ಹಣಕಾಸು ಸಚಿವಾಲಯ 
                
                
                
                
                
                
                    
                    
                        ಕೋವಿಡ್ – 2019 ಲಾಕ್ ಡೌನ್ ವೇಳೆ ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (ಪಿಎಫ್ಎಂಎಸ್) ಅಡಿಯಲ್ಲಿ 16.01 ಕೋಟಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ 36,659 ಕೋಟಿ ರೂ.ಗೂ ಅಧಿಕ ಹಣ ವರ್ಗಾವಣೆ
                    
                    
                        
                    
                
                
                    Posted On:
                19 APR 2020 3:06PM by PIB Bengaluru
                
                
                
                
                
                
                ಕೋವಿಡ್ – 2019 ಲಾಕ್ ಡೌನ್ ವೇಳೆ ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (ಪಿಎಫ್ಎಂಎಸ್) ಅಡಿಯಲ್ಲಿ 16.01 ಕೋಟಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ 36,659 ಕೋಟಿ ರೂ.ಗೂ ಅಧಿಕ ಹಣ ವರ್ಗಾವಣೆ
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ನಡಿ ಘೋಷಿಸಲಾಗಿದ್ದ ನಗದು ಪ್ರಯೋಜನಗಳನ್ನೂ ಸಹ ಡಿಬಿಟಿ ಡಿಜಿಟಲ್ ಪಾವತಿ ಮೂಲಸೌಕರ್ಯದ ಮೂಲಕ ವರ್ಗಾವಣೆ
ಕಳೆದ ಮೂರು ಹಣಕಾಸು ವರ್ಷಗಳಿಂದೀಚೆಗೆ ಡಿಬಿಟಿ ಪಾವತಿಗಳಿಗೆ ಪಿಎಫ್ಎಂಎಸ್ ಬಳಕೆ ಹೆಚ್ಚಳ; 2018-19ನೇ ಹಣಕಾಸು ವರ್ಷದಲ್ಲಿ ಒಟ್ಟು ಡಿಬಿಟಿ ಮೊತ್ತ ವಿತರಣೆ ಶೇ.22ರಷ್ಟು ಇದ್ದದ್ದು, 2019-20ನೇ ಹಣಕಾಸು ವರ್ಷದಲ್ಲಿ ಶೇ.45ಕ್ಕೆ ಹೆಚ್ಚಳ
ಡಿಬಿಟಿಯಿಂದಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಖಾತ್ರಿ, ಸೋರಿಕೆಗೆ ತಡೆ ಮತ್ತು ಪರಿಣಾಮಕಾರಿ ಸುಧಾರಣೆ
 
ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ(ಪಿಎಫ್ಎಂಎಸ್) ಮೂಲಕ 16.01 ಕೋಟಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ(ಡಿಬಿಟಿ) ಬಳಸಿ 36,659 ಕೋಟಿ ರೂ.ಗೂ ಅಧಿಕ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯ ಲೆಕ್ಕ ಪತ್ರ ಮಹಾ ನಿಯಂತ್ರಕರು(ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್-ಸಿಜಿಎ) ಕಚೇರಿ ತಿಳಿಸಿದೆ.
ನೇರ ನಗದು ವರ್ಗಾವಣೆಯಿಂದಾಗಿ ನಗದು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗಲಿದೆ, ಇದರಿಂದ ಸೋರಿಕೆಗೆ ತಡೆ ಬೀಳುವುದಲ್ಲದೆ, ಪರಿಣಾಮಕಾರಿ ಸುಧಾರಣೆಯಾಗಿದೆ.
ಈ ಮೇಲಿನ ನಗದು ಮೊತ್ತವನ್ನು ರೋಬುಸ್ಟ್ ಡಿಜಿಟಲ್ ಪಾವತಿ ತಂತ್ರಜ್ಞಾನ ಪಿಎಫ್ಎಂಎಸ್( ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ) ಬಳಸಿ, ಕೇಂದ್ರ ಸರ್ಕಾರದ ಯೋಜನೆಗಳು(ಸಿಎಸ್)/ ಕೇಂದ್ರದ ಪ್ರಾಯೋಜಿತ ಯೋಜನೆಗಳು(ಸಿಎಸ್ಎಸ್)/ಸಿಎಎಸ್ ಪಿ ಯೋಜನೆಗಳ ಡಿಬಿಟಿ ಪಾವತಿಗಳನ್ನು ಮಾಡಲಾಗಿದೆ.
ಪ್ರಮುಖ ಮುಖ್ಯಾಂಶಗಳು :
	- 36,659 ಕೋಟಿ ರೂ.ಗಳಿಗೂ ಅಧಿಕ( 27,442 ಕೋಟಿ ರೂ.ಗಳು [ಕೇಂದ್ರದ ಪ್ರಾಯೋಜಿತ ಯೋಜನೆಗಳು(ಸಿಎಸ್ಎಸ್) + ಕೇಂದ್ರದ ವಲಯ ಯೋಜನೆಗಳು(ಸಿಎಸ್) + 9717 ಕೋಟಿ ರೂ. [ರಾಜ್ಯ ಸರ್ಕಾರ]) ಹಣವನ್ನು ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ(ಪಿಎಫ್ಎಂಎಸ್) ಮೂಲಕ ನೇರ ನಗದು ವರ್ಗಾವಣೆ(ಡಿಬಿಟಿ) ಬಳಸಿ 16.01 ಕೋಟಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ(11.42 ಕೋಟಿ [ಸಿಎಸ್ಎಸ್/ಸಿಎಸ್] + 4.59 ಕೋಟಿ [ರಾಜ್ಯ]) ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ(2020ರ ಮಾರ್ಚ್ 24ರಿಂದ 2020ರ ಏಪ್ರಿಲ್ 17ರ ವರೆಗೆ) ವರ್ಗಾಯಿಸಲಾಗಿದೆ.
- ಡಿಬಿಟಿ ಡಿಜಿಟಲ್ ಪಾವತಿ ಮೂಲಸೌಕರ್ಯ ಬಳಸಿ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ಅಡಿಯಲ್ಲಿ ಪ್ರಕಟಿಸಲಾಗಿದ್ದ ನಗದು ಪ್ರಯೋಜನಗಳನ್ನೂ ಸಹ ವರ್ಗಾವಣೆ ಮಾಡಲಾಗಿದೆ. ಜನ್-ಧನ್ ಖಾತೆ ಹೊಂದಿರುವ ಮಹಿಳೆಯರ ಖಾತೆಗಳಿಗೆ ತಲಾ 500 ರೂ. ಜಮೆ ಮಾಡಲಾಗಿದೆ. 2020ರ ಏಪ್ರಿಲ್ 13ರ ವರೆಗೆ ಒಟ್ಟು 19.86 ಕೋಟಿ ಮಹಿಳಾ ಸದಸ್ಯ ಫಲಾನುಭವಿಗಳಿಗೆ 9,930 ಕೋಟಿ ರೂ. ವಿತರಣೆಯಾಗಿದೆ.(ಹಣಕಾಸು ಸೇವೆಗಳ ಇಲಾಖೆ ನೀಡಿರುವ ಅಂಕಿ-ಅಂಶಗಳ ಪ್ರಕಾರ)
