ಇಂಧನ ಸಚಿವಾಲಯ

ಕರ್ನಾಟಕದ ʻಪಾವಗಡ ಸೋಲಾರ್ ಪಾರ್ಕ್‌ʼಗೆ ಭೇಟಿ ನೀಡಿದ ʻಜಿ 20ʼ ನಿಯೋಗ

Posted On: 07 FEB 2023 8:58PM by PIB Bengaluru

ಫೆಬ್ರವರಿ 5ರಿಂದ 7ರವರೆಗೆ ಬೆಂಗಳೂರಿನಲ್ಲಿ ನಡೆದ ಮೊದಲ ʻಇಂಧನ ಪರಿವರ್ತನೆ ಕಾರ್ಯಪಡೆʼ ಸಭೆಯಲ್ಲಿ ಭಾಗವಹಿಸಿದ್ದ ʻಜಿ 20ʼ ರಾಷ್ಟ್ರಗಳ ಪ್ರತಿನಿಧಿಗಳು ಇಂದು ವಿಶ್ವದ ಅತಿದೊಡ್ಡ ಸೋಲಾರ್‌ ಪಾರ್ಕ್‌ಗಳಲ್ಲಿ ಒಂದಾದ ʻಪಾವಗಡ ಸೋಲಾರ್ ಪಾರ್ಕ್ʼಗೆ ಭೇಟಿ ನೀಡಿದರು. "ಸೋಲಾರ್‌ ಪಾರ್ಕ್‌ಗಳು ಮತ್ತು ಅತಿದೊಡ್ಡ ಸೌರ ವಿದ್ಯುತ್ ಯೋಜನೆಗಳ ಅಭಿವೃದ್ಧಿ"ಗಾಗಿ 2014ರಲ್ಲಿ ಪರಿಚಯಿಸಲಾದ ಭಾರತ ಸರಕಾರ ಯೋಜನೆಯಡಿ 2050 ಮೆಗಾವ್ಯಾಟ್ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಡಿಸೆಂಬರ್ 2019ರಲ್ಲಿ ಕಾರ್ಯಾರಂಭ ಮಾಡಿದ ಈ ಪಾರ್ಕ್ ವರ್ಷಕ್ಕೆ ಸುಮಾರು 4.5 ಶತಕೋಟಿ ಯೂನಿಟ್ ಸೌರ ವಿದ್ಯುತ್‌ ಉತ್ಪಾದಿಸುತ್ತದೆ ಮತ್ತು ಆ ಮೂಲಕ ವಾರ್ಷಿಕವಾಗಿ 3.6 ದಶಲಕ್ಷ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಸೌರ ಪಾರ್ಕ್‌ ಸರಿಸುಮಾರು 12,937 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ.  
  
ʻಸೋಲಾರ್ ಪಾರ್ಕ್ʼನಲ್ಲಿ ಪ್ಲಗ್ ಅಂಡ್ ಪ್ಲೇ ಮಾದರಿಯ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ʻಕರ್ನಾಟಕ ಸೌರ ವಿದ್ಯುತ್ ಅಭಿವೃದ್ಧಿ ನಿಗಮ ನಿಯಮಿತʼ(ಕೆಎಸ್‌ಪಿಡಿಸಿಎಲ್) ಸೌರ ವಿದ್ಯುತ್ ಪಾರ್ಕ್‌ಗಾಗಿ ಸಮತೋಲನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ʻಕೆಎಸ್‌ಪಿಡಿಸಿಎಲ್ʼ, ʻಕರ್ನಾಟಕದ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತʼ (ಕೆಆರ್‌ಇಡಿಎಲ್‌) ಮತ್ತು ʻಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ʼ (ಎಸ್ಇಸಿಐ) ನಡುವಿನ ಜಂಟಿ ಉದ್ಯಮವಾಗಿದೆ.

ಈ ಪ್ರದೇಶವನ್ನು ಕರ್ನಾಟಕ ಸರಕಾರವು ಈ  ಹಿಂದೆ ಹಲವಾರು ಬಾರಿ ಬರಪೀಡಿತ ಎಂದು ಘೋಷಿಸಿದ್ದು, ಸೌರ ಯೋಜನೆಯಿಂದಾಗಿ ಭೂಮಿ ಗುತ್ತಿಗೆ-ಬಾಡಿಗೆಯ ರೂಪದಲ್ಲಿ ಈ ಭಾಗದ ಜನರಿಗೆ ನಿರಂತರ ಆದಾಯದ ದೊರೆಯುತ್ತಿದೆ.
 
