ಆಯುಷ್
azadi ka amrit mahotsav

ಮಕರ ಸಂಕ್ರಾಂತಿಯಂದು ಆಯುಷ್‌ ಸಚಿವಾಲಯ ನಡೆಸುವ ಚೊಚ್ಚಲ ಜಾಗತಿಕ ಸೂರ್ಯ ನಮಸ್ಕಾರ ಪ್ರದರ್ಶನದಲ್ಲಿ ಭಾಗಿಯಾಗಲಿರುವ ಒಂದು ಕೋಟಿ ಜನರು

प्रविष्टि तिथि: 13 JAN 2022 6:26PM by PIB Bengaluru

ಮಕರ ಸಂಕ್ರಾಂತಿಯ ಶುಭ ದಿನದಂದು ಮತ್ತು `ಆಜಾದಿ ಕಾ ಅಮೃತ್ ಮಹೋತ್ಸವ’ ಆಚರಣೆಯ ಸಂದರ್ಭದಲ್ಲಿ, ಆಯುಷ್ ಸಚಿವಾಲಯವು ಚೊಚ್ಚಲ ಜಾಗತಿಕ ಸೂರ್ಯ ನಮಸ್ಕಾರ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದರಲ್ಲಿ ಸುಮಾರು 10 ದಶಲಕ್ಷ (೧ ಕೋಟಿ) ಜನರು ಭಾಗವಹಿಸಲಿದ್ದಾರೆ. ಸಂದರ್ಭದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಲಿರುವ ಆಯುಷ್ ಸಚಿವ ಶ್ರೀ ಸರ್ಬಾನಂದ ಸೋನೋವಾಲ್ ಅವರು ಸೂರ್ಯ ನಮಸ್ಕಾರದ ಬಗ್ಗೆ ತಿಳಿಸಿಕೊಡಲಿದ್ದಾರೆ. ಬಳಿಕ ಆಯುಷ್ ಖಾತೆ ಸಹಾಯಕ ಸಚಿವರಾದ ಡಾ. ಮುಂಜ್‌ಪಾರಾ ಮಹೇಂದ್ರಭಾಯಿ ಕಲುಭಾಯ್ ಅವರು ಕಾರ್ಯಕ್ರಮದ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ.

ಇತ್ತೀಚೆಗೆ ಕೊರೊನಾ ಪ್ರಕರಣಗಳ ಏರಿಕೆಯ ಹಿನ್ನೆಲೆಯಲ್ಲಿ,  ಮನೆಯಿಂದಲೇ 'ಸೂರ್ಯ ನಮಸ್ಕಾರ' ಮಾಡಲು ಮತ್ತು ನೋಂದಣಿಗೆ ಬಳಸುವ ಲಿಂಕ್‌ ಮೂಲಕ ಅದರ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಆಯುಷ್ ಸಚಿವಾಲಯವು ಸಲಹೆ ನೀಡಿದೆ.

ಬೆಳಿಗ್ಗೆ 7 ಗಂಟೆಯಿಂದ 7.30ರವರೆಗೆ `ಡಿಡಿ ನ್ಯಾಷನಲ್’ ವಾಹಿನಿಯಲ್ಲಿ 13 ಸುತ್ತುಗಳ ಸೂರ್ಯ ನಮಸ್ಕಾರದ ನೇರ ಪ್ರಸಾರ ಮಾಡಲಾಗುವುದು. ಕಾರ್ಯಕ್ರಮದ ಸಮಯದಲ್ಲಿ, ಪ್ರಮುಖ ಯೋಗ ಗುರುಗಳು ಮತ್ತು ಜಾಗತಿಕ ಸಂಸ್ಥೆಗಳ ಗುರುಗಳು ಸಹ ತಮ್ಮ ಸಂದೇಶಗಳನ್ನು ಹಂಚಿಕೊಳ್ಳಲಿದ್ದಾರೆ. ಆಯುಷ್ ಸಚಿವಾಲಯದ ಕಾರ್ಯದರ್ಶಿ ಶ್ರೀ ವೈದ್ಯ ರಾಜೇಶ್ ಕೊಟೆಚಾ ಮತ್ತು ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ (ಎಂಡಿಎನ್ಐವೈ) ನಿರ್ದೇಶಕ ಡಾ. ಈಶ್ವರ್‌ ವಿ. ಬಸವರಡ್ಡಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

***


(रिलीज़ आईडी: 1789789) आगंतुक पटल : 261
इस विज्ञप्ति को इन भाषाओं में पढ़ें: English , Urdu , हिन्दी , Tamil , Telugu