ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಓಮಿಕ್ರಾನ್ ರೂಪಾಂತರದ ದೃಷ್ಟಿಯಿಂದ ರಾಜ್ಯಗಳು/ಕೇಂದ್ರಾಳಿತ ಪ್ರದೇಶಗಳಲ್ಲಿ ಕೋವಿಡ್ -19 ಸ್ಥಿತಿ ಮತ್ತು ಸನ್ನದ್ಧತೆ ಪರಿಶೀಲಿಸಿದ ಕೇಂದ್ರ


ಪ್ರಕರಣದ ಸಕಾರಾತ್ಮಕತೆ, ದ್ವಿಗುಣಗೊಳಿಸುವ ದರ, ಜಿಲ್ಲೆಗಳಾದ್ಯಂತ ಹೊಸ ಪ್ರಕರಣಗಳ ಸಮೂಹಗಳ ಮೇಲ್ವಿಚಾರಣೆ ಮೇಲೆ ನಿಗಾ ಇಡುವಂತೆ ರಾಜ್ಯಗಳಿಗೆ ಸೂಚನೆ

‘‘ಎಲ್ಲ ಮುನ್ನೆಚ್ಚರಿಕೆಗಳನ್ನು ಗಮನಿಸಿ; ನಿಮ್ಮ ಜಾಗರೂಕತೆಯನ್ನು ಕೈಬಿಡಬೇಡಿ’’

ಸ್ಥಳೀಯ/ಜಿಲ್ಲಾ ಆಡಳಿತವು ಕೋವಿಡ್ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಪುರಾವೆ-ಆಧಾರಿತ ಕ್ರಮಗಳನ್ನು ತ್ವರಿತವಾಗಿ ಪ್ರಾರಂಭಿಸುವ ಜವಾಬ್ದಾರಿಯನ್ನು ಹೊಂದಿದೆ

ಮುಂಬರುವ ಹಬ್ಬದ ಋತುವಿನಲ್ಲಿ ಸ್ಥಳೀಯ ನಿಯಂತ್ರಣ/ನಿರ್ಬಂಧಗಳನ್ನು ರಾಜ್ಯಗಳು ಪರಿಗಣಿಸಬೇಕು

ಒಮಿಕ್ರಾನ್ ಹಿನ್ನೆಲೆಯಲ್ಲಿ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ವೈದ್ಯಕೀಯ ನಿರ್ವಹಣಾ ನಿಯಮ ಬದಲಾಗದೆ ಉಳಿದಿದೆ

ಸಂಪೂರ್ಣ ಲಸಿಕೆ ಓಮಿಕ್ರಾನ್ ಸೇರಿದಂತೆ ತೀವ್ರ ಅನಾರೋಗ್ಯ ಮತ್ತು ಆಸ್ಪತ್ರೆಗೆ ವಿರುದ್ಧವಾಗಿ ರಕ್ಷಣೆ; ಮನೆ-ಮನೆಗೆ ಲಸಿಕೆ ಹಾಕುವುದನ್ನು ತೀವ್ರಗೊಳಿಸಲಾಗುವುದು