- ಕಳೆದ ಮೂರು ಹಣಕಾಸು ವರ್ಷಗಳಿಂದೀಚೆಗೆ ಡಿಬಿಟಿ ಪಾವತಿಗಳಿಗೆ ಪಿಎಫ್ಎಂಎಸ್ ಬಳಕೆ ಹೆಚ್ಚಾಗಿದ್ದು; 2018-19ನೇ ಹಣಕಾಸು ವರ್ಷದಲ್ಲಿ ಒಟ್ಟು ಡಿಬಿಟಿ ಮೊತ್ತ ವಿತರಣೆ ಶೇ.22ರಷ್ಟು ಇದ್ದದ್ದು, 2019-20ನೇ ಹಣಕಾಸು ವರ್ಷದಲ್ಲಿ ಶೇ.45ಕ್ಕೆ ಹೆಚ್ಚಳವಾಗಿದೆ.
ಕೋವಿಡ್-19 ಅವಧಿಯಲ್ಲಿ(2020ರ ಮಾರ್ಚ್ 24 ರಿಂದ 2020ರ ಏಪ್ರಿಲ್ 17ರ ವರೆಗೆ) ಅವಧಿಯಲ್ಲಿ ಪಿಎಫ್ಎಂಎಸ್ ಬಳಸಿ, ಡಿಬಿಟಿ ಪಾವತಿಗಳಿಗಾಗಿ ನಗದು ವರ್ಗಾವಣೆ ಮಾಡಿರುವ ವಿವರ :
	- ಕೋವಿಡ್-19 ಅವಧಿಯಲ್ಲಿ ಅಂದರೆ 2020ರ ಮಾರ್ಚ್ 24 ರಿಂದ 2020ರ ಏಪ್ರಿಲ್ 17ರ ವರೆಗೆ: ಪಿಎಫ್ಎಂಎಸ್ ಮೂಲಕ ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳು/ಕೇಂದ್ರದ ಪ್ರಾಯೋಜಿತ ಯೋಜನೆಗಳಿಗೆ ಒಟ್ಟು 27,442.08 ಕೋಟಿ ಮೊತ್ತವನ್ನು 11,42,02,592 ಫಲಾನುಭವಿಗಳ ಖಾತೆಗಳಿಗೆ, ಪಿಎಂ ಕಿಸಾನ್, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ(ಮನ್ರೇಗಾ), ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ (ಎಸ್ಎಸ್ಎಪಿ), ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ(ಪಿಎಂಎಂವಿಐ), ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್(ಎಆರ್ ಎಲ್ಎಂ), ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಚ್ಎಂ) ಅಡಿಯಲ್ಲಿ ಮತ್ತು ನಾನಾ ಸಚಿವಾಲಯಗಳ ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್(ಎಸ್ಎಸ್ ಪಿ) ಮೂಲಕ ವಿದ್ಯಾರ್ಥಿವೇತನ ಯೋಜನೆಗಳಿಗೆ ನೀಡಲಾಗಿದೆ.
- ಮೇಲೆ ಉಲ್ಲೇಖಿಸಲಾದ ಯೋಜನೆಗಳಲ್ಲದೆ, ಪ್ರಧಾನಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ಜನ್-ಧನ್ ಖಾತೆ ಹೊಂದಿರುವ ಎಲ್ಲ ಮಹಿಳೆಯರ ಖಾತೆಗಳಿಗೆ ತಲಾ 500 ರೂ. ಜಮೆ ಮಾಡಲಾಗಿದೆ. 2020ರ ಏಪ್ರಿಲ್ 13ರ ವರೆಗೆ ಒಟ್ಟು 19.86 ಕೋಟಿ ಮಹಿಳಾ ಫಲಾನುಭವಿಗಳಿಗೆ 9,930 ಕೋಟಿ ರೂ. ಹಣ ವಿತರಣೆಯಾಗಿದೆ.(ಹಣಕಾಸು ಸೇವೆಗಳ ಇಲಾಖೆ ಅಂಕಿ-ಅಂಶಗಳ ಪ್ರಕಾರ).
- ಕೋವಿಡ್-19 ಅವಧಿಯಲ್ಲಿ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ತ್ರಿಪುರಾ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ, ಆಂಧ್ರಪ್ರದೇಶ ಮತ್ತು ಇತರ ಹಲವು ರಾಜ್ಯಗಳು ಡಿಬಿಟಿಯನ್ನು ಬಳಸಿ, ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಿದ್ದವು. 180 ಕಲ್ಯಾಣ ಯೋಜನೆಗಳಡಿ ರಾಜ್ಯ ಸರ್ಕಾರಗಳು, ಪಿಎಫ್ಎಂಎಸ್ ಬಳಸಿ, 2020ರ ಮಾರ್ಚ್ 24ರಿಂದ 2020ರ ಏಪ್ರಿಲ್ 17ರ ವರೆಗಿನ ಅವಧಿಯಲ್ಲಿ 4,59,03,908 ಫಲಾನುಭವಿಗಳಿಗೆ ಒಟ್ಟು 9,217.22 ಕೋಟಿ ರೂ. ಮೊತ್ತವನ್ನು ವಿತರಣೆ ಮಾಡಿವೆ.  
 