ಇಡೀ ಸೋಲಾರ್ ಪಾರ್ಕ್ ಅನ್ನು ತಲಾ 50 ಮೆಗಾವ್ಯಾಟ್‌ನಂತೆ 40 ಬ್ಲಾಕ್‌ಗಳಾಗಿ ವಿಂಗಡಿಸಲಾಗಿದೆ. ದರ ಆಧಾರಿತ ಸ್ಪರ್ಧಾತ್ಮಕ ಬಿಡ್ಡಿಂಗ್ ಅಡಿಯಲ್ಲಿ ʻಸೌರ ಪ್ರಾಜೆಕ್ಟ್ ಡೆವಲಪರ್‌ʼಗಳ ಆಯ್ಕೆಗಾಗಿ ʻಎನ್‌ಟಿಪಿಸಿʼ, ʻಎಸ್‌ಇಸಿಐ ಮತ್ತು ʻಕೆಆರ್‌ಇಡಿಎಲ್ʼಗೆ ಕ್ರಮವಾಗಿ 12 ಬ್ಲಾಕ್‌ಗಳು (ಒಟ್ಟು 600 ಮೆಗಾವ್ಯಾಟ್), 4 ಬ್ಲಾಕ್‌ಗಳು (ಒಟ್ಟು 200 ಮೆಗಾವ್ಯಾಟ್) ಮತ್ತು 24 ಬ್ಲಾಕ್‌ಗಳನ್ನು (ಒಟ್ಟು 1200 ಮೆಗಾವ್ಯಾಟ್) ಹಂಚಿಕೆ ಮಾಡಲಾಗಿದೆ. ಈ ಬ್ಲಾಕ್‌ಗಳಿಂದ ಸೌರ ವಿದ್ಯುತ್‌ ಅನ್ನು ಸ್ಥಳಾಂತರಿಸಲು, ‌ʻಕೆಎಸ್‌ಪಿಡಿಸಿಎಲ್ʼ 8 ಇಂಟರ್‌ನಲ್‌ ಪೂಲಿಂಗ್‌ ಸ್ಟೇಷನ್‌ಗಳನ್ನು ಅಭಿವೃದ್ಧಿಪಡಿಸಿದೆ. ʻಪವರ್‌ಗ್ರಿಡ್‌ʼನಿಂದʼ ಅಭಿವೃದ್ಧಿಪಡಿಸಲಾದ ಬಾಹ್ಯ ವಿದ್ಯುತ್ ಸ್ಥಳಾಂತರಿಸುವ ವ್ಯವಸ್ಥೆಗೆ ಸಂಪರ್ಕಿಸಲು ಪ್ರಸರಣ ಮಾರ್ಗಗಳನ್ನು ಸಂಯೋಜಿಸಲಾಗಿದೆ.
 
`ಜಿ 20’ ಸದಸ್ಯ ರಾಷ್ಟ್ರಗಳು, ಆಹ್ವಾನಿತ ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭೇಟಿಯಲ್ಲಿ ಪಾಲ್ಗೊಂಡರು. 
  
ಭಾರತದ ʻಜಿ 20ʼ ಅಧ್ಯಕ್ಷತೆಯ ಅಡಿಯಲ್ಲಿ 2023ರ ಫೆಬ್ರವರಿ 5ರಿಂದ 6 ರವರೆಗೆ ಬೆಂಗಳೂರಿನಲ್ಲಿ ನಡೆದ ಮೊದಲ ಇಂಧನ ಪರಿವರ್ತನೆ ಕಾರ್ಯಪಡೆ ಸಭೆಯಲ್ಲಿ ಭಾಗವಹಿಸಲು ಪ್ರತಿನಿಧಿಗಳು ಭಾರತಕ್ಕೆ ಆಗಮಿಸಿದ್ದರು.
 
ವೀರಭದ್ರ ಸ್ವಾಮಿ ದೇವಾಲಯ ಎಂದೂ ಕರೆಯಲ್ಪಡುವ16ನೇ ಶತಮಾನದ ಲೇಪಾಕ್ಷಿ ದೇವಾಲಯಕ್ಕೂ ಪ್ರತಿನಿಧಿಗಳು ಭೇಟಿ ನೀಡಿದರು. ಇದು ಪ್ರಾಚೀನ ಭಾರತೀಯ ವಾಸ್ತುಶಿಲ್ಪಕ್ಕೆ ಕನ್ನಡಿ ಹಿಡಿಯುವ ವಿಜಯನಗರ ಶೈಲಿಯ ವಿನ್ಯಾಸದ ದೇವಾಲಯವಾಗಿದೆ.
 
ʻಎಂಎನ್ಆರ್‌ಇಡಿಎಲ್‌ʼನ ಜಂಟಿ ಕಾರ್ಯದರ್ಶಿ ಹಾಗೂ ಐ.ಆರ್‌. ಶ್ರೀ ಡಿ.ಡಿ.ಜಗದಾಳೆ ಅವರು ಪ್ರತಿನಿಧಿಗಳನ್ನು ಸ್ವಾಗತಿಸಿದರು. ʻಎಂಎನ್ಆರ್‌ಇʼ ಲಹೆಗಾರ ಶ್ರೀ ದಿಲೀಪ್ ನಿಗಮ್ ಅವರು "ಭಾರತದಲ್ಲಿ ಸೋಲಾರ್‌ ಪಾರ್ಕ್‌ಗಳು" ಕುರಿತು ಪ್ರಾತ್ಯಕ್ಷಿಕೆ ನೀಡಿದರು. 

******



(Release ID: 1897152) Visitor Counter : 85