Posted On: 23 DEC 2021 3:04PM by PIB Bengaluru

ಹೊಸ ರೂಪಾಂತರವಾದ ಓಮಿಕ್ರಾನ್ (2021ರ ನಂ.26ರಂದು ಡಬ್ಲ್ಯುಎಚ್ ಗೊತ್ತುಪಡಿಸಲಾದ ರೂಪಾಂತರ) ದೃಷ್ಟಿಯಿಂದ ಕೋವಿಡ್-19 (ಮತ್ತು ಅದರ ರೂಪಾಂತರಗಳು) ವಿರುದ್ಧ ಹೋರಾಡಲು ತಮ್ಮ ಸನ್ನದ್ಧತೆಯನ್ನು ಕಾಪಾಡಿಕೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್ ಅವರು, ಇಂದು ವಿಡಿಯೋ ಕಾನ್ಫರೆನ್ಸ್ (ವಿಸಿ) ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಕಾರ್ಯದರ್ಶಿಗಳು ಮತ್ತು ಎನ್‌ಎಚ್‌ಎಂ ಎಂಡಿಗಳೊಂದಿಗೆ ಲಸಿಕೆಯ ಪ್ರಗತಿಯೊಂದಿಗೆ ಕೋವಿಡ್-19 ಮತ್ತು ಓಮಿಕ್ರಾನ್ ರೂಪಾಂತರದ ವಿರುದ್ಧ ಹೋರಾಡಲು ರಾಜ್ಯಗಳ ಸಾರ್ವಜನಿಕ ಆರೋಗ್ಯ ವಲಯದ ಸನ್ನದ್ಧತೆಯನ್ನು ಪರಿಶೀಲಿಸಿದರು. ಅವರು ಕೋವಿಡ್‌ ಸಾಂಕ್ರಾಮಿಕದ ಹರಡುವಿಕೆಯ ಜಾಡನ್ನು ಪತ್ತೆ ಮಾಡಿದರು ಮತ್ತು  ಕೋವಿಡ್-19 ನ ಓಮಿಕ್ರಾನ್ ರೂಪಾಂತರದ ಕುರಿತು ತಿಳಿಯಲು ವಿಶ್ವಾದ್ಯಂತ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆಯನ್ನು ಗಮನಕ್ಕೆ ತರಲಾಯಿತು.

ಪರೀಕ್ಷಾ ಧನಾತ್ಮಕತೆಯು ಶೇ.10 ಕ್ಕಿಂತ ಹೆಚ್ಚಾದಾಗ ಅಥವಾ ಆಮ್ಲಜನಕಯುಕ್ತ ಹಾಸಿಗೆಗಳ ಬಳಕೆ ಶೇ.40 ಕ್ಕಿಂತ ಹೆಚ್ಚಾದಾಗ ಜಿಲ್ಲಾ/ಸ್ಥಳೀಯ ಆಡಳಿತದಿಂದ ಸ್ಥಳೀಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಪುನರುಚ್ಚರಿಸಿದರು. ಆದಾಗ್ಯೂ, ಸ್ಥಳೀಯ ಪರಿಸ್ಥಿತಿ ಮತ್ತು ಜನಸಂಖ್ಯಾ ಗುಣಲಕ್ಷಣಗಳಾದ ಸಾಂದ್ರತೆ ಇತ್ಯಾದಿಗಳ ಆಧಾರದ ಮೇಲೆ ಮತ್ತು ಓಮಿಕ್ರಾನ್‌ನ ಹೆಚ್ಚಿನ ಪ್ರಸರಣವನ್ನು ಗಮನದಲ್ಲಿಟ್ಟುಕೊಂಡು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಈ ಮಿತಿಗಳನ್ನು ತಲುಪುವ ಮೊದಲೇ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬಹುದು ಮತ್ತು ನಿರ್ಬಂಧಗಳನ್ನು ವಿಧಿಸಬಹುದು. ಯಾವುದೇ ನಿರ್ಬಂಧವನ್ನು ಕನಿಷ್ಠ 14 ದಿನಗಳವರೆಗೆ ಜಾರಿಗೊಳಿಸಬೇಕು ಎಂದು ಅವರು ಸಲಹೆ ನೀಡಿದರು. ಓಮಿಕ್ರಾನ್ ರೂಪಾಂತರಿಯು ವೇಗವಾಗಿ ಹರಡುತ್ತಿರುವ ಕಾರಣ ಸಿಂಡ್ರೋಮಿಕ್‌ ವಿಧಾನವನ್ನು ಅನುಸರಿಸಬಹುದಾಗಿದೆ.