10 ಪ್ರಮುಖ ಕೇಂದ್ರದ ಪ್ರಾಯೋಜಿತ ಯೋಜನೆಗಳು/ಕೇಂದ್ರದ ವಲಯ ಯೋಜನೆಗಳಲ್ಲಿ ಡಿಬಿಟಿ ಪಾವತಿಯ ಸಂಕ್ಷಿಪ್ತ ವಿವರ
 
	
		
			| ಯೋಜನೆ | ಅವಧಿ: [24-ಮಾರ್ಚ್-2020 ರಿಂದ 17-ಏಪ್ರಿಲ್ -2020] | 
		
			| ಫಲಾನುಭವಿಗಳಿಗೆ ಪಾವತಿ | ಮೊತ್ತ (ಕೋಟಿ.ರೂ. ಗಳಲ್ಲಿ ) | 
		
			| ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್ )-[3624] | 8,43,79,326 | 17,733.53 | 
		
			| ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ[9219] | 1,55,68,886 | 5,406.09 | 
		
			| ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧ್ಯಾಪ್ಯ ಪಿಂಚಣಿ ಯೋಜನೆ (ಐಜಿಎನ್ಒಎಪಿಎಸ್)-[3163] | 93,16,712 | 999.49 | 
		
			| ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ಪಿಂಚಣಿ ಯೋಜನೆ(ಐಜಿಎನ್ ಡಬ್ಲ್ಯೂಪಿಎಸ್)-[3167] | 12,37,925 | 158.59 | 
		
			| ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್-[9156] | 10,98,128 | 280.80 | 
		
			| ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ-[3534] | 7,58,153 | 209.47 | 
		
			| ಅಲ್ಪಸಂಖ್ಯಾತರಿಗೆ ಪ್ರಿಮೆಟ್ರಿಕ್ ವಿದ್ಯಾರ್ಥಿ ವೇತನ-[9253] | 5,72,902 | 159.86 | 
		
			| ಎನ್ಎಫ್ಎಸ್ಎ ಅಡಿಯಲ್ಲಿ ವಿಕೇಂದ್ರೀಕೃತ ಆಹಾರಧಾನ್ಯಗಳ ಖರೀದಿಗೆ ಆಹಾರ ಸಬ್ಸಿಡಿ-[9533] | 2,91,250 | 19.18 | 
		
			| ಇಂದಿರಾ ಗಾಂಧಿ ರಾಷ್ಟ್ರೀಯ ದಿವ್ಯಾಂಗರ ಪಿಂಚಣಿ ಯೋಜನೆ(ಐಜಿಎನ್ ಡಿಪಿಎಸ್)-[3169] | 2,39,707 | 26.95 | 
		
			| ರಾಷ್ಟ್ರೀಯ ಸಾಮಾಜಿಕ ನೆರವಿನ ಕಾರ್ಯಕ್ರಮ(ಎನ್ಎಸ್ಎಪಿ)-[9182] | 2,23,987 | 30.55 | 
	
 
* ಒಟ್ಟು ಫಲಾನುಭವಿಗಳಿಗೆ ಪಾವತಿ 11,42,02,592/ ಮೊತ್ತ: 27,442.08 ಕೋಟಿ ರೂ. [ಮೇಲಿನ ಪ್ಯಾರಾ (i) ರಲ್ಲಿರುವಂತೆ]
 
