ಹಣಕಾಸು ಸಚಿವಾಲಯ
azadi ka amrit mahotsav

ಹುಬ್ಬಳ್ಳಿಯಲ್ಲಿ ಡಿಇಎಎಫ್ (DEAF) ಖಾತೆಗಳ ಕುರಿತು ವಿಶೇಷ ಶಿಬಿರ

ಪ್ರಕಟಣಾ ದಿನಾಂಕ: 24 OCT 2025 5:51PM by PIB Bengaluru

ಧಾರವಾಡ ಲೀಡ್ ಬ್ಯಾಂಕಿನ ವತಿಯಿಂದ ಇಂದು ಹುಬ್ಬಳ್ಳಿಯ ಬ್ಯಾಂಕರ್ಸ್ ಭವನದಲ್ಲಿ ಹಣಕಾಸು ಸಚಿವಾಲಯದ (DFS) ನಿರ್ದೇಶನ ಮತ್ತು ಭಾರತ ಸರ್ಕಾರದ ಮಾರ್ಗಸೂಚಿಯ ಅನ್ವಯ ಬಾಕಿ ಇರುವ (Unclaimed Deposit - DEAF) ಖಾತೆಗಳ ಕುರಿತು ವಿಶೇಷ ಶಿಬಿರವನ್ನು ಆಯೋಜಿಸಲಾಗಿತ್ತು.

ಈ ಶಿಬಿರದಲ್ಲಿ ವಿವಿಧ ಬ್ಯಾಂಕ್‌ಗಳು ಹಾಗೂ ಭಾರತೀಯ ಜೀವ ವಿಮಾ ನಿಗಮದ (LIC) ಸಂಯೋಜಕರು ಭಾಗವಹಿಸಿ, ಹಕ್ಕುದಾರರಿಗೆ ಬಾಕಿ ಉಳಿದಿರುವ ಖಾತೆಗಳ ವಸೂಲಾತಿಗೆ ಬೇಕಾದ ಅಗತ್ಯ ಮಾಹಿತಿ ಮತ್ತು ನೆರವನ್ನು ಒದಗಿಸಿದರು.

ಶಿಬಿರದ ಕುರಿತು ಮಾತನಾಡಿದ ಲೀಡ್ ಜಿಲ್ಲಾ ವ್ಯವಸ್ಥಾಪಕ ಬಸವರಾಜ ಗಡದವರ ಅವರು, ಈ ವಿಶೇಷ ಅಭಿಯಾನವನ್ನು ಡಿಸೆಂಬರ್ 31, 2025 ರವರೆಗೆ ಮುಂದುವರಿಸಲಾಗುವುದು ಎಂದು ತಿಳಿಸಿದರು. ಅಲ್ಲದೆ, ಇಂದಿನ ಶಿಬಿರದಲ್ಲಿ ಭಾಗವಹಿಸಲು ಸಾಧ್ಯವಾಗದ ಹಕ್ಕುದಾರರು ತಮ್ಮ ಸಂಬಂಧಿತ ಬ್ಯಾಂಕ್ ಶಾಖೆಗಳಿಗೆ ನೇರವಾಗಿ ಭೇಟಿ ನೀಡಿ, ಅಗತ್ಯ ದಾಖಲೆಗಳನ್ನು ನೀಡುವುದರ ಮೂಲಕ ತಮ್ಮ ಬಾಕಿ ಠೇವಣಿಯನ್ನು ವಸೂಲು ಮಾಡಿಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು. ಈ ಮೂಲಕ ಸರ್ಕಾರದ ನಿರ್ದೇಶನದಂತೆ ಬಾಕಿ ಉಳಿದಿರುವ ಠೇವಣಿಯನ್ನು ಹಕ್ಕುದಾರರಿಗೆ ತಲುಪಿಸಲು ಒತ್ತು ನೀಡಲಾಗಿದೆ.

 

*****
 


(ಪ್ರಕಟಣೆ ಐ.ಡಿ.: 2182230) ವಿಸಿಟರ್ ಕೌಂಟರ್ : 18