ರೂಪಾಂತರಿ ‘ಓಮಿಕ್ರಾನ್’’ ಸಾಂಕ್ರಾಮಿಕವನ್ನು  ನಿಭಾಯಿಸಲು ಕೆಳಗಿನ 5-ಬಗೆಯ ಕಾರ್ಯತಂತ್ರವನ್ನು ಪುನರುಚ್ಚರಿಸಲಾಗಿದೆ:

1. ಕಂಟೈನ್ಮೆಂಟ್‌ ವಲಯ ನಿಗದಿಪಡಿಸುವ ಕುರಿತು, ರಾಜ್ಯಗಳಿಗೆ ಸಲಹೆ ನೀಡಲಾಗಿದೆ:

ರಾತ್ರಿ ಕರ್ಫ್ಯೂಗಳನ್ನು ವಿಧಿಸಿ ಮತ್ತು ದೊಡ್ಡ ಸಮಾರಂಭ ಕೂಟಗಳ ಮೇಲೆ ಕಟ್ಟು ನಿಟ್ಟಾದ ನಿಯಂತ್ರಣ ಪಾಲಿಸಬೇಕು. ವಿಶೇಷವಾಗಿ ಮುಂದಿನ ದಿನಗಳಲ್ಲಿ ಹಬ್ಬಗಳ ಸಾಲು ಬರುತ್ತಿದ್ದು ಅಂತಹ ಸಂದರ್ಭದಲ್ಲಿ ಸೋಂಕು ಹೆಚ್ಚಾಗದಂತೆ ಕ್ರಮ ವಹಿಸಬೇಕು.

ಕೋವಿಡ್ ಪಾಸಿಟಿವ್ ಪ್ರಕರಣಗಳ ಹೊಸ ಕ್ಲಸ್ಟರ್‌ಗಳಲ್ಲಿ ಕಂಟೈನ್ಮೆಂಟ್ ವಲಯ ಹಾಗು ಬಫರ್ ವಲಯಗಳನ್ನು ಕೂಡಲೆ ಗುರುತಿಸಿ.

 ಮಾರ್ಗಸೂಚಿಗಳ ಪ್ರಕಾರ ಕಂಟೈನ್ಮೆಂಟ್ ವಲಯದ ಗಡಿಯನ್ನು  ಖಚಿತಪಡಿಸಿಕೊಳ್ಳಿ.

ಜಿನೋಮ್ ಸೀಕ್ವೆನ್ಸಿಂಗ್‌ಗಾಗಿ ಎಲ್ಲಾ ಕ್ಲಸ್ಟರ್ ಮಾದರಿಗಳನ್ನು ಐಎನ್‌ಎಸ್‌ಎಸಿಒಜಿ ಲ್ಯಾಬ್‌ಗಳಿಗೆ ವಿಳಂಬವಿಲ್ಲದೆ ಕಳುಹಿಸಿ.

2. ಪರೀಕ್ಷೆ ಮತ್ತು ಕಣ್ಗಾವಲು, ಎಲ್ಲಾ ಜಿಲ್ಲೆಗಳಲ್ಲಿ ಡೆಲ್ಟಾ ಮತ್ತು ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯ ಮೇಲೆ ನಿಕಟ ಮತ್ತು ಕಟ್ಟುನಿಟ್ಟಾದ ನಿಗಾ ಇರಿಸಲು ರಾಜ್ಯಗಳಿಗೆ ಸೂಚನೆ; ದಿನ-ದಿನ ಮತ್ತು ವಾರ-ವಾರದ ಆಧಾರದ ಮೇಲೆ ಪಾಸಿಟಿವ್‌ ಪ್ರಕರಣಗಳ ಪ್ರಮಾಣ ; ಅದರ ಹೆಚ್ಚಾಗುವಿಕೆ; ಮತ್ತು ಹೊಸ ಕ್ಲಸ್ಟರ್ಗಳಲ್ಲಿ ಕಂಟೈನ್‌ ಮೆಂಟ್‌ ವಲಯವನ್ನು ನಿಗದಿಪಡಿಸುವುದು.

