ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಪಾನಿನ ವಕಾಯಾಮಾ ಸಾರ್ವಜನಿಕ ಕಾರ್ಯಕ್ರಮದಲ್ಲಿ ನಡೆದ ಹಿಂಸಾತ್ಮಕ ಘಟನೆಯನ್ನು ಖಂಡಿಸಿದ ಪ್ರಧಾನಮಂತ್ರಿ

प्रविष्टि तिथि: 15 APR 2023 2:50PM by PIB Bengaluru

ಜಪಾನಿನ ಪ್ರಧಾನಮಂತ್ರಿ ಶ್ರೀ ಫ್ಯೂಮಿಯೊ ಕಿಶಿಡಾ ಅವರು ಉಪಸ್ಥಿತರಿದ್ದ ಜಪಾನಿನ ವಕಾಯಾಮಾ ಪ್ರದೇಶದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ನಡೆದ ಹಿಂಸಾತ್ಮಕ ಘಟನೆಯನ್ನು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಖಂಡಿಸಿದ್ದಾರೆ.

"ಜಪಾನಿನ ವಕಾಯಾಮಾದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ನನ್ನ ಸ್ನೇಹಿತ, ಪ್ರಧಾನಮಂತ್ರಿಯವರಾದ ಕಿಶಿಡಾ ಅವರು ಉಪಸ್ಥಿತರಿದ್ದ ಹಿಂಸಾತ್ಮಕ ಘಟನೆಯ ಬಗ್ಗೆ ನನ್ನ ಅರಿವಿಗೆ ಬಂದಿದೆ. ಪ್ರಧಾನಮಂತ್ರಿಯವರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಸಮಾಧಾನವಾಯಿತು. ಅವರ ನಿರಂತರ ಯೋಗಕ್ಷೇಮ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ. ಭಾರತವು ಈ ರೀತಿಯ ಎಲ್ಲಾ ಹಿಂಸಾಚಾರದ ಕೃತ್ಯಗಳನ್ನು ಖಂಡಿಸುತ್ತದೆ" ಎಂದು ಟ್ವೀಟ್ ನಲ್ಲಿ ಪ್ರಧಾನಿಯವರು ತಿಳಿಸಿದ್ದಾರೆ.

 

***


(रिलीज़ आईडी: 1922728) आगंतुक पटल : 162
इस विज्ञप्ति को इन भाषाओं में पढ़ें: Malayalam , English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil , Telugu