ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
azadi ka amrit mahotsav

ನ್ಯಾಷನಲ್ ಸ್ಮಾಲ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಲಿಮಿಟೆಡ್  (NSIC) 2024-25ನೇ ಆರ್ಥಿಕ ಸಾಲಿಗಾಗಿ ಭಾರತ ಸರ್ಕಾರಕ್ಕೆ ₹43.89 ಕೋಟಿ ಲಾಭಾಂಶವನ್ನು ಪಾವತಿಸಿದೆ


ಎನ್ ಎಸ್ ಐ ಸಿ ಯು ₹3,431 ಕೋಟಿ ಆದಾಯ ಮತ್ತು ₹146.30 ಕೋಟಿ ತೆರಿಗೆ ನಂತರದ ಲಾಭ (PAT) ಗಳಿಸಿದೆ, ಇದು ಹಿಂದಿನ ವರ್ಷಕ್ಕಿಂತ 15.60% ಹೆಚ್ಚಳವಾಗಿದೆ

ಸಂಯೋಜಿತ ಬೆಂಬಲ ಸೇವೆಗಳ ಮೂಲಕ ಎಂ ಎಸ್ ಎಂ ಇ ಗಳನ್ನು ಸಬಲೀಕರಿಸುತ್ತಿರುವ ಎನ್ ಎಸ್ ಐ ಸಿ  ಯ ಪ್ರಯತ್ನಗಳಿಗೆ ಕೇಂದ್ರ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು

Posted On: 28 OCT 2025 3:08PM by PIB Bengaluru

ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ (MSME) ಅಡಿಯಲ್ಲಿ ಬರುವ ಮಿನಿ ರತ್ನ ಉದ್ಯಮವಾದ ನ್ಯಾಷನಲ್ ಸ್ಮಾಲ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಲಿಮಿಟೆಡ್ (NSIC), 2024-25ರ ಆರ್ಥಿಕ ವರ್ಷಕ್ಕೆ ಭಾರತ ಸರ್ಕಾರಕ್ಕೆ ₹43.89 ಕೋಟಿ ಡಿವಿಡೆಂಡ್ (ಲಾಭಾಂಶ) ಪಾವತಿಸಿದೆ. ಎನ್ ಎಸ್ ಐ ಸಿ ಯ ಸಿಎಂಡಿ ಡಾ. ಸುಭ್ರಾಂಶು ಶೇಖರ್ ಆಚಾರ್ಯ ಅವರು, ಎಂ ಎಸ್ ಎಂ ಇ ಸಚಿವಾಲಯದ ಕಾರ್ಯದರ್ಶಿ ಶ್ರೀ ಎಸ್.ಸಿ.ಎಲ್. ದಾಸ್ ಮತ್ತು ಸಚಿವಾಲಯ ಹಾಗೂ ಎನ್ ಎಸ್ ಐ ಸಿ ಯ ಇತರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ, ಕೇಂದ್ರ ಎಂ ಎಸ್ ಎಂ ಇ ಸಚಿವ ಶ್ರೀ ಜಿತನ್ ರಾಮ್ ಮಾಂಝಿ ಮತ್ತು ಎಂ ಎಸ್ ಎಂ ಇ ಸಚಿವಾಲಯದ ರಾಜ್ಯ ಸಚಿವೆ ಸುಶ್ರೀ ಶೋಭಾ ಕರಂದ್ಲಾಜೆ ಅವರಿಗೆ ಡಿವಿಡೆಂಡ್ ಚೆಕ್ ಅನ್ನು ಹಸ್ತಾಂತರಿಸಿದರು.

NSIC ಯ ಆರ್ಥಿಕ ಮೈಲಿಗಲ್ಲುಗಳನ್ನು ಎತ್ತಿ ಹಿಡಿದ ಡಾ. ಆಚಾರ್ಯ ಅವರು, ನಿಗಮವು ₹3,431 ಕೋಟಿ ಆದಾಯ ಗಳಿಸಿರುವುದಾಗಿಯೂ ಮತ್ತು ₹146.30 ಕೋಟಿ ತೆರಿಗೆ ನಂತರದ ಲಾಭ (PAT) ಪಡೆದಿರುವುದಾಗಿಯೂ ವರದಿ ಮಾಡಿದರು. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 15.60% ರಷ್ಟು ಹೆಚ್ಚಾಗಿದೆ. ಕೇಂದ್ರ ಸಚಿವರು, ಸಂಯೋಜಿತ ಬೆಂಬಲ ಸೇವೆಗಳ ಮೂಲಕ MSME ಗಳನ್ನು ಸಬಲೀಕರಣಗೊಳಿಸುತ್ತಿರುವ NSIC ಯ ಪ್ರಯತ್ನಗಳನ್ನು ಶ್ಲಾಘಿಸಿದರು. ಅಲ್ಲದೆ, ಉದ್ಯಮಶೀಲತೆ ಸೃಷ್ಟಿ ಮತ್ತು ಕೌಶಲ್ಯಾಭಿವೃದ್ಧಿಯನ್ನು ಪೋಷಿಸುವಲ್ಲಿ NSIC ಯ ನಿರಂತರ ಪಾತ್ರದ ಬಗ್ಗೆ ಇಬ್ಬರೂ ನಾಯಕರು  ವಿಶ್ವಾಸ ವ್ಯಕ್ತಪಡಿಸಿದರು.

 

*****


(Release ID: 2183303) Visitor Counter : 8