ರೈಲ್ವೇ ಸಚಿವಾಲಯ
azadi ka amrit mahotsav

ಭಾರತೀಯ ರೈಲ್ವೆ ದಾಖಲೆಯ 380 ಗಣಪತಿ ವಿಶೇಷ ರೈಲು ಟ್ರಿಪ್ ಗಳನ್ನು ನಡೆಸಲಿದೆ


ಭಾರತೀಯ ರೈಲ್ವೆ ವಲಯವಾರು ಗಣಪತಿ ವಿಶೇಷ ರೈಲು ಪ್ರಯಾಣವನ್ನು ಪ್ರಕಟಿಸಿದೆ: ಸೆಂಟ್ರಲ್ 296, ಪಶ್ಚಿಮ 56, ಕೆ.ಆರ್.ಸಿ.ಎಲ್ 6, ನೈಋತ್ಯ 22

ಆಗಸ್ಟ್ 11 ರಿಂದ ಗಣಪತಿ ವಿಶೇಷ ರೈಲುಗಳು ಸೇವೆಯಲ್ಲಿರಲಿವೆ; ಹಬ್ಬ ಸಮೀಪಿಸುತ್ತಿದ್ದಂತೆ ಹೆಚ್ಚಿನ ಟ್ರಿಪ್ ಗಳನ್ನು ಸೇರಿಸಾಲಾಗುವುದು

Posted On: 21 AUG 2025 8:43PM by PIB Bengaluru

ಭಾರತೀಯ ರೈಲ್ವೆ 2025ರ ಸಾಲಿನಲ್ಲಿ 380 ಗಣಪತಿ ವಿಶೇಷ ರೈಲು ಟ್ರಿಪ್ ಗಳನ್ನು ಘೋಷಿಸಿದೆ, ಇದು ಹಬ್ಬದ ಋತುವಿನಲ್ಲಿ ಭಕ್ತರು ಮತ್ತು ಪ್ರಯಾಣಿಕರಿಗೆ ಸುಗಮ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸುತ್ತದೆ. 2023ರಲ್ಲಿ, ಒಟ್ಟು 305 ಗಣಪತಿ ವಿಶೇಷ ರೈಲು ಟ್ರಿಪ್ ಗಳನ್ನು ನಿರ್ವಹಿಸಲಾಗಿದ್ದು, 2024ರಲ್ಲಿ ಈ ಸಂಖ್ಯೆ 358 ಕ್ಕೆ ಏರಿತ್ತು.

ಮಹಾರಾಷ್ಟ್ರ ಮತ್ತು ಕೊಂಕಣ ಪ್ರದೇಶದಲ್ಲಿ ಭಾರಿ ಹಬ್ಬದ ಪ್ರಯಾಣದ ಬೇಡಿಕೆಯನ್ನು ಪೂರೈಸಲು ಕೇಂದ್ರ ರೈಲ್ವೆ ಅತಿ ಹೆಚ್ಚು ಸಂಖ್ಯೆಯ 296 ಸೇವೆಗಳನ್ನು ನಿರ್ವಹಿಸಲಿದೆ. ಪಶ್ಚಿಮ ರೈಲ್ವೆ 56 ಗಣಪತಿ ವಿಶೇಷ ಟ್ರಿಪ್, ಕೊಂಕಣ ರೈಲ್ವೆ 6 ಟ್ರಿಪ್ ಮತ್ತು ನೈಋತ್ಯ ರೈಲ್ವೆ 22 ಟ್ರಿಪ್ ಗಳನ್ನು ನಡೆಸಲಿದೆ.

ಕೊಂಕಣ ರೈಲ್ವೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗಣಪತಿ ವಿಶೇಷ ರೈಲುಗಳ ನಿಲುಗಡೆಯನ್ನು ಕೋಲಾಡ್, ಇಂದಾಪುರ, ಮಂಗಾಂವ್, ಗೋರೆಗಾಂವ್ ರಸ್ತೆ, ವೀರ್, ಸಾಪೆ ವಾರ್ಮ್ನೆ, ಕಾರಂಜಾಡಿ, ವಿನ್ಹೆರೆ, ದಿವಾನ್ಖಾವತಿ, ಕಲಂಬಾಣಿ ಬುದ್ರುಕ್, ಖೇಡ್, ಅಂಜನಿ, ಚಿಪ್ಲುನ್, ಕಾಮತೆ, ಸಾವರ್ಡಾ, ಅರಾವಳಿ ರಸ್ತೆ, ಸಂಗಮೇಶ್ವರ ರಸ್ತೆ, ರತ್ನಗಿರಿ, ಅಡಾವಳಿ, ವಿಲವಾಡೆ, ರಾಜಾಪುರ ರಸ್ತೆ, ವೈಭವವಾಡಿ ರಸ್ತೆ, ನಂದಗಾಂವ್ ರಸ್ತೆ, ಕಂಕವಲಿ, ಸಿಂಧುದುರ್ಗ್, ಕಾರವಾರ, ಗೋಕಾಮಾ ರಸ್ತೆ, ಕುಮಟಾ, ಮುರ್ಡೇಶ್ವರ, ಮೂಕಾಂಬಿಕಾ ರಸ್ತೆ, ಕುಂದಾಪುರ, ಉಡುಪಿ, ಮೂಲ್ಕಿ ಮತ್ತು ಸುರತ್ಕಲ್ ನಲ್ಲಿ ಯೋಜಿಸಲಾಗಿದೆ.

ಗಣಪತಿ ಪೂಜೆಯನ್ನು ಆಗಸ್ಟ್ 27 ರಿಂದ ಸೆಪ್ಟೆಂಬರ್ 6, 2025 ರವರೆಗೆ ಆಚರಿಸಲಾಗುವುದು. ನಿರೀಕ್ಷಿತ ಹಬ್ಬದ ದಟ್ಟಣೆಯನ್ನು ನಿರ್ವಹಿಸಲು, ಗಣಪತಿ ವಿಶೇಷ ರೈಲುಗಳು 2025ರ ಆಗಸ್ಟ್ 11 ರಿಂದ ಚಲಿಸಲಿವೆ, ಹಬ್ಬ ಸಮೀಪಿಸುತ್ತಿದ್ದಂತೆ ಸೇವೆಗಳನ್ನು ಕ್ರಮೇಣ ಹೆಚ್ಚಿಸಲಾಗುತ್ತಿದೆ.

ವಿಶೇಷ ರೈಲುಗಳ ವಿವರವಾದ ವೇಳಾಪಟ್ಟಿ ಐ.ಆರ್.ಸಿ.ಟಿ.ಸಿ ವೆಬ್ ಸೈಟ್, ರೈಲ್ಒನ್ ಅಪ್ಲಿಕೇಶನ್ ಮತ್ತು ಗಣಕೀಕೃತ ಪಿ.ಆರ್.ಎಸ್.ನಲ್ಲಿ ಲಭ್ಯವಿದೆ.

ವಿಶೇಷವಾಗಿ ಬೇಡಿಕೆ ಗಮನಾರ್ಹವಾಗಿ ಹೆಚ್ಚಿರುವ ಹಬ್ಬಗಳ ಸಮಯದಲ್ಲಿ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಅನುಕೂಲಕರ ಪ್ರಯಾಣದ ಅನುಭವಗಳನ್ನು ಒದಗಿಸಲು ಭಾರತೀಯ ರೈಲ್ವೆ ಬದ್ಧವಾಗಿದೆ.

 

*****
 


(Release ID: 2159573) Visitor Counter : 4