ಸಂಪುಟ
ದೇಶದಲ್ಲಿ ಅತ್ಯವಶ್ಯಕವಾದ ಖನಿಜದ ಮರುಬಳಕೆಯನ್ನು ಉತ್ತೇಜಿಸಲು ರೂ.1,500 ಕೋಟಿ ಪ್ರೋತ್ಸಾಹಕ ಯೋಜನೆಗೆ ಅನುಮೋದನೆ ನೀಡಿದ ಸಂಪುಟ ಸಭೆ
ಅತ್ಯವಶ್ಯಕ ಖನಿಜಗಳನ್ನು ಹೊರತೆಗೆಯಲು ಬ್ಯಾಟರಿ ತ್ಯಾಜ್ಯ ಮತ್ತು ಇ-ತ್ಯಾಜ್ಯವನ್ನು ಮರುಬಳಕೆ ಮಾಡುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹಕ ಯೋಜನೆ
Posted On:
03 SEP 2025 7:16PM by PIB Bengaluru
ದೇಶದಲ್ಲಿ ದ್ವಿತೀಯ ಮೂಲಗಳಿಂದ ಅಪೂರ್ವವಾದ ಖನಿಜಗಳನ್ನು ಬೇರ್ಪಡಿಸುವ ಮತ್ತು ಉತ್ಪಾದಿಸುವ ಮರುಬಳಕೆ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ರೂ.1,500 ಕೋಟಿ ಪ್ರೋತ್ಸಾಹಕ ಯೋಜನೆಗೆ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಈ ಯೋಜನೆ ರಾಷ್ಟ್ರೀಯ ಅತ್ಯವಶ್ಯಕ ಖನಿಜ ಮಿಷನ್ (ಎನ್.ಸಿ.ಎಮ್.ಎಮ್) ಭಾಗವಾಗಿದೆ. ದೇಶೀಯ ಸಾಮರ್ಥ್ಯವನ್ನು ಬೆಳೆಸುವುದು ಮತ್ತು ಅಪರೂಪದ ಖನಿಜಗಳ ಪೂರೈಕೆ ಸರಪಳಿಯನ್ನು ಸ್ಥಿರಗೊಳಿಸುವುದು ಇದರ ಮುಖ್ಯ ಗುರಿಯಾಗಿದೆ. ಖನಿಜ ಮೌಲ್ಯ ಸರಪಳಿಯಲ್ಲಿ ಪರಿಶೋಧನೆ, ಹರಾಜು, ಗಣಿ ಕಾರ್ಯಾಚರಣೆ ಮತ್ತು ವಿದೇಶಿ ಆಸ್ತಿಗಳ ಸ್ವಾಧೀನ ಸೇರಿದಂತೆ ಹಲವು ಹಂತಗಳಿವೆ. ಈ ಎಲ್ಲಾ ಹಂತಗಳನ್ನು ಪೂರೈಸಿದ ನಂತರವೇ ಭಾರತೀಯ ಕೈಗಾರಿಕೆಗೆ ಅತ್ಯವಶ್ಯಕ ಖನಿಜಗಳನ್ನು ಪೂರೈಸಲಾಗುತ್ತದೆ. ಪೂರೈಕೆ ಸರಪಳಿಯ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ಒಂದು ಸೂಕ್ತ ಮಾರ್ಗವೆಂದರೆ ದ್ವಿತೀಯ ಮೂಲಗಳಿಂದ ಖನಿಜಗಳನ್ನು ಮರುಬಳಕೆ ಮಾಡುವುದು.