ಅಲ್ಲದೆ, ಈ ಕೆಳಗಿನವುಗಳಿಗೆ ಗಮನ ನೀಡಬೇಕು:

ಅಸ್ತಿತ್ವದಲ್ಲಿರುವ ಐಸಿಎಂಆರ್ ಮತ್ತು ಎಂಒಎಚ್‌ಎ್ಡಬ್ಲು ಮಾರ್ಗಸೂಚಿಗಳ ಪ್ರಕಾರ ಪರೀಕ್ಷೆಗಳನ್ನು ನಡೆಸುವುದು

ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಮನೆ-ಮನೆಗೆ ತೆರಳಿ ಪ್ರಕರಣ ಖಚಿತಪಡಿಸಿಕೊಳ್ಳಿ

ಎಲ್ಲಾ ಎಸ್‌ಎಆರ್‌ಐ/ಐಎಲ್‌ಐ ಮತ್ತು ದುರ್ಬಲ/ಸಹ-ಅಸ್ವಸ್ಥ ಜನರನ್ನು ಪರೀಕ್ಷಿಸಿ

ಪ್ರತಿದಿನ ನಡೆಸಲಾಗುವ ಒಟ್ಟು ಪರೀಕ್ಷೆಗಳಲ್ಲಿ ಆರ್‌ಟಿ-ಪಿಸಿಆರ್‌: ಆರ್‌ಎಟಿಯ ಸರಿಯಾದ (ಕನಿಷ್ಠ ೬೦:೪೦) ಅನುಪಾತವನ್ನು ಖಚಿತಪಡಿಸಿಕೊಳ್ಳಿ. ಇದನ್ನು 70:30 ಅನುಪಾತದವರೆಗೆ ಹೆಚ್ಚಿಸಬಹುದು.

ಎಲ್ಲಾ ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಸಂಪರ್ಕ ಪತ್ತೆ ಮತ್ತು ಅವರ ಸಮಯೋಚಿತ ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಿ, ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ವರದಿ ಮಾಡುವ ಕ್ಲಸ್ಟರ್ಗಳಲ್ಲಿ

ಅಂತಾರಾಷ್ಟ್ರೀಯ ಪ್ರಯಾಣಿಕರು ಏರ್ ಸುವಿಧಾ ಪೋರ್ಟಲ್‌ಗೆ ಬಳಸುವಂತೆ ನಿಗಾ ಇಡುವುದು

3. ವೈದ್ಯಕೀಯ ನಿರ್ವಹಣೆಯಲ್ಲಿ, ಒಮಿಕ್ರಾನ್‌ ನಿರ್ವಹಣೆಗೆ ಹಿಂದಿನ ವೈದ್ಯಕೀಯ ನಿರ್ವಹಣಾ ನಿಯಮಗಳನ್ನೆ ಅನುಸರಿಸುವಂತೆ  ರಾಜ್ಯಗಳಿಗೆ ಸಲಹೆ ನೀಡಲಾಯಿತು:

ಹಾಸಿಗೆಯ ಪ್ರಮಾಣವನ್ನು ಹೆಚ್ಚಿಸಿ, ಆಂಬ್ಯುಲೆನ್ಸ್‌ಗಳಂತಹ ಲಾಜಿಸ್ಟಿಕ್‌ಗಳನ್ನು ಖಾತರಿಪಡಿಸಿಕೊಳ್ಳಿ ಮತ್ತು ರೋಗಿಗಳ  ಚಿಕಿತ್ಸೆ ವಿಳಂಬವಾಗದಂತೆ ಕಾರ್ಯವಿಧಾನವನ್ನು ಜಾರಿಗೊಳಿಸಿ.

