ರಕ್ಷಣಾ ಸಚಿವಾಲಯ

ಏರ್ ವೈಸ್ ಮಾರ್ಷಲ್ ಅಶುತೋಷ್ ಶರ್ಮಾ ಬರೆದಿದ್ದಾರೆಂಬ ವಾಟ್ಸಪ್ ಸಂದೇಶದ ಆರೋಪದ ಬಗ್ಗೆ ಸ್ಪಷ್ಟೀಕರಣ

ಪ್ರಕಟಣಾ ದಿನಾಂಕ: 25 APR 2021 12:51PM by PIB Bengaluru

ಕೋವಿಡ್-19 ಸಾಂಕ್ರಾಮಿಕ ಎದುರಿಸಲು ಹಬೆ (ಸ್ಟೀಮ್) ಬಳಕೆ ಮಾಡಬಹುದು ಎಂದು ಬೆಂಗಳೂರಿನ ವಾಯುಪಡೆಯ ಕಮಾಂಡ್ ಆಸ್ಪತ್ರೆ(ಸಿಎಚ್ಎಎಫ್ ಬಿ) ಏರ್ ಮಾರ್ಷಲ್ ಅಶುತೋಷ್ ಶರ್ಮಾ ಅವರು ಬರೆದಿದ್ದಾರೆ ಎನ್ನಲಾದ ಆರೋಪದ ವಾಟ್ಸ್ ಅಪ್ ಸಂದೇಶ ಚಲಾವಣೆಯಲ್ಲಿದೆ.

ಮೂಲಕ ಸ್ಪಷ್ಟನೆ ನೀಡುವುದೆಂದರೆ, ಏರ್ ಮಾರ್ಷಲ್ ಅಶುತೋಷ್ ಶರ್ಮಾ ಅವರು ಬೆಂಗಳೂರಿನಲ್ಲಿಲ್ಲ. ವಾಯುಪಡೆಯ ಬೆಂಗಳೂರಿನ ಕಮಾಂಡ್ ಆಸ್ಪತ್ರೆಯ ನೇತೃತ್ವವನ್ನು ಏರ್ ವೈಸ್ ಮಾರ್ಷಲ್ ಅಶುತೋಷ್ ಶರ್ಮಾ ವಹಿಸಿದ್ದಾರೆ ಮತ್ತು ಮೇಲಿನ ಚಲಾವಣೆಯಲ್ಲಿರುವ ಸಂದೇಶ ಮೂಲತಃ ಅವರು ನೀಡಿರುವುದಿಲ್ಲ.

ಭಾರತೀಯ ವಾಯುಪಡೆ ಮತ್ತು ಏರ್ ವೈಸ್ ಮಾರ್ಷಲ್ ಅಶುತೋಷ್ ಶರ್ಮಾ ಸಂದೇಶದಲ್ಲಿ ತಿಳಿಸಿದ ಮಾಹಿತಿಗೆ ಜವಾಬ್ದಾರರಲ್ಲ. ಕೋವಿಡ್-19 ಸೋಂಕಿನ ಲಕ್ಷಣಗಳಿರುವ ಯಾವುದೇ ವ್ಯಕ್ತಿ ಚಿಕಿತ್ಸೆಗಾಗಿ ವೃತ್ತಿಪರ ವೈದ್ಯರ ಸಹಾಯವನ್ನು ಪಡೆಯುವುದು ಕಡ್ಡಾಯವಾಗಿದೆ.

***


(ಪ್ರಕಟಣೆ ಐ.ಡಿ.: 1714031) ವಿಸಿಟರ್ ಕೌಂಟರ್ : 403
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Tamil