ಇಂಧನ ಸಚಿವಾಲಯ
azadi ka amrit mahotsav

ಭಾರತದ ಮೊದಲ ಯೂರೋ ಗ್ರೀನ್ ಬಾಂಡ್ ಬಿಡುಗಡೆ ಮಾಡಿದ ಪಿ.ಎಫ್.ಸಿ.

ಪ್ರಕಟಣಾ ದಿನಾಂಕ: 16 SEP 2021 12:58PM by PIB Bengaluru

ಪವರ್ ಫೈನಾನ್ಸ್ ಕಾರ್ಪೋರೇಷನ್ ಲಿಮಿಟೆಡ್ [ಪಿ.ಎಫ್.ಸಿ] ತನ್ನ ವಿದ್ಯುತ್ ಕ್ಷೇತ್ರದ ಪ್ರಮುಖ ವಲಯವಾದ ಎನ್.ಬಿ.ಎಫ್.ಸಿ 13.09.2021 ರಂದು 7 ವರ್ಷದ ತನ್ನ ಮೊದಲ 300 ದಶಲಕ್ಷ ಯುರೋ ಬಾಂಡ್ ಬಿಡುಗಡೆ ಮಾಡಿದೆ. ಇದರಿಂದಾಗಿ ಯುರೋ ಮಾರುಕಟ್ಟೆಯಲ್ಲಿ ಭಾರತಕ್ಕೆ 1.841% ರಷ್ಟು ಪ್ರತಿಫಲ ದೊರೆತಂತಾಗಿದೆ.   

ಭಾರತದಿಂದ ಮೊದಲ ಯುರೋ ಹೆಸರಿನ ಹಸಿರು ಬಾಂಡ್ ವಿತರಣೆ ಇದಾಗಿದೆ. ಇದಲ್ಲದೇ ಇದು ಭಾರತದ ಎನ್.ಬಿ.ಎಫ್.ಸಿಯಿಂದ ಮೊದಲ ಯುರೋ ಬಾಂಡ್ ಆಗಿದ್ದು, 2017 ರ ನಂತರ ಭಾರತದ ಮೊದಲ ಯುರೋ ಬಾಂಡ್ ವಿತರಣೆಯಾಗಿದೆ. 

ಈ ಪ್ರಕ್ರಿಯೆಯಲ್ಲಿ ಏಷ್ಯಾ ಮತ್ತು ಐರೋಪ್ಯ ರಾಷ್ಟ್ರಗಳಾದ್ಯಂತ 82 ಸಾಂಸ್ಥಿಕ ಹೂಡಿಕೆ ವಲಯದ ಖಾತೆದಾರರು ಭಾಗವಹಿಸಿದ್ದು, ಇದು ಪ್ರಬಲ ಪಾಲ್ಗೊಳ್ಳುವಿಕೆಯಾಗಿದೆ ಮತ್ತು 2.65 ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಚಂದಾದಾರರನ್ನು ಹೊಂದಿದಂತಾಗಿದೆ.

***


(ಪ್ರಕಟಣೆ ಐ.ಡಿ.: 1755448) ವಿಸಿಟರ್ ಕೌಂಟರ್ : 363
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Bengali , Punjabi , Gujarati , Tamil , Telugu , Malayalam