ರೈಲ್ವೇ ಸಚಿವಾಲಯ
2025ರ ಜುಲೈ 1ರಿಂದ ಜಾರಿಗೆ ಬರುವಂತೆ ಪ್ರಯಾಣಿಕರ ರೈಲು ಸೇವೆಗಳಿಗೆ ಮೂಲ ಶುಲ್ಕವನ್ನು ರೈಲ್ವೆ ತರ್ಕಬದ್ಧಗೊಳಿಸಿದೆ
ಸಾಮಾನ್ಯ ವರ್ಗದಲ್ಲಿ500 ಕಿ.ಮೀ.ವರೆಗೆ ಹೆಚ್ಚಳವಿಲ್ಲ; 501 ರಿಂದ 1500 ಕಿ.ಮೀ.ವರೆಗಿನ ದೂರಕ್ಕೆ ರೂ.5 ಮತ್ತು 2500 ಕಿ.ಮೀ.ವರೆಗಿನ ದೂರಕ್ಕೆ ರೂ.10 ಮತ್ತು 2501 ರಿಂದ 3000 ಕಿ.ಮೀ.ವರೆಗಿನ ದೂರಕ್ಕೆ ರೂ.15 ಹೆಚ್ಚಳ
Posted On:
30 JUN 2025 6:01PM by PIB Bengaluru
ಶುಲ್ಕ ರಚನೆ ಸುವ್ಯವಸ್ಥಿತಗೊಳಿಸುವ ಮತ್ತು ಪ್ರಯಾಣಿಕರ ಸೇವೆಗಳ ಆರ್ಥಿಕ ಸುಸ್ಥಿರತೆ ಹೆಚ್ಚಿಸುವ ಉದ್ದೇಶದಿಂದ, ರೈಲ್ವೆ ಸಚಿವಾಲಯ ಪ್ರಯಾಣಿಕರ ರೈಲು ಸೇವೆಗಳ ಮೂಲ ಶುಲ್ಕವನ್ನು ತರ್ಕಬದ್ಧಗೊಳಿಸಿದೆ, ಇದು 2025ರ ಜುಲೈ 1ರಿಂದ ಜಾರಿಗೆ ಬರಲಿದೆ. ಪರಿಷ್ಕೃತ ದರಗಳು ಭಾರತೀಯ ರೈಲ್ವೆ ಕಾನ್ಫರೆನ್ಸ್ ಅಸೋಸಿಯೇಷನ್ (ಐಆರ್‌ಸಿಎ) ಹೊರಡಿಸಿದ ನವೀಕರಿಸಿದ ಪ್ರಯಾಣಿಕರ ಶುಲ್ಕ ಕೋಷ್ಟಕವನ್ನು ಆಧರಿಸಿವೆ.
ಶುಲ್ಕ ತರ್ಕಬದ್ಧಗೊಳಿಸುವಿಕೆಯ ಪ್ರಮುಖ ಮುಖ್ಯಾಂಶಗಳು (2025ರ ಜುಲೈ 1ರಿಂದ ಜಾರಿಗೆ ಬರುವಂತೆ):
ಉಪನಗರ ಏಕ ಪ್ರಯಾಣ ದರಗಳು ಮತ್ತು ಸೀಸನ್ ಟಿಕೆಟ್‌ಗಳಲ್ಲಿ (ಉಪನಗರ ಮತ್ತು ಉಪನಗರವಲ್ಲದ ಮಾರ್ಗಗಳಿಗೆ) ಯಾವುದೇ ಬದಲಾವಣೆ ಇಲ್ಲ.