ಆಮ್ಲಜನಕ ಉಪಕರಣಗಳ ಕಾರ್ಯಾಚರಣೆಯ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಿ

ಕನಿಷ್ಠ 30 ದಿನಗಳ ಅಗತ್ಯ ಔಷಧಿಗಳ ಶೇಖರಣೆಯನ್ನು ಖಾತ್ರಿಪಡಿಸಿಕೊಳ್ಳಿ. ಯಾವುದೇ ತುರ್ತು ಪರಿಸ್ಥಿತಿಗೆ ಪ್ರತಿಕ್ರಿಯಿಸಲು ಅಲ್ಲೇ ಇರುವ/ಹತ್ತಿರದಲ್ಲಿನ ಆರೋಗ್ಯ ವ್ಯವಸ್ಥೆಗಳ ಅಗತ್ಯ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ತುರ್ತು ಕೋವಿಡ್ ಪ್ರತಿಕ್ರಿಯೆ ಪ್ಯಾಕೇಜ್ (ಇಸಿಆರ್‌ಪಿ -2) ಅಡಿಯಲ್ಲಿ ಮಂಜೂರಾದ ಹಣವನ್ನು ಬಳಸಿಕೊಳ್ಳಿ. ರಾಜ್ಯ ಆರೋಗ್ಯ ಕಾರ್ಯದರ್ಶಿಗಳು ಹಣಕಾಸಿನ ವೆಚ್ಚದ ಸ್ಥಿತಿ ಮತ್ತು ಪ್ರಗತಿಯನ್ನು  ಪ್ರತಿದಿನವೂ ಮೇಲ್ವಿಚಾರಣೆ ಮಾಡುವುದು.

ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಪ್ರಕಾರ ಹೋಮ್ ಕ್ವಾರಂಟೈನ್ / ಪ್ರತ್ಯೇಕತೆಯ ಕಟ್ಟುನಿಟ್ಟಾದ ಜಾರಿಯನ್ನು ಖಚಿತಪಡಿಸಿಕೊಳ್ಳಿ.

ಅನೇಕ ರಾಜ್ಯಗಳು ಕೋವಿಡ್ ಸೌಲಭ್ಯಗಳನ್ನು ರದ್ದುಗೊಳಿಸಿರುವುದರಿಂದ, ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಲ್ಲಿ, ವೈದ್ಯರು ಮತ್ತು ಆಂಬ್ಯುಲೆನ್ಸ್‌ಗಳನ್ನು ಸಾಕಷ್ಟು ಲಭ್ಯತೆಯೊಂದಿಗೆ ಕಾರ್ಯಗತಗೊಳಿಸಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವ ಅಗತ್ಯವಿದೆ.

4. ಕೋವಿಡ್ ಸುರಕ್ಷಿತ ನಡವಳಿಕೆಯ ಮುಂದೆ, ರಾಜ್ಯಗಳಿಗೆ ಸಲಹೆ ನೀಡಲಾಗಿದೆ:

ಯಾವುದೇ ತಪ್ಪು ಮಾಹಿತಿ ಅಥವಾ ಗಾಬರಿಯಾಗದಂತೆ ಮುಂಚಿತವಾಗಿ ತೊಡಗಿಸಿಕೊಳ್ಳುವಿಕೆ ಮತ್ತು ಮಾಹಿತಿಯನ್ನು ಖಚಿತಪಡಿಸಿಕೊಳ್ಳಿ.

ಆಸ್ಪತ್ರೆ ಮತ್ತು ಪರೀಕ್ಷೆಯ ಮೂಲಸೌಕರ್ಯ ಲಭ್ಯತೆಯ ಕುರಿತು ಪಾರದರ್ಶಕವಾಗಿ ಸಂವಹನ ನಡೆಸಿ,

ನಿಯಮಿತವಾಗಿ ಪತ್ರಿಕಾಗೋಷ್ಠಿಗಳನ್ನು ನಡೆಸುವುದು.

ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸಿ ಮತ್ತು ಕೋವಿಡ್ ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ.

