ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ತರಂಗಾಂತರ ಹರಾಜು 2021: ಯಶಸ್ವಿ ಹರಾಜುದಾರರಿಗೆ ದೂರಸಂಪರ್ಕ ಇಲಾಖೆಯಿಂದ ಸ್ಪೆಕ್ಟ್ರಂ ಆವರ್ತನಗಳ ಹಂಚಿಕೆ
ಆವರ್ತನಗಳ ನಿಯೋಜನೆ ಜತೆಗೆ ತರಂಗಾಂತರಗಳ ಸ್ಥಿರ ಹೊಂದಾಣಿಕೆ ಪ್ರಕ್ರಿಯೆಗೆ ಚಾಲನೆ
ಹರಾಜುದಾರರಿಗೆ ತಕ್ಷಣವೇ ಸ್ಪೆಕ್ಟ್ರಂ ಹಂಚಿಕೆ ಮೂಲಕ 2306.97 ಕೋಟಿ ರೂ. ಮುಂಗಡ ಹಣ ಸ್ವೀಕಾರ
प्रविष्टि तिथि:
16 APR 2021 6:49PM by PIB Bengaluru
2021ರ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆಯಲ್ಲಿ ಯಶಸ್ವೀ ಹರಾಜು ನಡೆಸಿದ ಬಿಡ್ಡುದಾರರಿಗೆ (ಹರಾಜುದಾರರು) ದೂರಸಂಪರ್ಕ ಇಲಾಖೆಯು ಸ್ಪೆಕ್ಟ್ರಂ ಆವರ್ತನ(ಕಂಪನ)ಗಳನ್ನು ಹಂಚಿಕೆ ಮಾಡಿದೆ. ಜತೆಗೆ, ಯಶಸ್ವೀ ಹರಾಜುದಾರರಿಗೆ ಸ್ಪೆಕ್ಟ್ರಂ ಹಂಚಿಕೆಯ ಪತ್ರಗಳನ್ನು ಇಂದು ಹೊರಡಿಸಿದೆ.
ತರಂಗಾಂತರಗಳ ಆವರ್ತನ ಹಂಚಿಕೆಯ ಜತೆಯಲ್ಲೇ ಇಲಾಖೆಯು ಕಂಪನಗಳ ಸ್ಥಿರ ಹೊಂದಾಣಿಕೆ ಪ್ರಕ್ರಿಯೆಗೂ ಚಾಲನೆ ನೀಡಿದೆ. ಹರಾಜುದಾರರು ಈಗಾಗಲೇ ನಾನಾ ಲೈಸೆನ್ಸ್|ಗಳ ಅಡಿ ಹೊಂದಿರುವ ವಿವಿಧ ಬ್ಯಾಂಡ್|ಗಳ ಸ್ಪೆಕ್ಟ್ರಂ ಆವರ್ತನಗಳ ಬ್ಲಾಕ್|ಗಳ ಜತೆಗೆ, ದೂರಸಂಪರ್ಕ ಸೇವಾದಾರರಿಗೆ ದೂರಸಂಪರ್ಕ ಇಲಾಖೆ ಇದೀಗ ಹೊಸದಾಗಿ ಸ್ಪೆಕ್ಟ್ರಂ ಬ್ಯಾಂಡ್|ಗಳನ್ನು ಹಂಚಿಕೆ ಮಾಡಿದೆ.
ಸ್ಪೆಕ್ಟ್ರಂ ಆವರ್ತನಗಳ(ಫ್ರೀಕ್ವೆನ್ಸಿ) ಸ್ಥಿರ ಹೊಂದಾಣಿಕೆ ಪ್ರಕ್ರಿಯೆಯನ್ನು 800 ಮೆಗಾ ಹರ್ಟ್ಸ್(19 ಎಲ್ಎಸ್ಎ-ಪರವಾನಗಿ ಪಡೆದ ಸ್ಪೆಕ್ಟ್ರಂ ಲಭ್ಯತೆ), 900 ಮೆಗಾ ಹರ್ಟ್ಸ್(8 ಎಲ್ಎಸ್ಎ), 1800 ಮೆಗಾ ಹರ್ಟ್ಸ್(21 ಎಲ್ಎಸ್ಎ), 2100 ಮೆಗಾ ಹರ್ಟ್ಸ್(3 ಎಲ್ಎಸ್ಎ) ಮತ್ತು 2300 ಮೆಗಾ ಹರ್ಟ್ಸ್(16 ಎಲ್ಎಸ್ಎ) ಬ್ಯಾಂಡ್|ಗಳಿಗೆ ಅನುಗುಣವಾಗಿ ಮಾಡಲಾಗಿದೆ. ದೂರಸಂಪರ್ಕ ಸೇವಾ ಪೂರೈಕೆದಾರರು ದಕ್ಷತೆಯಿಂದ ಸ್ಪೆಕ್ಟ್ರಂ ಬಳಕೆ ಮಾಡಲು ಮತ್ತು ಉತ್ತಮ ಸೇವೆ ಒದಗಿಸುವ ಸಲುವಾಗಿ ಆವರ್ತನಗಳ ಸ್ಥಿರ ಹೊಂದಾಣಿಕೆ ಪ್ರಕ್ರಿಯೆ ಕೈಗೊಳ್ಳಲಾಗಿದೆ.
