ರಕ್ಷಣಾ ಸಚಿವಾಲಯ

ಕೊವಿಡ್-19 ವಿರುದ್ಧ ಹೋರಾಟಕ್ಕೆ ಭಾರತೀಯ ವಾಯುಸೇನೆ ಬೆಂಬಲ

Posted On: 27 APR 2020 6:19PM by PIB Bengaluru

ಕೊವಿಡ್-19 ವಿರುದ್ಧ ಹೋರಾಟಕ್ಕೆ ಭಾರತೀಯ ವಾಯುಸೇನೆ ಬೆಂಬಲ

 

ನೊವೆಲ್ ಕೊರೊನ ವೈರಸ್ ಭೀತಿಯ ಸಾಂಕ್ರಾಮಿಕ ಸಮಯದಲ್ಲಿ ಭಾರತೀಯ ವಾಯುಸೇನೆ (..ಎಫ್.) ಭಾರತ ಸರ್ಕಾರದ ಎಲ್ಲಾ ಸದ್ಯೋಭವಿಷ್ಯದ ಅವಶ್ಯಕತೆಗಳನ್ನು ಪೂರೈಸುವ ಪ್ರಯತ್ನಗಳಲ್ಲಿ ಪಾಲ್ಗೊಂಡು ಸಹಕರಿಸಲಿದೆ. ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ಎದುರಿಸಲು ರಾಜ್ಯ ಸರ್ಕಾರಗಳು ಮತ್ತು ಇತರೆ ಏಜೆನ್ಸಿಗಳ ಅಗತ್ಯದ ವೈದ್ಯಕೀಯ ಸಿಬ್ಬಂದಿಗಳು, ಔಷಧಿಗಳು ಮತ್ತು ಪಡಿತರ ವಸ್ತುಗಳನ್ನು ದೇಶದೊಳಗೆ ವಿಮಾನಯಾನ ಮೂಲಕ ಐಎಎಫ್ ಸಾಗಿಸಲಿದೆ.

ಐಎಎಫ್ ಸಾರಿಗೆ ವಿಮಾನವು ಏಪ್ರಿಲ್ 25, 2020 ರಂದು, ಮಿಜೋರಾಂನ ಲೆಂಗ್ಪುಯಿ ವಿಮಾನ ನಿಲ್ದಾಣದಲ್ಲಿ 22 ಟನ್ ವೈದ್ಯಕೀಯ ಸಾಮಗ್ರಿಗಳೊಂದಿಗೆ ಕೋವಿಡ್ -19 ವಿರುದ್ಧದ ಹೋರಾಟಕ್ಕೆ ಇಳಿಯಿತು. ಮಿಜೋರಾಂ ಮತ್ತು ಮೇಘಾಲಯ ಸರ್ಕಾರಗಳಿಗೆ ಸರಬರಾಜುಗಳನ್ನು ಐಎಎಫ್ ವಿಮಾನದಲ್ಲಿ ಸಾಗಿಸಲಾಯಿತು. ಇಲ್ಲಿಯವರೆಗೆ, ಐಎಎಫ್ ತನ್ನ ವಿಮಾನ ಸೇವೆ ಮೂಲಕ ಸುಮಾರು 600 ಟನ್ ವೈದ್ಯಕೀಯ ಉಪಕರಣಗಳು ಮತ್ತು ಇತರೆ ಅಗತ್ಯ ಸಾಮಗ್ರಿಗಳನ್ನು ಸಾಗಿಸಿದೆ.

ಭಾರತ ಸರ್ಕಾರಕ್ಕೆ ಕುವೈತ್ ಮಾಡಿದ ಮನವಿಗೆ ಸ್ಪಂದಿಸಿ, ಸಶಸ್ತ್ರ ಸೇನೆಗಳ ವೈದ್ಯಕೀಯ ಸೇವೆಗಳ (.ಎಫ್.ಎಂ.ಎಸ್) ಕ್ಷಿಪ್ರ ಕಾರ್ಯಾಚರಣೆಯ 15 ಸದಸ್ಯರ ತಂಡವನ್ನು ಏಪ್ರಿಲ್ 11, 2020 ರಂದು ಕುವೈತ್ ಗೆ ಕಳುಹಿಸಲಾಗಿತ್ತು. ಅವರನ್ನು 25 ಏಪ್ರಿಲ್ 2020 ರಂದು ಪುನಃ ಐಎಎಫ್ ಸಿ -130 ವಿಮಾನದಲ್ಲಿ ಕರೆತರಲಾಯಿತು. ಸಂದರ್ಭದಲ್ಲಿ ತಕ್ಷಣದ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿದ್ದ, ಕ್ಯಾನ್ಸರ್ ನಿಂದ ಬಳಲುತ್ತಿದ್ದ ಆರು ವರ್ಷದ ಬಾಲಕಿಯನ್ನು, ಅವಳ ತಂದೆಯ ಜೊತೆಗೆ ಕರೆತರಲಾಯಿತು.

ಭಾರತ ಸರ್ಕಾರ ಹೊರಡಿಸಿದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಿ, ನೊವೆಲ್ ಕೊರೊನ ವೈರಸ್ ಹರಡುವುದನ್ನು ತಡೆಗಟ್ಟಲು ಐಎಎಫ್ ತನ್ನ ಕಾರ್ಯಸ್ಥಳಗಳಲ್ಲಿ ಸಾಮಾಜಿಕ ಅಂತರದ ಕ್ರಮಗಳಲ್ಲಿ ಕಾರ್ಯಯೋಜನೆಗಳನ್ನು ಮುಂದುವರಿಸಿದೆ. ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಮತ್ತು ಸೋಲಿಸಲು ರಾಷ್ಟ್ರವು ತನ್ನ ಹೋರಾಟದಲ್ಲಿ ದೊಡ್ಡ ಮುನ್ನಡೆ ಸಾಧಿಸುತ್ತಿರುವುದರಿಂದ, ಸದ್ಯೋಭವಿಷ್ಯದ ಎಲ್ಲ ಅಗತ್ಯಗಳನ್ನು ವೃತ್ತಿಪರ ರೀತಿಯಲ್ಲಿ ಪೂರೈಸುವ ತನ್ನ ಬದ್ಧತೆಯನ್ನು ಐಎಎಫ್ ಪುನರುಚ್ಚರಿಸಿದೆ.

***


(Release ID: 1618838)