ಈ ಯೋಜನೆಯು ಆರ್ಥಿಕ ವರ್ಷ 2025-26 ರಿಂದ 2030-31 ರವರೆಗೆ ಆರು ವರ್ಷಗಳ ಅವಧಿಯನ್ನು ಹೊಂದಿರುತ್ತದೆ. ಇ-ತ್ಯಾಜ್ಯ, ಲಿಥಿಯಂ ಅಯಾನ್ ಬ್ಯಾಟರಿ (ಎಲ್.ಐ.ಬಿ) ಸ್ಕ್ರ್ಯಾಪ್ ಅಲ್ಲದೆ ಇ-ತ್ಯಾಜ್ಯ ಮತ್ತು ಎಲ್.ಐ.ಬಿ ಸ್ಕ್ರ್ಯಾಪ್ ಹೊರತಾಗಿ ಚಾಲನಾ ಸಾಮರ್ಥ್ಯ ಕಳೆದುಕೊಂಡಂತಹ ವಾಹನಗಳಲ್ಲಿನ ವೇಗವರ್ಧಕ ಪರಿವರ್ತಕಗಳಂತಹ ಸ್ಕ್ರ್ಯಾಪ್ ಕೂಡಾ ಅರ್ಹ ಫೀಡ್ ಸ್ಟಾಕ್ ಪಟ್ಟಿಗೆ ಸೇರಿವೆ. ಸ್ಟಾರ್ಟ್-ಅಪ್‌ಗಳನ್ನು ಒಳಗೊಂಡಂತೆ ದೊಡ್ಡ, ಅಸ್ತಿತ್ವದಲ್ಲಿರುವ ಮರುಬಳಕೆದಾರರು ಮತ್ತು ಸಣ್ಣ, ಹೊಸ ಮರುಬಳಕೆದಾರರ ನಿರೀಕ್ಷಿತ ಫಲಾನುಭವಿಗಳಾಗಿರುತ್ತಾರೆ, ಅವರಿಗೆ ಯೋಜನೆಯ ವೆಚ್ಚದ ಮೂರನೇ ಒಂದು ಭಾಗವನ್ನು ಮೀಸಲಿಡಲಾಗಿದೆ. ಈ ಯೋಜನೆಯು ಹೊಸ ಘಟಕಗಳಲ್ಲಿನ ಹೂಡಿಕೆಗಳಿಗೆ ಹಾಗೂ ಸಾಮರ್ಥ್ಯದ ವಿಸ್ತರಣೆ / ಆಧುನೀಕರಣ ಮತ್ತು ಅಸ್ತಿತ್ವದಲ್ಲಿರುವ ಘಟಕಗಳ ವೈವಿಧ್ಯೀಕರಣಕ್ಕೆ ಅನ್ವಯಿಸುತ್ತದೆ. ಅಪರೂಪದ ಖನಿಜಗಳ ನಿಜವಾದ ಹೊರತೆಗೆಯುವಿಕೆಯಲ್ಲಿ ಒಳಗೊಂಡಿರುವ ಮರುಬಳಕೆ ಮೌಲ್ಯ ಸರಪಳಿಗೆ ಈ ಯೋಜನೆಯು ಪ್ರೋತ್ಸಾಹವನ್ನು ಒದಗಿಸುತ್ತದೆ, ಹೊರತಾಗಿ ಕೇವಲ ಮರುಬಳಕೆ ಉತ್ಪಾದನೆಯಲ್ಲಿ ಒಳಗೊಂಡಿರುವ ಮೌಲ್ಯ ಸರಪಳಿಗಲ್ಲ.
