ಜಲ ಶಕ್ತಿ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಹರ್ ಘರ್ ಜಲ್’(ಪ್ರತಿ ಮನೆಗೂ ಕುಡಿಯುವ ನೀರು) ಯೋಜನೆಯಡಿ ನೀರು ಮತ್ತು ನೈರ್ಮಲ್ಯದ ಮೇಲೆ ಕೇಂದ್ರ ಬಜೆಟ್ 2022 ರ ಧನಾತ್ಮಕ ಪರಿಣಾಮದ ಕುರಿತು ವೆಬಿನಾರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ


ಸಮಾಲೋಚನಾ ಸಭೆ: ಗ್ರಾಮೀಣ ನೀರು ಸರಬರಾಜು ರಚನೆಯನ್ನು ಬಲಪಡಿಸುವುದು ಮತ್ತು 2024ರ ವೇಳೆಗೆ ಪ್ರತಿ ಮನೆಯಲ್ಲೂ ನಲ್ಲಿ ನೀರಿನ ಸಂಪರ್ಕವನ್ನು ಖಚಿತಪಡಿಸುವುದು

Posted On: 22 FEB 2022 7:39PM by PIB Bengaluru

ಆತ್ಮ ನಿರ್ಭರ ಭಾರತವನ್ನು ಸಾಧಿಸುವ ಭಾಗವಾಗಿ ಪ್ರತಿ ಗ್ರಾಮೀಣ ಮನೆಯಲ್ಲೂ ನಲ್ಲಿಯ ಮೂಲಕ 55 lpcd ಶುದ್ಧ ಕುಡಿಯುವ ನೀರನ್ನು ಒದಗಿಸುವುದು, ನೀರು ಮತ್ತು ನೈರ್ಮಲ್ಯದ ಮೇಲೆ ಕೇಂದ್ರೀಕರಿಸುವ ಬಜೆಟ್ 2022 ಅನುಷ್ಠಾನದ ಕುರಿತು ನಾಳೆ ವೆಬಿನಾರನ್ನು ಆಯೋಜಿಸಲಾಗುತ್ತದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 23 ಫೆಬ್ರವರಿ 2022 ರಂದು ಬೆಳಿಗ್ಗೆ 10.00 ಗಂಟೆಗೆ ವೆಬಿನಾರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ರಾಜ್ಯ ಸಚಿವ   ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ರಾಜ್ಯ ಸಚಿವ ಶ್ರೀ ಬಿಶ್ವೇಶ್ವರ ತುಡು ಜೊತೆಗೆ ವಾಶ್, ಯುಎನ್ ಏಜೆನ್ಸಿ ಮತ್ತು ಕ್ಷೇತ್ರದ  ತಾಂತ್ರಿಕ ತಜ್ಞರ ಪ್ರಮುಖ ಪಾಲುದಾರರು ಸಂದರ್ಭದಲ್ಲಿ ಮಾತನಾಡುತ್ತಾರೆ. ವೆಬಿನಾರ್ ಸರಣಿಯು ಕಾರ್ಯಕ್ರಮದ ಅಡಿಯಲ್ಲಿ ಸಂಯೋಜಿತವಾಗಿರುವ ವಿವಿಧ ಮಧ್ಯಸ್ಥಗಾರರೊಂದಿಗೆ ಚರ್ಚೆ ಮತ್ತು ಸಂವಾದದ ಹೊಸ ಪದ್ದತಿಯ ಒಂದು ಭಾಗವಾಗಿದೆ.

ಬೆಳಗ್ಗೆ 11.00 ಗಂಟೆಗೆ, ವಲಯದ ಗಣ್ಯರು, ಖಾಸಗಿ ವಲಯದ ಮತ್ತು ತಳಮಟ್ಟದ  ಪ್ರತಿನಿಧಿಗಳು  ಬಜೆಟ್ ಮತ್ತು ಗ್ರಾಮೀಣ ಮನೆಗಳಲ್ಲಿ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಮೂಲಕ ರಚಿಸಲಾದ ಪರಿಣಾಮಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಸಮಾಲೋಚನಾ  ಸಭೆ ನಡೆಯಲಿದೆ.

