ರೈಲ್ವೇ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ ಶ್ರೀ ವಿ. ಸೋಮಣ್ಣ ಅವರಿಂದ ಪಂಜಾಬ್ ರಾಜ್ಯದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ


ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೆರೆ ಸಂತ್ರಸ್ತರೊಂದಿಗಿದೆ: ಕೇಂದ್ರ ಸಚಿವರಾದ ಸೋಮಣ್ಣ

Posted On: 07 OCT 2025 7:34PM by PIB Bengaluru

ಮಾನ್ಯ ಪ್ರಧಾನಮಂತ್ರಿ ಅವರ ನಿರ್ದೇಶನದ ಮೇರೆಗೆ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ಇಂದು, ಪಂಜಾಬ್ ರಾಜ್ಯದ ನೇರೆ ಪಿಡಿತ ಪ್ರದೇಶಗಳ ಪರಿಶೀಲನೆಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಪಾಕಿಸ್ತಾನ ಮತ್ತು ಭಾರತದ ಗಡಿಯಾದ ಪಂಜಾಬ್ ರಾಜ್ಯದ ಅಮೃತಸರ್ ಜಿಲ್ಲೆಯಲ್ಲಿನ ಕಕ್ಕಾಡ, ಲೋಧಿ ಗುಜ್ಜರ್, ಮಂಝ್ ಹಾಗೂ ಸೈದಾಪುರ ಗ್ರಾಮಗಳಿಗೆ ಭೇಟಿ ನೀಡಿ ನೆರೆಯಿಂದ ಉಂಟಾದ ಹಾನಿಯ ಬಗ್ಗೆ ಸಚಿವರು ಪರಿಶೀಲನೆ ನಡೆಸಿದರು.

ಇದೇ ವೇಳೆ ಸಂತ್ರಸ್ತ ಪ್ರದೇಶಗಳ ಗ್ರಾಮಸ್ತರೊಂದಿಗೆ ಚರ್ಚಿಸಿ, ಅವರ ಕುಂದುಕೊರತೆ ಹಾಗೂ ನಷ್ಟವುಂಟಾದ ಬಗ್ಗೆ ವಿವರ ಪಡೆದ ಸಚಿವರು, ನೆರೆ ಪೀಡಿತ ಪ್ರದೇಶಗಳಲ್ಲಿನ ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡುವಂತೆ ಸ್ಥಳದಲ್ಲಿದ್ದ ಹಾಜರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿ, ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಪಂಜಾಬ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಜೊತೆಗೆ ಕೇಂದ್ರ ಸರ್ಕಾರ ಈಗಾಗಲೇ ಪಂಜಾಬ್ ರಾಜ್ಯ ಸರ್ಕಾರಕ್ಕೆ ಎನ್.ಡಿ.ಆರ್.ಎಫ್‌ನಿಂದ ಸಾಕಷ್ಟು ಹಣ ನೀಡಿದ್ದು, ಈ ಸಂದರ್ಭದಲ್ಲಿ ಸದುಪಯೋಗ ಪಡಿಸಿ ಸಂತ್ರಸ್ತರಿಗೆ ನೆರವಾಗಲು ಪಂಜಾಬ್ ಸರ್ಕಾರಕ್ಕೆ ತಿಳಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಎಂಥಾ ಸಂದರ್ಭದಲ್ಲಿಯೂ ನೆರೆ ಸಂತ್ರಸ್ತರೊಂದಿಗಿದೆ. ಸಂತ್ರಸ್ತರ ಜೀವನವನ್ನು ಪುನರ್ನಿಮಿಸುವಲ್ಲಿ ಮತ್ತು ಪಂಜಾಬ್ ರಾಜ್ಯದ ಜನತೆಯ ಬೆಂಬಲಕ್ಕೆ ಕೇಂದ್ರ ಸರ್ಕಾರ ಸದಾ ಸಿದ್ಧವಿದೆ ಎಂದು ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ರೈಲ್ವೆ ಅಧಿಕಾರಿಗಳು, ಪಂಜಾಬ್ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಅಕ್ಟೋಬರ್ 8, 2025ರಂದು ಕೇಂದ್ರ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ಅಮೃತಸರ್ ಜಿಲ್ಲೆಯ ಕೊರೊಟಾನಾ, ರಾಜಾಸಾಂಸಿ ಮುಂತಾದ ಗ್ರಾಮಗಳ ನೆರೆಪಿಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯ ವಿವರ ಪಡೆದುಕೊಳ್ಳಲಿದ್ದಾರೆ.

****


(Release ID: 2175996) Visitor Counter : 28