ರಾಜ್ಯ ಸರ್ಕಾರಗಳ 10 ಪ್ರಮುಖ ಯೋಜನೆಗಳ ಡಿಬಿಟಿ ಪಾವತಿಯ ಸಂಕ್ಷಿಪ್ತ ವಿವರ:
	
		
			| ರಾಜ್ಯ | ಯೋಜನೆ | ಅವಧಿ: [24-ಮಾರ್ಚ್-2020 ರಿಂದ 17-ಏಪ್ರಿಲ್-2020] | 
		
			| ಫಲಾನುಭವಿಗಳಿಗೆ ಪಾವತಿ | ಮೊತ್ತ (ಕೋಟಿ ರೂ.ಗಳಲ್ಲಿ) |   | 
		
			| ಬಿಹಾರ | ಡಿಬಿಟಿ-ಶಿಕ್ಷಣ ಇಲಾಖೆ(ಬಿಆರ್147) | 1,52,70,541 | 1,884.66 |   | 
		
			| ಬಿಹಾರ | ಕೊರೊನಾ ಸಹಾಯತ(ಬಿಆರ್142) | 86,95,974 | 869.60 |   | 
		
			| ಉತ್ತರ ಪ್ರದೇಶ | वृद्धावस्था/किसानपेंशनयोजना-[9529] | 53,24,855 | 707.91 |   | 
		
			| ಉತ್ತರ ಪ್ರದೇಶ | ಯುಪಿ-ರಾಷ್ಟ್ರೀಯ ವಿಧವಾ ಪಿಂಚಣಿ ಯೋಜನೆ (3167)-[ಯುಪಿ10] | 26,76,212 | 272.14 |   | 
		
			| ಬಿಹಾರ | ಮುಖ್ಯಮಂತ್ರಿ ವೃದ್ಧಜನ್ ಪಿಂಚಣಿ ಯೋಜನೆ -[ಬಿಆರ್ 134] | 18,17,100 | 199.73 |   | 
		
			| ಉತ್ತರ ಪ್ರದೇಶ | कुष्ठावस्थाविकलांगभरणपोषणअनुदान-[9763] | 10,78,514 | 112.14 |   | 
		
			| ಬಿಹಾರ | ಬಿಹಾರ ರಾಜ್ಯ ದಿವ್ಯಾಂಗ ಪಿಂಚಣಿ ಯೋಜನೆ-[ ಬಿಆರ್ 99] | 10,37,577 | 98.39 |   | 
		
			| ಅಸ್ಸಾಂ | ಎಎಸ್- ವೃದ್ಧಾಪ್ಯ ಪಿಂಚಣಿ ಯೋಜನೆಗೆ ರಾಜ್ಯದ ಕೊಡುಗೆ(ಒಎಪಿಎಫ್ಎಸ್ ಸಿ)-[ಎಎಸ್103] | 9,86,491 | 28.88 |   | 
		
			| ಬಿಹಾರ | ಮುಖ್ಯಮಂತ್ರಿ ವಿಶೇಷ ಸಹಾಯತ-[ ಬಿಆರ್ 166] | 9,81,879 | 98.19 |   | 
		
			| ದೆಹಲಿ | ದೆಹಲಿ-ಹಿರಿಯ ನಾಯಕರಿಗೆ ಹಣಕಾಸಿನ ನೆರವು ಯೋಜನೆ-[2239] | 9,27,101 | 433.61 |   | 
	
