ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ಜೈಪುರದ ಜಂತರ್ ಮಂತರ್ ಗೆ ಭೇಟಿ ನೀಡಿದ ಪ್ರಧಾನಿ

ಪ್ರಕಟಣಾ ದಿನಾಂಕ: 25 JAN 2024 10:37PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ಜೈಪುರದ ಜಂತರ್ ಮಂತರ್ ಗೆ ಭೇಟಿ ನೀಡಿದರು.

ಪ್ರಧಾನಮಂತ್ರಿಯವರು X ನಲ್ಲಿ  ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ:

"ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ಜೈಪುರದ ಜಂತರ್ ಮಂತರ್ ಗೆ ಭೇಟಿ ನೀಡಿದ್ದೆ. ಯುನೆಸ್ಕೋ ವಿಶ್ವ ಪರಂಪರೆಯ ಈ ತಾಣವು ಖಗೋಳಶಾಸ್ತ್ರದಲ್ಲಿ ಭಾರತದ ಶ್ರೀಮಂತ ಪರಂಪರೆಗೆ ಸಾಕ್ಷಿಯಾಗಿ ನಿಂತಿದೆ. ಇದು ಪ್ರಾಚೀನ ಜ್ಞಾನ ಮತ್ತು ಆಧುನಿಕ ವಿಜ್ಞಾನದ ಸಮ್ಮಿಲನವನ್ನು ಸಂಕೇತಿಸುತ್ತದೆ, ಇದು ಭಾರತ ಮತ್ತು ಫ್ರಾನ್ಸ್ ಎರಡೂ ಮೆಚ್ಚುವ ಹಂಚಿಕೆಯ ಮೌಲ್ಯವಾಗಿದೆ.” ಎಂದವರು ಹೇಳಿದ್ದಾರೆ.

***


(ಪ್ರಕಟಣೆ ಐ.ಡಿ.: 2000371) ವಿಸಿಟರ್ ಕೌಂಟರ್ : 111