ಕಲ್ಲಿದ್ದಲು ಸಚಿವಾಲಯ
ದಾಖಲೆ ಕಾರ್ಯಕ್ಷಮತೆ ಸಾಧಿಸಿದ ʻಎಂಸಿಎಲ್ʼ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ
Posted On:
29 OCT 2021 5:10PM by PIB Bengaluru
ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಹಾಗೂ ರೈಲು, ಕಲ್ಲಿದ್ದಲು ಮತ್ತು ಗಣಿ ಖಾತೆ ಸಹಾಯಕ ಸಚಿವ ಶ್ರೀ ರಾವ್ ಸಾಹೇಬ್ ಪಾಟೀಲ್ ದನ್ವೆ ಅವರು ʻಮಹಾನದಿ ಕೋಲ್ ಫೀಲ್ಡ್ಸ್ ಲಿಮಿಟೆಡ್ʼ(ಎಂಸಿಎಲ್) ಅಧ್ಯಕ್ಷ ಮತ್ತು ಕಾರ್ಯಕಾರಿ ನಿರ್ದೇಶಕರನ್ನು ಇಂದು ಸನ್ಮಾನಿಸಿದರು. ಕಂಪನಿಯು ಗುರುವಾರ ದಾಖಲೆಯ 6.04ಲಕ್ಷ ಟನ್ ಕಲ್ಲಿದ್ದಲನ್ನು ಗ್ರಾಹಕರಿಗೆ ರವಾನಿಸುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿರುವುದಕ್ಕಾಗಿ ಅಭಿನಂದಿಸಿದರು.
ಒಡಿಶಾದಲ್ಲಿ ಪ್ರತಿದಿನ ಸರಾಸರಿ 5.25 ಲಕ್ಷ ಟನ್ ಕಲ್ಲಿದ್ದಲನ್ನು ಪೂರೈಸುತ್ತಿದ್ದ ʻಎಂಸಿಎಲ್ʼ ತನ್ನೆಲ್ಲಾ ದಾಖಲೆಗಳನ್ನು ಮೀರಿ ತೋರಿದ ಐತಿಹಾಸಿಕ ಕಾರ್ಯಕ್ಷಮತೆಗಾಗಿ ಕಲ್ಲಿದ್ದಲು ಗಣಿಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ರೈಲ್ವೆ, ಕಾರ್ಮಿಕ ಸಂಘದ ನಾಯಕರು ಮತ್ತು ಸ್ಥಳೀಯ ಆಡಳಿತ ಸೇರಿದಂತೆ ಎಲ್ಲ ಮಧ್ಯಸ್ಥಗಾರರ ಸಂಘಟಿತ ಪ್ರಯತ್ನಗಳು ಹಾಗೂ ʻಎಂಸಿಎಲ್ʼ ನಾಯಕತ್ವವನ್ನು ಸಚಿವ ಶ್ರೀ ಜೋಶಿ ಶ್ಲಾಘಿಸಿದರು.

ʻಎಂಸಿಎಲ್ʼನ ಹೆಚ್ಚುವರಿ ಜವಾಬ್ದಾರಿಯನ್ನು ಹೊತ್ತಿರುವ ʻನಾರ್ದರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ʼನ(ಎನ್‌ಸಿಎಲ್) ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸಿನ್ಹಾ ಅವರನ್ನೂ ಸಚಿವರು ಶ್ಲಾಘಿಸಿದರು. ಎರಡೂ ಅಂಗಸಂಸ್ಥೆಗಳು ಒಂದು ದಶಲಕ್ಷ ಟನ್ ಕಲ್ಲಿದ್ದಲು ರವಾನೆ ದಾಖಲೆ ಗಡಿಯನ್ನು ದಾಟಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ʻಎಂಸಿಎಲ್ʼ ಮತ್ತು ʻಎನ್‌ಸಿಎಲ್ʼ ಹೋಲ್ಡಿಂಗ್ ಕಂಪನಿಯ ಅಂದರೆ ʻಕೋಲ್ ಇಂಡಿಯಾ ಲಿಮಿಟೆಡ್ʼನ ಒಟ್ಟು ಕಲ್ಲಿದ್ದಲು ಉತ್ಪಾದನೆಯ 50% ರಷ್ಟನ್ನು ಇದು ಹೊಂದಿರುವುದರಿಂದ ಈ ಕಾರ್ಯಕ್ಷಮತೆ ಮಹತ್ವದ್ದಾಗಿದೆ.
ದೇಶದ ಇಂಧನ ಬೇಡಿಕೆ ಹೆಚ್ಚುತ್ತಿರುವ ಸಮಯದಲ್ಲಿ, ಶುಷ್ಕ ಇಂಧನಕ್ಕೆ ಬೇಡಿಕೆ ಹೆಚ್ಚುತ್ತಿದೆ. ʻಎಂಸಿಎಲ್ʼ ಮತ್ತು ಮಧ್ಯ ಪ್ರದೇಶ ಮೂಲದ ಸೋದರ ಸಂಸ್ಥೆ ʻಎನ್‌ಸಿಎಲ್ʼ ಅತ್ಯಂತ ತುರ್ತು ಸಮಯದಲ್ಲಿ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸಿವೆ. ಸಚಿವಾಲಯವು ಈ ಪ್ರಯತ್ನಗಳನ್ನು ಗುರುತಿಸಿದ್ದು, ʻಎಂಸಿಎಲ್ʼ ಮತ್ತು ʻಎನ್‌ಸಿಎಲ್ʼನ ಕಾರ್ಯಕಾರಿ ನಿರ್ದೇಶಕರಿಗೆ ಮೆಚ್ಚುಗೆ ಪತ್ರಗಳನ್ನು ನೀಡಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ, ʻಎಂಸಿಎಲ್ʼ ಗ್ರಾಹಕರಿಗೆ 95.7 ದಶಲಕ್ಷ ಟನ್ ಕಲ್ಲಿದ್ದಲನ್ನು ಪೂರೈಸಿದ್ದು, ಆ ಮೂಲಕ ಕಳೆದ ವರ್ಷಕ್ಕಿಂತ ಸುಮಾರು 21% ಬೆಳವಣಿಗೆಯನ್ನು ದಾಖಲಿಸಿದೆ.
***
(Release ID: 1767724)