ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ
ಐಸಿಎಐ, ಭಾರತ ಮತ್ತು ಸಿಪಿಎ, ಪಪುವಾ ನ್ಯೂಗಿನಿಯಾದ ನಡುವಿನ ಒಪ್ಪಂದಕ್ಕೆ ಸಂಪುಟದ ಅನುಮೋದನೆ
प्रविष्टि तिथि:
21 OCT 2020 3:26PM by PIB Bengaluru
ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸಚಿವ ಸಂಪುಟವು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟ್ಸ್ ಆಫ್ ಇಂಡಿಯಾ (ಐಸಿಎಐ) ಮತ್ತು ಸರ್ಟಿಫೈಡ್ ಪ್ರಾಕ್ಟಿಸಿಂಗ್ ಅಕೌಂಟೆಂಟ್ಸ್, ಪಪುವಾ ನ್ಯೂಗಿನಿಯಾ (ಸಿಪಿಎ ಪಿಎನ್‌ಜಿ) ನಡುವಿನ ಒಪ್ಪಂದಕ್ಕೆ ಅನುಮೋದನೆ ನೀಡಿದೆ. ಈ ಒಪ್ಪಂದದ ಪ್ರಕಾರ ಇವೆರಡೂ ಸಂಸ್ಥೆಗಳು ಪರಸ್ಪರ ಬಲವರ್ಧನೆಗಾಗಿ ಹಾಗೂ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಒಗ್ಗೂಡಿ ಕಾರ್ಯನಿರ್ವಹಿಸಬಹುದಾಗಿದೆ. ಹಣಕಾಸು ವಿವರ, ಅಕೌಂಟಿಂಗ್ ಹಾಗೂ ಆಡಿಟ್‌ಗೆ ಸಂಬಂಧಿಸಿದ ಕೌಶಲ ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳಬಹುದಾಗಿದೆ
ಅನುಷ್ಠಾನ ತಂತ್ರಗಳು ಮತ್ತು ಗುರಿಗಳು:
ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟ್ಸ್ ಆಫ್ ಇಂಡಿಯಾ (ಐಸಿಎಐ) ಮತ್ತು ಸರ್ಟಿಫೈಡ್ ಪ್ರಾಕ್ಟಿಸಿಂಗ್ ಅಕೌಂಟೆಂಟ್ಸ್, ಪಪುವಾ ನ್ಯೂಗಿನಿಯಾ (ಸಿಪಿಎ ಪಿಎನ್‌ಜಿ) ಒಗ್ಗೂಡಿ ಈ ಕೆಲಸಗಳನ್ನು ನಿರ್ವಹಿಸಲಿದೆ.
* ಪಪುವಾ ನ್ಯುಗಿನಿಯಾದಲ್ಲಿ ತಾಂತ್ರಿಕ ಸಭೆಗಳು, ಕಾರ್ಯಕ್ರಮಗಳು, ವಿಚಾರಸಂಕಿರಣಗಳನ್ನು ಆಯೋಜಿಸುವುದು
* ತಾಂತ್ರಿಕ ಸಂಶೋಧನೆ, ಗುಣಮಟ್ಟ ಪ್ರಮಾಣೀಕರಣ, ಫೋರೆನ್ಸಿಕ್ ಅಕೌಂಟಿಂಗ್, ನಿರಂತರ ವೃತ್ತಿನಿರತ ಅಭಿವೃದ್ಧಿ, ಸಮಾಲೋಚನೆ, ಕಾರ್ಪೊರೇಟ್ ಆಡಳಿತದ ಕುರಿತು ಸಹಕಾರ ಹಾಗೂ ಸಂಯೋಜನೆಯನ್ನು ನಿರ್ವಹಿಸುವುದು
ಭಾರತ ಮತ್ತು ಪಿಎನ್‌ಜಿಯಲ್ಲಿ ಅಕೌಂಟನ್ಸಿ ವೃತ್ತಿಗೆ ಸಂಬಂಧಿಸಿದ ಅನಿಯಂತ್ರಿತ ಮಾಹಿತಿಯನ್ನು ಹಂಚಿಕೊಳ್ಳಿ ಮತ್ತು ಅಗತ್ಯವಿದ್ದಾಗ ಅಂತರರಾಷ್ಟ್ರೀಯ ಮಟ್ಟದಲ್ಲಿ, ಸಿಪಿಎ, ಪಿಎನ್‌ಜಿ ಪರೀಕ್ಷೆಗೆ ನಿರ್ದಿಷ್ಟ ವಿಷಯಗಳಿಗೆ ಮಾಡ್ಯೂಲ್‌ಗಳನ್ನು ಅಭಿವೃದ್ಧಿಪಡಿಸಿ.
