ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಪವರ್ ಸಿಸ್ಟಮ್ ಆಪರೇಷನ್ ಕಾರ್ಪೊರೇಷನ್ ಲಿಮಿಟೆಡ್ ಈಗ ಗ್ರಿಡ್ ಕಂಟ್ರೋಲರ್ ಆಫ್ ಇಂಡಿಯಾ ಲಿಮಿಟೆಡ್ ಆಗಿದೆ

Posted On: 14 NOV 2022 8:21PM by PIB Bengaluru

ಭಾರತದ ರಾಷ್ಟ್ರೀಯ ಗ್ರಿಡ್ ಆಪರೇಟರ್ "ಪವರ್ ಸಿಸ್ಟಮ್ ಆಪರೇಷನ್ ಕಾರ್ಪೊರೇಷನ್ ಲಿಮಿಟೆಡ್ (POSOCO)" ಇಂದು ತನ್ನ ಹೆಸರನ್ನು "ಗ್ರಿಡ್ ಕಂಟ್ರೋಲರ್ ಆಫ್ ಇಂಡಿಯಾ ಲಿಮಿಟೆಡ್" ಎಂದು ಬದಲಾಗಿಸಿದೆ ಎಂದು ಘೋಷಿಸಿದೆ.  ಭಾರತೀಯ ವಿದ್ಯುತ್ ಗ್ರಿಡ್‌ನ ಸಮಗ್ರತೆ, ವಿಶ್ವಾಸಾರ್ಹತೆ, ಆರ್ಥಿಕತೆ, ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರ ಕಾರ್ಯಾಚರಣೆಯನ್ನು ಖಾತ್ರಿಪಡಿಸುವಲ್ಲಿ ಗ್ರಿಡ್ ಆಪರೇಟರ್‌ಗಳ ನಿರ್ಣಾಯಕ ಪಾತ್ರವನ್ನು ಪ್ರತಿಬಿಂಬಿಸಲು ಹೆಸರಿನ ಬದಲಾವಣೆಯನ್ನು ಮಾಡಲಾಗಿದೆ.

"ಗ್ರಿಡ್ ಕಂಟ್ರೋಲರ್ ಆಫ್ ಇಂಡಿಯಾ ಲಿಮಿಟೆಡ್" ಹೆಸರು ಬದಲಾವಣೆಯು ಸ್ವಾಗತಾರ್ಹ ಹೆಜ್ಜೆಯಾಗಿದೆ ಏಕೆಂದರೆ ಇದು ಭಾರತದ ವಿದ್ಯುತ್ಚಕ್ತಿ ವ್ಯವಸ್ಥೆಯ ಹೃದಯಭಾಗದಲ್ಲಿ ಅನನ್ಯ ಸ್ಥಾನವನ್ನು ಹೊಂದಿದೆ, ಜನರು ಬಳಸುವ ವಿದ್ಯುತ್ಚಕ್ತಿಯನ್ನು ಸಂಪರ್ಕಿಸುತ್ತದೆ.  ಇದು ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ದೇಶದಲ್ಲಿನ ಗ್ರಿಡ್ ಮ್ಯಾನೇಜರ್‌ಗಳು ನಿರ್ವಹಿಸುವ ಕಾರ್ಯಗಳನ್ನು ವಿವರಿಸುತ್ತದೆ, ”ಎಂದು ಶ್ರೀ.  ಎಸ್. ಆರ್. ನರಸಿಂಹನ್, ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಗ್ರಿಡ್ ಕಂಟ್ರೋಲರ್ ಆಫ್ ಇಂಡಿಯಾ ಲಿಮಿಟೆಡ್, ಹೇಳಿದರು ಹಾಗೂ ಈ ಹೆಸರಿನ ಬದಲಾವಣೆಯು “ನಾವು ಯಾರು ಮತ್ತು ನವೀಕರಿಸಬಹುದಾದ ವಿದ್ಯುತ್ಚಕ್ತಿಯ ಪರಿವರ್ತನೆಯಲ್ಲಿ, ನಾವು ವಹಿಸುವ ಪಾತ್ರವನ್ನು ಪ್ರತಿಬಿಂಬಿಸುತ್ತದೆ". ನಾವು ನಮ್ಮ ದೃಷ್ಟಿಕೋನದಿಂದ ಮುಂದುವರಿಯುತ್ತೇವೆ ಎಂದರೆ "ವಿಶ್ವಾಸಾರ್ಹ ಮತ್ತು ಸ್ಥಿತಿಸ್ಥಾಪಕ ಶಕ್ತಿ ವ್ಯವಸ್ಥೆಗಳಿಗೆ ಉತ್ಕೃಷ್ಟತೆಯ ಜಾಗತಿಕ ಸಂಸ್ಥೆಯಾಗಲು, ಸಮರ್ಥ ವಿದ್ಯುತ್ ಮಾರುಕಟ್ಟೆಗಳನ್ನು ಪೋಷಿಸಲು, ಆರ್ಥಿಕತೆ ಮತ್ತು ಸುಸ್ಥಿರತೆಯನ್ನು ಉತ್ತೇಜಿಸಲು" ನವೀಕೃತ ಚೈತನ್ಯದೊಂದಿಗೆ ಅವರು ಹೇಳಿದರು.

"ಗ್ರಿಡ್ ಕಂಟ್ರೋಲರ್ ಆಫ್ ಇಂಡಿಯಾ ಲಿಮಿಟೆಡ್ (ಗ್ರಿಡ್-ಇಂಡಿಯಾ)"   ರಾಷ್ಟ್ರೀಯ ಲೋಡ್ ಡೆಸ್ಪಾಚ್ ಸೆಂಟರ್ ಮತ್ತು ಐದು ಪ್ರಾದೇಶಿಕ ಲೋಡ್ ಡೆಸ್ಪಾಚ್ ಸೆಂಟರ್‌ಗಳೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಗ್ರೀನ್ ಎನರ್ಜಿ ಓಪನ್ ಅಕ್ಸೆಸ್ ಪೋರ್ಟಲ್, ರಿನ್ಯೂವಬಲ್ ಎನರ್ಜಿ ಸರ್ಟಿಫಿಕೇಟ್ ಮೆಕ್ಯಾನಿಸಂ, ಟ್ರಾನ್ಸ್‌ಮಿಷನ್ ಪ್ರೈಸಿಂಗ್, ಟ್ರಾನ್ಸ್‌ಮಿಷನ್‌ನಲ್ಲಿ ಅಲ್ಪಾವಧಿಯ ಮುಕ್ತ ಪ್ರವೇಶ, ಡಿವಿಯೇಷನ್ ಸೆಟ್ಲ್‌ಮೆಂಟ್ ಮೆಕ್ಯಾನಿಸಮ್‌ನ ಅನುಷ್ಠಾನ, ಪವರ್ ಸಿಸ್ಟಮ್ ಡೆವಲಪ್ಮೆಂಟ್ ಫಂಡ್ , ಇತ್ಯಾದಿಗಳು ವಿದ್ಯುತ್ ವಲಯದಲ್ಲಿನ ಪ್ರಮುಖ ಸುಧಾರಣೆಗಳಿಗೆ ಗ್ರಿಡ್-ಇಂಡಿಯಾವನ್ನು ನೋಡಲ್ ಏಜೆನ್ಸಿಯಾಗಿ ಗೊತ್ತುಪಡಿಸಲಾಗಿದೆ.

*****



(Release ID: 1875944) Visitor Counter : 83