ಬುಡಕಟ್ಟು ವ್ಯವಹಾರಗಳ ಸಚಿವಾಲಯ

ಕೊರೊನಾ ವೈರಾಣು ವಿರುದ್ಧ ಮೂಲಭೂತ ಸುರಕ್ಷತೆ ಪಡೆಯುವ ಸಲುವಾಗಿ ಕುಶಲಕರ್ಮಿಗಳು/ ಎಸ್.ಎಚ್.ಜಿ.ಗಳು, ವನ್ ಧನ್ ಫಲಾನುಭವಿಗಳು ಮತ್ತು ಎನ್.ಜಿ.ಓ. ತಯಾರಿಸಿದ ಮಾಸ್ಕ್ ಗಳನ್ನು ಪೂರೈಕೆ ಮಾಡುವುದಾಗಿ ಟ್ರೈಫೆಡ್ ತಿಳಿಸಿದೆ

प्रविष्टि तिथि: 11 APR 2020 2:47PM by PIB Bengaluru

ಕೊರೊನಾ ವೈರಾಣು ವಿರುದ್ಧ ಮೂಲಭೂತ ಸುರಕ್ಷತೆ ಪಡೆಯುವ ಸಲುವಾಗಿ ಕುಶಲಕರ್ಮಿಗಳು/ ಎಸ್.ಎಚ್.ಜಿ.ಗಳು, ವನ್ ಧನ್ ಫಲಾನುಭವಿಗಳು ಮತ್ತು ಎನ್.ಜಿ.ಓ. ತಯಾರಿಸಿದ ಮಾಸ್ಕ್ ಗಳನ್ನು ಪೂರೈಕೆ ಮಾಡುವುದಾಗಿ ಟ್ರೈಫೆಡ್ ತಿಳಿಸಿದೆ

 

ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಟ್ರೈಪೆಡ್ ಬುಡಕಟ್ಟು ಕುಶಲಕರ್ಮಿಗಳು, ಸ್ವಸಹಾಯ ಗುಂಪುಗಳು (ಎಸ್.ಎಚ್.ಜಿ.), ವನ್ ಧನ್ ಫಲಾನುಭವಿಗಳು ಮತ್ತು ಎನ್‌.ಜಿಒಗಳು ಇತ್ಯಾದಿಗಳೊಂದಿಗೆ ಅವರು ತಯಾರಿಸುವ ಕೈಮಗ್ಗ, ಕರಕುಶಲ ಮತ್ತು ನೈಸರ್ಗಿಕ ಉತ್ಪನ್ನಗಳಿಗೆ ಮಾರುಕಟ್ಟೆ ಬೆಂಬಲವನ್ನು ಒದಗಿಸುತ್ತಿದೆ. ಪ್ರಸಕ್ತ ಸನ್ನಿವೇಶದಲ್ಲಿ ಈ ಪೂರೈಕೆದಾರರ ಪೈಕಿ ಕೆಲವರು ಪ್ರಸಕ್ತ ಕಾಡುತ್ತಿರುವ ಸಾಂಕ್ರಾಮಿಕದಿಂದ ತಮ್ಮನ್ನು ಮತ್ತು ತಮ್ಮ ಸಮುದಾಯವನ್ನು ರಕ್ಷಿಸಿಕೊಳ್ಳಲು ತಮ್ಮ ಮನೆಗಳಲ್ಲೇ ಮಾಸ್ಕ್ ತಯಾರಿಕೆ ಮಾಡುತ್ತಿದ್ದಾರೆ. ಅವರಲ್ಲಿ ಕೆಲವರು ಸ್ಥಳೀಯ ಪ್ರಾಧಿಕಾರಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಈ ಸರಬರಾಜುದಾರರು ತಮ್ಮ ಮನೆಗಳಿಂದ ಮಾಸ್ಕ್ ತಯಾರಿಕೆ ಸಾಮರ್ಥ್ಯ ಹೆಚ್ಚಿಸಿ ಮತ್ತು ಕಡಿಮೆ ದರಗಳ ಜೊತೆಗೆ ಮಾಸ್ಕ್ ಗಳನ್ನು ಪೂರೈಸುವ ಮೂಲಕ ಸರ್ಕಾರಕ್ಕೆ ಸಹಾಯ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸರಬರಾಜುದಾರರು ತಯಾರಿಸುವ ಮಾಸ್ಕ್ ಗಳ ಪೂರೈಕೆ ಅವರಿಗೆ ಸುರಕ್ಷತೆ ಒದಗಿಸುವುದರ ಜೊತೆಗೆ ಜೀವನೋಪಾಯದ ಮಾರ್ಗವನ್ನೂ ಸೃಷ್ಟಿಸಲು ಸಹಾಯ ಮಾಡುತ್ತದೆ. ಟ್ರಾಫೆಡ್ ಪ್ರಸಕ್ತ ಸಂಕಷ್ಟದ ಸಮಯದಲ್ಲಿ ಈ ಮಾಸ್ಕ್ ಗಳಿಗೆ ಹೆಚ್ಚುವರಿ ಪೂರೈಕೆದಾರರ ಗುರುತಿಸುವ ಸಾಧ್ಯತೆಯ ಶೋಧನೆ ಮಾಡುತ್ತಿದೆ.

ಕೋವಿಡ್ 19ರಿಂದ ತಲೆದೋರಿರುವ ಪ್ರಸಕ್ತ ಬಿಕ್ಕಟ್ಟಿನ ಪರಿಸ್ಥಿತಿ ದೇಶದಾದ್ಯಂತ ಹಿಂದೆಂದೂ ಕಾಣದಂಥಹ ಭೀತಿಯನ್ನು ತಂದೊಡ್ಡಿದೆ. ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಸಾಂಕ್ರಾಮಿಕದಿಂದ ವಿವಿಧ ಹಂತದಲ್ಲಿ ಬಾಧಿತವಾಗಿವೆ. ಈ ಮಹಾಮಾರಿಯ ಕರಿ ಛಾಯೆ ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಸಮಾಜದ ಎಲ್ಲ ವಲಯದ ಮೇಲೆ ಬೀರಿದೆ. ಬಡವರು ಮತ್ತು ಅಂಚಿನಲ್ಲಿರುವವರು ಈ ಸಾಂಕ್ರಾಮಿಕದಿಂದ ತೀವ್ರ ಬಾಧಿತರಾಗಿದ್ದಾರೆ. ಇದು ದೇಶದ ಬಹುತೇಕ ವಲಯಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಕೊಯ್ಲಿನ ಮತ್ತು ಮರಮುಟ್ಟು ಅಲ್ಲದ ಅರಣ್ಯ ಉತ್ಪನ್ನಗಳ (ಎನ್.ಟಿ.ಎಫ್.ಪಿ.) ಮಹತ್ವದ ಕಾಲವೂ ಆಗಿದೆ. ಹೀಗಾಗಿ ಮೂಲಭೂತ ಸುರಕ್ಷತೆಯಾದ ಮುಖವನ್ನು ಮುಚ್ಚಿಕೊಳ್ಳಲು ಮನೆಯಲ್ಲೇ ತಯಾರಿಸಿದ ಮಾಸ್ಕ್ ಅವಶ್ಯಕವಾಗಿದೆ.

 

*****


(रिलीज़ आईडी: 1613395) आगंतुक पटल : 278
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Punjabi , Gujarati , Odia , Tamil , Telugu