ಭಾರತದಲ್ಲಿ ಲಭ್ಯ ಇರುವ ಅಕೌಂಟೆನ್ಸಿ ವೃತ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಪಿಎನ್‌ಜಿಗೆಯೊಂದಿಗೆ ಹಂಚಿಕೊಳ್ಳುವುದು. ಸಿಪಿಎ ಹಾಗೂ ಪಿಎನ್‌ಜಿ ಪರೀಕ್ಷೆಗಳಿಗೆ ಮಾದರಿಗಳನ್ನು ಸೃಷ್ಟಿಸಿ ಬೆಳೆಸುವುದು
ವಿದ್ಯಾರ್ಥಿ ಹಾಗೂ ಬೋಧಕರ ವಿನಿಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು
ಆಡಿಟ್, ಅಕೌಂಟೆನ್ಸಿ ಹಾಗೂ ಹಣಕಾಸಿನ ವಿಷಯಗಳಿಗೆ ಸಂಬಂದಿಸಿದಂತೆ ಹಲವು ವೃತ್ತಿನಿರತ ಕೋರ್ಸುಗಳನ್ನು ಆರಂಭಿಸುವುದು
ಮುಖ್ಯ ಪರಿಣಾಮ:
ಇಂಡಿಯನ್ ಚಾರ್ಟರ್ಡ್ ಅಕೌಂಟೆಂಟ್ಸ್ (ಸಿ ಎ) ತನ್ನ ಸಹೋದರ ಸಂಸ್ಥೆಯೊಂದಿಗೆ, ಸ್ಥಳೀಯ ವ್ಯಾಪಾರಿ ಸಮುದಾಯ ಹಾಗೂ ಹಣಕಾಸು ವಿಷಯಗಳ ವರದಿಗಾರಿಕೆಯನ್ನು ಅತ್ಯಂತ ಉತ್ಕೃಷ್ಟ ರೀತಿಯಲ್ಲಿ ನೀಡುತ್ತಿದೆ. ಪ್ರಸ್ತಾವಿತ ಒಪ್ಪಂದವು ಪಪುವಾ ನ್ಯೂಗಿನಿಯಾದಲ್ಲಿ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ವಿಶ್ವಾಸವನ್ನು ಬಲಪಡಿಸಲು ಮತ್ತು ಸಕಾರಾತ್ಮಕ ಪರಿಸರವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಪಿಎನ್‌ಜಿಯಲ್ಲಿ ಅಧ್ಯಾಯವನ್ನು ಒಳಗೊಂಡಿರುವ ಆಸ್ಟ್ರೇಲಿಯಾ-ಓಷಿಯಾನಿಯಾ ಪ್ರದೇಶದಲ್ಲಿ 3000 ಕ್ಕೂ ಹೆಚ್ಚು ಸದಸ್ಯರ ಬಲವಾದ ಸದಸ್ಯತ್ವವನ್ನು ಐಐಸಿಎ ಹೊಂದಿದೆ. ಸಿಪಿಎ, ಪಿಎನ್‌ಜಿಗೆ ನೆರವು ನೀಡಲು ಆಲೋಚಿಸಿದ ಒಪ್ಪಂದವು ಈ ಪ್ರದೇಶದ ಐಸಿಎಐ ಸದಸ್ಯರಿಗೆ ಉಪಯೋಗವಾಗುವಂತೆ ರಚಿಸಲಾಗಿದೆ. ಐಸಿಎಐ ಸದಸ್ಯರ ಬೆಳವಣಿಗೆಗೆ ಹೆಚ್ಚಿನ ಮಹತ್ವ ನೀಡುತ್ತದೆ.
ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟ್ಸ್ ಆಫ್ ಇಂಡಿಯಾ (ಐಸಿಎಐ) ಭಾರತದಲ್ಲಿ ಚಾರ್ಟರ್ಡ್ ಅಕೌಂಟೆಂಟ್ಸ್ ವೃತ್ತಿಯನ್ನು ನಿಯಂತ್ರಿಸಲು “ಚಾರ್ಟರ್ಡ್ ಅಕೌಂಟೆಂಟ್ಸ್ ಆಕ್ಟ್, 1949” ಅಡಿಯಲ್ಲಿ ಸ್ಥಾಪಿಸಲಾದ ಶಾಸನಬದ್ಧ ಸಂಸ್ಥೆಯಾಗಿದೆ. ಸರ್ಟಿಫೈಡ್ ಪ್ರಾಕ್ಟಿಸಿಂಗ್ ಅಕೌಂಟೆಂಟ್ಸ್ ಪಪುವಾ ನ್ಯೂಗಿನಿಯಾ (ಸಿಪಿಎ ಪಿಎನ್‌ಜಿ) ಅಕೌಂಟೆಂಟ್ಸ್ ಆಕ್ಟ್, 1996 ರ ಅಡಿಯಲ್ಲಿ ಸ್ಥಾಪಿಸಲಾದ ಪ್ರಧಾನ ಅಕೌಂಟಿಂಗ್ ಪ್ರೊಫೆಷನಲ್ ಬಾಡಿ ಆಗಿದ್ದು, ಅಕೌಂಟಿಂಗ್ ಮತ್ತು ಆಡಿಟಿಂಗ್ ಮಾನದಂಡಗಳನ್ನು ನಿಗದಿಪಡಿಸಲು ಮತ್ತು ಪಪುವಾ ನ್ಯೂಗಿನಿಯಾದ ಅಕೌಂಟನ್ಸಿ ವೃತ್ತಿಯ ಹಿತಾಸಕ್ತಿಗಳನ್ನು ಉತ್ತೇಜಿಸುವ ಉದ್ದೇಶವಿದೆ.
***
(रिलीज़ आईडी: 1666481)
आगंतुक पटल : 178
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Odia
,
Telugu