರೀಯ ಸರಕು ಸಾಗಣೆ (07.4.2020 ರಂತೆ)
ದಿನಾಂಕ
|
ವಿಮಾನಗಳ ಸಂಖ್ಯೆ
|
ಟನ್
|
ಕಿ.ಮೀ.
|
07.04.2020
|
2
|
20.57
|
5,236
|
ಬ್ಲೂ ಡಾರ್ಟ್ ಸರಕು ಸಾಗಣೆ (07.4.2020 ರಂತೆ)
ದಿನಾಂಕ
|
ವಿಮಾನಗಳ ಸಂಖ್ಯೆ
|
ಟನ್
|
ಕಿ.ಮೀ.
|
07.04.2020
|
6
|
89.600
|
7131.30
|
***
(Release ID: 1612337)
Read this release in:
Marathi
,
Bengali
,
Hindi
,
Telugu
,
English
,
Urdu
,
Assamese
,
Manipuri
,
Punjabi
,
Gujarati
,
Odia
,
Tamil