ಸಾಮಾನ್ಯ ಎಸಿ ಅಲ್ಲದ ವರ್ಗಗಳಿಗೆ (ಉಪನಗರವಲ್ಲದ ರೈಲುಗಳು):
- ಎರಡನೇ ದರ್ಜೆ: ಷರತ್ತುಗಳಿಗೆ ಒಳಪಟ್ಟು ಪ್ರತಿ ಕಿಲೋಮೀಟರ್‌ಗೆ ಅರ್ಧ ಪೈಸೆ ಹೆಚ್ಚಳ
*500 ಕಿ.ಮೀ.ವರೆಗೆ ಹೆಚ್ಚಳವಿಲ್ಲ
*501 ರಿಂದ 1500 ಕಿ.ಮೀ ದೂರಕ್ಕೆ ರೂ.5 ಹೆಚ್ಚಳ
*1501 ರಿಂದ 2500 ಕಿ.ಮೀ ದೂರಕ್ಕೆ ರೂ.10 ಹೆಚ್ಚಳ
*2501 ರಿಂದ 3000 ಕಿ.ಮೀ ದೂರಕ್ಕೆ ರೂ.15 ಹೆಚ್ಚ
*ಸ್ಲೀಪರ್ ಕ್ಲಾಸ್: ಪ್ರತಿ ಕಿಲೋಮೀಟರ್ ಗೆ 0.5 ಪೈಸೆ ಹೆಚ್ಚಳ
*ಪ್ರಥಮ ದರ್ಜೆ: ಪ್ರತಿ ಕಿಲೋಮೀಟರ್‌ಗೆ 0.5 ಪೈಸೆ ಹೆಚ್ಚಳ
ಮೇಲ್ / ಎಕ್ಸ್‌ಪ್ರೆಸ್ ರೈಲುಗಳಿಗೆ (ಎಸಿ ಅಲ್ಲದ):
- ಸೆಕೆಂಡ್ ಕ್ಲಾಸ್: ಪ್ರತಿ ಕಿಲೋಮೀಟರ್‌ಗೆ 01 ಪೈಸೆ ಹೆಚ್ಚಳ
- ಸ್ಲೀಪರ್ ಕ್ಲಾಸ್: ಪ್ರತಿ ಕಿಲೋಮೀಟರ್‌ಗೆ 01 ಪೈಸೆ ಹೆಚ್ಚಳ
- ಪ್ರಥಮ ದರ್ಜೆ: ಪ್ರತಿ ಕಿಲೋಮೀಟರ್‌ಗೆ 01 ಪೈಸೆ ಹೆಚ್ಚಳ
ಎಸಿ ತರಗತಿಗಳಿಗೆ (ಮೇಲ್ / ಎಕ್ಸ್‌ಪ್ರೆಸ್ ರೈಲುಗಳು):
ಎಸಿ ಚೇರ್ ಕಾರ್, ಎಸಿ 3-ಟೈರ್ / 3-ಎಕಾನಮಿ, ಎಸಿ 2-ಟೈರ್, ಮತ್ತು ಎಸಿ ಫಸ್ಟ್ / ಎಕ್ಸಿಕ್ಯೂಟಿವ್ ಕ್ಲಾಸ್ / ಎಕ್ಸಿಕ್ಯೂಟಿವ್ ಅನುಭೂತಿ: ಪ್ರತಿ ಕಿಲೋಮೀಟರ್‌ಗೆ 02 ಪೈಸೆ ಹೆಚ್ಚಳ
ಪರಿಷ್ಕೃತ ವರ್ಗವಾರು ಶುಲ್ಕ ರಚನೆಗೆ ಅನುಗುಣವಾಗಿ ರಾಜಧಾನಿ, ಶತಾಬ್ದಿ, ಡುರೊಂಟೊ, ವಂದೇ ಭಾರತ್, ತೇಜಸ್, ಹಮ್ಸಫರ್, ಅಮೃತ್ ಭಾರತ್, ಮಹಾಮನ, ಗತಿಮಾನ್, ಅಂತ್ಯೋದಯ, ಜನ ಶತಾಬ್ದಿ, ಯುವ ಎಕ್ಸ್‌ಪ್ರೆಸ್, ಎಸಿ ವಿಸ್ಟಾಡೋಮ್ ಬೋಗಿಗಳು, ಅನುಭೂತಿ ಬೋಗಿಗಳು ಮತ್ತು ಸಾಮಾನ್ಯ ಉಪನಗರೇತರ ಸೇವೆಗಳಿಗೆ ಶುಲ್ಕ ಪರಿಷ್ಕರಣೆ ಅನ್ವಯಿಸುತ್ತದೆ.