ತಜ್ಞರ ಜೊತೆಗೆ, ವಿವಿಧ ಮಧ್ಯಸ್ಥಗಾರರಿಗೆ ತರಬೇತಿ ನೀಡಲು ಮಿಷನ್‌ನಿಂದ ಸೇರಿಸಿಕೊಂಡ ಪ್ರಮುಖ ಸಂಪನ್ಮೂಲ ಕೇಂದ್ರಗಳ (ಕೆಆರ್‌ಸಿ) ಜನರು ಜಲ ಜೀವನ್ ಮಿಷನ್ ಅನುಷ್ಠಾನವನ್ನು ಸುಧಾರಿಸಲು ತಮ್ಮ ಸಲಹೆಗಳನ್ನು ನೀಡುತ್ತಾರೆ. ಅವರು ತಮ್ಮ ಕ್ಷೇತ್ರದ ಅನುಭವದ ಬಗ್ಗೆ ಮಾತನಾಡುತ್ತಾರೆ, ಹಿರಿಯ ಅಧಿಕಾರಿಗಳು, ಮಧ್ಯಮ ಮಟ್ಟದ ಕಾರ್ಯಕ್ರಮ ಅನುಷ್ಠಾನಕಾರರು ಮತ್ತು ನೆಲಮಟ್ಟದ ಉದ್ಯೋಗಿಗಳಿಗೆ ವಿವಿಧ ಹಂತಗಳಲ್ಲಿ ತರಬೇತಿ ನೀಡಲಾದ ಬಗ್ಗೆ ಕೂಡ ಮಾತನಾಡುತ್ತಾರೆ.

ರಾಜ್ಯಗಳು ನಾಗರಿಕ ಸಮಾಜ ಸಂಸ್ಥೆಗಳನ್ನು ಅನುಷ್ಠಾನಗೊಳಿಸುವ ಬೆಂಬಲ ಏಜೆನ್ಸಿಗಳಾಗಿ ಪಂಚಾಯತ್‌ಗಳನ್ನು ಸಮುದಾಯ ಸಹಭಾಗಿತ್ವ, ಟ್ರಾನ್ಸೆಕ್ಟ್ ವಾಕ್ ಅನ್ನು ಸಂಘಟಿಸಲು, ಪಾನಿ (ಜಲ) ಸಮಿತಿಯನ್ನು ರಚಿಸಲು ಮತ್ತು ಗ್ರಾಮ ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸಲು ತೊಡಗಿಸಿಕೊಂಡಿವೆ. ಐಎಸ್‌ಎ ಸದಸ್ಯರು ವೆಬಿನಾರಿನಲ್ಲಿ ತಮ್ಮ ಕ್ಷೇತ್ರದಲ್ಲಿ ನಡೆಸಿದ ಕೆಲಸದ ಬಗ್ಗೆ  ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ.

ʼಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಔರ್ ಸಬ್ಕಾ ಪ್ರಯಾಸ್ಮಾದರಿಯನ್ನು ಅನುಸರಿಸಿ, 100 ಜಿಲ್ಲೆಗಳು, 1,144 ಬ್ಲಾಕ್‌ಗಳು, 66,647 ಗ್ರಾಮ ಪಂಚಾಯಿತಿಗಳು ಮತ್ತು 1,37,642 ಗ್ರಾಮಗಳುಹರ್ ಘರ್ ಜಲ್-ಪ್ರತಿ ಮನೆಗೂ ಕುಡಿಯುವ ನೀರು ದೊರೆತಿದೆ. 30 ತಿಂಗಳ ಅಲ್ಪಾವಧಿಯಲ್ಲಿ ದೇಶದ 9 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ. ಮೂರು ರಾಜ್ಯಗಳು - ಗೋವಾ, ತೆಲಂಗಾಣ ಮತ್ತು ಹರಿಯಾಣ ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳುಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು, ದಾದರ್‌ ಮತ್ತು ನಗರ್  ಹವೇಲಿ‌ದಮನ್ ಮತ್ತು ದಿಯು ಮತ್ತು ಪುದುಚೇರಿ ಪ್ರದೇಶಗಳು ಜನರಿಗೆ 100 ಪ್ರತಿಶತ ನೀರನ್ನು ಒದಗಿಸಿವೆ. ಇತರ ರಾಜ್ಯಗಳು ಕೂಡ ನಿಟ್ಟಿನಲ್ಲಿ ಕ್ಷಿಪ್ರ ಪ್ರಯತ್ನಗಳನ್ನು ನಡೆಸುತ್ತಿದ್ದು, ಶೀಘ್ರದಲ್ಲಿಯೇ ಶೇ 100 ಗುರಿ ತಲುಪಲಿವೆ. ಪೈಕಿ ಪಂಜಾಬ್ ಶೇ.99, ಹಿಮಾಚಲ ಪ್ರದೇಶ ಶೇ.93, ಗುಜರಾತ್ ಶೇ.92 ಮತ್ತು ಬಿಹಾರ ಶೇ .90 ವರ್ಷದಲ್ಲಿಹರ್ ಘರ್ ಜಲ್’(ಪ್ರತಿ ಮನೆಗೂ ಕುಡಿಯುವ ನೀರು) ಆಗಲಿವೆ.

***


(Release ID: 1800576) Visitor Counter : 185