ಯೋಜನೆಯಡಿ ನೀಡುವ ಪ್ರೋತ್ಸಾಹಕಗಳು ಹೀಗಿವೆ. ಘಟಕವು ನಿರ್ದಿಷ್ಟ ಅವಧಿಯೊಳಗೆ ಉತ್ಪಾದನೆ ಪ್ರಾರಂಭಿಸಿದರೆ, ಸ್ಥಾವರ, ಯಂತ್ರೋಪಕರಣಗಳು, ಉಪಕರಣಗಳು ಮತ್ತು ಸಂಬಂಧಿತ ಉಪಯುಕ್ತತೆಗಳ ಮೇಲೆ 20% ಕ್ಯಾಪೆಕ್ಸ್ ಸಬ್ಸಿಡಿ ದೊರೆಯುತ್ತದೆ. ಸಮಯ ಮೀರಿದರೆ ಕಡಿಮೆ ಸಬ್ಸಿಡಿ ಮಾತ್ರ ಅನ್ವಯಿಸುತ್ತದೆ. ಒಪೆಕ್ಸ್ ಸಬ್ಸಿಡಿ ಮೂಲ ಹಣಕಾಸು ವರ್ಷ 2025-26 ಮಾರಾಟದ ಏರಿಕೆಯನ್ನು ಆಧರಿಸಿದೆ. 2ನೇ ವರ್ಷದಿಂದ (2026-27) 2030-31ರ ತನಕ 40% ಸಬ್ಸಿಡಿ ಅನ್ವಯವಾಗುತ್ತದೆ. ಉಳಿದ 60% ಅನ್ನು 5ನೇ ವರ್ಷದಲ್ಲಿ 2027-28 ರಿಂದ 2030-31ರೊಳಗಿನ ಗುರಿ ಸಾಧನೆ ಆಧರಿಸಿ ನೀಡಲಾಗುತ್ತದೆ. ಹೆಚ್ಚಿನ ಘಟಕಗಳು ಪ್ರಯೋಜನ ಪಡೆಯಲು, ಒಟ್ಟು ಪ್ರೋತ್ಸಾಹಕ್ಕೆ ಮಿತಿಯನ್ನು ನಿಗದಿ ಮಾಡಲಾಗಿದ್ದು ದೊಡ್ಡ ಘಟಕಗಳಿಗೆ ರೂ. 50 ಕೋಟಿ ಮತ್ತು ಸಣ್ಣ ಘಟಕಗಳಿಗೆ ರೂ. 25 ಕೋಟಿಗಳ ಒಟ್ಟಾರೆ ಮಿತಿಗೆ ಒಳಪಟ್ಟಿರುತ್ತದೆ, ಇದರೊಳಗೆ ಕ್ರಮವಾಗಿ ರೂ. 10 ಕೋಟಿ ಮತ್ತು ರೂ. 5 ಕೋಟಿಗಳ ಒಪೆಕ್ಸ್ ಸಬ್ಸಿಡಿಯ ಮಿತಿ ಇರುತ್ತದೆ.
ಪ್ರಮುಖ ಫಲಿತಾಂಶಗಳು ಹೀಗಿವೆ - ಈ ಯೋಜನೆಯ ಪ್ರೋತ್ಸಾಹಕಗಳಿಂದ ಕನಿಷ್ಠ 270 ಕಿಲೋ ಟನ್ ವಾರ್ಷಿಕ ಮರುಬಳಕೆ ಸಾಮರ್ಥ್ಯ ನಿರ್ಮಾಣವಾಗುವ ನಿರೀಕ್ಷೆಯಿದೆ. ಇದರಿಂದ ವರ್ಷಕ್ಕೆ ಸುಮಾರು 40 ಕಿಲೋ ಟನ್ ಅತ್ಯವಶ್ಯಕ ಖನಿಜಗಳ ಉತ್ಪಾದನೆ ಸಾಧ್ಯವಾಗುತ್ತದೆ. ಈ ಮೂಲಕ ಸುಮಾರು ರೂ 8,000 ಕೋಟಿ ಹೂಡಿಕೆ ಆಕರ್ಷಿಸಲಾಗುತ್ತದೆ ಅಲ್ಲದೆ ಸುಮಾರು 70,000 ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಯೋಜನೆ ರೂಪಿಸುವ ಮೊದಲು, ಸರ್ಕಾರವು ಸಭೆಗಳು, ಸೆಮಿನಾರ್‌ಗಳು ಮತ್ತು ಚರ್ಚಾ ಅವಧಿಗಳ ಮೂಲಕ ಉದ್ಯಮ ಹಾಗೂ ಇತರ ಪಾಲುದಾರರೊಂದಿಗೆ ಹಲವಾರು ಸುತ್ತಿನ ಸಮಾಲೋಚನೆಗಳನ್ನು ನಡೆಸಿದೆ.
****
(Release ID: 2163518)
Read this release in:
English
,
Urdu
,
Hindi
,
Marathi
,
Nepali
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam