ನಾಗರೀಕ ವಿಮಾನಯಾನ ಸಚಿವಾಲಯ
274 ಲೈಫ್ ಲೈನ್ ಉಡಾನ್ ವಿಮಾನಗಳು, ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ದೇಶಾದ್ಯಂತ ಸರಬರಾಜು ಮಾಡಲು ಕಾರ್ಯನಿರ್ವಹಿಸುತ್ತಿವೆ
प्रविष्टि तिथि:
18 APR 2020 1:09PM by PIB Bengaluru
274 ಲೈಫ್ ಲೈನ್ ಉಡಾನ್ ವಿಮಾನಗಳು, ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ದೇಶಾದ್ಯಂತ ಸರಬರಾಜು ಮಾಡಲು ಕಾರ್ಯನಿರ್ವಹಿಸುತ್ತಿವೆ
ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ದೇಶದ ದೂರದ ಭಾಗಗಳಿಗೆ ಸಾಗಿಸುವ ಮೂಲಕ ಕೊವಿಡ್ – 19 ರ ವಿರುದ್ಧದ ಭಾರತದ ಹೋರಾಟಕ್ಕೆ ನೆರವು ಒದಗಿಸಲು ಲೈಫ್ ಲೈನ್ ಉಡಾನ್ ನಾಗರಿಕ ವಿಮಾನಗಳು ಎಂ ಒ ಸಿ ಎ ಮೂಲಕ ಕಾರ್ಯನಿರ್ವಹಿಸುತ್ತಿವೆ. ಏರ್ ಇಂಡಿಯಾ, ಅಲಯೆನ್ಸ್ ಏರ್, ಐಎಎಫ್, ಮತ್ತು ಖಾಸಗಿ ಸಂಸ್ಥೆಗಳ 247 ವಿಮಾನಗಳು ಲೈಫ್ ಲೈನ್ ಉಡಾನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 175 ಏರ್ ಇಂಡಿಯಾ, ಅಲಯೆನ್ಸ್ ಏರ್ ವಿಮಾನಗಳಾಗಿವೆ. ಇಲ್ಲಿವರೆಗೆ ಸುಮಾರು 463.15 ಟನ್ ಗಳಷ್ಟು ಸರಕುಗಳನ್ನು ಸಾಗಿಸಲಾಗಿದೆ. ಇಂದಿನವರೆಗೆ ಲೈಫ್ ಲೈನ್ ಉಡಾನ್ ವಿಮಾನಗಳು ಸುಮಾರು 2,73,275 ಕಿ. ಮೀ. ಗೂ ಹೆಚ್ಚು ವ್ಯಾಪ್ತಿಯನ್ನ ಕ್ರಮಿಸಿವೆ.
ಲೈಫ್ ಲೈನ್ ಉಡಾನ್ ವಿಮಾನಗಳ ದಿನಾಂಕವಾರು ವಿಂಗಡಣೆ ಈ ಕೆಳಗಿನಂತಿದೆ :
|
ಕ್ರಮ ಸಂಖ್ಯೆ
|
ದಿನಾಂಕ
|
ಏರ್ ಇಂಡಿಯಾIndia
|
ಅಲೈನ್ಸ್
|
ಐಎಎಫ್
|
ಇಂಡಿಗೊ
|
ಸ್ಪೈಸ್ ಜೆಟ್
|
ಒಟ್ಟು
|
|
1
|
26.3.2020
|
2
|
-
|
-
|
-
|
2
|
4
|
|
2
|
27.3.2020
|
4
|
9
|
1
|
-
|
-
|
14
|
|
3
|
28.3.2020
|
4
|
8
|
-
|
6
|
-
|
18
|
|
4
|
29.3.2020
|
4
|
9
|
6
|
-
|
-
|
19
|
|
5
|
30.3.2020
|
4
|
-
|
3
|
-
|
-
|
7
|
|
6
|
31.3.2020
|
9
|
2
|
1
|
-
|
-
|
12
|
|
7
|
01.4.2020
|
3
|
3
|
4
|
-
|
-
|
10
|
|
8
|
02.4.2020
|
4
|
5
|
3
|
-
|
-
|
12
|
|
9
|
03.4.2020
|
8
|
-
|
2
|
-
|
-
|
10
|
|
10
|
04.4.2020
|
4
|
3
|
2
|
-
|
-
|
9
|
|
11
|
05.4.2020
|
-
|
-
|
16
|
-
|
-
|
16
|
|
12
|
06.4.2020
|
3
|
4
|
13
|
-
|
-
|
20
|
|
13
|
07.4.2020
|
4
|
2
|
3
|
-
|
-
|
9
|
|
14
|
08.4.2020
|
3
|
-
|
3
|
-
|
-
|
6
|
|
15
|
09.4.2020
|
4
|
8
|
1
|
-
|
-
|
13
|
|
16
|
10.4.2020
|
2
|
4
|
2
|
-
|
-
|
8
|
|
17
|
11.4.2020
|
5
|
4
|
18
|
-
|
-
|
27
|
|
18
|
12.4.2020
|
2
|
2
|
-
|
-
|
-
|
4
|
|
19
|
13.4.2020
|
3
|
3
|
3
|
-
|
-
|
9
|
|
20
|
14.4.2020
|
4
|
5
|
4
|
-
|
-
|
13
|
|
21
|
15.4.2020
|
2
|
5
|
-
|
-
|
-
|
7
|
|
22
|
16.4.2020
|
9
|
-
|
6
|
-
|
-
|
15
|
|
23
|
17.4.2020
|
4
|
8
|
-
|
-
|
-
|
12
|
|
|
Total
|
91
|
84
|
91
|
6
|
2
|
274
|
ಪವನ್ ಹನ್ಸ್ ನಿಯಮಿತ ಸಂಸ್ಥೆ ಸೇರಿದಂತೆ ಹೆಲಿಕಾಪ್ಟರ್ ಸೇವೆಗಳು ಜಮ್ಮು ಮತ್ತು ಕಾಶ್ಮೀರ, ಲದಾಖ್, ದ್ವೀಪಗಳು ಮತ್ತು ಈಶಾನ್ಯ ಪ್ರದೇಶಗಳಿಗೆ ನಿರ್ಣಾಯಕ ವೈದ್ಯಕೀಯ ಸಾಮಗ್ರಿಗಳು ಮತ್ತು ರೋಗಿಗಳನ್ನು ಸಾಗಿಸಲು ಕಾರ್ಯನಿರ್ವಹಿಸುತ್ತಿವೆ.
ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತವೆ. ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಹೈದ್ರಾಬಾದ್, ಬೆಂಗಳೂರು ಮತ್ತು ಗುವಾಹಾಟಿಯಲ್ಲಿ ಕಾರ್ಗೊ ಹಬ್ ಗಳನ್ನು ಸ್ಥಾಪಿಸಲಾಗಿದೆ. ಲೈಫ್ ಲೈನ್ ಉಡಾನ್ ವಿಮಾನಗಳು ಈ ಹಬ್ ಗಳನ್ನು ದಿಬ್ರುಘರ್, ಅಗರ್ ತಲಾ, ಐಜ್ವಾಲ್, ದೀಮಾಪುರ್, ಇಂಫಾಲ್, ಜೋರ್ಹಾಟ್, ಲೆಂಗ್ಪುಯಿ, ಮೈಸೂರು, ನಾಗ್ಪುರ್, ಕೋಯಂಬತ್ತೂರ್, ತ್ರಿವೆಂಡ್ರಮ್, ಭುವನೇಶ್ವರ್, ರಾಯ್ಪುರ್, ರಾಂಚಿ, ಶ್ರೀನಗರ್, ಪೊರ್ಟ್ ಬ್ಲೇರ್, ಪಾಟ್ನಾ, ಕೊಚಿನ್, ವಿಜಯವಾಡಾ, ಅಹ್ಮದಾಬಾದ್, ಜಮ್ಮು, ಕಾರ್ಗಿಲ್, ಲಡಾಖ್, ಚಂದಿಘಡ, ಗೋವಾ, ಭೋಪಾಲ್ ಮತ್ತು ಪುಣೆಯ ವಿಮಾನ ನಿಲ್ದಾಣಗಳಿಗೆ (ಸ್ಪೋಕ್ಸ್) ಸಂಪರ್ಕ ಕಲ್ಪಿಸುತ್ತವೆ. ಈಶಾನ್ಯ ರಾಜ್ಯಗಳು, ದ್ವೀಪ ಪ್ರದೇಶಗಳು ಮತ್ತು ಬೆಟ್ಟ ಪ್ರದೇಶಗಳ ರಾಜ್ಯಗಳಿಗೆ ಹೆಚ್ಚಿನ ಗಮನಹರಿಸಲಾಗಿದೆ. ಪ್ರಾಥಮಿಕವಾಗಿ ಜಮ್ಮು ಮತ್ತು ಕಾಶ್ಮೀರ, ಲದಾಖ್, ಈಶಾನ್ಯ ಮತ್ತು ಇತರ ದ್ವೀಪ ಪ್ರದೇಶಗಳೊಂದಿಗೆ ಏರ್ ಇಂಡಿಯಾ ಮತ್ತು ಐಎಎಫ್ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ.
ದೇಶೀಯ ಸರಕು ಸಾಗಿಸುವ ವಿಮಾನಯಾನ ನಿರ್ವಾಹಕರಾದ; ಬ್ಲೂ ಡಾರ್ಟ್, ಸ್ಪೈಸ್ ಜೆಟ್ ಮತ್ತು ಇಂಡಿಗೊ ವಾಣಿಜ್ಯ ಆಧಾರದ ಮೇಲೆ ಕಾರ್ಗೊ ವಿಮಾನಗಳ ಹಾರಾಟ ನಿರ್ವಹಿಸುತ್ತಿವೆ. 24 ಮಾರ್ಚ್ ನಿಂದ 17 ಏಪ್ರಿಲ್ 2020 ರವರೆಗೆ ಸ್ಪೈಸ್ ಜೆಟ್ 5,64,691 ಕಿ. ಮೀ. ದೂರವನ್ನು ಮತ್ತು 3183 ಟನ್ ಗಳಷ್ಟು ಸರಕುಗಳನ್ನು 393 ಕಾರ್ಗೊ ವಿಮಾನಗಳ ಮೂಲಕ ಸಾಗಾಟ ನಡೆಸಿತು. ಇವುಗಳಲ್ಲಿ 126 ವಿದೇಶೀ ಕಾರ್ಗೊ ವಿಮಾನಗಳಾಗಿವೆ. ಬ್ಲೂ ಡಾರ್ಟ್ 1,32,295 ಕಿ. ಮೀ. ದೂರವನ್ನು ಮತ್ತು 2122 ಟನ್ ಗಳಷ್ಟು ಸರಕುಗಳನ್ನು 134 ದೇಶೀಯ ಕಾರ್ಗೊ ವಿಮಾನಗಳ ಮೂಲಕ, 25 ಮಾರ್ಚ್ ರಿಂದ 17 ಏಪ್ರಿಲ್ 2020 ರ ನಡುವೆ ಸಾಗಾಟ ನಡೆಸಿತು. ಇಂಡಿಗೊ 26,698 ಕಿ. ಮೀ. ದೂರವನ್ನು ಮತ್ತು 31 ಟನ್ ಗಳಷ್ಟು ಸರಕುಗಳನ್ನು 29 ಕಾರ್ಗೊ ವಿಮಾನಗಳ ಮೂಲಕ 3 ರಿಂದ 17 ಏಪ್ರಿಲ್ 2020 ರ ನಡುವೆ ಸಾಗಾಟ ನಡೆಸಿತು. ಇದರಲ್ಲಿ ಸರ್ಕಾರಕ್ಕಾಗಿ ಉಚಿತವಾಗಿ ಸಾಗಿಸಲಾದ ವೈದ್ಯಕೀಯ ಸಾಮಗ್ರಿಗಳೂ ಒಳಗೊಂಡಿವೆ.