ಪೂರಕ ಶುಲ್ಕಗಳಲ್ಲಿಯಾವುದೇ ಬದಲಾವಣೆ ಇಲ್ಲ:
- ಮೀಸಲಾತಿ ಶುಲ್ಕಗಳು, ಸೂಪರ್‌ಫಾಸ್ಟ್ ಸರ್‌ಜಾರ್ಜರ್‌ಗಳು ಮತ್ತು ಇತರ ಶುಲ್ಕಗಳು ಬದಲಾಗದೆ ಉಳಿದಿವೆ.
- ಅನ್ವಯವಾಗುವ ನಿಯಮಗಳ ಪ್ರಕಾರ ಜಿಎಸ್‌ಟಿ ವಿಧಿಸುವುದನ್ನು ಮುಂದುವರಿಸಲಾಗುವುದು.
- ಶುಲ್ಕ ರೌಂಡಿಂಗ್ ತತ್ವಗಳು ಅಸ್ತಿತ್ವದಲ್ಲಿರುವ ಮಾನದಂಡಗಳ ಪ್ರಕಾರ ಉಳಿಯುತ್ತವೆ.
ಅನುಷ್ಠಾನ
ಪರಿಷ್ಕೃತ ದರಗಳು 01.07.2025ರಂದು ಅಥವಾ ನಂತರ ಕಾಯ್ದಿರಿಸಿದ ಟಿಕೆಟ್‌ಗಳಿಗೆ ಅನ್ವಯವಾಗುತ್ತವೆ. ಈ ದಿನಾಂಕದ ಮೊದಲು ನೀಡಲಾದ ಟಿಕೆಟ್‌ಗಳು ಯಾವುದೇ ಶುಲ್ಕ ಹೊಂದಾಣಿಕೆಯಿಲ್ಲದೆ ಅಸ್ತಿತ್ವದಲ್ಲಿರುವ ಶುಲ್ಕದಲ್ಲಿ ಮಾನ್ಯವಾಗಿರುತ್ತವೆ. ಪಿಆರ್‌ಎಸ್, ಯುಟಿಎಸ್ ಮತ್ತು ಹಸ್ತಚಾಲಿತ ಟಿಕೆಟಿಂಗ್ ವ್ಯವಸ್ಥೆಗಳನ್ನು ಅದಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತಿದೆ.
ಪರಿಷ್ಕೃತ ದರ ರಚನೆಯ ಸುಗಮ ಅನುಷ್ಠಾನ ಖಚಿತಪಡಿಸಿಕೊಳ್ಳಲು ರೈಲ್ವೆ ಸಚಿವಾಲಯ ಎಲ್ಲಾ ವಲಯ ರೈಲ್ವೆಗಳಿಗೆ ಅಗತ್ಯ ಸೂಚನೆ ನೀಡಿದೆ. ಎಲ್ಲಾ ನಿಲ್ದಾಣಗಳಲ್ಲಿ ಶುಲ್ಕ ಪ್ರದರ್ಶನ ನವೀಕರಿಸಲು ವಲಯ ರೈಲ್ವೆಗೆ ನಿರ್ದೇಶಿಸಲಾಗಿದೆ.
ಪರಿಷ್ಕೃತ ಪ್ರಯಾಣಿಕರ ಶುಲ್ಕ ಕೋಷ್ಟಕ ವೀಕ್ಷಿಸಲು, ಇಲ್ಲಿ ಕ್ಲಿಕ್ ಮಾಡಿ
*****
(Release ID: 2140949)
Read this release in:
Bengali-TR
,
Bengali
,
Tamil
,
English
,
Urdu
,
Hindi
,
Marathi
,
Nepali
,
Assamese
,
Punjabi
,
Gujarati
,
Odia
,
Telugu
,
Malayalam