ಹಣಕಾಸು ಸಚಿವಾಲಯ
azadi ka amrit mahotsav

1961ರ ಆದಾಯ ತೆರಿಗೆ ಕಾಯಿದೆಯ 10(26) ಪರಿಚ್ಛೇದ ದೃಷ್ಟಿಯಿಂದ 194ಎ ಟಿಡಿಎಸ್ ಯು/ಎಸ್ ನಿಬಂಧನೆ ಸಡಿಲಿಕೆ ಮಾಡಿದ ಕೇಂದ್ರ ಸರ್ಕಾರ

प्रविष्टि तिथि: 17 SEP 2021 10:55PM by PIB Bengaluru

1961ರ ಆದಾಯ ತೆರಿಗೆ ಕಾಯಿದೆಯ 197ಎ ಪರಿಚ್ಛೇದದ ಅಡಿ 1ಎಫ್ ಉಪಪರಿಚ್ಛೇದದ ಅನ್ವಯ ದತ್ತವಾದ ಅಧಿಕಾರ ಚಲಾಯಿಸಿ, ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಆದಾಯ ತೆರಿಗೆ ಕಾಯಿದೆಯ 194ಎ ಪರಿಚ್ಛೇದದಡಿ, ಈ ಕೆಳಗಿನ ಪಾವತಿಗಳಿಗೆ ತೆರಿಗೆ ಕಡಿತ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. 
ಬಡ್ಡಿ ಸ್ವರೂಪದ ಯಾವುದೇ ಪಾವತಿ, ಶೆಡ್ಯೂಲ್ ಬ್ಯಾಂಕ್ (ಪಾವತಿದಾರ) ಪರಿಶಿಷ್ಟ ಪಂಗಡದ ಸದಸ್ಯ(ರಿಸೀವರ್)ನಿಗೆ ಸೆಕ್ಯೂರಿಟೀಸ್ (ಬಂಡವಾಳ ಪತ್ರಗಳು) ಮೇಲೆ ಮಾಡುವ ಬಡ್ಡಿ ಹೊರತುಪಡಿಸಿದ ಇತರೆ ಪಾವತಿಗಳಿಗೆ ಟಿಡಿಎಸ್ (ಮೂಲದಲ್ಲೇ ತೆರಿಗೆ ಕಡಿತ) ಅನ್ವಯವಾಗುವುದಿಲ್ಲ. ಆದಾಯ ತೆರಿಗೆ ಕಾಯಿದೆ 10(26) ಪರಿಚ್ಛೇದದಲ್ಲಿ ಉಲ್ಲೇಖಿಸಿರುವಂತೆ ಈ ಸದಸ್ಯ ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ವಾಸಿಸುತ್ತಿರಬೇಕು. ಜತೆಗೆ, ಈ ಕೆಳಗಿನ ಷರತ್ತುಗಳು ಅನ್ವಯವಾಗುತ್ತವೆ.
ಆದಾಯ ತೆರಿಗೆ ಕಾಯಿದೆಯ 10(26) ಪರಿಚ್ಛೇದದಲ್ಲಿ ಉಲ್ಲೇಖಿಸಿರುವಂತೆ, ನಿರ್ದಿಷ್ಟ ಪ್ರದೇಶದಲ್ಲಿ ನೆಲೆಸಿರುವ ಪರಿಶಿಷ್ಟ ಪಂಗಡದ ಸದಸ್ಯ(ರಿಸೀವರ್)ನ ಬಗ್ಗೆ ಪಾವತಿದಾರ(ಶೆಡ್ಯೂಲ್ ಬ್ಯಾಂಕ್)ನಿಗೆ ತೃಪ್ತಿ ಇರಬೇಕು. ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದ ಹಿಂದಿನ ವರ್ಷದಲ್ಲಿ ಮಾಡಿರುವ ಪಾವತಿಗೆ ಪೂರಕವಾದ ಅಗತ್ಯ ದಾಖಲೆಗಳನ್ನು ಪಡೆಯಬೇಕು.
ಪಾವತಿದಾರ ಐಟಿ ಕಾಯಿದೆಯ ಪರಿಚ್ಛೇದ 200ರ ಉಪ-ಪರಿಚ್ಛೇದ (3)ರಲ್ಲಿ  ಉಲ್ಲೇಖಿಸಿರುವಂತೆ ತೆರಿಗೆ ಕಡಿತದ ವಿವರಗಳನ್ನು ನೀಡಬೇಕು.
ಹಿಂದಿನ ವರ್ಷದ ಪಾವತಿ ಮೊತ್ತ 20 ಲಕ್ಷ ರೂಪಾಯಿ ದಾಟಿರಬಾರದು.
 
ಕೇಂದ್ರ ಸರ್ಕಾರ ಹೊರಡಿಸಿರುವ ಐಟಿ ಕಾಯಿದೆಯ ಅಧಿಸೂಚನೆಯಲ್ಲಿ ನಮೂದಿಸಿರುವ ಶೆಡ್ಯೂಲ್ ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ 1934ರ 2ನೇ ಶೆಡ್ಯೂಲ್|ನಲ್ಲಿ ಸೇರಿದೆ.
ಅಧಿಸೂಚನೆ ಸಂಖ್ಯೆ 110/2021 ಅನ್ನು 17 ಸೆಪ್ಟೆಂಬರ್ 2021ರಂದು ಹೊರಡಿಸಲಾಗಿದೆ. ಇದು 
www.incometaxindia.gov.in ಮತ್ತು www.egazette.nic.in  ವೆಬ್|ಸೈಟ್|ನಲ್ಲಿ ಲಭ್ಯವಿದೆ.

***


(रिलीज़ आईडी: 1756041) आगंतुक पटल : 298
इस विज्ञप्ति को इन भाषाओं में पढ़ें: English , Urdu , हिन्दी