ಅಂತಾರಾಷ್ಟ್ರೀಯ ವಲಯ - ಔಷಧಿಗಳು, ವೈದ್ಯಕೀಯ ಉಪಕರಣಗಳು ಮತ್ತು ಕೊವಿಡ್ – 19 ಪರಿಹಾರ ಸಾಮಗ್ರಿಗಳ ಸಾಗಣೆಗೆ ಏಪ್ರಿಲ್ 4, 2020 ರಿಂದ ಕಾರ್ಯರೂಪಕ್ಕೆ ಬರುವಂತೆ ಏರ್ ಬ್ರಿಡ್ಜ್ ಅನ್ನು ಸ್ಥಾಪಿಸಲಾಗಿದೆ. ದಿನಾಂಕವಾರು ತರಲಾದ ವೈದ್ಯಕೀಯ ಸರಕು ಪ್ರಮಾಣದ ಕೆಳಗಿನಂತಿದೆ
|
ಕ್ರಮ ಸಂಖ್ಯೆ
|
ದಿನಾಂಕ
|
ಇಂದ
|
ಪ್ರಮಾಣ (ಟನ್ಗಳಲ್ಲಿ)
|
|
1
|
04.4.2020
|
ಶಾಂಘೈ
|
21
|
|
2
|
07.4.2020
|
ಹಾಂಗ್ ಕಾಂಗ್
|
06
|
|
3
|
09.4.2020
|
ಶಾಂಘೈ
|
22
|
|
4
|
10.4.2020
|
ಶಾಂಘೈ
|
18
|
|
5
|
11.4.2020
|
ಶಾಂಘೈ
|
18
|
|
6
|
12.4.2020
|
ಶಾಂಘೈ
|
24
|
|
7
|
14.4.2020
|
ಹಾಂಗ್ ಕಾಂಗ್
|
11
|
|
8
|
14.4.2020
|
ಶಾಂಘೈ
|
22
|
|
9
|
16.4.2020
|
ಶಾಂಘೈ
|
22
|
|
10
|
16.4.2020
|
ಹಾಂಗ್ ಕಾಂಗ್
|
17
|
|
11
|
16.4.2020
|
ಸಿಯೋಲ್
|
05
|
|
12
|
17.4.2020
|
ಶಾಂಘೈ
|
21
|
|
|
|
ಒಟ್ಟು
|
207
|
ಕೃಷಿ ಉಡಾನ್ ಕಾರ್ಯಕ್ರಮದಡಿ 15 ಏಪ್ರೀಲ್ 2020 ರಂದು ಏರ್ ಇಂಡಿಯಾ 2 ನೇ ಉಡ್ಡಯನವನ್ನು ಮುಂಬೈಯಿಂದ ಫ್ರಾಂಕ್ ಫರ್ಟ್ ನಡುವೆ ನಡೆಸಿದೆ. 27 ಟನ್ ಗಳಷ್ಟು ಹಣ್ಣು ಮತ್ತು ತರಕಾರಿಗಳನ್ನು ಫ್ರಾಂಕ್ ಫರ್ಟ್ ಗೆ ಸಾಗಿಸಿ, ಅಲ್ಲಿಂದ 10 ಟನ್ ಗಳಷ್ಟು ಸಾಮಾನ್ಯ ಸರಕುಗಳೊಂದಿಗೆ ಮರಳಿ ಬಂತು. ಏರ್ ಇಂಡಿಯಾ ಏಪ್ರಿಲ್ 13, 2020 ರಂದು ಮೊದಲ ಕೃಷಿ ಉಡಾನ್ ವಿಮಾನದ ಹಾರಾಟವನ್ನು, ಮುಂಬೈ ಮತ್ತು ಲಂಡನ್ ನಡುವೆ ನಡೆಸಿತು. 28.95ಟನ್ ಗಳಷ್ಟು ಹಣ್ಣು ಮತ್ತು ತರಕಾರಿಗಳನ್ನು ಲಂಡನ್ ಗೆ ಸಾಗಿಸಿ, ಅಲ್ಲಿಂದ 15.6 ಟನ್ ಗಳಷ್ಟು ಸಾಮಾನ್ಯ ಸರಕುಗಳೊಂದಿಗೆ ಮರಳಿ ಬಂತು. ಏರ್ ಇಂಡಿಯಾ, ಅವಶ್ಯಕತೆಗೆ ಅನುಸಾರ ಬೇರೆ ದೇಶಗಳಿಗೆ ತುರ್ತು ವೈದ್ಯಕೀಯ ಸಾಮಗ್ರಿಗಳನ್ನು ಸರಬರಾಜು ಮಾಡಲು ನಿಗದಿಪಡಿಸಿದ ಕಾರ್ಗೊ ವಿಮಾನಗಳ ಹಾರಾಟವನ್ನು ನಡೆಸುತ್ತಿದೆ. ಏರ್ ಇಂಡಿಯ, ಸೆಚೆಲೆಸ್ ಗೆ 3.4 ಟನ್ ಗಳಷ್ಟು ಮತ್ತು ಮಾರಿಶಿಯಸ್ ಗೆ 12.6 ಟನ್ ಗಳ ವೈದ್ಯಕೀಯ ಸಾಮಗ್ರಿಗಳನ್ನು ತಲುಪಿಸಲು ಇಂಥ ಮೊದಲ ವಿಮಾನದ ಹಾರಾಟವನ್ನು 15 ಏಪ್ರಿಲ್ 2020 ರಂದು ದೆಹಲಿ-ಸೆಚೆಲೆಸ್-ಮಾರಿಶಿಯಸ್-ದೆಹಲಿ ಮಧ್ಯೆ ನಡೆಸಿತ್ತು.
****
(रिलीज़ आईडी: 1615937)
आगंतुक पटल : 222
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu