ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ( ಎಂಒಯು ) ಸಹಿ ಹಾಕಿದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಸಂಸ್ಥೆ
Posted On:
03 JAN 2025 7:15PM by PIB Bengaluru
ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಸಂಸ್ಥೆ - ಐಐಎಂ ) ರಾಜ್ಯಾದ್ಯಂತ ಅರಿವು ಕೇಂದ್ರಗಳ ಮೂಲಕ ಖಗೋಳಶಾಸ್ತ್ರವನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್.ಡಿ.ಪಿ.ಆರ್) ಇಲಾಖೆಯೊಂದಿಗೆ ಇಂದು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.

ಆರ್.ಡಿ.ಪಿ.ಆರ್ ಇಲಾಖೆಯು ಕರ್ನಾಟಕ ರಾಜ್ಯದಲ್ಲಿ 5880 ಅರಿವು ಕೇಂದ್ರಗಳು ಅಥವಾ ಗ್ರಾಮ ಪಂಚಾಯತ್ ಲೈಬ್ರರಿಗಳನ್ನು ನಿರ್ವಹಿಸುತ್ತದೆ, ಇದು ಪ್ರಾಥಮಿಕವಾಗಿ ಗ್ರಾಮೀಣ ಪ್ರದೇಶಗಳಲ್ಲಿದೆ, ಇವುಗಳನ್ನು ಇದಕ್ಕಾಗಿ ಮೀಸಲಾದ ವಿಶೇಷ ಗ್ರಂಥಾಲಯ ಮೇಲ್ವಿಚಾರಕರು ನಿರ್ವಹಿಸುತ್ತಾರೆ. ಈ ತಿಳುವಳಿಕಾ ಒಡಂಬಡಿಕೆಯ ಒಪ್ಪಂದ ಮೂಲಕ, ಖಗೋಳಶಾಸ್ತ್ರದಲ್ಲಿ ಅರಿವು ಮತ್ತು ಆಸಕ್ತಿಯನ್ನು ಉತ್ತೇಜಿಸಲು ಇಲಾಖೆಯೊಂದಿಗೆ ಐಐಎ ಕೆಲಸ ಮಾಡುತ್ತದೆ. ಇದರ ಜೊತೆಗೆ ಈ ಕೇಂದ್ರಗಳು ಸೇವೆ ಸಲ್ಲಿಸುವ ಸಮುದಾಯಗಳಲ್ಲಿ ವಿಜ್ಞಾನದ ಸಾಕ್ಷರತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುತ್ತವೆ. ಮೇಲ್ವಿಚಾರಕರ ತರಬೇತಿ ಮತ್ತು ಮಾರ್ಗದರ್ಶನ, ಕನ್ನಡದಲ್ಲಿ ಖಗೋಳ ಸಂಪನ್ಮೂಲಗಳ ರಚನೆ ಮತ್ತು ಆಕಾಶ ಘಟನೆಗಳ ಸುತ್ತ ಸಾರ್ವಜನಿಕ ಚಟುವಟಿಕೆಗಳನ್ನು ಆಯೋಜಿಸುವಲ್ಲಿ ಸಹಯೋಗದ ಮೂಲಕ ಇದನ್ನು ಮಾಡಲಾಗುತ್ತದೆ. ಐಐಎ ಯ ನಿರ್ದೇಶಕಿ ಅನ್ನಪೂರ್ಣಿ ಸುಬ್ರಮಣ್ಯಂ ಮತ್ತು ಡಾ. ಅರುಂಧತಿ ಚಂದ್ರಶೇಖರ್, ಭಾ.ಆ.ಸೇ, ಪಂಚಾಯತ್ ರಾಜ್ ಕಮಿಷನರೇಟ್, ಕಮಿಷನರ್, ಆರ್.ಡಿ.ಪಿ.ಆರ್ ಇಲಾಖೆ, ಕರ್ನಾಟಕ ಸರ್ಕಾರ, ನಡುವೆ ಈ ತಿಳುವಳಿಕಾ ಒಡಂಬಡಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿದೆ.
ಈ ತಿಳಿವಳಿಕೆ ಒಪ್ಪಂದವು ಎರಡು ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿ ಸಮುದಾಯಗಳಿಗೆ ಕನ್ನಡದಲ್ಲಿ, ಬರಿಗಣ್ಣಿನಿಂದ ನೋಡಬಹುದಾದ ಖಗೋಳ ಘಟನೆಗಳ ಬಗ್ಗೆ ಮತ್ತು ಖಗೋಳಶಾಸ್ತ್ರದ ವಿವರಗಳನ್ನು ಒದಗಿಸಲು ಅನುವು ಮಾಡಿಕೊಡುತ್ತದೆ. ಸಾರ್ವಜನಿಕರಿಗೆ ಮತ್ತು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದ ಚಟುವಟಿಕೆಗಳನ್ನು ನಡೆಸಲು ಗ್ರಂಥಾಲಯ ಮೇಲ್ವಿಚಾರಕರಿಗೆ ತರಬೇತಿ ನೀಡಲಾಗುವುದು. ಅರಿವು ಕೇಂದ್ರಗಳಲ್ಲಿನ ಕಂಪ್ಯೂಟರ್ ಲ್ಯಾಬ್‌ಗಳ ಮೂಲಕ ಮಾತುಕತೆಗಳು, ಚರ್ಚೆ, ಸ್ಪರ್ಧೆಗಳು ಮತ್ತು ಡಿಜಿಟಲ್ ಪರಿಕರಗಳ ರೂಪದಲ್ಲಿ ಆನ್‌ಲೈನ್ ಸಂವಹನಗಳನ್ನು ಸಹ ಉತ್ತೇಜಿಸಲಾಗುತ್ತದೆ. ಸಣ್ಣ ದೂರದರ್ಶಕಗಳ ಬಳಕೆಯ ತರಬೇತಿಯನ್ನೂ ಸಹ ನೀಡಲಾಗುವುದು.