ಪ್ರಮುಖ ಇಬ್ಬರು ದೂರಸಂಪರ್ಕ ಸೇವಾ ಪೂರೈಕೆದಾರರಾದ ಭಾರ್ತಿ ಟೆಲಿಕಾಂ ಮತ್ತು ರಿಲಯನ್ಸ್ ಜಿಯೊ ಮಾಡಿದ ಮನವಿಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಿದ್ದು, ಮಾರಾಟವಾಗದೆ ಉಳಿದಿದ್ದ ಲಭ್ಯವಿರುವ ಸ್ಪೆಕ್ಟ್ರಂ ಬ್ಲಾಕ್|ಗಳನ್ನು ಈ ಎರಡು ಕಂಪನಿಗಳಿಗೆ ತಕ್ಷಣವೇ ಹಂಚಿಕೆ ಮಾಡಿದೆ. ಈ ಮೂಲಕ ಭಾರ್ತಿ ಟೆಲಿಕಾಂನಿಂದ 2306.97 ಕೋಟಿ ರೂ. ಹಾಗೂ ರಿಲಯನ್ಸ್ ಜಿಯೊ ಕಂಪನಿಯಿಂದ 2149.59 ಕೋಟಿ ರೂ. ಆದಾಯವನ್ನು ತಕ್ಷಣವೇ ಕ್ರೋಡೀಕರಿಸಿದೆ. 2021 ಆಗಸ್ಟ್-ಸೆಪ್ಟೆಂಬರ್|ನಲ್ಲಿ ಮಾರಾಟವಾಗಬೇಕಿದ್ದ ಸ್ಪೆಕ್ಟ್ರಂಗಳು ತಕ್ಷಣವೇ ಮಾರಾಟ ಆದಂತಾಗಿದೆ.
800 ಮೆಗಾ ಹರ್ಟ್ಸ್, 900 ಮೆಗಾ ಹರ್ಟ್ಸ್, 1800 ಮೆಗಾ ಹರ್ಟ್ಸ್, 2100 ಮೆಗಾ ಹರ್ಟ್ಸ್ ಮತ್ತು 2300 ಮೆಗಾ ಹರ್ಟ್ಸ್ ಬ್ಯಾಂಡ್|ಗಳಲ್ಲಿ ಒಟ್ಟು 855.60 ಮೆಗಾ ಹರ್ಟ್ಸ್ ಪ್ರಮಾಣದ ಸ್ಪೆಕ್ಟ್ರಂ(ತರಂಗ ಗುಚ್ಛ)ಗಳನ್ನು ದೂರಸಂಪರ್ಕ ಸೇವಾ ಪೂರೈಕೆದಾರರು ಖರೀದಿಸಿದ್ದಾರೆ. 2021 ಮಾರ್ಚ್|ನಲ್ಲಿ ಮೊದಲ ಮತ್ತು 2ನೇ ಹಂತದಲ್ಲಿ ಸ್ಪೆಕ್ಟ್ರಂ ಹರಾಜು ನಡೆಸಲಾಗಿತ್ತು. ಹರಾಜುದಾರರು 77820.81 ಕೋಟಿ ರೂ. ಮೊತ್ತದ ಸ್ಪೆಕ್ಟ್ರಂ ಹರಾಜು ನಡೆಸಿದ್ದು, ನಿಯಮ ಮತ್ತು ಷರತ್ತುಗಳ ಅನ್ವಯ, ಅದರಲ್ಲಿ ಮಾರ್ಚ್ 18ರಂದು ಮೊದಲ ಕಂತಾಗಿ (ಮುಂಗಡ ಪಾವತಿ) 21918.47 ಕೋಟಿ ರೂ. ಆದಾಯ ಸ್ವೀಕರಿಸಲಾಗಿದೆ.
***
(रिलीज़ आईडी: 1712483)
आगंतुक पटल : 310