 
* ಒಟ್ಟು ಫಲಾನುಭವಿಗಳು 4,59,03,908 / ಮೊತ್ತ : 9217.22 ಕೋಟಿ ರೂ.ಗಳಲ್ಲಿ [ಪ್ಯಾರಾ (iii) ರಲ್ಲಿ ಮೇಲೆ ತಿಳಿಸಿರುವಂತೆ]
 
ಕಳೆದ ಮೂರು ವರ್ಷಗಳಲ್ಲಿ ಪಿಎಫ್ಎಂಎಸ್ ಬಳಸಿ ಡಿಬಿಟಿ ಪಾವತಿ ಪ್ರಗತಿ :
ಕಳೆದ ಮೂರು ಹಣಕಾಸು ವರ್ಷಗಳಿಂದೀಚೆಗೆ ಡಿಬಿಟಿ ಪಾವತಿಗಳಿಗೆ ಪಿಎಫ್ಎಂಎಸ್ ಬಳಕೆ ಹೆಚ್ಚಾಗಿದ್ದು 2018-19ನೇ ಹಣಕಾಸು ವರ್ಷದಲ್ಲಿ(2017-18ಕ್ಕೆ ಹೋಲಿಸಿದರೆ) ಶೇ.11ರಷ್ಟು ಹೆಚ್ಚಾಗಿದೆ. 2019-20ನೇ ಹಣಕಾಸು ವರ್ಷದಲ್ಲಿ ಶೇ.48ಕ್ಕೆ ಹೆಚ್ಚಳವಾಗಿದೆ. 2018-19ರಿಂದ 2019-20ಕ್ಕೆ ಹೋಲಿಸಿದರೆ ಡಿಬಿಟಿ ಮೊತ್ತ ವಿತರಣೆ ಶೇ.22ರಷ್ಟು ಇದ್ದದ್ದು, ಶೇ. 45ಕ್ಕೆ ಏರಿಕೆಯಾಗಿದೆ. 
 

