ರೈಲ್ವೇ ಸಚಿವಾಲಯ

ವಲಸಿಗರ ಸುರಕ್ಷಿತ ಹಾಗು ತ್ವರಿತ ಸಾರಿಗೆಯನ್ನು ಖಚಿತಪಡಿಸಿಕೊಳ್ಳಲು, ಭಾರತೀಯ ರೈಲ್ವೆಯು ದೇಶದಲ್ಲಿ ರೈಲ್ವೆ ಸಂಪರ್ಕ ಹೊಂದಿರುವ ಎಲ್ಲಾ ಜಿಲ್ಲೆಗಳಿಂದ ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಲು ಸಿದ್ಧವಾಗಿದೆ

प्रविष्टि तिथि: 16 MAY 2020 9:12PM by PIB Bengaluru

ವಲಸಿಗರ ಸುರಕ್ಷಿತ ಹಾಗು ತ್ವರಿತ ಸಾರಿಗೆಯನ್ನು ಖಚಿತಪಡಿಸಿಕೊಳ್ಳಲು, ಭಾರತೀಯ ರೈಲ್ವೆಯು ದೇಶದಲ್ಲಿ ರೈಲ್ವೆ ಸಂಪರ್ಕ ಹೊಂದಿರುವ ಎಲ್ಲಾ ಜಿಲ್ಲೆಗಳಿಂದ ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಲು ಸಿದ್ಧವಾಗಿದೆ

ಸಿಲುಕಿಕೊಂಡಿರುವ ಕಾರ್ಮಿಕರ ಮತ್ತು ಗಮ್ಯಸ್ಥಾನಗಳನ್ನು ಗುರುತಿಸಿ ಪಟ್ಟಿಯನ್ನು ತಯಾರಿಸಲು ಮತ್ತು ರಾಜ್ಯ ನೋಡಲ್ ಅಧಿಕಾರಿ ಮೂಲಕ ರೈಲ್ವೆಗೆ ಕೋರಿಕೆ ಸಲ್ಲಿಸುವಂತೆ ರೈಲ್ವೆ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ದೇಶದ ಜಿಲ್ಲಾಧಿಕಾರಿಗಳಿಗೆ ಕೇಳಿದರು

ಭಾರತೀಯ ರೈಲ್ವೆಯು ದಿನಕ್ಕೆ ಸುಮಾರು 300 ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸುವ ಸಾಮರ್ಥ್ಯ ಹೊಂದಿದೆ

ದೇಶಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಸಿಲುಕಿಕೊಂಡಿರುವ ವಲಸಿಗರು ತವರು ರಾಜ್ಯಗಳನ್ನು ಹೆಚ್ಚು ಅನುಕೂಲಕರವಾಗಿ ಮತ್ತು ಆರಾಮವಾಗಿ ತಲುಪಬಹುದು

 

ದೇಶದ ರೈಲ್ವೆ ಸಂಪರ್ಕ ಹೊಂದಿರುವ ಎಲ್ಲಾ ಜಿಲ್ಲೆಗಳಿಂದ ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆಯು ಸಿದ್ಧವಾಗಿದೆ.

ರೈಲ್ವೆ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ಇಂದು ದೇಶದ ಜಿಲ್ಲಾಧಿಕಾರಿಗಳಿಗೆ ಸಿಲುಕಿಕೊಂಡ ಕಾರ್ಮಿಕರ ಮತ್ತು ಗಮ್ಯಸ್ಥಾನಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಮತ್ತು ರಾಜ್ಯ ನೋಡಲ್ ಅಧಿಕಾರಿ ಮೂಲಕ ರೈಲ್ವೆಗೆ ಕೋರಿಕೆ ಸಲ್ಲಿಸುವಂತೆ ಕೇಳಿದ್ದಾರೆ.

ಭಾರತೀಯ ರೈಲ್ವೆಯು ದಿನಕ್ಕೆ ಸುಮಾರು 300 ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸುವ ಸಾಮರ್ಥ್ಯವನ್ನು ಹೊಂದಿದೆ, ಆದರೂ, ಈಗ ಕೇವಲ ಅರ್ಧಕ್ಕಿಂತಲೂ ಕಡಿಮೆ ರೈಲುಗಳನ್ನು ಬಳಸಲಾಗುತ್ತಿದೆ.

ಪೂರ್ಣ ಸಾಮರ್ಥ್ಯ ರೈಲ್ವೆ ರೇಕ್ಗಳ ಕಾರ್ಯಾಚರಣೆಯು ದೇಶಾದ್ಯಂತದ ವಲಸಿಗರಿಗೆ ತಮ್ಮ ಸ್ವಂತ ರಾಜ್ಯಗಳಿಗೆ ಹೋಗಲು ಬಯಸುವವರಿಗೆ ಗಮನಾರ್ಹ ಪರಿಹಾರ ನೀಡುತ್ತದೆ. ಜಿಲ್ಲೆಗಳ ನೈಜ ಅಗತ್ಯಗಳಿಗೆ ಅನುಗುಣವಾಗಿ ಶ್ರಮಿಕ್ ವಿಶೇಷ ರೈಲುಗಳ ಓಡಾಟನ್ನು ಹೆಚ್ಚಿಸಲು ಭಾರತೀಯ ರೈಲ್ವೆಯು ಸಿದ್ಧವಾಗಿದೆ.

ಪ್ರಸ್ತುತ, ಈಗಾಗಲೇ 15 ಲಕ್ಷಕ್ಕೂ ಹೆಚ್ಚು ವಲಸಿಗರನ್ನು ರೈಲ್ವೆಯು ತಮ್ಮ ತವರು ರಾಜ್ಯಗಳಿಗೆ ಸಾಗಿಸಿದ್ದು. ಸುಮಾರು 1150 ಶ್ರಮಿಕ್ ವಿಶೇಷ ರೈಲುಗಳನ್ನು ಕಾರ್ಯಗತಗೊಳಿಸಲಾಗಿದೆ. ಭಾರತೀಯ ರೈಲ್ವೆಯು ದಿನಕ್ಕೆ ಸುಮಾರು ಎರಡು ಪಟ್ಟು ವಲಸಿಗರನ್ನು ಸುಲಭವಾಗಿ ಸಾಗಿಸಬಹುದು.

ತಮ್ಮ ಜಿಲ್ಲೆಗಳಿಗೆ ಹಿಂದಿರುಗಲು ಬಯಸುವ ವಲಸಿಗರ ಬಗ್ಗೆ ಪ್ರತಿ ಜಿಲ್ಲೆಯಿಂದ ಮಾಹಿತಿ ದೊರೆತ ನಂತರ, ಭಾರತೀಯ ರೈಲ್ವೆಯು ರೈಲುಗಳ ಕಾರ್ಯಾಚರಣೆಗೆ ಸಹಾಯ ಮಾಡಲು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬಹುದು.

***


(रिलीज़ आईडी: 1624587) आगंतुक पटल : 298
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Assamese , Punjabi , Telugu