“ನಮ್ಮ ಸಂಸ್ಥೆಯು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಸಂಸ್ಥೆ - ಐಐಎಂ ) ಯೊಂದಿಗೆ ತಿಳುವಳಿಕೆ ಒಡಂಬಡಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದಕ್ಕೆ ನನಗೆ ಸಂತೋಷವಾಗಿದೆ. ನಮ್ಮ 5880 ಅರಿವು ಕೇಂದ್ರಗಳು, ಗ್ರಾಮೀಣ ಕರ್ನಾಟಕದಾದ್ಯಂತ ಹರಡಿಕೊಂಡಿವೆ, ದೊಡ್ಡ ರೀತಿಯಲ್ಲಿ ಸಮುದಾಯಕ್ಕೆ ಸೇವೆ ಸಲ್ಲಿಸುತ್ತವೆ ಮತ್ತು ಇದು ರಾತ್ರಿಯ ಆಕಾಶ ಮತ್ತು ಇತ್ತೀಚಿನ ಖಗೋಳಶಾಸ್ತ್ರದ ಸುದ್ದಿ ಮತ್ತು ಆವಿಷ್ಕಾರಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಹಾಗೂ ಅವರ ಅರಿವಿಗೆ ಕಾರಣವಾಗುತ್ತದೆ. ಖಗೋಳಶಾಸ್ತ್ರ ಮತ್ತು ವಿಜ್ಞಾನವನ್ನು ವಿಶೇಷವಾಗಿ ಕನ್ನಡದಲ್ಲಿ ಪ್ರಚಾರ ಮಾಡುವುದರಿಂದ ವಿಶೇಷವಾಗಿ ನಮ್ಮ ಅರಿವು ಕೇಂದ್ರಗಳನ್ನು ಪ್ರವೇಶಿಸುವ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಸಾಕ್ಷರತೆ ಹೆಚ್ಚಾಗುತ್ತದೆ ಮತ್ತು ಅವುಗಳ ಮೂಲಕ ಗ್ರಾಮೀಣ ಸಮುದಾಯದಲ್ಲಿ ವೈಜ್ಞಾನಿಕ ಮನೋಧರ್ಮವನ್ನು ಉತ್ತೇಜಿಸುತ್ತದೆ” ಎಂದು ಡಾ.ಅರುಂಧತಿ ಚಂದ್ರಶೇಖರ್ ಅವರು ಹೇಳಿದರು.

"ಗ್ರಾಮೀಣ ಸಮುದಾಯಗಳು ಅದ್ಭುತವಾದ ವೈಜ್ಞಾನಿಕ ಸಂಪನ್ಮೂಲವನ್ನು ಹೊಂದಿವೆ, ಇದು ಕಡಿಮೆ ಬೆಳಕಿನ , ಮಾಲಿನ್ಯದ ಕಾರಣದಿಂದಾಗಿ ಗಾಢವಾದ , ಹಾಗೂ ಶುಭ್ರ ರಾತ್ರಿಯ ಆಕಾಶ ವೀಕ್ಷಣೆ ಸಾಧ್ಯವಾಗಿಸುತ್ತದೆ. ನಾವು ಕೆಲವು ಅರಿವು ಕೇಂದ್ರಗಳೊಂದಿಗೆ , ಅದರಲ್ಲೂ ವಿಶೇಷವಾಗಿ ಕಾಸ್ಮೋಸ್-ಮೈಸೂರು ಯೋಜನೆಯ ಮೂಲಕ ಕೆಲಸ ಮಾಡುತ್ತಿದ್ದೇವೆ ಮತ್ತು ನಮ್ಮ ಸಮರ್ಪಿತ ಸಂಪರ್ಕ ವಿಭಾಗದ ಮೂಲಕ ಗ್ರಾಮೀಣ ಕರ್ನಾಟಕದಾದ್ಯಂತ ಖಗೋಳಶಾಸ್ತ್ರವನ್ನು ಹರಡಿಸಲು ಕರ್ನಾಟಕ ಸರ್ಕಾರದ ಇಲಾಖೆಯೊಂದಿಗೆ ಯಶಸ್ವಿ ಸಹಯೋಗವನ್ನು ನಾವು ಎದುರು ನೋಡುತ್ತಿದ್ದೇವೆ” ಎಂದು ಶ್ರೀಮತಿ ಅನ್ನಪೂರ್ಣಿ ಸುಬ್ರಮಣ್ಯಂ ಅವರು ಹೇಳಿದರು.
*****
(Release ID: 2090038)