ಕೃಷಿ ಸಚಿವಾಲಯ
ಇ ನ್ಯಾಮ್ ವೇದಿಕೆಯಡಿ 10 ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ 177 ಹೊಸ ಮಂಡಿಗಳು ಸೇರ್ಪಡೆ
प्रविष्टि तिथि:
11 MAY 2020 2:24PM by PIB Bengaluru
ಕೃಷಿ ಉತ್ಪನ್ನಗಳ ಮಾರಾಟಕ್ಕೆ ಇ ನ್ಯಾಮ್ ವೇದಿಕೆಯಡಿ 10 ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ
177 ಹೊಸ ಮಂಡಿಗಳು ಸೇರ್ಪಡೆ
ರೈತರಿಗೆ ಲಾಭವಾಗಲು ಇ ನ್ಯಾಮ್ ಅನ್ನು ಮತ್ತಷ್ಟು ಬಲಿಷ್ಠಗೊಳಿಸಲು ಪ್ರಯತ್ನ ಮಾಡಬೇಕು: ಶ್ರೀ ನರೇಂದ್ರ ಸಿಂಗ್ ತೋಮರ್
ಕೃಷಿ ಮಾರುಕಟ್ಟೆಯನ್ನು ಬಲಿಷ್ಠಗೊಳಿಸಲು ಮತ್ತು ರೈತರು ಆನ್ ಲೈನ್ ಪೋರ್ಟಲ್ ಮೂಲಕ ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಅನುಕೂಲ ಕಲ್ಪಿಸಲು ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ ನ್ಯಾಮ್) ನೊಂದಿಗೆ ಒಗ್ಗೂಡಿದ 177 ಹೊಸ ಮಂಡಿಗಳನ್ನು ಇಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಉದ್ಘಾಟಿಸಿದರು. ಇಂದು ಒಗ್ಗೂಡಿದ ಮಂಡಿಗಳು ಹೀಗಿವೆ : ಗುಜರಾತ್ (17),ಹರಿಯಾಣ (26),ಜಮ್ಮು ಮತ್ತು ಕಾಶ್ಮೀರ (1), ಕೇರಳ(5), ಮಹಾರಾಷ್ಟ್ರಾ(54), ಒಡಿಶಾ (15), ಪಂಜಾಬ್ (17), ರಾಜಸ್ಥಾನ (25), ತಮಿಳು ನಾಡು (13), ಮತ್ತು ಪಶ್ಚಿಮ ಬಂಗಾಳ (1). 177 ಹೆಚ್ಚುವರಿ ಮಂಡಿಗಳ ಸೇರ್ಪಡೆಯೊಂದಿಗೆ ದೇಶಾದ್ಯಂತದ ೊಟ್ಟು ಇ ನ್ಯಾಮ್ ಮಂಡಿಗಳ ಸಂಖ್ಯೆ 962 ಆಗಿದೆ
ವಿಡಿಯೋ ಕಾನ್ಫೆರೆನ್ಸ್ ಮೂಲಕ ಹೊಸ ಮಂಡಿಗಳನ್ನು ಉದ್ಘಾಟಿಸಿದ ಶ್ರೀ ನರೇಂದ್ರ ಸಿಂಗ್ ತೋಮರ್, ರೈತರಿಗೆ ಲಾಭವಾಗಲು ಇ ನ್ಯಾಮ್ ನ್ನು ಮತ್ತಷ್ಟು ಬಲಿಷ್ಠಗೊಳಿಸುವ ಪ್ರಯತ್ನವಾಗಬೇಕ ಎಂದು ಹೇಳಿದರು. ಈ ನ್ಯಾಮ್ ಪೋರ್ಟಲ್ ರೈತರ ಅನುಕೂಲಕ್ಕಾಗಿ ತಂತ್ರಜ್ಞಾನದ ಮಹತ್ವಾಕಾಂಕ್ಷೆಯ ಬಳಕೆ ಕುರಿತು ಶ್ರೀ ನರೇಂದ್ರ ಮೋದಿಯವರು ಕಂಡ ಕನಸು ಎಂದು ಅವರು ಹೇಳಿದರು.


ಈ ಹಿಂದೆ 1.66 ಕೋಟಿ ರೈತರು, 1.30 ಲಕ್ಷ ವ್ಯಾಪಾರಿಗಳು ಮತ್ತು 71,911 ಕಮಿಶನ್ ಏಜೆಂಟ್ ರು ಬಳಸುತ್ತಿದ್ದ 17 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 785 ಮಂಡಿಗಳು ಇ ನ್ಯಾಮ್ ನೊಂದಿಗೆ ಒಗ್ಗೂಡಿದ್ದವು. 9 ಮೇ 2020 ರವರೆಗೆ ಒಟ್ಟು 3.43 ಕೋಟಿ ಮೆಟ್ರಿಕ್ ಟನ್ ಮತ್ತು 37.93 ಸಂಖ್ಯೆಗಳ (ಬಿದಿರು ಮತ್ತು ತೆಂಗು) ಒಟ್ಟು 1 ಲಕ್ಷ ಕೋಟಿ ಮೌಲ್ಯದಷ್ಟು ವ್ಯಾಪಾರವನ್ನು ಇ ನ್ಯಾಮ್ ವೇದಿಕೆಯಲ್ಲಿ ಮಾಡಲಾಗಿದೆ. ರೂ 708 ಕೋಟಿಯಷ್ಟು ಡಿಜಿಟಲ್ ಪಾವತಿಯನ್ನು ಇ ನ್ಯಾಮ್ ವೇದಿಕೆ ಮೂಲಕ ಮಾಡಲಾಗಿದ್ದು 1.25 ಲಕ್ಷಕ್ಕೂ ಹೆಚ್ಚು ರೈತರಿಗೆ ಲಾಭವಾಗಿದೆ. ಇ ನ್ಯಾಮ್ ಮಂಡಿಗಳು/ರಾಜ್ಯಗಳ ಗಡಿಗಳನ್ನು ದಾಟಿ ವ್ಯಾಪಾರಕ್ಕೆ ಅನುಕೂಲ ಕಲ್ಪಿಸುತ್ತದೆ. 12 ರಾಜ್ಯಗಳ ಒಟ್ಟು 236 ಮಂಡಿಗಳು ಅಂತರ್ ಮಂಡಿ ವ್ಯಾಪಾರದಲ್ಲಿ ಪಾಲ್ಗೊಂಡರೆ 13 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಅಂತರ್ ರಾಜ್ಯ ವ್ಯಾಪಾರದಲ್ಲಿ ಭಾಗವಹಿಸಿದ್ದು ರೈತರು ದೂರದ ವ್ಯಾಪರಸ್ಥರೊಂದಿಗೆ ನೇರವಾಗಿ ಸಂವಹನ ನಡೆಸಲು ಅವಕಾಶ ಕಲ್ಪಿಸಿದವು. ಪ್ರಸ್ತುತ ಆಹಾರ ಧಾನ್ಯಗಳು, ಎಣ್ಣೆ ಕಾಳುಗಳು, ನಾರು, ತರಕಾರಿ ಮತ್ತು ಹಣ್ಣುಗಳು ಹೀಗೆ 150 ಉತ್ಪನ್ನಗಳನ್ನು ಇ ನ್ಯಾಮ್ ವೇದಿಕೆಯಲ್ಲಿ ಮಾರಾಟ ಮಾಡಲಾಗುತ್ತಿದೆ. 1,005 ಕ್ಕೂ ಹೆಚ್ಚು ಎಫ್ ಪಿ ಒ ಗಳು ಇ ನ್ಯಾಮ್ ವೇದಿಕೆಗೆ ನೋಂದಾವಣೆ ಮಾಡಿಕೊಂಡಿವೆ ಮತ್ತು ರೂ 7.92 ಕೋಟಿ ಮೌಲ್ಯದ 2900 ಮೆಟ್ರಿಕ್ ಟನ್ ನಷ್ಟು ಕೃಷಿ ಉತ್ಪನ್ನಗಳ ವ್ಯಾಪಾರ ಮಾಡಿವೆ.
ಕೋವಿಡ್ – 19 ಲಾಕ್ ಡೌನ್ ಸಂದರ್ಭದಲ್ಲಿ ಮಂಡಿಗಳಲ್ಲಿ ಜನನಿಬಿಡತೆ ತಗ್ಗಿಸಲು, ಎಫ್ ಪಿ ಒ ವ್ಯಾಪಾರದ ಮಾಡ್ಯೂಲ್, ಸಾಗಾಣಿಕೆ ಮಾಡ್ಯೂಲ್, ಮತ್ತು ಇ ಎನ್ ಡಬ್ಲ್ಯೂ ಆರ್ ಆಧಾರಿತ ಗೋದಾಮು ಮಾಡ್ಯೂಲ್ ಗಳನ್ನು 2 ಎಪ್ರಿಲ್ 2020 ರಂದು ಕೇಂದ್ರ ಕೃಷಿ ಸಚಿವರು ಪ್ರಾರಂಭಿಸಿದರು. ಅಂದಿನಿಂದಲೂ 15 ರಾಜ್ಯಗಳ 82 ಎಫ್ ಪಿ ಒ ಗಳು ಒಟ್ಟು ರೂ 2.22 ಕೋಟಿ ಮೌಲ್ಯದ 12048 ಕ್ವಿಂಟಾಲ್ ಸರಕುಗಳನ್ನು ಇ ನ್ಯಾಮ್ ಮೂಲಕ ವ್ಯಾಪಾರ ಮಾಡಿವೆ. ಒಂಭತ್ತು ಸಾಗಾಣಿಕ ಸೇವಾ ಅಗ್ರಿಗೇಟರ್ ಗಳು ಇ ನ್ಯಾಮ್ ನೊಂದಿಗೆ ಪಾಲುದಾರಿಕೆ ಹೊಂದಿದ್ದು 2,31,300 ಸಾಗಾಣೆದಾರರು ಲಭ್ಯವಿದ್ದು ಇನ್ಯಾಮ್ ಪಾಲುದಾರರ ಸಾರಿಗೆ ಸೇವೆಯ ಅಗತ್ಯಕ್ಕೆ 11,37,700 ಟ್ರಕ್ ಗಳು ಲಭ್ಯವಿವೆ
ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ ನ್ಯಾಮ್ ) ಭಾರತ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯಶಸ್ವಿ ಯೋಜನೆಯಾಗಿದೆ. ಇದು ಕೃಷಿ ಉತ್ಪನ್ನಗಳಿಗೆ ಏಕೀಕೃತ ರಾಷ್ಟ್ರೀಯ ಮಾರುಕಟ್ಟೆಯನ್ನು ರಚಿಸಲು ಅಸ್ತಿತ್ವದಲ್ಲಿರುವ ಎಪಿಎಂಸಿ ಮಂಡಿಗಳನ್ನು ಒಗ್ಗೂಡಿಸುತ್ತದೆ. ಒಗ್ಗೂಡಿದ ಮಾರುಕಟ್ಟೆಗಳಲ್ಲಿ ಕಾರ್ಯ ವಿಧಾನಗಳನ್ನು ಸುವ್ಯವಸ್ಥಿತಗೊಳಿಸುವ ಮೂಲಕ ಕೃಷಿ ವ್ಯಾಪಾರದಲ್ಲಿ ಏಕರೂಪತೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಖರೀದಿದಾರರು ಮತ್ತು ಮಾರಾಟಗಾರರ ಮಧ್ಯೆ ಪಾರದರ್ಶಕತೆಯನ್ನು ಸೃಷ್ಟಿಸಲು ಮತ್ತು ಬೇಡಿಕೆ ಹಾಗೂ ಪೂರೈಕೆ ಆಧಾರದ ಮೇಲೆ ಆ ಸಮಯದ ನೈಜ ಬೆಲೆಯನ್ನು ಪ್ರೊತ್ಸಾಹಿಸುತ್ತದೆ.
1 ಮೇ 2020 ರಂದು ಶ್ರೀ ತೋಮರ್ ಅವರು 7 ರಾಜ್ಯಗಳಿಂದ 200 ಇ ನ್ಯಾಮ್ ಮಂಡಿಗಳನ್ನು ಏಕೀಕರಣಗೊಳಿಸಲು ಆರಂಭಿಸಿದರು. ಅದರಲ್ಲಿ ಹೊಸ ರಾಜ್ಯವಾದ ಕರ್ನಾಟಕವನ್ನೂ ಭಾರತೀಯ ರೈತರಿಗೆ ಸಹಾಯ ಮಾಡಲು ಇ ನ್ಯಾಮ್ ನಲ್ಲಿ ಸೇರಿಸಲಾಯಿತು. ಇದರ ಜೊತೆಗೆ ಕೇಂದ್ರ ಕೃಷಿ ಸಚಿವರು ಕರ್ನಾಟಕದ ಆರ್ ಇ ಎಂ ಎಸ್ (ಏಕೀಕೃತ ಮಾರುಕಟ್ಟೆ ಪೋರ್ಟಲ್ - ಯುಎಂಪಿ) ಮತ್ತು ಇ ನ್ಯಾಮ್ ಪೋರ್ಟಲ್ ನ ನಡುವೆ ಅಂತರ್ ಕಾರ್ಯಾಚರಣೆಯನ್ನು ಆರಂಭಿಸಿದರು. ಈ ಎರಡೂ ವೇದಿಕೆಗಳ ನಡುವಿನ ಅಂತರ್ ಕಾರ್ಯಾಚರಣೆಯ ವೈಶಿಷ್ಟ್ಯಗಳನ್ನು ಬಳಸಿಕೊಂಡು ಎರಡೂ ವೇದಿಕೆಗಳ ವ್ಯಾಪಾರಿಗಳು ಮತ್ತು ರೈತರ ವ್ಯಾಪಾರಕ್ಕಾಗಿ ಹೆಚ್ಚಿನ ಮಾರುಕಟ್ಟೆಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಇದು ಅವಕಾಶ ಕಲ್ಪಿಸುತ್ತದೆ.
ಇ ನ್ಯಾಮ್ನ ಮೊದಲ ಹಂತದ (585 ಮಂಡಿಗಳ ಒಗ್ಗೂಡುವಿಕೆ) ಸಾಧನೆಯನ್ನು ಅವಲೋಕಿಸಿದಾಗ ಇದು ವಿಸ್ತರಣ ಪಥದತ್ತ ಸಾಗುತ್ತಿದ್ದು ಹೆಚ್ಚುವರಿ 415 ಮಂಡಿಗಳನ್ನು 15 ಮೇ 2020 ರ ವೇಳೆಗೆ ತನ್ನ ಪ್ರಸ್ತುತ ಪಟ್ಟಿಗೆ ಸೇರಿಸಿಕೊಳ್ಳುವ ಯೋಜನೆಯಿದೆ. ಇದರಿಂದ ಪ್ರಧಾನ ಮಂತ್ರಿಯವರ “ಒಂದು ರಾಷ್ಟ್ರ ಒಂದು ಮಾರುಕಟ್ಟೆ” ಗುರಿಯನ್ನು ತಲುಪಲು 18 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು ಇ ನ್ಯಾಮ್ ಮಂಡಿಗಳ ಸಂಖ್ಯೆ 1,000 ಕ್ಕೆ ಹೆಚ್ಚಲಿದೆ
ಭಾರತದಲ್ಲಿ ಕೃಷಿ ಉತ್ಪ್ನಗಳಿಗಾಗಿ ಅಸ್ತಿತ್ವದಲ್ಲಿರುವ ಮಂಡಿಗಳನ್ನು “ಒಂದು ರಾಷ್ಟ್ರ ಒಂದು ಮಾರುಕಟ್ಟೆ” ಗೆ ಸಂಯೋಜಿಸುವ ಉದ್ದೇಶದಿಂದ ರಾಷ್ಟ್ರಾದ್ಯಂತದ ಎಲೆಕ್ಟ್ರಾನಿಕ್ ವ್ಯಾಪಾರ ಪೋರ್ಟಲ್ ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ ನ್ಯಾಮ್) ಅನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಎಪ್ರಿಲ್ 14 2016 ರಂದು ಪ್ರಾರಂಭಿಸಿದರು. ಸಣ್ಣ ಹಿಡುವಳಿದಾರರ ಕೃಷಿ ವ್ಯವಹಾರ ಒಕ್ಕೂಟ (ಎಸ್ ಎಫ್ ಎಸಿ) ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಆಶ್ರಯದಲ್ಲಿ ಇ ನ್ಯಾಮ್ ಅನ್ನು ಅನುಷ್ಠಾನಗೊಳಿಸುವ ಸಂಸ್ಥೆಯಾಗಿದೆ.
ಎಲ್ಲ ಎಪಿಎಂಸಿ ಸಂಬಂಧಿತ ಮಾಹಿತಿ ಮತ್ತು ಸೇವೆಗಳಿಗಾಗಿ ಇ ನ್ಯಾಮ್ ಪೋರ್ಟಲ್ ಏಕಗವಾಕ್ಷಿ ಸೇವೆಯನ್ನು ಒದಗಿಸುತ್ತದೆ. ಇದರಲ್ಲಿ ಉತ್ಪನ್ನಗಳ ಆಗಮನ, ಗುಣಮಟ್ಟ ಮತ್ತು ಬೆಲೆಗಳು, ವ್ಯಾಪಾರದ ಬೆಲೆ ಸೂಚಿ ಮತ್ತು ಎಲೆಕ್ಟ್ರಾನಿಕ್ ಪಾವತಿ ನೇರವಾಗಿ ರೈತರ ಖಾತೆಗೆ ಸೇರಲು ಮತ್ತು ಉತ್ತಮ ಮಾರುಕಟ್ಟೆ ಸೇವೆ ಸಿಗಲು ಅವರಿಗೆ ಸಹಾಯವಾಗುವಂತೆ ಅವಕಾಶ ಮಾಡಿಕೊಡುತ್ತದೆ.
***
(रिलीज़ आईडी: 1623067)
आगंतुक पटल : 366
इस विज्ञप्ति को इन भाषाओं में पढ़ें:
Punjabi
,
Marathi
,
हिन्दी
,
Tamil
,
Telugu
,
English
,
Bengali
,
Urdu
,
Assamese
,
Manipuri
,
Odia