5. ಲಸಿಕೀಕರಣದ ಬಗ್ಗೆ, ರಾಜ್ಯಗಳಿಗೆ ಸಲಹೆ ನೀಡಲಾಗಿದೆ:

ಮೊದಲ ಮತ್ತು ಎರಡನೇ ಡೋಸ್ ಅರ್ಹ ಲಾನುಭವಿಗಳ 100% ವ್ಯಾಪ್ತಿಯನ್ನು ವೇಗವರ್ಧಿತ ರೀತಿಯಲ್ಲಿ ಖಚಿತಪಡಿಸಿಕೊಳ್ಳಿ.

ಮೊದಲ ಮತ್ತು ಎರಡನೇ ಡೋಸ್ ವ್ಯಾಪ್ತಿಯು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇರುವ ಜಿಲ್ಲೆಗಳಿಗೆ ವಿಶೇಷ ಗಮನವನ್ನು ನೀಡಿ.

ವಿಶೇಷವಾಗಿ ಲಸಿಕೀಕರಣದ ವ್ಯಾಪ್ತಿಯು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇರುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮನೆ-ಮನೆಗೆ ವ್ಯಾಕ್ಸಿನೇಷನ್ ಅಭಿಯಾನವನ್ನು ಬಲಪಡಿಸಿ.

ಘಾತೀಯವಾಗಿ ವ್ಯಾಕ್ಸಿನೇಷನ್ ಅನ್ನು ಹೆಚ್ಚಿಸಲು, ವಿಶೇಷವಾಗಿ ಕಡಿಮೆ ವ್ಯಾಪ್ತಿಯ ಜಿಲ್ಲೆಗಳಲ್ಲಿ ದುರ್ಬಲ ಜನಸಂಖ್ಯೆಯನ್ನು ರಕ್ಷಿಸಲು ರಾಜ್ಯಗಳು ಸದ್ಯದಲ್ಲಿಯೇ ಚುನಾವಣೆಗೆ ಹೋಗುತ್ತವೆ.

ಕಡಿಮೆ ವ್ಯಾಕ್ಸಿನೇಷನ್ ಕವರೇಜ್ ಹೊಂದಿರುವ ಪಾಕೆಟ್‌ಗಳು ಮತ್ತು ಕಡಿಮೆ ಕೋವಿಡ್ ಮಾನ್ಯತೆ ಹೊಂದಿರುವ ಪಾಕೆಟ್‌ಗಳು ಹೊಸ ರೂಪಾಂತರಕ್ಕೆ ಹೆಚ್ಚು ದುರ್ಬಲವಾಗಬಹುದು. ಈ ಪಾಕೆಟ್‌ಗಳಲ್ಲಿ ವ್ಯಾಕ್ಸಿನೇಷನ್ ಅನ್ನು ಹೆಚ್ಚಿಸಲು ರಾಜ್ಯಗಳು ವಿಶೇಷ ಗಮನವನ್ನು ನೀಡುತ್ತವೆ.

ಹೆಚ್ಚುವರಿ ಕಾರ್ಯದರ್ಶಿ (ಆರೋಗ್ಯ) ಶ್ರೀಮತಿ ಆರ್ತಿ ಅಹುಜಾ, ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕ(ಎನ್‌ಎಚ್‌ಎಂ) ಶ್ರೀ ವಿಕಾಶ್ ಶೀಲ್, ಜಂಟಿ ಕಾರ್ಯದರ್ಶಿ (ಆರೋಗ್ಯ) ಡಾ. ಮಂದೀಪ್ ಭಂಡಾರಿ, ನವದೆಹಲಿಯ ಏಮ್ಸ್‌ನ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ, ಎನ್‌ಸಿಡಿಸಿ ನಿರ್ದೇಶಕ ಡಾ, ಸುಜೀತ್ ಸಿಂಗ್ ಮತ್ತು ಎಡಿಜಿ ಐಸಿಎಂಆರ್‌ನ ಡಾ. ಸಮಿರಾನ್ ಪಂಡಾ ಸಭೆಯಲ್ಲಿ ಉಪಸ್ಥಿತರಿದ್ದರು.

****


(Release ID: 1784721)