ರಕ್ಷಣಾ ಸಚಿವಾಲಯ
ಡಿ ಆರ್ ಡಿ ಒ ದಿಂದ ರೈಲ್ ಆಧಾರಿತ ಮೊಬೈಲ್ ಲಾಂಚರ್ ವ್ಯವಸ್ಥೆಯೊಂದಿಗೆ ಮಧ್ಯಂತರ ಶ್ರೇಣಿಯ ಅಗ್ನಿ-ಪ್ರೈಮ್ ಕ್ಷಿಪಣಿಯ ಯಶಸ್ವಿ ಉಡಾವಣೆ
प्रविष्टि तिथि:
25 SEP 2025 9:34AM by PIB Bengaluru
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (SFC) ಸಹಯೋಗದೊಂದಿಗೆ 2025ರ ಸೆಪ್ಟೆಂಬರ್ 24 ರಂದು ಪೂರ್ಣ ಕಾರ್ಯಾಚರಣೆಯ ಸ್ಥಿತಿಯ ರೈಲು ಆಧಾರಿತ ಮೊಬೈಲ್ ಲಾಂಚರ್ ವ್ಯವಸ್ಥೆಯಿಂದ ಮಧ್ಯಂತರ ಶ್ರೇಣಿಯ ಅಗ್ನಿ-ಪ್ರೈಮ್ ಕ್ಷಿಪಣಿಯ ಯಶಸ್ವಿ ಉಡಾವಣೆ ಮಾಡಿದೆ. ಈ ಮುಂದಿನ ಪೀಳಿಗೆಯ ಕ್ಷಿಪಣಿಯನ್ನು 2000 ಕಿ.ಮೀ.ವರೆಗಿನ ವ್ಯಾಪ್ತಿಯನ್ನು ಕ್ರಮಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ವಿವಿಧ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಳಿಸಲಾಗಿದೆ.
ಇದು ಯಾವುದೇ ಪೂರ್ವ-ಬಂಧಗಳಿಲ್ಲದ ರೈಲು ಜಾಲದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿರುವ ವಿಶೇಷವಾಗಿ ವಿನ್ಯಾಸಗೊಳಿಸಲಾದ ರೈಲು ಆಧಾರಿತ ಮೊಬೈಲ್ ಲಾಂಚರ್‌ನಿಂದ ನಡೆಸಿರುವ ಮೊದಲ ಉಡಾವಣೆಯಾಗಿದೆ. ಇದು ದೇಶಗಳ ನಡುವಿನ ಚಲನಶೀಲತೆಗೆ ಅನುವು ಮಾಡಿದೆ ಮತ್ತು ಕಡಿಮೆ ಗೋಚರತೆಯೊಂದಿಗೆ ಕಿರು ಪ್ರತಿಕ್ರಿಯೆ ಅವಧಿಯಲ್ಲಿ ಉಡಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಸ್ವಾವಲಂಬಿಯಾಗಿದ್ದು, ಅತ್ಯಾಧುನಿಕ ಸಂವಹನ ವ್ಯವಸ್ಥೆಗಳು ಮತ್ತು ರಕ್ಷಣಾ ಕಾರ್ಯವಿಧಾನಗಳು ಸೇರಿದಂತೆ ಎಲ್ಲಾ ಸ್ವತಂತ್ರ ಉಡಾವಣಾ ಸಾಮರ್ಥ್ಯದ ವೈಶಿಷ್ಟ್ಯಗಳನ್ನು ಹೊಂದಿದೆ.
ಕ್ಷಿಪಣಿ ಪಥವನ್ನು ವಿವಿಧ ಭೂ ಕೇಂದ್ರಗಳು ಟ್ರ್ಯಾಕ್ ಮಾಡಿವೆ ಮತ್ತು ಇದು ಎಲ್ಲಾ ಮಿಷನ್ ಉದ್ದೇಶಗಳನ್ನು ಪೂರೈಸುವ ಅನೌಪಚಾರಿಕ ಉಡಾವಣೆಯಾಗಿತ್ತು. ಈ ಯಶಸ್ವಿ ಉಡಾವಣೆಯು ಭವಿಷ್ಯದ ರೈಲು ಆಧಾರಿತ ವ್ಯವಸ್ಥೆಗಳನ್ನು ಸೇವೆಗಳಲ್ಲಿ ಸೇರ್ಪಡೆ ಮಾಡಲು ಅನುವು ಮಾಡಿಕೊಡುತ್ತದೆ. ಡಿ ಆರ್ ಡಿ ಒ ದ ಹಿರಿಯ ವಿಜ್ಞಾನಿಗಳು ಮತ್ತು ಎಸ್ ಎಫ್ ಒ ದ ಅಧಿಕಾರಿಗಳು ಈ ಉಡಾವಣೆಗೆ ಸಾಕ್ಷಿಯಾದರು.
ಸರಣಿ ಹಾರಾಟ ಪ್ರಯೋಗಗಳ ಯಶಸ್ಸಿನ ಬಳಿಕ ರೋಡ್ ಮೊಬೈಲ್ ಅಗ್ನಿ-ಪಿ ಅನ್ನು ಈಗಾಗಲೇ ಸೇವೆಗೆ ಸೇರ್ಪಡೆ ಮಾಡಲಾಗಿದೆ.
ಮಧ್ಯಂತರ ಶ್ರೇಣಿಯ ಅಗ್ನಿ-ಪ್ರೈಮ್ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ನಡೆಸಿದ ಡಿ ಆರ್ ಡಿ ಒ, ಎಸ್ ಎಫ್ ಸಿ ಮತ್ತು ಸಶಸ್ತ್ರ ಪಡೆಗಳನ್ನು ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು ಅಭಿನಂದಿಸಿದ್ದಾರೆ. ಈ ಪರೀಕ್ಷಾರ್ಥ ಹಾರಾಟವು ಭಾರತವನ್ನು ರೈಲು ಜಾಲದಿಂದ ಕ್ಯಾನಿಸ್ಟರೈಸ್ಡ್ (ಲೋಹಧಾರಕ) ಉಡಾವಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ಆಯ್ದ ರಾಷ್ಟ್ರಗಳ ಗುಂಪಿಗೆ ಸೇರಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಸಾಧನೆಗಾಗಿ ಶ್ರಮಿಸಿದ ಎಲ್ಲಾ ತಂಡಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮತ್ತು ಡಿ ಆರ್ ಡಿ ಒ ಅಧ್ಯಕ್ಷರು ಶ್ಲಾಘಿಸಿದ್ದಾರೆ.
*****
(रिलीज़ आईडी: 2171224)
आगंतुक पटल : 66