ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ 
                
                
                
                
                
                
                    
                    
                        ಇಂಧನ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ಸಂಪುಟ ದರ್ಜೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಶ್ರೀ ರಾಜ್ ಕುಮಾರ್ ಸಿಂಗ್
                    
                    
                        
                    
                
                
                    Posted On:
                08 JUL 2021 1:12PM by PIB Bengaluru
                
                
                
                
                
                
                ಶ್ರೀ ರಾಜ್ ಕುಮಾರ್ ಸಿಂಗ್ ಅವರಿಂದು ಇಂಧನ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವಾಲಯದ ಸಂಪುಟ ದರ್ಜೆ ಸಚಿವರಾಗಿ ಅಧಿಕಾರ ವಹಿಸಿಕೊಂಡರು.  
ಈ ಹೊಣೆಯನ್ನು ನೀಡಿದ್ದಕ್ಕಾಗಿ ಪ್ರಧಾನಮಂತ್ರಿಯವರಿಗೆ ಕೃತಜ್ಞತೆ ಸಲ್ಲಿಸಿದ ಶ್ರೀ ಆರ್.ಕೆ. ಸಿಂಗ್, ಪ್ರಧಾನಮಂತ್ರಿಯವರು ತಮ್ಮ ಮೇಲೆ ಅಪಾರ ವಿಶ್ವಾಸವನ್ನು ಹೊಂದಿದ್ದು, ತಾವು ಅದನ್ನು ಪೂರೈಸಲು ಶ್ರಮಿಸುವುದಾಗಿ ತಿಳಿಸಿದರು.
ಅಧಿಕಾರವಹಿಸಿಕೊಂಡ ತರುವಾಯ ಮಾಧ್ಯಮಗಳೊಂದಿಗೆ ಸಂಕ್ಷಿಪ್ತವಾಗಿ ಮಾತನಾಡಿದ ಶ್ರೀ ಸಿಂಗ್, ಪ್ರಧಾನಮಂತ್ರಿಯವರು ನಿಗದಿ ಮಾಡಿದ್ದ ವಿದ್ಯುದ್ದೀಕರಣದ ಗುರಿಯನ್ನು ಗಡುವಿಗೆ ಮೊದಲೇ ಸಾಧಿಸಿದ್ದೇವೆ ಮತ್ತು ಶ್ರೀಸಾಮಾನ್ಯರಿಗೆ ವಿದ್ಯುತ್ ಮತ್ತು ಇಂಧನ ವಲಯದ ಪ್ರಯೋಜನ ಲಭಿಸುವುದನ್ನು ಖಾತ್ರಿಪಡಿಸಲು ಶ್ರಮಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು ಕಚೇರಿಯಲ್ಲಿ  ನೂತನಸಚಿವರಿಗೆ ಶುಭ ಕೋರಿದರು. 

***
                
                
                
                
                
                (Release ID: 1733700)
                Visitor Counter : 229