ಹಣಕಾಸು ಸಚಿವಾಲಯ
ಹಣಕಾಸು ಇಲಾಖೆಯಿಂದ ಕ್ಲೇಮು ಪಡೆಯದ ಸ್ವತ್ತುಗಳ ಇತ್ಯರ್ಥಕ್ಕಾಗಿ “ನಿಮ್ಮ ಹಣ ನಿಮ್ಮ ಹಕ್ಕು” ಅಭಿಯಾನ ಆಯೋಜನೆ
ಅಕ್ಟೋಬರ್ – ಡಿಸೆಂಬರ್ 2025ರ ವರೆಗೆ ನಡೆಯುವ ಅಭಿಯಾನ
ಅಕ್ಟೋಬರ್ 24ರಿಂದ ಕರ್ನಾಟಕದಲ್ಲಿ ಅಭಿಯಾನ ಆರಂಭ
Posted On:
21 OCT 2025 4:43PM by PIB Bengaluru
ಭಾರತ ಸರ್ಕಾರದ ಹಣಕಾಸು ಇಲಾಖೆಯಿಂದ ಹಣಕಾಸು ವಲಯದಲ್ಲಿ ಕ್ಲೇಮು ಪಡೆಯದ ಸ್ವತ್ತುಗಳ ದಕ್ಷ ಮತ್ತು ತ್ವರಿತ ಇತ್ಯರ್ಥಕ್ಕಾಗಿ “ನಿಮ್ಮ ಹಣ ನಿಮ್ಮ ಹಕ್ಕು” ಅಭಿಯಾನ ಆಯೋಜಿಸಲಾಗಿದೆ. ಈ ಅಭಿಯಾನವು ಅಕ್ಟೋಬರ್-ಡಿಸೆಂಬರ್ 2025ರ ವರೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಭಿಯಾನ ನಡೆಯಲಿದೆ. ಅಭಿಯಾನದ ಭಾಗವಾಗಿ ಕ್ಲೇಮು ಪಡೆಯದ ಸ್ವತ್ತುಗಳ ಕುರಿತು ಜಾಗೃತಿ ಹಾಗೂ ಇತ್ಯರ್ಥಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತದೆ.
ಡೆಪಾಸಿಟರ್ಸ್ ಎಜ್ಯುಕೇಶನ್ ಆಂಡ್ ಅವೇರ್ನೆಸ್ ಫಂಡ್ (ಡಿ.ಇ.ಎ.ಎಫ್) - ₹60,610 ಕೋಟಿ, ಇನ್ವೆಸ್ಟರ್ಸ್ ಎಜ್ಯುಕೇಶನ್ ಪ್ರೊಟೆಕ್ಷನ್ ಫಂಡ್ (ಐ.ಇ.ಪಿ.ಎಫ್) – ₹91,069 ಕೋಟಿ, ಸಿನೀಯರ್ ಸಿಟಿಜನ್ ವೆಲ್ಫೆರ್ ಫಂಡ್ (ಎಸ್.ಎಸ್.ಡಬ್ಲೂ.ಎಫ್) ವಿಮೆ ರಹಿತ - ₹5,268 ಕೋಟಿ, ಎಸ್.ಎಸ್.ಡಬ್ಲೂ.ಎಫ್ ವಿಮೆ ಸಹಿತ ₹21,718 ಕೋಟಿ - ಕ್ಲೇಮು ಮಾಡದ ಮ್ಯುಚುಯಲ್ ಫಂಡ್ -₹3,567 ಕೋಟಿ ಇವುಗಳ ತ್ವರಿತ ಇತ್ಯರ್ಥಕ್ಕಾಗಿ ಈ ಅಭಿಯಾನ ಆಯೋಜಿಸಲಾಗಿದೆ. 30 ಜೂನ್, 2025ರ ಅನುಸಾರ ಕರ್ನಾಟಕದಲ್ಲಿ ₹2,892 ಕೋಟಿ ಮೌಲ್ಯದ 533 ವಿಮೆಗಳು ಇತ್ಯರ್ಥವಾಗಬೇಕಿದೆ.
ಒಟ್ಟು ಆರು ಹಂತಗಳಲ್ಲಿ “ನಿಮ್ಮ ಹಣ ನಿಮ್ಮ ಹಕ್ಕು” ಅಭಿಯಾನ ನಡೆಯಲಿದ್ದು, ಅಕ್ಟೋಬರ್ 15ರಿಂದ ಮೊದಲ ಹಂತ ಆರಂಭವಾಗಲಿದೆ. ಅಭಿಯಾನದ ಎರಡನೇ ಹಂತ 24 ಅಕ್ಟೋಬರ್, 2025ರಿಂದ ಆರಂಭವಾಗಲಿದ್ದು, ಇದರಲ್ಲಿ ಕರ್ನಾಟಕದ ಧಾರವಾಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಅಭಿಯಾನ ನಡೆಯಲಿದೆ. ಅದರಂತೆ 1 ನವೆಂಬರ್, 2025ರಿಂದ ನಡೆಯುವ ಮೂರನೇ ಹಂತದಲ್ಲಿ ರಾಜ್ಯದ ಬಾಗಲಕೋಟೆ, ಬೆಳಗಾವಿ, ದಾವಣಗೆರೆ, ಮೈಸೂರು ಜಿಲ್ಲೆಗಳಲ್ಲಿ ಅಭಿಯಾನ ನಡೆಯಲಿದೆ. ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೊಲ್ಕತ್ತಾ, ಹೈದ್ರಾಬಾದ್, ಪುಣೆ ಹಾಗೂ ಅಹಮದಾಬಾದ್ನಂತಹ ದೇಶದ ಬೃಹತ್ ನಗರಗಳ ಮೇಲೆ ಅಭಿಯಾನ ಹೆಚ್ಚು ಗಮನಹರಿಸಲಿದ್ದು, ನಾಲ್ಕನೇ ಹಂತದಲ್ಲಿ ರಾಜ್ಯಗಳ ರಾಜಧಾನಿ ಹಾಗೂ ಪ್ರಮುಖ ನಗರಗಳಲ್ಲಿ ಅಭಿಯಾನ ನಡೆಯಲಿದೆ.
****
(Release ID: 2181268)
Visitor Counter : 17