ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಹಿಂಗಾರು ಬೆಳೆಗಳ 2026-27ನೇ ಸಾಲಿನ ಮಾರುಕಟ್ಟೆ ಹಂಗಾಮಿಗೆ ಕನಿಷ್ಠ ಬೆಂಬಲ ಬೆಲೆಗೆ ಸಂಪುಟ ಅನುಮೋದನೆ
Posted On:
01 OCT 2025 3:31PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) 2026-27 ರ ಮಾರುಕಟ್ಟೆ ಹಂಗಾಮಿಗೆ ಎಲ್ಲಾ ಕಡ್ಡಾಯ ಹಿಂಗಾರು (ರಬಿ) ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು ಹೆಚ್ಚಿಸಲು ಅನುಮೋದನೆ ನೀಡಿದೆ.
ಬೆಳೆಗಾರರು ತಾವು ಬೆಳದ ಬೆಳೆಗೆ ಸಮರ್ಪಕ ಬೆಲೆಯನ್ನು ಪಡೆಯುವುದನ್ನು ಖಾತರಿಪಡಿಸಲು ಹಿಂಗಾರು ಬೆಳೆಗಳ 2026-27ರ ಮಾರುಕಟ್ಟೆ ಋತುವಿಗಾಗಿ ಕನಿಷ್ಠ ಬೆಂಬಲ ಬೆಲೆಯನ್ನು ಸರ್ಕಾರ ಹೆಚ್ಚಳ ಮಾಡಿದೆ. ಕುಸುಬೆಗೆ ಅತಿ ಗರಿಷ್ಠ ಕ್ವಿಂಟಾಲ್ಗೆ ರೂ.600 ಕನಿಷ್ಠ ಬೆಂಬಲ ಬೆಲೆ ಘೋಷಿಸಲಾಗಿದೆ, ನಂತರ ಮಸೂರ್ (ಲೆಂಟಿಲ್) ಕ್ವಿಂಟಾಲ್ಗೆ ರೂ.300, ತೈಲ ಬೀಜ (ರಾಪ್ಸೀಡ್) ಮತ್ತು ಸಾಸಿವೆ, ಕಡಲೆ, ಬಾರ್ಲಿ ಮತ್ತು ಗೋಧಿಗೆ ಕ್ರಮವಾಗಿ ಕ್ವಿಂಟಾಲ್ಗೆ ರೂ.250, ರೂ.225, ರೂ.170 ಮತ್ತು ರೂ.160 ರಷ್ಟು ಹೆಚ್ಚಳ ಮಾಡಲಾಗಿದೆ.
ಎಲ್ಲಾ ಹಿಂಗಾರು ಬೆಳೆಗಳ 2026-27ನೇ ಸಾಲಿನ ಮಾರುಕಟ್ಟೆ ಋತುವಿಗಾಗಿ ಕನಿಷ್ಠ ಬೆಂಬಲ ಬೆಲೆಗಳು ಇಂತಿವೆ: (ರೂ. ಪ್ರತಿ ಕ್ವಿಂಟಾಲ್ ಗೆ)
|
ಬೆಳೆಗಳು
|
ಎಂ ಎಸ್ ಪಿ ಆರ್ ಎಂ ಎಸ್ 2026-27
|
ಉತ್ಪಾದನಾ ವೆಚ್ಚ
ಆರ್ ಎಂ ಎಸ್
2026-27
|
ವೆಚ್ಚದ ಹೆಚ್ಚುವರಿ ಲಾಭಾಂಶ
(ಶೇಕಡಾವಾರು)
|
ಎಂ ಎಸ್ ಪಿ ಆರ್ ಎಂ ಎಸ್
2025-26
|
ಎಂ ಎಸ್ ಪಿ ಯಲ್ಲಿ ಹೆಚ್ಚಳ
(ಪೂರ್ಣ)
|
|
ಗೋಧಿ
|
2585
|
1239
|
109
|
2425
|
160
|
|
ಬಾರ್ಲಿ
|
2150
|
1361
|
58
|
1980
|
170
|
|
ಕಡಲೆ
|
5875
|
3699
|
59
|
5650
|
225
|
|
ಮಸೂರ
(ಲೆಂಟಿಲ್)
|
7000
|
3705
|
89
|
6700
|
300
|
|
ತೈಲ ಬೀಜ ಮತ್ತು ಸಾಸಿವೆ
|
6200
|
3210
|
93
|
5950
|
250
|
|
ಕುಸುಬೆ
|
6540
|
4360
|
50
|
5940
|
600
|
* ಕೂಲಿ ಕೆಲಸದವರ ವೇತನ, ಗೂಳಿ ಕಾರ್ಮಿಕ/ಯಂತ್ರ ಕಾರ್ಮಿಕರಿಗೆ ಪಾವತಿಸಿದ ಬಾಡಿಗೆ, ಭೂಮಿ ಗುತ್ತಿಗೆಗೆ ನೀಡಿದ ಬಾಡಿಗೆ, ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳು, ನೀರಾವರಿ ಶುಲ್ಕಗಳು, ಉಪಕರಣಗಳು ಮತ್ತು ಕೃಷಿ ಕಟ್ಟಡಗಳ ಮೇಲಿನ ಸವಕಳಿ, ಕೃಷಿ ಕಾರ್ಯಕ್ಕೆ ತೊಡಗಿಸಿದ ಬಂಡವಾಳದ ಮೇಲಿನ ಬಡ್ಡಿ, ಪಂಪ್ ಸೆಟ್ಗಳ ಕಾರ್ಯಾಚರಣೆಗೆ ಡೀಸೆಲ್/ವಿದ್ಯುತ್ ಇತ್ಯಾದಿ, ವಿವಿಧ ವೆಚ್ಚಗಳು ಮತ್ತು ಕುಟುಂಬ ಕಾರ್ಮಿಕರ ಶ್ರಮಕ್ಕೆ ಊಹಾತ್ಮಕ ಮೌಲ್ಯದಂತಹ ಎಲ್ಲಾ ಪಾವತಿಸಿದ ವೆಚ್ಚಗಳನ್ನು ಒಳಗೊಂಡಿದೆ.
ಕಡ್ಡಾಯ ಹಿಂಗಾರು ಬೆಳೆಗಳಿಗೆ 2026-27ರ ಮಾರುಕಟ್ಟೆ ಹಂಗಾಮಿನ MSP ಹೆಚ್ಚಳವು 2018-19 ರ ಕೇಂದ್ರ ಬಜೆಟ್ ಘೋಷಣೆಗೆ ಅನುಗುಣವಾಗಿದ್ದು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗಿದೆ. ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ನಿರೀಕ್ಷಿತ ಲಾಭ ಗೋಧಿಗೆ 109 ಪ್ರತಿಶತ, ನಂತರದಲ್ಲಿ ತೈಲ ಬೀಜ ಮತ್ತು ಸಾಸಿವೆಗೆ ಶೇ. 93; ಮಸೂರಕ್ಕೆ ಶೇ. 89; ಕಡಲೆಗೆ 59 ಪ್ರತಿಶತ; ಬಾರ್ಲಿಗೆ 58 ಪ್ರತಿಶತ; ಮತ್ತು ಕುಸುಬೆಗೆ 50 ಪ್ರತಿಶತದಷ್ಟಿದೆ. ಹಿಂಗಾರು ಬೆಳೆಗಳಿಗೆ ಈ ಕನಿಷ್ಠ ಬೆಂಬಲ ಬೆಲೆ ಹೆಚ್ಚಳವು ರೈತರಿಗೆ ಲಾಭದಾಯಕ ಬೆಲೆ ಖಚಿತಪಡಿಸುತ್ತದೆ ಮತ್ತು ಬೆಳೆ ವೈವಿಧ್ಯೀಕರಣವನ್ನು ಉತ್ತೇಜಿಸುತ್ತದೆ.
*****
(Release ID: 2173623)
Visitor Counter : 54
Read this release in:
Odia
,
Tamil
,
Malayalam
,
Bengali
,
Bengali-TR
,
English
,
Urdu
,
हिन्दी
,
Marathi
,
Assamese
,
Manipuri
,
Punjabi
,
Gujarati
,
Telugu