ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

ಕೊರೊನ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅಡುಗೆ ಅನಿಲ ವಿತರಣೆ

प्रविष्टि तिथि: 16 SEP 2020 1:28PM by PIB Bengaluru

ಬಡಕುಟುಂಬಗಳ (ಮನೆಯ) ವಯಸ್ಕ ಮಹಿಳೆಯರಿಗೆ ಉಚಿತ ಠೇವಣಿ ರಹಿತ ಅಡುಗೆ ಅನಿಲ ಸಂಪರ್ಕವನ್ನು ಒದಗಿಸುವ ಉದ್ಧೇಶದಿಂದ 01.05.2016 ರಂದು ಪ್ರಧಾನ್ ಮಂತ್ರಿ ಉಜ್ವಾಲಾ ಯೋಜನೆ (ಪಿ.ಎಂ.ಯು.ವೈ.) ಪ್ರಾರಂಭವಾಯಿತು. ಸೆಪ್ಟೆಂಬರ್ 7, 2019 ರಂದು ಯೋಜನೆ ಇದರ ಗುರಿಯನ್ನು ಸಾಧಿಸಿದೆ. ಯೋಜನೆಯಡಿ ಬಿಡುಗಡೆಯಾದ ಅಡುಗೆ ಅನಿಲ ಸಂಪರ್ಕಗಳ ವರ್ಷವಾರು ವಿವರಗಳು: -

 

ವರ್ಷ

2016-17

2017-18

2018-19

2019-20

ಒದಗಿಸಲಾದ/ ಬಿಡುಗಡೆಯಾದ ಅಡುಗೆಅನಿಲ ಸಂಪರ್ಕಗಳ ಸಂಖ್ಯೆ

200.3 ಲಕ್ಷ

155.7 ಲಕ್ಷ

362.9 ಲಕ್ಷ

82.64 ಲಕ್ಷ

 

ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಿ.ಎಂ.ಯು.ವೈ ಫಲಾನುಭವಿಗಳಿಗೆ ಏಪ್ರಿಲ್ 2020 ನಿಂದ ಆಗಸ್ಟ್ 2020 ವರೆಗೆ ಅನಿಲ ಮರುಪೂರಣ ಮತ್ತು ಖರ್ಚು ಮಾಡಿದ ವೆಚ್ಚಗಳ ವಿವರಗಳು ಅನುಬಂಧದಲ್ಲಿವೆ.

ಮಾಹಿತಿಯನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರ ಮೂಲಕ ನೀಡಿದ್ದಾರೆ.

***


(रिलीज़ आईडी: 1655103) आगंतुक पटल : 281
इस विज्ञप्ति को इन भाषाओं में पढ़ें: English , Urdu , Marathi , Bengali , Manipuri , Assamese , Punjabi , Odia , Tamil , Telugu