ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಆಫ್ಘಾನಿಸ್ತಾನದಲ್ಲಿ ಪ್ರಸ್ತುತ ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇನ್ನು ಮುಂದೆ ಎಲ್ಲಾ ಆಫ್ಘನ್ ಪ್ರಜೆಗಳು ಇ-ವೀಸಾದೊಂದಿಗೆ ಮಾತ್ರ ಭಾರತಕ್ಕೆ ಪ್ರಯಾಣಿಸಬೇಕು

ಪ್ರಕಟಣಾ ದಿನಾಂಕ: 25 AUG 2021 11:56AM by PIB Bengaluru

ಆಫ್ಘಾನಿಸ್ತಾನದಲ್ಲಿ ಪ್ರಸ್ತುತ ನೆಲೆಸಿರುವ ಭದ್ರತಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಮತ್ತು ʻಇ-ತುರ್ತು ಎಕ್ಸ್-ಮಿಸಲೇನಿಯಸ್‌ ವೀಸಾʼವನ್ನು ಪರಿಚಯಿಸುವ ಮೂಲಕ ವೀಸಾ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಿರುವುದರಿಂದ, ಇನ್ನು ಮುಂದೆ ಎಲ್ಲಾ ಆಫ್ಘನ್ ಪ್ರಜೆಗಳು ಇ-ವೀಸಾದೊಂದಿಗೆ ಮಾತ್ರ ಭಾರತಕ್ಕೆ ಪ್ರಯಾಣಿಸಲು ಅವಕಾಶ ನೀಡಲು ಎಂದು ನಿರ್ಧರಿಸಲಾಗಿದೆ.

ಕೆಲವು ಆಫ್ಘನ್ ಪ್ರಜೆಗಳ ಪಾಸ್‌ಪೋರ್ಟ್‌ಗಳು ಕಳೆದುಹೋಗಿವೆ ಎಂಬ ವರದಿಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಸ್ತುತ ಭಾರತದಲ್ಲಿಲ್ಲದ ಎಲ್ಲಾ ಆಫ್ಘನ್ ಪ್ರಜೆಗಳಿಗೆ ಈ ಹಿಂದೆ ನೀಡಲಾಗಿದ್ದ ವೀಸಾಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನ್ಯಗೊಳಿಸಲಾಗಿದೆ. ಇನ್ನು ಮುಂದೆ  ಭಾರತಕ್ಕೆ ಪ್ರಯಾಣಿಸಲು ಬಯಸುವ ಆಫ್ಘನ್ ಪ್ರಜೆಗಳು www.indianvisaonline.gov.in ಮೂಲಕ ಇ-ವೀಸಾಗೆ ಅರ್ಜಿ ಸಲ್ಲಿಸಬಹುದು.

***


(ಪ್ರಕಟಣೆ ಐ.ಡಿ.: 1748816) ವಿಸಿಟರ್ ಕೌಂಟರ್ : 348
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Punjabi , Gujarati , Odia , Tamil , Telugu , Malayalam