 
ಹಿನ್ನೆಲೆ:
ಹಣಕಾಸು ಸಚಿವಾಲಯ(ಎಂಒಎಫ್), ಭಾರತ ಸರ್ಕಾರ ಎಲ್ಲ ಡಿಬಿಟಿ ಪಾವತಿಗಳಿಗೆ, ಲೆಕ್ಕಗಳಿಗೆ ಮತ್ತು ವರದಿಗಳಿಗೆ ಮಹಾಲೆಕ್ಕಪಾಲಕರ ಕಚೇರಿಯ(ಸಿಜಿಎ)ಅಡಿ ಬರುವ ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ(ಪಿಎಫ್ಎಂಎಸ್)ಅನ್ನು ಕಡ್ಡಾಯವಾಗಿ ಬಳಕೆ ಮಾಡಲು ನಿರ್ಧರಿಸಿದೆ ಮತ್ತು (2014ರ ಡಿಸೆಂಬರ್ ನಲ್ಲಿ) ಏಪ್ರಿಲ್ 1, 2015ರ ನಂತರ ಪಿಎಫ್ಎಂಎಸ್ ಮೂಲಕ ಮಾತ್ರ ಎಲ್ಲ ವಿದ್ಯುನ್ಮಾನ ಪಾವತಿಗಳಿಗೆ ಡಿಬಿಟಿ ಯೋಜನೆ ಅಡಿಯೇ ಮಾಡುವುದನ್ನು ಖಾತ್ರಿಪಡಿಸಬೇಕು ಎಂದು ಎಲ್ಲ ಸಚಿವಾಲಯಗಳು/ಇಲಾಖೆಗಳಿಗೆ ಸೂಚನೆ ಆದೇಶಿಸಿತ್ತು. ನೇರ ನಗದು ವರ್ಗಾವಣೆ(ಡಿಬಿಟಿ), ಭಾರತ ಸರ್ಕಾರದ ಒಂದು ಸುಧಾರಣಾ ಕಾರ್ಯಕ್ರಮವಾಗಿದ್ದು, ಅದರಡಿ ಆಧುನಿಕ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ(ಐಸಿಟಿ) ಬಳಕೆ ಮಾಡಿಕೊಂಡು ಕ್ಲಿಷ್ಟಕರವಾಗಿದ್ದ ವಿತರಣಾ ವ್ಯವಸ್ಥೆಗೆ ಪುನರುಜ್ಜೀವನ ನೀಡಲು ಮತ್ತು ಪ್ರಯೋಜನಗಳನ್ನು ಬ್ಯಾಂಕ್/ಅಂಚೆ ಖಾತೆಗಳಿಗೆ ನೇರವಾಗಿ ವರ್ಗಾಯಿಸಲು ವಿಶೇಷವಾಗಿ ಆಧಾರ್ ಸಂಯೋಜಿಸಲು ಒತ್ತು ನೀಡಲಾಯಿತು. ಇದರಿಂದಾಗಿ ನಿಗದಿತ ಫಲಾನುಭವಿಗಳಿಗೆ ಯೋಜನೆಯ ಲಾಭ ದೊರೆಯುವುದಲ್ಲದೆ, ಸರ್ಕಾರದ ಯೋಜನೆಗಳು ವೈಯಕ್ತಿಕವಾಗಿ ಫಲಾನುಭವಿಗಳಿಗೆ ನೇರವಾಗಿ ದೊರಕುವಂತಾಯಿತು.
ಪಿಎಫ್ಎಂಎಸ್ ಅಡಿಯಲ್ಲಿ ಡಿಬಿಟಿ ಪಾವತಿ ವ್ಯವಸ್ಥೆ
ಪಿಎಫ್ಎಂಎಸ್ ಫಲಾನುಭವಿ ನಿರ್ವಹಣೆಗಾಗಿ ಪಿಎಫ್ಎಂಎಸ್ ಮೂಲಕ ಎರಡು ವಿಧದಲ್ಲಿ ಫಲಾನುಭವಿಗಳ ವಿವರಗಳನ್ನು ದಾಖಲಿಸಬಹುದು.
	- ಪಿಎಫ್ಎಂಎಸ್ ಯೂಸರ್ ಇಂಟರ್ ಫೇಸ್ ಬಳಸಿ ಎಕ್ಸಲ್ ಶೀಟ್ ಮೂಲಕ ಅಪ್ ಲೋಡ್ ಮಾಡುವುದು ಅಥವಾ
- ಸೆಕ್ಯೂರ್ ಫೈಲ್ ಟ್ರಾನ್ಸಫರ್ ಪ್ರೊಟೊಕಾಲ್(ಎಸ್ಇಟಿಪಿ) ಸರ್ವರ್ ಮೂಲಕ ಇಂಟಿಗ್ರೇಟೆಡ್ ಎಕ್ಸಟರ್ನಲ್ ಸಿಸ್ಟಮ್/ ಲೈನ್ ಆಫ್ ಬಿಸಿನೆಸ್ (ಎಲ್ಒಬಿ) ಅಪ್ಲಿಕೇಶನ್ ಮೂಲಕ.
- ಪಿಎಫ್ಎಂಎಸ್ ಮೂಲಕ ಬ್ಯಾಂಕ್ ಖಾತೆಗಳು/ಅಂಚೆ ಖಾತೆಗಳ ಪೂರ್ವ ಪ್ರಮಾಣೀಕರಣ ಕೂಡ ಮಾಡಬಹುದು ಮತ್ತು ಆಧಾರ್ ಸಂಖ್ಯೆಯನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(ಎನ್ ಪಿಸಿಐ) ಅಡಿಯಲ್ಲಿ ಪ್ರಮಾಣೀಕರಣ ಮಾಡಬೇಕು.
ಡಿಬಿಟಿಯಲ್ಲಿ ನಗದು ಮತ್ತು ನಗದು ವರ್ಗಾವಣೆ ಸೇರಿದೆ ಸಮುದಾಯ ಕಾರ್ಯಕರ್ತರು ಸೇರಿದಂತೆ ಸರ್ಕಾರದ ನಾನಾ ಯೋಜನೆಗಳಲ್ಲಿ ಗೌರವ ಧನಗಳನ್ನು ಸ್ವೀಕರಿಸುವಂತಹ ಎಲ್ಲಾ ಫಲಾನುಭವಿಗಳಿಗೂ ನೇರವಾಗಿ ನಗದನ್ನು ವರ್ಗಾಯಿಸಲಾಗುವುದು. ಇದು ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ನೆರವಾಗಿದೆ.
ಪಿಎಫ್ಎಂಎಸ್ ಮೂಲಕ ಇಲಾಖೆಗಳು/ಸಚಿವಾಲಯಗಳ ನಗದು ಪ್ರಯೋಜನ ವರ್ಗಾವಣೆ:
	- ಎ) ಸಚಿವಾಲಯಗಳು/ಇಲಾಖೆಗಳಿಂದ ನೇರವಾಗಿ ಫಲಾನುಭವಿಗಳಿಗೆ
- ಬಿ) ರಾಜ್ಯ ಖಜಾನೆ ಖಾತೆ ಮೂಲಕ
- ಸಿ) ಕೇಂದ್ರ/ರಾಜ್ಯ ಸರ್ಕಾರಗಳು ನೇಮಿಸಿರುವ ಯಾವುದೇ ಅನುಷ್ಠಾನ ಏಜೆನ್ಸಿ ಮೂಲಕ
ಡಿಬಿಟಿ ಪ್ರಯೋಜನಗಳು
ಡಿಬಿಟಿ ಮೂಲಕ ಇದನ್ನ (ಸಿಎಆರ್ಇ-ಸಿ(ಕರ್ಬಿಂಗ್)ಎ(ಅಕ್ಯುರೇಟ್)ಆರ್(ರೆಡ್ಯೂಸ್ಡ್ ಡಿಲೆ) ಇ(ವಿದ್ಯುನ್ಮಾನ ವರ್ಗಾವಣೆ) ಸಾಧಿಸಬಹುದಾಗಿದೆ.
	- ಸೋರಿಕೆ ಮತ್ತು ನಕಲು ಮಾಡುವುದಕ್ಕೆ ತಡೆ
- ನಿಗದಿತ ಫಲಾನುಭವಿಗಳಿಗೆ ಖಚಿತವಾಗಿ ತಲುಪುತ್ತದೆ.
- ಪಾವತಿಗಳಲ್ಲಿ ವಿಳಂಬ ತಪ್ಪುತ್ತದೆ ಮತ್ತು
- ಪ್ರಯೋಜನ ವಿದ್ಯುನ್ಮಾನ ವರ್ಗಾವಣೆ ಮೂಲಕ ಆಗುವುದರಿಂದ ಅದು ಹಲವು ಹಂತಗಳು ದಾಟಿದರೂ ಹಣದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. 
***
                
                
                
                
                
                (Release ID: 1616218)
                Visitor Counter : 487
                
                
                
                    
                
                
                    
                
                Read this release in: 
                
                        
                        
                            हिन्दी 
                    
                        ,
                    
                        
                        
                            English 
                    
                        ,
                    
                        
                        
                            Urdu 
                    
                        ,
                    
                        
                        
                            Marathi 
                    
                        ,
                    
                        
                        
                            Assamese 
                    
                        ,
                    
                        
                        
                            Bengali 
                    
                        ,
                    
                        
                        
                            Manipuri 
                    
                        ,
                    
                        
                        
                            Punjabi 
                    
                        ,
                    
                        
                        
                            Gujarati 
                    
                        ,
                    
                        
                        
                            Odia 
                    
                        ,
                    
                        
                        
                            Tamil 
                    
                        ,
                    
                        
                        
                            Telugu 
                    
                        ,
                    
                        
                        
                            Malayalam