ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

“ಕ್ಲಾಸ್ ಸೆಂಟ್ರಲ್” 2019 ರ ಅತ್ಯುತ್ತಮ 30 ಆನ್‌ಲೈನ್ ಕೋರ್ಸ್‌ಗಳ ಪಟ್ಟಿಯಲ್ಲಿ “ಸ್ವಯಂ” ನ ಆರು ಕೋರ್ಸ್‌ಗಳು

Posted On: 27 APR 2020 6:48PM by PIB Bengaluru

“ಕ್ಲಾಸ್ ಸೆಂಟ್ರಲ್” 2019 ರ ಅತ್ಯುತ್ತಮ 30 ಆನ್‌ಲೈನ್ ಕೋರ್ಸ್‌ಗಳ ಪಟ್ಟಿಯಲ್ಲಿ “ಸ್ವಯಂ” ನ ಆರು ಕೋರ್ಸ್‌ಗಳು

 

ಸ್ಟ್ಯಾನ್‌ ಫೋರ್ಡ್, ಎಂ.ಐ.ಟಿ, ಹಾರ್ವರ್ಡ್, ಮುಂತಾದ ಉನ್ನತ ವಿಶ್ವವಿದ್ಯಾಲಯಗಳ ಉಚಿತ ಆನ್‌ಲೈನ್ ಕೋರ್ಸ್ ಅಥವಾ ಎಮ್.ಒ.ಒ.ಸಿ. ಅಗ್ರಿಗೇಟರ್ ಆಗಿರುವ “ಕ್ಲಾಸ್ ಸೆಂಟ್ರಲ್” ಜಾಲತಾಣವು ತನ್ನ 2019ರ ಅತ್ಯುತ್ತಮ 30 ಆನ್‌ಲೈನ್ ಕೋರ್ಸ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ “ಸ್ವಯಂ”ನ 6 ಕೋರ್ಸ್‌ಗಳು ಸೇರಿವೆ.

9 ರಿಂದ 12ನೇ ತರಗತಿವರೆಗಿನ ಶಾಲಾ ಪಠ್ಯ ಸೇರಿದಂತೆ ಸ್ನಾತಕೋತ್ತರ ಹಂತದವರೆಗೆ ಎಲ್ಲಾ ಶಿಕ್ಷಣವನ್ನು ಆನ್‌ಲೈನ್ ಕೋರ್ಸ್‌ ಮೂಲಕ ಸಂಯೋಜಿತ ವೇದಿಕೆ “ಸ್ವಯಂ” (‘ಸ್ಟಡಿ ವೆಬ್ಸ್ ಆಫ್ ಆಕ್ಟಿವ್ ಲರ್ನಿಂಗ್ ಫಾರ್ ಯಂಗ್ ಆಸ್ಪೈರಿಂಗ್ ಮೈಂಡ್ಸ್’) ನಡೆಸಿಗೊಕೊಡುತ್ತಿದೆ. ಇಲ್ಲಿಯವರೆಗೆ, ಒಟ್ಟು 2867 ಕೋರ್ಸ್‌ಗಳನ್ನು “ಸ್ವಯಂ” ಮೂಲಕ ನೀಡಲಾಗಿದ್ದು, 568 ಕೋರ್ಸ್‌ಗಳನ್ನು ಜನವರಿ 2020 ರ ಸೆಮಿಸ್ಟರ್‌ಗೆ ನೀಡಲು ಅಪ್‌ಲೋಡ್ ಮಾಡಲಾಗಿದೆ. “ಸ್ವಯಂ” ಪ್ಲಾಟ್‌ ಫಾರ್ಮ್‌ನಲ್ಲಿ ಸುಮಾರು 57 ಲಕ್ಷ (57,84,770) ಅನನ್ಯ ಬಳಕೆದಾರರು / ನೋಂದಣಿಗಳನ್ನು ಮಾಡಿದ್ದಾರೆ. “ಸ್ವಯಂ”ನ ವಿವಿಧ ಕೋರ್ಸ್‌ಗಳಲ್ಲಿ ಸುಮಾರು 1.25 ಕೋಟಿ (125,04,722) ದಾಖಲಾತಿಗಳನ್ನು ಮಾಡಲಾಗಿದೆ. ಇದು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಕರಿಗೆ ತರಬೇತಿ ನೀಡುವವರ ಶಿಕ್ಷಣವನ್ನು ಆನ್‌ಲೈನ್ ಕೋರ್ಸ್‌ಗಳ ಮೂಲಕ ಪೂರೈಕೆ ಮಾಡುತ್ತದೆ. swayam.gov.in ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು.

2019 ರ ಅತ್ಯುತ್ತಮ 30 ಆನ್‌ಲೈನ್ ಕೋರ್ಸ್‌ಗಳಲ್ಲಿ “ಸ್ವಯಂ” ನ ಈ ಕೆಳಗಿನ 6 ಕೋರ್ಸ್‌ಗಳನ್ನು ಪಟ್ಟಿ ಮಾಡಲಾಗಿದೆ.

1. ಶೈಕ್ಷಣಿಕ ಬರವಣಿಗೆ: ಎಚ್.ಎನ್.ಬಿ ಗರ್ವಾಲ್ ವಿಶ್ವವಿದ್ಯಾಲಯ (ಒಂದು ಕೇಂದ್ರೀಯ ವಿಶ್ವವಿದ್ಯಾಲಯ) ಶ್ರೀನಗರ ಗರ್ವಾಲ್

2. ಡಿಜಿಟಲ್ ಮಾರಾಟ: ಪಂಜಾಬ್ ವಿಶ್ವವಿದ್ಯಾಲಯ ಚಂಡೀಗ

3. ಅನಿಮೇಷನ್‌: ಬನಾರಸ್ ಹಿಂದೂ ವಿಶ್ವವಿದ್ಯಾಲಯ.

4. ಗಣಿತೀಯ ಅರ್ಥಶಾಸ್ತ್ರ: ಡೂನ್ ವಿಶ್ವವಿದ್ಯಾಲಯ, ಡೆಹ್ರಾಡುನ್

5. ಡೇಟಾ ಸೈನ್ಸ್ ಗಾಗಿ ಪೈಥಾನ್: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮದ್ರಾಸ್

6. ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ಇ.ಸಿ.ಸಿ.ಇ): ಅವಿನಾಶಿಶಿಲಿಂಗಂ ಇನ್‌ಸ್ಟಿಟ್ಯೂಟ್ ಫಾರ್ ಹೋಮ್ ಸೈನ್ಸ್ ಅಂಡ್ ಹೈಯರ್ ಎಜುಕೇಶನ್ ಫಾರ್ ವುಮೆನ್, ಕೊಯಮತ್ತೂರು.

***


(Release ID: 1619005)